ಪ್ರಚಲಿತ

ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಮುಂದಾದ ಮೋದಿ ಸರಕಾರ!! ಮಕ್ಕಳ ಭವಿಷ್ಯಕ್ಕೆ ಕೇಂದ್ರದ ಹೊಸ ನೀತಿ ಜಾರಿ!!

ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಕೇಳಿದರೆ ಸಾಕು ಎಲ್ಲರ ಕಿವಿ ನೆಟ್ಟಗಾಗುವುದಂತೂ ಖಂಡಿತ!! ನರೇಂದ್ರ ಮೋದಿ ಕೇವಲ ರಾಜಕಾರಣಿ ಯಷ್ಟೇ ಅಲ್ಲ. ಅವರೊಬ್ಬ ಗುರು, ಮಾರ್ಗದರ್ಶಕ. ಕೋಟ್ಯಾಂತರ ಜನರಿಗೆ ಸ್ಫೂರ್ತಿಯ ಆಶಾಕಿರಣ. ಅದೆಷ್ಟೋ ಜನರು ಅವರನ್ನೇ ತಮ್ಮ ಬದುಕಿನ ಆದರ್ಶ ವ್ಯಕ್ತಿಯನ್ನಾಗಿ ಆರಾಧಿಸುತ್ತಾರೆ. ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿದ ನರೇಂದ್ರ ದಾಮೋದರ ದಾಸ್ ಮೋದಿ ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನ ಮಂತ್ರಿಯಾಗಿ ಬೆಳೆದು ನಿಂತಿರುವುದು ಸಾಮಾನ್ಯ ಸಂಗತಿಯಲ್ಲ.!! ಪ್ರತಿಯೊಂದು ವಿಚಾರದಲ್ಲೂ ವಿನೂತನ ವೈಶಿಷ್ಟತೆಗಳನ್ನು ಹೊಂದಿರುವ ಜಗತ್ತಿನ ಸರ್ವ ಶ್ರೇಷ್ಟ ನಾಯಕ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದಾಗಿನಿಂದ ದೇಶದ ಅಭಿವೃದ್ಧಿಯನ್ನು ಮಾಡುವತ್ತಲೇ ಶ್ರಮಿಸುತ್ತಿರುತ್ತಾರೆ!! ಅದರಲ್ಲೂ ಮಕ್ಕಳ ಅಭಿವೃದ್ಧಿಗೆ ಮೋದೀಜೀ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ!! ಇದೀಗ ಪ್ರಧಾನಿ ನರೇಂದ್ರ ಮೋದೀಜೀಯವರು ಬಾಲಕಾರ್ಮಿಕ ನಿರ್ಮೂಲನಾ ಪದ್ಧತಿಯ ನಿರ್ಮೂಲನೆಗಾಗಿ ತಂದಿರುವ ಯೋಜನೆಯನ್ನು ವಿಸ್ತರಿಸಲು ಯೋಜನೆಯನ್ನು ಹಾಕಿದ್ದಾರೆ!!

Image result for modi

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಕ್ಕೆ ಈಗಾಗಲೇ ಭಾರತ ಹಲವು ಬಗೆಯ ಕ್ರಮಗಳನ್ನು ಕೈಗೊಂಡಿದ್ದು ರಾಷ್ಟ್ರದಲ್ಲಿ ಬಾಲ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ 1986ಕ್ಕೆ ತರಲಾದ ತಿದ್ದುಪಡಿ ಪ್ರಕಾರ, 14 ವರ್ಷದೊಳಗಿನ ಮಕ್ಕಳು ಯಾವುದೇ ಉದ್ಯೋಗದಲ್ಲಿ ತೊಡಗುವುದಕ್ಕೆ ನಿಷೇಧವಿದೆ. ಜೊತೆಗೆ 14ರಿಂದ 18 ವರ್ಷದ ಹದಿಹರೆಯದವರನ್ನು ಅಪಾಯಕಾರಿ ಉದ್ಯೋಗಗಳಲ್ಲಿ ನೇಮಕ ಮಾಡಿಕೊಳ್ಳುವುದಕ್ಕೂ ನಿಷೇಧವಿದೆ ಎಂಬ ಕಾನೂನು ಬಂದಿತ್ತು!! ಆದರೂ ಮಕ್ಕಳನ್ನು ಅಲ್ಲಲ್ಲಿ ಕೆಲಸಕ್ಕಿಟ್ಟು ಅವರನ್ನು ತಮಗಿಷ್ಟ ಬಂದಂತೆ ದುಡಿಸುವುದು ಕೆಲವರಿಗೆ ವಾಡಿಕೆಯಾಗಿದೆ!! ಈಗಾಗಲೇ ಮಕ್ಕಳ ಅಭಿವೃದ್ಧಿಗಾಗಿ ಹಲವಾರು ರೀತಿಯಲ್ಲಿ ಮಕ್ಕಳಿಗಾಗಿ ಯೋಜನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ದೇಶದ ಹಲವೆಡೆ ಮಕ್ಕಳ ಸಹಾಯವಾಣಿ ಸ್ಥಾಪಿಸಿದೆ. ಅಲ್ಲದೆ ಈಗ ಇದನ್ನು ವಿಸ್ತರಿಸಲು ಚಿಂತನೆ ನಡೆಸಿದ್ದು, ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ ಅಂಗವಾಗಿ ಈ ಮಕ್ಕಳ ಸಹಾಯವಾಣಿ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸಲು ಮುಂದಾಗಿದೆ.

Image result for ಬಾಲ ಕಾರ್ಮಿಕ

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಈ ಕುರಿತು ಯೋಜನೆ ರೂಪಿಸಿದ್ದು, ದೇಶಾದ್ಯಂತ 435 ಕಡೆ ನೂತನವಾಗಿ ಮಕ್ಕಳ ಸಹಾಯವಾಣಿ ಸ್ಥಾಪಿಸುವುದಾಗಿ ಘೋಷಣೆ ಹೊರಡಿಸಿದೆ. ಯಾವುದೇ ಮಕ್ಕಳು ತಮ್ಮನ್ನು ಒತ್ತಾಯ ಪೂರ್ವಕವಾಗಿ ಕೆಲಸ ಮಾಡಿಸುತ್ತಿದ್ದರೆ, ಯಾವುದೇ ಮಕ್ಕಳು ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ ದೂರು ನೀಡಲು ಈ ಸಹಾಯವಾಣಿ ಸಹಕಾರಿಯಾಗಲಿದ್ದು, 2014ರಿಂದ ಇದುವರೆಗೆ 1.8 ಕೋಟಿ ಕರೆಗಳು ಬಂದಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ!!

Image result for ಬಾಲ ಕಾರ್ಮಿಕ

ಭಾರತದಲ್ಲಿ ಪ್ರತಿ 11 ಮಕ್ಕಳ ಪೈಕಿ ಒಂದು ಮಗು ಬಾಲಕಾರ್ಮಿಕನಾಗಿರುತ್ತದೆ. ಅಷ್ಟೇ ಅಲ್ಲ, 2001ರಿಂದ 2011ರವರೆಗಿನ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂಬುದನ್ನೂ ಅಂಕಿಅಂಶಗಳು ನಾವು ಗಮನಿಸಬಹುದು!! ಗ್ರಾಮೀಣ ಪ್ರದೇಶದಿಂದ ನಗರಕ್ಕೆ ವಲಸೆ ಬರುತ್ತಿರುವ ಕಾರ್ಮಿಕರ ಮಕ್ಕಳು ದುಡಿಮೆಗೆ ತೊಡಗಿಕೊಳ್ಳುತ್ತಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅನೇಕ ಕ್ರಮಗಳನ್ನು ಕೈಗೊಂಡರೂ ಬಾಲ ದುಡಿಮೆ ರಾಷ್ಟ್ರದಲ್ಲಿ ಮುಂದುವರಿಯುತ್ತಲೇ ಇರುವುದು ವಿಷಾದನೀಯ.

Image result for ಬಾಲ ಕಾರ್ಮಿಕ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರಬಲ ಇಚ್ಛಾಶಕ್ತಿ ಹಾಗೂ ಬದ್ಧತೆ ಅಗತ್ಯ. ಹಲವು ನೆಲೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಕಠಿಣ ಕಾನೂನು ಕ್ರಮಗಳನ್ನು ಜರುಗಿಸುವುದಲ್ಲದೆ ಸಾಮಾಜಿಕ ನೆಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುವುದೂ ಸಾಧ್ಯವಾಗಬೇಕು. ಬಡತನ, ಅನಕ್ಷರತೆಯಲ್ಲದೆ ಅಭಿವೃದ್ಧಿಶೀಲ ಸಮಾಜದಲ್ಲಿ ಸಾಮಾನ್ಯವಾಗುತ್ತಿರುವ ವಲಸೆ, ಸ್ಥಳಾಂತರಗಳಿಂದ ಸೃಷ್ಟಿಯಾಗುವ ಅಸಹಾಯಕತೆ ಕಾರಣಕ್ಕೆ ಹೆಚ್ಚುತ್ತಿರುವ ಆಧುನಿಕ ಜೀತ, ಮಕ್ಕಳ ಅಕ್ರಮ ಸಾಗಣೆಗಳನ್ನು ನಿರ್ಬಂಧಿಸಲು ಕಠಿಣ ಕ್ರಮಗಳು ಅನಿವಾರ್ಯ. 2030ರೊಳಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ನಾವು ತಲುಪಬೇಕಿದೆ. ಇದಕ್ಕೆ ಬಾಲ ಕಾರ್ಮಿಕ ಪದ್ಧತಿ ನಿಷೇಧವೂ ಮುಖ್ಯವಾದದ್ದು ಎಂಬುದನ್ನು ಮರೆಯದಿರೋಣ.

Related image

ಈಗಾಗಲೇ ಮೋದಿ ಸರಕಾರ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನಕ್ಕೆ ಜನವರಿ 22, 2015ರಂದು ಚಾಲನೆ ನೀಡಿದ್ದು, ಹೆಣ್ಣುಮಕ್ಕಳ ವಿದ್ಯಾಭ್ಯಾಸ ಮತ್ತು ಸಾಮಾಜಿಕ ಭದ್ರತೆಗಳನ್ನು ಉತ್ತೇಜಿಸುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ!!! ಅಷ್ಟೇ ಅಲ್ಲದೇ, ಹೆಣ್ಣು ಮಕ್ಕಳ ಶಿಕ್ಷಣ, ಅವರ ರಕ್ಷಣೆ, ಭ್ರೂಣ ಹತ್ಯೆ ತಡೆ ಸೇರಿದಂತೆ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನವನ್ನು ಹಮ್ಮಿಕೊಂಡು ಸಂಪೂರ್ಣ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ!!

ಈ ರೀತಿಯಾಗಿ ನರೇಂದ್ರ ಮೋದಿ ಸರ್ಕಾರ ಜನರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ಈಗ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧ ಮಾಡುವ ನಿಟ್ಟಿನಲ್ಲಿ ಸಹಾಯವಾಣಿಯನ್ನು ತಂದಿದ್ದು, ಎಲ್ಲರ ಮನದಲ್ಲಿ ಮಂದಹಾಸವನ್ನು ಮೂಡುವಂತೆ ಮಾಡಿದ್ದಾರೆ!!

ಪವಿತ್ರ

Tags

Related Articles

Close