ಪ್ರಚಲಿತ

ಬ್ರೇಕಿಂಗ್: ಯೋಗಿಯನ್ನು ನಿಂದಿಸಿದ ದಿನೇಶ್ ಗೂಂಡೂರಾವ್‍ಗೆ ಬಿಗ್ ಶಾಕ್! ಜೈಲು ರುಚಿ ತೋರಿಸಲು ಸಿದ್ಧರಾದ ಪೊಲೀಸ್?!

ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ನಾಲಿಗೆಗೆ ಹಿಡಿತ ಇಲ್ಲ ಅನ್ನೋದು ಹೊಸ ವಿಷಯವೇನಲ್ಲ. ಚುನಾವಣೆಯಲ್ಲಿ ಗೆಲ್ಲಲು ತಂತ್ರಗಳನ್ನು ಹೂಡುತ್ತಿರುವ ರಾಜಕಾರಣಿಗಳು ಎಲುಬಿಲ್ಲದ ನಾಲಗೆಗಳನ್ನು ಹರಿಯ ಬಿಡುತ್ತಾರೆ. ತಮ್ಮ ಭಾಷಣಕ್ಕೆ ಚಪ್ಪಾಳೆಯನ್ನು ಸಿಡಿಸುವ ಅಭಿಮಾನಿಗಳನ್ನು ಕಂಡು ಮತ್ತಷ್ಟು ಹರಿತವಾಗುವ ನಾಲಗೆಯಿಂದ ಅದೇನೇನೋ ಮಾತನಾಡಿಬಿಡುತ್ತಾರೆ.

ಗೂಂಡೂರಾವ್ ಮೇಲೆ ಎಫ್‍ಐಆರ್…

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಮಾತನ್ನು ಆಡಿದ್ದ ದಿನೇಶ್ ಗೂಂಡೂರಾವ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದಿನೇಶ್ ಗೂಂಡೂರಾವ್ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಡಾ.ಬಿ.ರಾಮಚಾರಿ ನೀಡಿರುವ ದೂರಿನ ಆಧಾರದ ಮೇಲೆ ದಿನೇಶ್ ಗೂಂಡೂರಾವ್ ಮೇಲೆ ಕೇಸ್ ದಾಖಲಿಸಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ನಾಲಿಗೆ ಹರಿಯಬಿಟ್ಟಿದ್ದ ದಿನೇಶ್ ಗುಂಡೂರಾವ್..!

ಇದೀಗ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ಸಮಯ. ಇಲ್ಲಿನ ರಾಜಕೀಯ ನಾಯಕರಿಂದ ಅತಿರೇಕದ ಮಾತುಗಳು ನಿರೀಕ್ಷಿತ. ಆದರೆ ಇಲ್ಲೊಬ್ಬ ಮಹಾಶಯ ಹಿಂದೂ ಧರ್ಮದ ಶ್ರೇಷ್ಟ ಧರ್ಮದ ಬಗ್ಗೆಯೇ ಮಾತನಾಡಿ ಆಕ್ರೋಶಕ್ಕೆ ಗುರಿಯಾಗಿದ್ದ. ಅದು ಮತ್ಯಾರೂ ಅಲ್ಲ. ಹಿಂದೂ ಧರ್ಮವನ್ನು ಒಡೆಯಲು ಸಕಲ ತಂತ್ರಗಳನ್ನೂ ಹೂಡಿ ವಿಫಲವಾದ ಕಾಂಗ್ರೆಸ್‍ನ ರಾಜ್ಯ ಕಾರ್ಯಾಧ್ಯಕ್ಷ ದಿನೇಶ್ ಗೂಂಡೂರಾವ್.

ಇತ್ತೀಚೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಒಂದು ವಿವಾದಾತ್ಮಕ ಹೇಳಿಕೆಗಳಿಂದ ಸುದ್ಧಿಯಾಗಿದ್ದರು. ಅದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ. “ಓರ್ವ ಸ್ವಾಮೀಜಿ ರಾಜ್ಯವನ್ನು ಆಳುತ್ತಿದ್ದಾನೆ. ಅವನು ಯೋಗಿ ಅಲ್ಲ ಭೋಗಿ. ಆತ ಕರ್ನಾಟಕಕ್ಕೆ ಬರಬಾರದು. ಕರ್ನಾಟಕಕ್ಕೆ ಬಂದರೆ ಆತನಿಗೆ ಚಪ್ಪಲಿಯಲ್ಲಿ ಹೊಡೆಯಬೇಕು” ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಇದು ಭಾರೀ ಆಕ್ರೋಷಕ್ಕೆ ಕಾರಣವಾಗಿತ್ತು. ರಾಜ್ಯ ಭಾರತೀಯ ಜನತಾ ಪಕ್ಷ ಇದನ್ನು ಪ್ರತಿಭಟಿಸಿತ್ತು. ರಾಜ್ಯದಾದ್ಯಂತ ಜನತೆ ಬೀದಿಗಿಳಿದು ಗೂಂಡೂರಾವ್ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗೂಂಡೂರಾವ್ ನೀಡಿದ್ದ ಈ ಹೇಳಿಕೆಯನ್ನು ಮಾಧ್ಯಮಗಳೂ ಕೂಡಾ ಭಾರೀ ಸುದ್ಧಿ ಮಾಡಿದ್ದವು. ದಿನೇಶ್ ಗುಂಡೂರಾವ್ ಬಳಸಿದ್ದ ಇಂತಹಾ ಪದದ ವಿರುದ್ಧ ಟೀಕಾಸ್ತ್ರವನ್ನೇ ಪ್ರಯೋಗಿಸಿದ್ದವು. ಕರ್ನಾಟಕದಲ್ಲಿ ಮತ್ತೋರ್ವ ಮಣಿಶಂಕರ್ ಅಯ್ಯರ್ ಹುಟ್ಟಿಕೊಂಡಿದ್ದನ್ನು ಕರ್ನಾಟಕದ ಜನತೆ ಒಕ್ಕೊರಳಿನಿಂದ ವಿರೋಧಿಸಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ನಾಥ ಪಂಥದವರು. ಹೀಗಾಗಿ ಅವರನ್ನು ಈ ರೀತಿಯಾಗಿ ನಿಂದಿಸಿ ನಾಥ ಪಂಥಕ್ಕೆ ಅವಮಾನ ಮಾಡಿದ್ದಾರೆ ಎಂದು ನಾಥ ಪಂಥದ ಸ್ವಾಮೀಜಿಗಳು ಹಾಗೂ ಸಮುದಾಯದವರು ಬೀದಿಗಳಿದಿದ್ದರು. ಒಕ್ಕಲಿಗರೂ ಗೂಂಡೂರಾವ್ ಹೇಳಿಕೆಯ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದರು.

ಒಟ್ಟಾರೆ ದಿನೇಶ್ ಗೂಂಡೂರಾವ್ ನೀಡಿರುವ ಹೇಳಿಕೆಯು ಉಗ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದಂತೆಯೇ ಅತ್ತ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್‍ಐಆರ್ ಕೂಡಾ ದಾಖಲಿಕೊಂಡಿದ್ದಾರೆ. ಚುನಾವಣೆಯ ಸಮಯದಲ್ಲಿ ಇಂತಹಾ ಮಾತುಗಳನ್ನು ಪ್ರಯೋಗಿಸುವ ಹಿಂದೂ ವಿರೋಧಿಗಳು ಹಾಗೂ ದೇಶದ್ರೋಹಿಗಳು ಯಥಾಶೀಘ್ರ ಮನೆಗೆ ನಡೆಯುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ಆಕ್ರೋಷ ವ್ಯಕ್ತವಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ಭಾರೀ ಪರಿಣಾಮ ಬೀರುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

-ಏಕಲವ್ಯ

Tags

Related Articles

Close