ಪ್ರಚಲಿತ

ಬ್ರೇಕಿಂಗ್! ದಲಿತ ನಾಯಕ ಪರಮೇಶ್ವರ್‌ನ್ನು ಸೋಲಿಸಲು ಕಾಂಗ್ರೆಸ್ ನಡೆಸಿದ ಷಡ್ಯಂತ್ರ ಬಯಲು..! ಕಾಂಗ್ರೆಸ್‌ನಲ್ಲಿ ನಡೆಯಿತು ದಲಿತ ಸಂಘರ್ಷ..!

ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ ನ ಆಂತರಿಕ ವಲಯದಲ್ಲಿ ಭಾರೀ ಮಸಲತ್ತುಗಳು ಆರಂಭವಾಗಿದೆ. ಟಿಕೆಟ್‌ ವಿಚಾರವಾಗಿ ಕಚ್ಚಾಡಿಕೊಂಡ ಕೈ ಮುಖಂಡರು , ಇದೀಗ ಟಿಕೆಟ್ ಸಿಕ್ಕ ಮೇಲೂ ಹೊಡಿಬಡಿ ಮುಂದುವರೆಸಿದ್ದಾರೆ. ಈಗಾಗಲೇ ಚುನಾವಣೆಗೆ ಎಲ್ಲಾ ತಯಾರಿಗಳು ನಡೆದಿದ್ದು, ಅಭ್ಯರ್ಥಿಗಳ ಪ್ರಚಾರ ಕಾರ್ಯ ಬಹಳ ಜೋರಾಗಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲೇ ಇದೀಗ ರಾಜ್ಯ ಕಾಂಗ್ರೆಸ್ ನಾಯಕರ ಒಳಗೊಳಗೆ ಜಗಳ ಆರಂಭವಾಗಿದ್ದು, ಇದೀಗ ಈ ಜಗಳ ಬೀದಿಗಿಳಿದಿದೆ..!

ಪರಮೇಶ್ವರ್‌ರನ್ನು ಸೋಲಿಸಲು ಕಾಂಗ್ರೆಸ್ ನಿಂದಲೇ ಸ್ಕೆಚ್ಚ್..!?

ಕೆಪಿಸಿಸಿ ಅಧ್ಯಕ್ಷ ಜಿ‌. ಪರಮೇಶ್ವರ್ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ನಾಯಕರಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಕಂಡುಬಂದಿತ್ತು. ಆದರೆ ಇದನ್ನು ಸಹಿಸಲಾರದ ಸ್ವತಃ ಕಾಂಗ್ರೆಸಿಗರೇ ಪರಮೇಶ್ವರ್ ರನ್ನು ತೆರೆಮರೆಯಲ್ಲಿ ನಿಂತು ಸೋಲಿಸುತ್ತಾ ಬಂದಿದ್ದಾರೆ. ಪರಮೇಶ್ವರ್ ದಲಿತರಾಗಿರುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕೂ ಹೆಸರು ಕೇಳಿ ಬಂದಿತ್ತು. ಆದರೆ ಸಿದ್ದರಾಮಯ್ಯನವರು ತಮ್ಮ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಪರಮೇಶ್ವರ್ ಅವರನ್ನು ಕಡೆಗಣಿಸುತ್ತಾ ಸ್ವತಃ ಪಕ್ಷದಿಂದಲೇ ಅವರನ್ನು ಸೋಲಿಸಿದರು. ಪರಮೇಶ್ವರ್ ಅವರನ್ನು ಸೋಲಿಸಲು ಸ್ವತಃ ಸಿದ್ದರಾಮಯ್ಯನವರೇ ಶತ್ರು ಸಂಹಾರ ಯಾಗ ಮಾಡಿದ್ದನ್ನೂ ಇಲ್ಲಿ ಗಮನಿಸಬಹುದು.!

ಇದೀಗ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆದಿರುವ ಜಿ‌.ಪರಮೇಶ್ವರ್ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಪರಮೇಶ್ವರ್ ಗೆಲುವು ಸಾಧಿಸಿದ್ದೇ ಆದಲ್ಲಿ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಇವರ ಹೆಸರು ಜೋರಾಗಿ ಕೇಳಿಬರುವುದು ಖಂಡಿತ. ಒಂದೆಡೆ ಸಿದ್ದರಾಮಯ್ಯನವರು ಹೋದಲ್ಲೆಲ್ಲಾ ತಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದ್ದರಿಂದಲೇ ಸ್ವತಃ ಕಾಂಗ್ರೆಸಿಗರೇ ಪರಮೇಶ್ವರ್ ಅವರನ್ನು ಸೋಲಿಸಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ..!

Image result for ಕೆಪಿಸಿಸಿ ಅಧ್ಯಕ್ಷ ಜಿ‌. ಪರಮೇಶ್ವರ್

ಪರಮೇಶ್ವರ್ ಬೆಂಬಲಿಗರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಗೂಸಾ..!

ಪರಮೇಶ್ವರ್ ಅವರು ಸ್ಪರ್ಧಿಸುವ ಕೊರಟಗೆರೆ ಕ್ಷೇತ್ರಕ್ಕೆ ಪದೇ ಪದೇ ಬರುತ್ತಿರುವ ಹೊರಗಿನ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತು ನಾಯಕರನ್ನು ಇದೀಗ ತರಾಟೆಗೆ ತೆಗೆದುಕೊಂಡ ಪರಂ ಬೆಂಬಲಿಗರು ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಕೊರಟಗೆರೆಗೆ ಬಂದಿದ್ದ ಸಚಿವ ಮಹದೇವಪ್ಪ ಅವರ ಆಪ್ತ ಕುಮಾರ್ ರನ್ನು ಹಿಡಿದ ಪರಮೇಶ್ವರ್ ಬೆಂಬಲಿಗರು ಛಳಿ ಬಿಡಿಸಿದ್ದಾರೆ. ಕಾರಿನಿಂದಲೇ ಎಳೆದು ಹೊರಹಾಕಿದ ಪರಂ ಬೆಂಬಲಿಗರು ನಡುರಸ್ತೆಯಲ್ಲೇ ತಳ್ಳಾಡಿಕೊಂಡಿದ್ದಾರೆ..!

ಪರಮೇಶ್ವರ್‌ರಿಗೆ ಯಾವುದೇ ಮಾಹಿತಿ ನೀಡದೆ ನೀವು ಈ ಕ್ಷೇತ್ರಕ್ಕೆ ಬರುತ್ತಿರುವುದು ಏಕೆ.? ನಿಮಗೆ ಈ ಕ್ಷೇತ್ರದ ೨೪ ಪಂಚಾಯತ್‌ಗಳ ಪೈಕಿ ಒಂದಾದರೂ ಪಂಚಾಯತಿಯ ಹೆಸರು ಗೊತ್ತಿದೆಯಾ ? ಎಂದು ತರಾಟೆಗೆ ತೆಗೆದುಕೊಂಡ ಬೆಂಬಲಿಗರು ಸಚಿವನ ಆಪ್ತನಿಗೆ ನಿಂತಲ್ಲೇ ಬೆವರಿಳಿಸಿದ್ದಾರೆ..!

ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಗ ಒಳಜಗಳ ಬೀದಿಗೆ ಬಂದಿದ್ದು, ರಾಜ್ಯ ನಾಯಕರುಗಳ ಕಿತ್ತಾಟ ತಾರಕಕ್ಕೇರಿದೆ. ಒಂದೆಡೆ ಪರಮೇಶ್ವರ್ ಹೆಸರು ಜೋರಾಗಿ ಕೇಳಿ ಬರುತ್ತಿದ್ದರೆ, ಇತ್ತ ಸ್ವತಃ ಕಾಂಗ್ರೆಸಿಗರಿಂದಲೇ ಅವರನ್ನು ಮಣಿಸುವ ಹುನ್ನಾರ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ..!

–ಅರ್ಜುನ್

 

Tags

Related Articles

Close