ಪ್ರಚಲಿತ

ಗುಡ್ ನ್ಯೂಸ್ ! ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ.! ಪ್ರಧಾನಿ ಮೋದಿಯಿಂದ ಕರೆ.!

ಚುನಾವಣೆ ಎಂದ ತಕ್ಷಣ ಪ್ರತಿಯೊಬ್ಬರ ಕಿವಿ ನೆಟ್ಟಗಾಗುತ್ತದೆ. ಯಾಕೆಂದರೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದ ದಿನದಿಂದಲೇ ದೇಶದ ಪ್ರತಿಯೊಬ್ಬರಲ್ಲೂ ಚುನಾವಣೆಯ ಹುಚ್ಚು ಹಿಡಿದಿತ್ತು. ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಲಿಗೆ ಗೆಜ್ಜೆ ಕಟ್ಟಿ ತಿರುಗುವ ಕಾರ್ಯಕರ್ತರಿಗೂ ಪಕ್ಷದ ಮುಖಂಡರಿಗೂ ಮತ್ತು ಮತದಾರರಿಗೂ ಉಪಯೋಗವಾಗುವಂತೆ ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಈಗಾಗಲೇ ನರೇಂದ್ರ ಮೋದಿಯವರ ಪ್ರಕಾರ , ಪಂಚಾಯತ್ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೂ ಒಂದೇ ಬಾರಿಗೆ ಚುನಾವಣೆ ನಡೆಸಿದರೆ ಉತ್ತಮ ಎಂದು ಹೇಳಿಕೊಂಡಿದ್ದರು. ಆದರೆ ಈವರೆಗೆ ಚುನಾವಣೆಯ ಬಗ್ಗೆ ಮೋದಿ ಗಾಢವಾಗಿ ಚರ್ಚಿಸಿರಲಿಲ್ಲ. ಆದರೆ ಇದೀಗ ಮತ್ತೆ ಈ ವಿಚಾರಕ್ಕೆ ಜೀವಕಳೆ ತುಂಬಿದ ಪ್ರಧಾನಿ, ಪ್ರತೀ ರಾಜ್ಯಗಳಲ್ಲೂ ಈ ಬಗ್ಗೆ ಚರ್ಚಿಸಬೇಕೆಂದು ಆಯಾ ರಾಜ್ಯದ ಮುಖ್ಯಮಂತ್ರಿಗಳಿಗೆ ಕರೆ ಕೊಟ್ಟಿದ್ದಾರೆ.!

ಮುಂದಿನ ವರ್ಷ ನಡೆಯುತ್ತಾ ಮತ್ತೊಮ್ಮೆ ವಿಧಾನಸಭಾ ಚುನಾವಣೆ..?

ಈಗಾಗಲೇ ಹೆಚ್ಚಿನ ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ನರೇಂದ್ರ ಮೋದಿಯವರು ಮುಂದಿನ ಲೋಕಸಭಾ ಚುನಾವಣೆಯ ಜೊತೆಗೆ ಪ್ರತೀ ರಾಜ್ಯದ ವಿಧಾನಸಭಾ ಚುನಾವಣೆಯನ್ನೂ ನಡೆಸಿದರೆ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆದಿದ್ದೇ ಆದಲ್ಲಿ, ಸಾರ್ವಜನಿಕರ ಖರ್ಚು ಬಹಳ ಕಡಿಮೆಯಾಗುತ್ತದೆ. ಯಾಕೆಂದರೆ ಕೇವಲ ಚುನಾವಣೆಗಾಗಿವೇ ಅದೆಷ್ಟೋ ಜನರು ಕೆಲಸಗಳನ್ನು ಬಿಟ್ಟು ಮತದಾನದ ಹಿಂದೆ ಅಲೆಯುವಂತಾಗುತ್ತದೆ. ಆದರೆ ಏಕಕಾಲಕ್ಜೆ ನಡೆಸುವ ಬಗ್ಗೆ ಪ್ರಧಾನಿ ಮೋದಿ ಚಿಂತನೆ ನಡೆಸಿದ್ದಾರೆ.!

Related image

ಪ್ರಧಾನಿ ಮೋದಿ ಬಹುತೇಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದ ನೀತಿ ಆಯೋಗ ಮಂಡಳಿಯ ನಾಲ್ಕನೇ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ , ದೇಶಾದ್ಯಂತ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಏಕಕಾಲದಲ್ಲಿ ನಡೆದರೆ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರ ಮತ್ತು ಸರಕಾರದ ಖರ್ಚು ಉಳಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಷ್ಟೇ ಅಲ್ಲದೇ ಪ್ರತೀ ರಾಜ್ಯಗಳಲ್ಲೂ ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ಮತ್ತು ಸಮಾಲೋಚನೆ ನಡೆಸುವಂತೆ ಕರೆ ಕೊಟ್ಟಿದ್ದಾರೆ.!

ನೀತಿ ಆಯೋಗದ ಪ್ರಕಾರವೂ ಏಕಕಾಲಕ್ಕೆ ಚುನಾವಣೆ ಉತ್ತಮ‌..!

ಭಾರತದ ನೀತಿ ಆಯೋಗವು ಈ ಬಗ್ಗೆ ಕಳೆದ ವರ್ಷವೇ ಸೂಚನೆ ನೀಡಿತ್ತು. ಯಾಕೆಂದರೆ ೨೦೨೪ರಿಂದ ಎರಡು ಹಂತಗಳಲ್ಲಿ ದೇಶಾದ್ಯಂತ ಲೋಕಸಭೆಗೆ ಮತ್ತು ರಾಜ್ಯಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸಿದರೆ ಉತ್ತಮ ಎಂದು ಹೇಳಿಕೊಂಡಿತ್ತು. ಚುನಾವಣೆಗಾಗಿ ಸಮಯ ಮತ್ತು ಹಣದ ಖರ್ಚು ಅಧಿಕ ಪ್ರಮಾಣದಲ್ಲಿ ವ್ಯರ್ಥವಾಗುತ್ತದೆ. ಆದ್ದರಿಂದ ಒಟ್ಟಿಗೆ ಚುನಾವಣೆ ನಡೆಸಿದರೆ ಎಲ್ಲಾ ರೀತಿಯಲ್ಲೂ ಪ್ರಯೋಜನವಾಗುತ್ತದೆ ಎಂದು ಹೇಳಿಕೊಂಡಿತ್ತು. ಅದರಂತೆಯೇ ಇದೀಗ ಪ್ರಧಾನಿ ಮೋದಿ ಕೂಡ ಚುನಾವಣೆಯ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು ಮಾತ್ರವಲ್ಲದೆ ಪ್ರತೀ ರಾಜ್ಯಗಳಲ್ಲೂ ಈ ಬಗ್ಗೆ ಚರ್ಚೆ ನಡೆಸಬೇಕೆಂದು ಸೂಚನೆ ನೀಡಿದ್ದಾರೆ.

Related image

ಆದ್ದರಿಂದ ಒಂದೆಡೆ ಲೋಕಸಭಾ ಚುನಾವಣೆಯ ಗೊಂದಲ ಮತ್ತೊಂದೆಡೆ ಮತದಾರರು ವಿಧಾನಸಭಾ ಚುನಾವಣೆಯ ಗೊಂದಲಪಡಬೇಕಾದ ಅವಶ್ಯಕತೆ ಇನ್ನು ಮುಂದೆ ಇರುವುದಿಲ್ಲ. ಯಾಕೆಂದರೆ ಪ್ರಧಾನಿ ಮೋದಿಯವರ ಆಶಯದಂತೆ ಕೇಂದ್ರದ ಚುನಾವಣಾ ಆಯೋಗವೂ ಏಕಕಾಲದ ಚುನಾವಣೆ ನಡೆಸಲು ಒಪ್ಪಿಗೆ ಸೂಚಿಸಿದರೆ ಚುನಾವಣೆಯ ಬಗ್ಗೆ ಯಾರೂ ಗೊಂದಲಪಡಬೇಕಾದ ಅವಶ್ಯಕತೆ ಇರುವುದಿಲ್ಲ.!

ಮೂಲ: dailyhunt

–ಸಾರ್ಥಕ್

Tags

Related Articles

Close