ಪ್ರಚಲಿತ

ಮೋದಿ ಸರಕಾರದ ಡಿಜಿಟಲ್ ಇಂಡಿಯಾ ಯೋಜನೆಗೆ ದೊರೆಯಲಿದೆ ರಾಕೆಟ್ ವೇಗ!! ಡೆಬಿಟ್ ಕಾರ್ಡ್ ಪಾವತಿಗಳ ಮೇಲೆ 95% ಶುಲ್ಕ ಕಡಿತಗೊಳಿಸಲು ವೀಸಾ ನಿರ್ಧಾರ!!

ನಿಮ್ಮಲ್ಲಿ ‘ವೀಸಾ’ ಡೆಬಿಟ್ ಕಾರ್ಡ್ ಇದೆಯೆ? ನೀವು ಡೆಬಿಟ್ ಕಾರ್ಡ್ ಗಳ ಮೂಲಕ ಹಣ ಪಾವತಿಸುತ್ತೀರಾ ಹಾಗಾದರೆ ನಿಮಗೊಂದು ಸಿಹಿ ಸುದ್ದಿ. ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ದೇಶದ ಅತಿ ದೊಡ್ಡ ಕಾರ್ಡ್ ಪಾವತಿ ನೆಟ್ ವರ್ಕ್ ‘ವೀಸಾ’, ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲಿನ ಶುಲ್ಕಗಳನ್ನು ಕಡಿಮೆಗೊಳಿಸಲು ನಿರ್ಧರಿಸಿದೆ. ವೀಸಾ ನೆಟ್ ವರ್ಕಿನ ಈ ನಿರ್ಧಾರವು ಸಣ್ಣ ವ್ಯಾಪಾರಿಗಳು ಮತ್ತು ಗ್ರಾಹಕರು ಹೆಚ್ಚು ಡಿಜಿಟಲ್ ಪಾವತಿ ವಿಧಾನದಲ್ಲಿ ವರ್ಗಾವಣೆ ಮಾಡಿಕೊಳ್ಳಲು ಸಹಾಯಮಾಡುತ್ತದೆ. ಇದರಿಂದ ಮೋದಿ ಸರಕಾರದ ಬಹು ಮಹತ್ವಾಕಾಂಕ್ಷಿ ಯೋಜನೆಗೆ ರಾಕೆಟ್ ವೇಗ ದೊರೆಯಲಿದೆ!

ಡೆಬಿಟ್ ಕಾರ್ಡ್ ವಹಿವಾಟುಗಳಲ್ಲಿ 95% ರಷ್ಟು ದರವನ್ನು ಕಡಿತಗೊಳಿಸಲಿದೆ ಎಂದು ವೀಸಾ ಹೇಳಿದೆ. ಈ ಇಳಿಕೆಯಿಂದಾಗಿ 2,000 ಕ್ಕಿಂತ ಕಡಿಮೆ ವ್ಯವಹಾರಗಳ ಮೆಲೆ ದೊಡ್ಡ ಪರಿಣಾಮ ಬೀಳಲಿದೆ ಎನ್ನಲಾಗಿದೆ. ಶುಲ್ಕದ ಅತಿ ದೊಡ್ಡ ಕಡಿತವು ಕಾರ್ಡ್ ನೀಡುವ ಬ್ಯಾಂಕ್ ಗಳಿಗೆ ಅನ್ವಯಿಸಲಿದೆ. ಇದುವರೆಗೂ ಪ್ರತಿ ವಹಿವಾಟಿಗೆ ಏಕ ರೂಪ ದರ ನಿಗದಿಯಾಗಿತ್ತು ಮತ್ತು ಎಷ್ಟೆ ಮೊತ್ತದ ವಹಿವಾಟಿಗೂ 2.99 ರುಪಾಯಿಯ ಏಕ ರೂಪ ದರ ನಿಗದಿಯಾಗಿತ್ತು. ಆದರೆ ಇನ್ನು ಮುಂದೆ ದರಗಳು ಇಂತಿರಲಿವೆ:

2000 ಕ್ಕಿಂತ ಕಡಿಮೆಯ ವಹಿವಾಟುಗಳ ಪಾವತಿಗೆ 15 ಪೈಸೆ
2000 ಕ್ಕಿಂತ ಮೇಲ್ಪಟ್ಟ ವಹಿವಾಟುಗಳ ಪಾವತಿಗೆ 1.5ಗಳಷ್ಟು ಶುಲ್ಕ ಮಾತ್ರ ಕೊಡಬೇಕಾಗುತ್ತದೆ.

ಎಕೋನೋಮಿಕ್ಸ್ ಟೈಮ್ಸ್ ವರದಿಯ ಪ್ರಕಾರ ದೇಶದಲ್ಲಿ 96% ಜನರ ಬಳಿ ಡೆಬಿಟ್ ಕಾರ್ಡ್ ಗಳಿವೆ ಆದರೆ 51% ಜನರು ಕ್ರೆಡಿಟ್ ಕಾರ್ಡ್ ಮೂಲಕವೆ ಹಣ ಪಾವತಿ ಮಾಡುತ್ತಾರೆ. 861 ದಶಲಕ್ಷ ಡೆಬಿಟ್ ಕಾರ್ಡ್ಗಳ ವಿರುದ್ಧವಾಗಿ 37 ಮಿಲಿಯನ್ ಕ್ರೆಡಿಟ್ ಕಾರ್ಡುಗಳು ಮಾತ್ರ ಬಳಕೆಯಲ್ಲಿವೆ. ಹೆಚ್ಚು ಹೆಚ್ಚು ಜನರು ಡೆಬಿಟ್ ಕಾರ್ಡ್ ಗಳನ್ನು ಉಪಯೋಗಿಸುವಂತಾದರೆ ಡಿಜಿಟಲ್ ಇಂಡಿಯಾ ಕನಸು ನನಸಾಗಲಿದೆ ಮತ್ತು ಕಳ್ಳ ಧನ ಜಮಾವಣೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಹೆಚ್ಚು ಹೆಚ್ಚು ಜನರು ವ್ಯಾಪಾರ ವಹಿವಾಟುಗಳನ್ನು ಆನ್ ಲೈನ್ ಮೂಲಕ ಮಾಡಿದಲ್ಲಿ ದೇಶದಲ್ಲಿ ಪಾರದರ್ಶಕತೆ ನೆಲೆಸಿ ಭ್ರಷ್ಟಾಚಾರ ಗಣನೀಯವಾಗಿ ಕಡಿಮೆ ಆಗುತ್ತದೆ. ಜನಸಾಮಾನ್ಯರು ಡಿಜಿಟಲ್ ಪಾವತಿ ಮಾಡುವ ಮೂಲಕ ಭ್ರಷ್ಟರ ಸೊಲ್ಲಡಗಿಸಬೇಕು.

ವೀಸಾ ಭಾರತದಲ್ಲಿ ತನ್ನ ಕಾರ್ಡ್ ವಹಿವಾಟುಗಳ ಸಂಖ್ಯೆಯಲ್ಲಿ 40% ಗಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಪಡೆದಿದೆ. ಪ್ರಧಾನ ಮಂತ್ರಿಯವರ ರುಪೇ ಕಾರ್ಡ್ ಬಂದ ನಂತರ ವೀಸಾ ಹೆಚ್ಚು ಪ್ರತಿಸ್ಪರ್ಧೆ ಎದುರಿಸುತ್ತಿದೆ. ರುಪೇ ಕಾರ್ಡಿನಲ್ಲಿ ಪ್ರತಿ ವಹಿವಾಟಿಗೆ ಕೇವಲ 90% ಶುಲ್ಕ ಅನ್ವಯಿಸಲಾಗುತ್ತದೆ. ಇದರಿಂದಾಗಿ ಹೆಚ್ಚು ಜನರು ರುಪೇ ಕಾರ್ಡಿನತ್ತ ಆಕರ್ಶಿತರಾಗಿದ್ದಾರೆ. ಬ್ಯಾಂಕ್ ಗಳು ಕೂಡಾ ಗ್ರಾಹಕರಿಗೆ ರುಪೇ ಕಾರ್ಡ್ ಬಳಸುವಂತೆ ಸಲಹೆ ನೀಡುತ್ತಿವೆ. ಇದೀಗ ವೀಸಾ ಕಾರ್ಡ್ ತನ್ನ ವಹಿವಾಟು ಶುಲ್ಕವನ್ನು ಇಳಿಸುವ ನಿರ್ಧಾರ ಮಾಡಿರುವುದರಿಂದ ಇದರ ನೇರ ಪ್ರಯೋಜನ ಗ್ರಾಹಕರಿಗೆ ದೊರೆಯಲಿದೆ. ಸರಕಾರ ರುಪೇ ಕ್ರೆಡಿಟ್ ಕಾರ್ಡಗಳನ್ನೂ ಕೂಡಾ ಬಿಡುಗಡೆ ಮಾಡಲಿದೆ ಇದರಿಂದ ಮುಂದಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಶುಲ್ಕಗಳಲ್ಲೂ ಇಳಿಕೆ ದಾಖಲಾಗುತ್ತದೆ ಎನ್ನಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಡಿಜಿಟಲ್ ಪಾವತಿ ಜಿಡಿಪಿ ಮೂರು ವರ್ಷಗಳಲ್ಲಿ 2.5% ರಿಂದ 7% ಕ್ಕೆ ಏರಿದೆ ಮತ್ತು 2023 ರ ವೇಳೆಗೆ ಇದು 10% ಗೆ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ.

ಅಚ್ಛೆ ದಿನ್ ಕಂಡಿತಾ? ಕಂಡಿಲ್ಲ ಅಂದರೆ ಕಣ್ಣಿಗಲ್ಲ, ಬುದ್ದಿಗೆ ಮಂಕು ಕವಿದಿದೆ ಎಂದರ್ಥ ಅಷ್ಟೆ.

-ಶಾರ್ವರಿ

Tags

Related Articles

Close