ಪ್ರಚಲಿತ

ಬಿಜೆಪಿಯಿಂದ ಮತ್ತೆ ಕಣಕ್ಕಿಳಿದಿದ್ದಾರೆ ಮಾಜಿ ಸೈನಿಕ. ಶಿಕ್ಷಣ ಕ್ಷೇತ್ರದಲ್ಲಿ “ಕ್ಯಾಪ್ಟನ್” ಸಾಧನೆಯೇ ಗೆಲುವಿಗೆ ದಾರಿಯಾಗಬಹುದೇ..? 

ಭಾರತೀಯ ಜನತಾ ಪಕ್ಷವೆಂದರೇ ಹಾಗೆ. ಅದೊಂದು ದೇಶಾಭಿಮಾನವುಳ್ಳ ಹಾಗೂ ರಾಷ್ಟ್ರೀಯವಾದದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಪಕ್ಷ. ದೇಶ ಸೇವೆಯಲ್ಲಿ ತೊಡಗಿಕೊಂಡಿರುವ ಯಾವುದೇ ವ್ಯಕ್ತಿಯಾದರೂ ಆತ ಈ ಪಕ್ಷದ ಕಡೆ ಒಮ್ಮೆಯಾದರೂ ವಾಲುತ್ತಾನೆ. ಅದರಲ್ಲೂ ಭಾರತೀಯ ಸೈನ್ಯದಲ್ಲಿರುವ ಅದೆಷ್ಟೋ ಸೈನಿಕರಿಗೆ ಈ ಪಕ್ಷ ಅಚ್ಚುಮೆಚ್ಚು. ಅನೇಕ ಸೈನಿಕರು ಇಂದು ಭಾರತೀಯ ಜನತಾ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ ಸರಳ ಸಜ್ಜನಿಕೆಯ ನಾಯಕ, ಸೈನ್ಯದಲ್ಲಿ ಸೇವೆ ಸಲ್ಲಿಸಿ, ಕ್ಯಾಪ್ಟನ್ ಹುದ್ದೆಯನ್ನು ಅಲಂಕರಿಸಿ ಇದೀಗ ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿರುವ ರಾಜಕೀಯ ಮುತ್ಸದ್ದಿ, ಅಜಾತ ಶತ್ರು ಕ್ಯಾಪ್ಟನ್ ಗಣೇಶ್ ಕಾರ್ಣಿಕ್. 

2006ರಲ್ಲಿ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಇವರು ಶಿಕ್ಷಣ ಸೇವೆಯಲ್ಲಿ ಮಾಡಿರುವ ಸಾಧನೆ ಅಪಾರ. ನಂತರ ಮತ್ತೆ 2012 ಹಾಗೂ 2014ರಲ್ಲಿಯೂ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನೂ, ಕುಂದು ಕೊರತೆಗಳನ್ನೂ ನೀಗಿಸಲು ಅವಿರತ ಶ್ರಮಪಟ್ಟು, ಶಿಕ್ಷಕರಿಗಾಗಿ ವಿಧಾನಸೌಧದಲ್ಲಿ ಪಕ್ಷಾತೀತವಾಗಿ ಅಹೋರಾತ್ರಿ ಧರಣಿ ಕುಳಿತವರು ಇವರು. ಇದೀಗ ಮತ್ತೆ ಭಾರತೀಯ ಜನತಾ ಪಕ್ಷ ಇವರಿಗೆ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ.

 2014ರಲ್ಲಿ ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿಯೂ ಆಯ್ಕೆಯಾಗಿದ್ದರು. ಈ ಮೂಲಕವೂ ತಮ್ಮ ರಾಜಕೀಯ ಸೇವೆಯನ್ನು ಸಲ್ಲಿಸಿದ್ದರು. ವಿಶೇಷವೆಂದರೆ ಪಕ್ಷದ ನಿಷ್ಟಾವಂತ ನಾಯಕನಾಗಿದ್ದರೂ ಕೂಡಾ ಇತರೆ ಪಕ್ಷಗಳೊಂದಿಗೆ ಯಾವುದೇ ವೈಮನಸ್ಸನ್ನು ಅಥವಾ ಸಂಘರ್ಷವನ್ನು ಇಟ್ಟುಕೊಂಡವರಲ್ಲ. ಕಾರ್ಣಿಕ್ ಅವರ ಈ ನಡೆಯೇ ಶಿಕ್ಷಕ ವೃಂದಕ್ಕೆ ಅಚ್ಚುಮೆಚ್ಚಿನ ನಾಯಕನಾಗಿ 3 ಅವಧಿಗೂ ಮುಂದುವರೆಯಲು ಕಾರಣವಾಗಿದೆ ಅನ್ನೋದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ವಿರೋಧ ಪಕ್ಷದ ನಾಯಕರೂ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ಬಹುವಾಗಿ ಗೌರವಿಸುತ್ತಾರೆ. ಅವರ ವಿರುದ್ಧ ಟೀಕೆಗಳನ್ನು ಮಾಡುವತ್ತ ಯೋಚಿಸುವುದಿಲ್ಲ. ಈ ಕಾರಣಕ್ಕಾಗಿಯೇ ಅವರನ್ನು ಅಜಾತ ಶತ್ರು ಎಂದು ಕರೆಯೋದು.

ಇದೀಗ ಮತ್ತೆ ಭಾರತೀಯ ಜನತಾ ಪಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಗೆ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿದ್ದು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ. ಜೂನ್‍ನಲ್ಲಿ (ಮತದಾನ ದಿನಾಂಕ: 8 ಜೂನ್ 2018, ಶುಕ್ರವಾರ ಸಮಯ ಬೆಳಗ್ಗೆ 8.00 ರಿಂದ ಸಾಯಂಕಾಲ 4.00) ನಡೆಯಲಿರುವ ಶಿಕ್ಷಕರ ಕ್ಷೇತ್ರದ ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು ಶಾಲಾ ಕಾಲೇಜುಗಳಿಗೆ ತೆರಳಿ ಮತಯಾಚನೆಯನ್ನು ನಡೆಸುತ್ತಿದ್ದಾರೆ. 

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ ಕಿರು ಪರಿಚಯ…

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ (ಇದೀಗ ಉಡುಪಿ ಜಿಲ್ಲೆ) ಕಾರ್ಕಳ ತಾಲೂಕಿನ ಕೆರ್ವಾಶೆ ಎಂಬ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿರುವ ಇವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಶ್ಲಾಘನೀಯವಾದದ್ದು. ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೂ ಕಾರ್ಕಳದಲ್ಲೇ ಮುಗಿಸಿದ ಇವರು ಕೃಷಿಯಲ್ಲಿ ಪದವಿಯನ್ನು ಪಡೆದವರು. 1981ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೃಷಿಯಲ್ಲಿ ಪದವಿಯನ್ನು ಪಡೆದಿದ್ದಾರೆ.

ನಂತರ 1981ರಲ್ಲಿ ರಾಷ್ಟ್ರೀಯ ಲಿಖಿತ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಿ “ಭಾರತೀಯ ಭೂಸೇನೆ”ಯಲ್ಲಿ ಅಧಿಕಾರಿಯಾಗಿ ಸೇರ್ಪಡೆಗೊಂಡು ದೇಶದ ಉತ್ತರ, ಪಶ್ಚಿಮ ಮತ್ತು ಪೂರ್ವದ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸಿ, ಸೈನ್ಯದ ಉನ್ನತ ಹುದ್ದೆಯಾಗಿರುವ ಕ್ಯಾಪ್ಟನ್  ಹುದ್ದೆಯನ್ನು ಅಲಂಕರಿಸಿ ದೇಶಸೇವೆ ಮಾಡಿದವರು.

1989-92ರವರೆಗೆ ಕರಾವಳಿ ಕರ್ನಾಟಕದ ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಯಾದ lamina suspension   products limited ಸಹಾಯಕ ಮಹಾಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದರು. 1992ರಿಂದ ನಿಟ್ಟೆ ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಸೇವೆ. ಈ ಮೂಲಕ ಶಿಕ್ಷಕರ ಸಮಗ್ರ ಸಮಸ್ಯೆಗಳನ್ನು, ಆಗು ಹೋಗುಗಳನ್ನು ತುಂಬಾನೆ ಹತ್ತಿರದಿಂದ ನೋಡಿ ತಿಳಿದುಕೊಂಡವರು. ಹೀಗಾಗಿಯೇ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸ್ಥಾನ ಅವರನ್ನು ಹುಡುಕಿಕೊಂಡು ಬಂದಿದೆ.

ಹೀಗೆ ವಿವಿಧ ಮಜಲುಗಳಲ್ಲಿ ಸೇವೆ ಸಲ್ಲಿಸಿ, ನಂತರ ಆ ಎಲ್ಲಾ ಮಜಲುಗಳ ಕಷ್ಟ ಕಾರ್ಪಣ್ಯಗಳನ್ನು ಹೊತ್ತು ಅದರ ಮುಕ್ತಿಗೆಂದು ಇವರನ್ನು ರಾಜಕೀಯ ಕ್ಷೇತ್ರ ಹುಡುಕಿಕೊಂಡು ಬಂದಿತ್ತು. ಶಿಕ್ಷಕರ ಕ್ಷೇತ್ರದಲ್ಲೇ ಮೊದಲ ಬಾರಿಗೆ ಆಯ್ಕೆಯಾದರು.

ರಾಜಕೀಯ ಹಾದಿ…

* 2006 ಹಾಗೂ 2012ರಲ್ಲಿ ನೈರುತ್ಯ ಶಿಕ್ಷಕ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆ.

* 2008ರ ಬಿಜೆಪಿ ಸರ್ಕಾರದಲ್ಲಿ ಸಂಪುಟ ದರ್ಜೆಯೊಂದಿಗೆ “ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ”.

* ಜುಲೈ 2014ರಿಂದ ಕರ್ನಾಟಕ ವಿಧಾನ ಪರಿಷತ್ತಿನ “ವಿರೋಧ ಪಕ್ಷದ ಮುಖ್ಯ ಸಚೇತಕ”.

* ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕದ ಜಂಟಿ ಪರಿಶೀಲನಾ ಸಮಿತಿ ಸದಸ್ಯ.

* ಕರ್ನಾಟಕ ವಿಧಾನ ಪರಿಷತ್ತಿನ ಅನುದಾನಿತ ಶಿಕ್ಷಕರ ಕಾಲ್ಪನಿಕ ವೇತನ ಬಡ್ತಿ ಪರಿಶೀಲನಾ ಸಮಿತಿ ಸದಸ್ಯ.

* ಕರ್ನಾಟಕ ವಿಧಾನ ಮಂಡಲದ ಜಂಟಿ ನಿಯಮಾವಳಿ ಸಮಿತಿಯ ಉಪಸಮಿತಿ ಸದಸ್ಯ.

* ಕರ್ನಾಟಕ ವಿಶ್ವವಿದ್ಯಾನಿಲಗಳ ತಿದ್ದುಪಡಿ ವಿಧೇಯಕ ಪರಿಶೀಲನೆಗಾಗಿ ರಚಿಸಿರುವ ಸದನ ಸಮಿತಿ ಸದಸ್ಯ.

* ಕರ್ನಾಟಕ ವಿಧಾನ ಮಂಡಲದ “ಮಕ್ಕಳಿಗಾಗಿ ಶಾಸಕರು” ವೇದಿಕೆಯ ಸಂಚಾಲಕ.

* ಕರ್ನಾಟಕ ವಿಧಾನ ಮಂಡಳದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ನಿಕಟಪೂರ್ವ ಸದಸ್ಯ.

* ಕರ್ನಾಟಕ ವಿಧಾನ ಮಂಡಳದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ನಿಕಟಪೂರ್ವ ಸದಸ್ಯ.

* ಕರ್ನಾಟಕ ವಿಧಾನ ಪರಿಷತ್ತಿನ ಹಕ್ಕುಬಾಧ್ಯತೆ ಸಮಿತಿಯ ನಿಕಟಪೂರ್ವ ಸದಸ್ಯ.

* ಕರ್ನಾಟಕ ವಿಧಾನ ಮಂಡಲದ ಪ.ಜಾ/ಪ.ಪಂ. ಸಮಿತಿಯ ನಿಕಟಪೂರ್ವ ಸದಸ್ಯ.

ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನೂ ಮಾಡಿದೆ. ಈ ಸಾಧನೆಗಳಿಗೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ ಪಾತ್ರವೂ ಇದೆ. ಹಾಗಾದರೆ ಶಿಕ್ಷಕರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪಕ್ಷ ಮಾಡಿದ ಸಾಧನೆ ಏನು ನೋಡೋಣ…

* 2005-06 ಬಜೆಟ್‍ನಲ್ಲಿ ಕೇವಲ ರೂ.4800 ಕೋಟಿಗೆ ಸೀಮಿತವಾಗಿದ್ದ ಶಿಕ್ಷಣಕ್ಕಾಗಿಟ್ಟ ಅನುದಾನವನ್ನು 2012-13ನೇ ಸಾಲಿನಲ್ಲಿ ರೂ.18,666 ಕೋಟಿಗೆ ಹೆಚ್ಚಿಸಿರುವುದು.

* ಜೆ.ಒ.ಸಿ. ಉಪನ್ಯಾಸಕರ ಖಾಯಮಾತಿ.

* ಡಿ.ಎಡ್. ಉಪನ್ಯಾಸಕರಿಗೆ ಪರಿಷ್ಕೃತ ವೇತನ ಶ್ರೇಣಿ.

* 191 ಹೊಸ ಸರ್ಕಾರಿ ಪದವಿ ಕಾಲೇಜುಗಳ ಸ್ಥಾಪನೆ (ಹುದ್ದೆಗಳ ಸೃಷ್ಟಿಯೊಂದಿಗೆ).

* 11 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ.

* 6 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ.

* ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಉಪನ್ಯಾಸಕರುಗಳಿಗೆ ಎ.ಐ.ಸಿ.ಟಿ.ಇ. ವೇತನ ಶ್ರೇಣಿ ವಿಸ್ತರಣೆ.

* ಸಂಗೀತ ವಿಶ್ವವಿದ್ಯಾನಿಲಯ, ಜಾನಪದ ವಿಶ್ವವಿದ್ಯಾನಿಲಯ ಹಾಗೂ ಕಾನೂನು ವಿಶ್ವವಿದ್ಯಾನಿಲಯಗಳ ಸ್ಥಾಪನೆ.

* ಹೆಚ್ಚುವರಿಯಾಗಿ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಪಶುವೈದ್ಯಕೀಯ ವಿಶ್ವವಿದ್ಯಾನಿಲಯಗಳ ಸ್ಥಾಪನೆ.

* ದೇಶದಲ್ಲಿ ಮೊದಲನೆ ಬಾರಿಗೆ ಹೊಸದಾಗಿ ಪ್ರಾರಂಭವಾಗುವ ಐ.ಟಿ.ಐ.ಗಳಿಗೆ ರೂ.25 ಲಕ್ಷ ಸಬ್ಸಿಡಿ ಯೋಜನೆ.

* ರಾಜ್ಯ ಕೌಶಲ್ಯ ಆಯೋಗ ರಚನೆ.

* ರಾಜ್ಯ ಜ್ಞಾನ ಆಯೋಗ ರಚನೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ನೀಡಿದ ಕೊಡುಗೆಗಳು…

 * ವೇತನ ತಾರತಮ್ಯದ ಸಮಸ್ಯೆಯನ್ನು ಮನಗಂಡ ಸರ್ಕಾರ 2005-06 ಬಜೆಟ್‍ನಲ್ಲಿ ರೂ.200/- ವಿಶೇಷ ಮಾಸಿಕ ಭತ್ಯೆಯನ್ನು ನೀಡಿರುವುದನ್ನು ಮುಂದುವರೆಸಿ ವಿಶೇಷ ಭತ್ಯೆಯನ್ನು ರೂ.300/- ರೂ.400/- ಮತ್ತು ರೂ.500/-ಕ್ಕೆ ಏರಿಸಲಾಯಿತು.

* 1987-95ನೇ ಅವಧಿಯಲ್ಲಿ ಪ್ರಾರಂಭವಾದ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಿರುವುದು.

* ಪ್ರೌಢಶಾಲಾ ಸಹ ಶಿಕ್ಷಕರುಗಳ ಬಡ್ತಿಯಲ್ಲಿ 50:50 ಅನುಪಾತವನ್ನು 75:25ಕ್ಕೆ ಬದಲಿಸಿರುವುದು.

* ಕಳೆದ ಹತ್ತು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂತರ್ ಜಿಲ್ಲಾ ಮತ್ತು ಅಂತರ್ ಘಟಕ ವರ್ಗಾವಣೆ ಹೊಂದಿದ ಶಿಕ್ಷಕರಿಗೆ ಕಾಲಮಿತಿ ಬಡ್ತಿಯನ್ನು ನೀಡುವಿಕೆಯಲ್ಲಿ ಇರುವ ಗೊಂದಲವನ್ನು ನಿವಾರಣೆ ಮಾಡಿದೆ.

* ಪಾರದರ್ಶಕವಾಗಿರುವ ವರ್ಗಾವಣೆ ನಿಯಮ ಅನುಷ್ಠಾನ.

* ಅನುದಾನಿತ ಶಾಲೆಗಳಲ್ಲಿ ತೆರೆಯಾಗಿರುವ ಖಾಲಿ ಹುದ್ದೆಗಳನ್ನು ತುಂಬಲು ಅಡ್ಡಿಯಾಗಿದ್ದ ಆರ್ಥಿಕ ಮಿತವ್ಯಯವನ್ನು ಜೂನ್ 2008ರವರೆಗೆ ಸಡಿಲಿಸಿ ಸುಮಾರು 10000 ಶಿಕ್ಷಕರ ನೇಮಕಾತಿ. ಮುಂದೆ ಅದನ್ನು ಜೂನ್ 2012ರವರೆಗೆ ವಿಸ್ತರಿಸಿರುವುದು.

* ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಸುಮಾರು 45000 ಶಿಕ್ಷಕ ಉಪನ್ಯಾಸಕರ ನೇಮಕಾತಿ.

* Pro. ವೈದ್ಯನಾಥನ್ ವರದಿ ಅನುಷ್ಠಾನಕ್ಕೆ ಮತ್ತು ದೈಹಿಕ ಶಿಕ್ಷಕರಿಗಾಗಿ ವೃಂದ ಮತ್ತು ನೇಮಕಾತಿ ನಿಯಮಾವಳಿ ರಚನೆಗೆ ಕ್ರಮ.

* ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ನೀಡಿಕೆ.

* ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ಮಧ್ಯಾಹ್ನದ ಬಿಸಿ ಊಟದ ವಿಸ್ತರಣೆ.

* ಮೊರಾರ್ಜಿ ಶಾಲೆಯ ಶಿಕ್ಷಕರ ಸಕ್ರಮಾತಿ ಹಾಗೂ ನೇಮಕಾತಿ.

ಪದವಿಪೂರ್ವ ಶಿಕ್ಷಣಕ್ಕೆ ನೀಡಿದ ಕೊಡುಗೆಗಳು…

* ಪದವಿ ಕಾಲೇಜಿನಿಂದ ಪ್ರತ್ಯೇಕಗೊಂಡು ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪನ್ಯಾಸಕರನ್ನು ಮತ್ತೆ ಪದವಿ ಕಾಲೇಜುಗಳಿಗೆ ನಿಯೋಜಿಸಲಾಗಿದೆ.

* ಸಂಯುಕ್ತ ಪದವಿಪೂರ್ವ ಕಾಲೇಜುಗಳನ್ನು ಪ್ರೌಢಶಾಲೆಗಳಿಂದ ಬೇರ್ಪಡಿಸಿರುವುದು.

* ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಪರೀಕ್ಷಾ ಮಂಡಳಿ ಸ್ಥಾಪನೆ.

* ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ 300 ವಿಜ್ನಾನ ವಿಭಾಗ ಹಾಗೂ 600 ವಾಣಿಜ್ಯ ವಿಭಾಗಗಳ ಸ್ಥಾಪನೆ (ಹುದ್ದೆಗಳ ಸೃಷ್ಟಿಯೊಂದಿಗೆ).

* ಪದವಿಪೂರ್ವ ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸ್ಥಾಪನೆ.

* ಪದವಿಪೂರ್ವ ಕಾಲೇಜುಗಳಲ್ಲಿರುವ ಖಾಲಿ ಹುದ್ದೆ ತುಂಬಲು ಅನುಮತಿ.

ಪದವಿ ಮತ್ತು ಉನ್ನತ ಶಿಕ್ಷಣಕ್ಕೆ ನೀಡಿದ ಕೊಡುಗೆಗಳು…

* ಬಿ.ಇಡಿ. ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಿರುವುದು.

* ಪ.ಜಾತಿ/ಪ.ಪಂಗಡ ಆಡಳಿತಕ್ಕೆ ಒಳಪಟ್ಟಿರುವ 1995 ರವರೆಗೆ ಪ್ರಾರಂಭವಾದ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಿರುವುದು.

* ವಿಶ್ವವಿದ್ಯಾನಿಲಯ ಮತ್ತು ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರುಗಳಿಗೆ ಯು.ಜಿ.ಸಿ. ವೇತನ ಶ್ರೇಣಿ ಅನುಷ್ಠಾನ.

ಇದು ಈವರೆಗೆ ಭಾರತೀಯ ಜನತಾ ಪಕ್ಷ ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರಿಗೆ ಜಾರಿಗೆ ತಂದಿರುವ ವಿಶೇಷ ಯೋಜನೆಗಳು.

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಂದಿನ ಯೋಜನೆಗಳು…

* ಶಾಲಾ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಪ್ರತಿ ತಿಂಗಳು ಸಂಬಳ ವಿತರಣೆಗೆ ಸೂಕ್ತ ಕ್ರಮ ಜಾರಿ ಗೊಳಿಸುವುದು.

* ದೈಹಿಕ ಶಿಕ್ಷಣ ಮತ್ತು ದೈಹಿಕ ಶಿಕ್ಷಕರಿಗೆ ಸಂಬಂಧಿಸಿದಂತೆ ಪ್ರೊ. ವೈದ್ಯನಾಥನ್ ವರದಿ ಶಿಫಾರಸ್ಸುಗಳನ್ನು ಸರ್ಕಾರ ಒಪ್ಪಿಕೊಂಡಿದ್ದು, ಈ ಸಂಬಂಧ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿ ಶೀಘ್ರ ಜಾರಿಗೊಳಿಸುವುದು.

* ಅನುದಾನಿತ ಶಾಲಾ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಕುಟುಂಬ ಆರೋಗ್ಯ ವಿಮೆ ಜಾರಿಗೊಳಿಸುವುದು.

* ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಸೇವಾಭದ್ರತೆ ನೀಡುವುದು ಮತ್ತು ಕನಿಷ್ಠ ಮೂಲವೇತನ ನೀಡುವ ಆದೇಶ ಜಾರಿಗೊಳಿಸುವುದು.

* ಸರ್ಕಾರಿ ಶಾಲೆಗಳಿಗೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನೂ ಅನುದಾನಿತ ಶಾಲೆಗಳಿಗೂ ವಿಸ್ತರಿಸುವುದು.

* ಅಂತರ್ ಜಿಲ್ಲಾ ಹಾಗೂ ಅಂತರ್ ವಿಭಾಗ ವರ್ಗಾವಣೆಗೊಂಡ ಅನುದಾನಿತ ಶಾಲಾ ಶಿಕ್ಷಕರಿಗೆ ಸ್ವಯಂ ಚಾಲಿತ ಮುಂಬಡ್ತಿ ಆದೇಶವನ್ನು ಶೀಘ್ರ ಜಾರಿಗೊಳಿಸುವುದು.

* ನೂತನ ಪಿಂಚಣಿ ಯೋಜನೆ ರದ್ಧತಿ ಹಾಗೂ ಹಳೆಯ ಪಿಂಚಣಿ ಯೋಜನೆ ಮುಂದುವರೆಸಲು ಪ್ರಯತ್ನ.

* 2008ರ ನಂತರ ನೇಮಕ ಹೊಂದಿರುವ ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳಿಗೆ ವಿಶೇಷ ಭತ್ಯೆ.

* ಅನುದಾನ ರಹಿತ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ನೌಕರರ ಕನಿಷ್ಠ ವೇತನದ ಆದೇಶವನ್ನು ಜಾರಿಗೊಳಿಸುವುದು.

* ಖಾಲಿ ಇರುವ ಭೋದಕ-ಭೋದಕೇತರ ನೇಮಕಾತಿಗೆ ಅನುಮತಿ.

* ಸರ್ಕಾರದಿಂದ ಸಿಗಲ್ಪಡುವ ಸವಲತ್ತುಗಳಾದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿ ಹಾಗೂ ಬಾಕಿ ವೆಚ್ಚದ ರಶೀದಿ ನಗದೀಕರಣಕ್ಕಾಗಿ ಆಗುತ್ತಿರುವ ಅನಾವಶ್ಯಕ ವಿಳಂಬ ಮತ್ತು ಕಿರುಕುಳಗಳನ್ನು ನಿವಾರಿಸಲು ತೀವ್ರ ಪ್ರಯತ್ನ.

* ಸರ್ಕಾರಿ ನೌಕರರಿಗೆ ಸಿಗುತ್ತಿರುವ ಜ್ಯೋತಿ ಸಂಜೀವನಿ ಯೋಜನೆಯನ್ನು ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳಿಗೂ ವಿಸ್ತರಿಸಲು ಪ್ರಾಮಾಣಿಕ ಪ್ರಯತ್ನ.

* ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ನೀತಿಯನ್ನು ಸರಳೀಕರಣಗೊಳಿಸಲು ಪ್ರಯತ್ನ.

* ಪ್ರೌಢಶಾಲಾ ಶಿಕ್ಷಕರ ಇಂಗ್ಲೀಷ್ ಭಾಷಾ ವಿದ್ಯಾರ್ಹತೆ ಕುರಿತು ಹೈಕೋರ್ಟ್ ತೀರ್ಪು ಹಾಗು ನಂತರ ಉದ್ಭ್ಬವಿಸಿದ ಸಮಸ್ಯೆಗಳಿಗೆ ಪರಿಹಾರ ನೀಡಿ ಶಿಕ್ಷಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಪ್ರಯತ್ನ.

* ಪರಸ್ಪರ ವರ್ಗಾವಣೆಗೆ ವಿಧಿಸಿರುವ 3 ವರ್ಷ ಕಡ್ಡಾಯ ಸೇವಾ ಅವಧಿ ಸಡಿಲಗೊಳಿಸಲು ಪ್ರಯತ್ನ.

* ಅಂತರ್ ವಿಭಾಗೀಯ ಮತ್ತು ಅಂತರ್ ಜಿಲ್ಲಾ ವರ್ಗಾವಣೆಗೆ ಕೇವಲ 2 ಬಾರಿ ಮಾತ್ರ ವರ್ಗಾವಣೆ ಎಂಬ ನಿಯಮವನ್ನು ಸಡಿಲಿಸಲು ಪ್ರಯತ್ನ.

* ಚಿತ್ರಕಲಾ ಶಿಕ್ಷಣಕ್ಕೆ ಪ್ರತ್ಯೇಕ ಮಂಡಳಿ ರಚಿಸಲು ಪ್ರಯತ್ನ.

* ಹೆಚ್ಚುವರಿ ಶಿಕ್ಷಕರಿಗಾಗುವ ತೊಂದರೆ ತಪ್ಪಿಸಲು ವಿದ್ಯಾರ್ಥಿ:ಶಿಕ್ಷಕರ ಅನುಪಾತವನ್ನು 40:01 ಕ್ಕೆ ತಗ್ಗಿಸಲು ಪ್ರಯತ್ನ.

* ಮೊರಾರ್ಜಿ ಹಾಗೂ ಇತರ ವಸತಿ ಶಾಲೆಗಳ ಶಿಕ್ಷಕರ ಮತ್ತು ಶಿಕ್ಷಕೇತರ ಸಿಬ್ಬಂದಿಗಳ ವೇತನ ಹಾಗೂ ಇತರ ಸೌಲಭ್ಯಗಳನ್ನು ಸಮಾನಾಂತರವಾಗಿ ದೊರಕಿಸಲು ಪ್ರಯತ್ನ.

* ಸರ್ಕಾರಿ ಪ್ರೌಢಶಾಲೆ, ಪದವಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕೇತರ ಸಿಬ್ಬಂದಿ ನೇಮಕಾತಿಗಾಗಿ ಪ್ರಯತ್ನ.

* ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ವೇತನ ತಾರತಮ್ಯ ಸರಿಪಡಿಸಲು ಕುಮಾರ್ ನಾಯಕ್ ವರದಿಯನ್ನು ಅಮೂಲಾಗ್ರವಾಗಿ ಜಾರಿಗೊಳಿಸಲು ಪ್ರಯತ್ನ.

* ದಶಕ-ದಶಕಗಳಿಂದ ಪರಿಹರಿಸಲಾಗದೇ ಉಳಿದಿರುವ ಕಾಲ್ಪನಿಕ ವೇತನ ಬಡ್ತಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ.

* ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಗ್ರಂಥಪಾಲಕರ ಮತ್ತು ದೈಹಿಕ ನಿರ್ದೇಶಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದು.

* ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಸೂಕ್ತ ಪ್ರಶಿಕ್ಷಣ ವ್ಯವಸ್ಥೆ ಮಾಡುವುದು.

* ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನೆಟ್, ಸೆಟ್ ಮತ್ತು ಪಿಹೆಚ್.ಡಿ ಪದವಿ ಹೊಂದಿರುವ ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಲು ಪ್ರಯತ್ನ.

* ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸಲು ಪ್ರಯತ್ನ.

* ಪ್ರತಿ ಪದವಿಪೂರ್ವ ಕಾಲೇಜುಗಳಿಗೆ ಒಬ್ಬ ದೈಹಿಕ ಶಿಕ್ಷಣ ಉಪನ್ಯಾಸಕರ ಕಡ್ಡಾಯ ನೇಮಕಾತಿಗಾಗಿ ಪ್ರಯತ್ನ.

* ಟಿ.ಜಿ.ಟಿ. ಶಿಕ್ಷಕರ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ.

* ಸಕ್ರಮಗೊಂಡ ಜೆಓಸಿ ಸಿಬ್ಬಂದಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನ ಹಾಗೂ ಇತರ ಜೆಓಸಿ ಸಿಬ್ಬಂದಿಗಳ ಸಮಸ್ಯೆಗಳ ಪರಿಹಾರ.

* ಐಟಿಐ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟದ ಸುಧಾರಣೆ, ವಿದ್ಯಾರ್ಥಿಗಳ ಪ್ರವೇಶಾತಿಗಳಲ್ಲಿನ ಗೊಂದಲಗಳ ನಿವಾರಣೆ, ಖಾಸಗಿ ಅನುದಾನಿತ ಐಟಿಐ ಸಿಬ್ಬಂದಿಗಳ ಸಮಸ್ಯೆಗಳಿಗೆ ಪರಿಹಾರ ಹಾಗೂ ಸಿ.ಎಸ್. ಥಾಮಸ್ ವರದಿಯ ಅನುಷ್ಠಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ.

* 1995ರ ನಂತರ ಆರಂಭವಾಗಿರುವ ಅನುದಾನ ರಹಿತ ಎಲ್ಲಾ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಪ್ರಯತ್ನ.

* ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರ ಮುಂದುವರಿಕೆ, ಅವರ ಗೌರವಧನವನ್ನು ಹೆಚ್ಚಿಸಿ ಪ್ರತಿ ತಿಂಗಳೂ ಸಂದಾಯವಾಗುವಂತೆ ವ್ಯವಸ್ಥೆ ಮಾಡುವುದು ಹಾಗೂ ಅವರ ಸಕ್ರಮಾತಿಗಾಗಿ ಪ್ರಯತ್ನ.

* ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳೂ ಅನುದಾನಿತ ನೌಕರರಿಗೂ ಸಿಗುವಂತೆ ಮಾಡಲು ಪ್ರಯತ್ನ.

* ಪದವಿ ಕಾಲೇಜಿನ ಉಪನ್ಯಾಸಕರಿಗೆ ಬಾಕಿ ಇರುವ ಯುಜಿಸಿ ವೇತನ ಶೀಘ್ರ ನೀಡುವಂತೆ ಮಾಡುವುದು.

* ಸರ್ಕಾರಿ ಮತ್ತು ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಉಪನ್ಯಾಸಕರಿಗೆ 06ನೇ ವೇತನ ಆಯೋಗದ ಎಐಸಿಟಿಐ ಬಾಕಿ ವೇತನ ಬಿಡುಗಡೆಗೊಳಿಸಲು ಪ್ರಯತ್ನ.

ಇದು ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷದ ಶಿಕ್ಷಣ ಕ್ಷೇತ್ರದಲ್ಲಿ ತರಲಿಚ್ಚಿಸಿರುವ ಯೋಜನೆಗಳು.

ಪಕ್ಷಾತೀತ ಹೋರಾಟಗಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್..!

ಶಿಕ್ಷಣ ಅಥವಾ ಶಿಕ್ಷಕರ ವಿಚಾರದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಎಂದೂ ರಾಜಕೀಯ ಮಾಡಿದವರಲ್ಲ. ಇತ್ತೀಚೆಗೆ ವಿಧಾನ ಸೌಧಾದಲ್ಲಿ ನಡೆದಿದ್ದ ಶಿಕ್ಷಕರ ಸಮಸ್ಯೆಗಳ ಸಲುವಾಗಿ ನಡೆದಿದ್ದ ಅಹೋರಾತ್ರಿ ಧರಣಿಯಲ್ಲಿ ವಿರೋಧ ಪಕ್ಷಗಳನ್ನು ಒಗ್ಗೂಡಿಸಿಕೊಂಡೇ ನಡೆಸಿದ್ದು ಇವರ ರಾಜಕೀಯೇತರ ಶಿಕ್ಷಕರ ಕಾಳಜಿಯನ್ನು ಬಣ್ಣಿಸುತ್ತದೆ. ಕಾಂಗ್ರೆಸ್ ಸರ್ಕಾರ ತಂದಿದ್ದ ಶಿಕ್ಷಕರ ಬೆದರಿಸುವ ಸುತ್ತೋಲೆ, ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ಸಹಿತ ಅನೇಕ ಶಿಕ್ಷಕ ವಿರೋಧಿ ಆದೇಶಗಳ ವಿರುದ್ಧ ಹೋರಾಡಿದವರು. ಪ್ರತಿ ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ಶಿಕ್ಷಣ ಇಲಾಖೆಗೂ ಇವರು ಭೇಟಿ ನೀಡಿ ಖುದ್ದು ಅಲ್ಲಿನ ಪರಿಸ್ಥಿತಿಯನ್ನು ತಿಳಿದು ಅದರ ಸಮಸ್ಯೆಗಳಿಗೆ ಮುಕ್ತಿ ಹಾಡಲು ಪ್ರಯತ್ನ ಪಟ್ಟವರು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು.

ಮಕ್ಕಳೆಂದರೆ ಅಚ್ಚು ಮೆಚ್ಚು…

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಗೆ ಶಾಲಾ ಮಕ್ಕಳೆಂದರೆ ಅಚ್ಚುಮೆಚ್ಚು. ಪ್ರತಿಬಾರಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮಕ್ಕಳೊಂದಿಗೆ ಕೆಲ ಹೊತ್ತು ಮಾತನಾಡಿ, ತರಗತಿಗಳಿಗೆ ತೆರಳಿ ಪಾಠ ಮಾಡಿ ಬರುತ್ತಾರೆ. ಹೀಗಾಗಿಯೇ ಅವರ ಬಳಿ ವಿದ್ಯಾರ್ಥಿಗಳ ಹಾಗೂ ಯುವಕರ ದಂಡೇ ಇದೆ.

ಶಿಕ್ಷಕರಲ್ಲಿ ಮನವಿ…

ದಕ್ಷಿಣ ಕನ್ನಡ,ಉಡುಪಿ,ಚಿಕ್ಕಮಗಳೂರು,ಕೊಡಗು, ಶಿವಮೊಗ್ಗ ಹಾಗೂ ದಾವಣಗೆರೆಯ ಹೊನ್ನಾಳಿ ಮತ್ತು ಚೆನ್ನಗಿರಿ ತಾಲೂಕಿನ ಶಿಕ್ಷಕರು ಈ ಬಾರಿಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತಚಲಾಯಿಸಲು ಅರ್ಹರಾಗಿದ್ದಾರೆ. ಭಾರತೀಯ ಜನತಾ ಪಕ್ಷ ಶಿಕ್ಷಕರಿಗಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಈ ಸಾಧನೆಗಳೇ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ ಗೆಲುವಿನ ಹಾದಿಯಾಗಲಿದೆ. ಸದಾ ಶಿಕ್ಷಕರ ಬಳಿ ತೆರಳಿ ಅವರ ಸಮಸ್ಯೆಯನ್ನು ಪರಿಹರಿಸುವ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಗೆ ಮೊದಲನೇ ಪ್ರಶಸ್ತ್ಯದ ಮತಗಳನ್ನು ನೀಡಿ ಈ ಬಾರಿಯೂ ಶಿಸ್ತಿನ ಸಿಪಾಯಿಯಾಗಿರುವ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ಬೆಂಬಲಿಸಬೇಕಿದೆ. ಎಲ್ಲಿಯೂ ಪ್ರಚಾರ ಬಯಸದ ಕರ್ನಾಟಕದ ಜನತೆಯ ಪಾಲಿಗೇ “ಕ್ಯಾಪ್ಟನ್” ಆಗಿರುವ ಇವರನ್ನು ಮತ್ತೆ ಗೆಲ್ಲಿಸಿ ವಿಧಾನ ಪರಿಷತ್ತಿಗೆ ಕಳುಹಿಸಿಕೊಡಬೇಕಾಗಿದೆ.

-Sunil Panapila

Tags

Related Articles

Close