ಪ್ರಚಲಿತ

ಮಿತ್ರ ರಾಷ್ಟ್ರದ ವಿರುದ್ಧವೇ ತಿರುಗಿಬಿದ್ದ ಚೀನಾ..! ಆ ಒಂದು ಕಾರಣವೇ ಪಾಕ್ ವಿರುದ್ದ ಸಿಡಿದೇಳಲು ಕಾರಣವಾಯ್ತಾ..?

ಹಫೀಜ್ ಸಯೀದ್, ಹೆಸರು ಕೇಳುತ್ತಲೇ ಜಗತ್ತಿನ ಎಲ್ಲಾ ರಾಷ್ಟ್ರಗಳು ಪಾಕಿಸ್ತಾನದತ್ತ ಬೆರಳು ಮಾಡುತ್ತವೆ. ಕಾರಣ ಲಷ್ಕರ್-ಈ-ತೊಯಿಬಾ ಎಂಬ ಉಗ್ರ ಸಂಘಟನೆಯನ್ನು ಸ್ಥಾಪಿಸಿ ಜಗತ್ತಿನಾದ್ಯಂತದ ದುಷ್ಕøತ್ಯ ಎಸಗಲು ತಯಾರಾದವನು. 2008ರಲ್ಲಿ ಮುಂಬಯಿ ಮೇಲೆ ದಾಳಿ ನಡೆಸಿದ ಈ ಸಂಘಟನೆ ಸುಮಾರು 166 ಅಮಾಯಕರ ಬಲಿ ಪಡೆದಿತ್ತು.
ಈ ದಾಳಿಯಲ್ಲಿ ಅನೇಕ ವಿದೇಶಿಗರೂ ಸಾವಿಗೀಡಾಗಿದ್ದರು. ಈ ಪೈಕಿ ಆರು ಮಂದಿ ಅಮೇರಿಕಾ ನಾಗರಿಕರೂ ಕೂಡ ಹತರಾಗಿದ್ದರು. ಈ ಕಾರಣದಿಂದಲೇ ಅಮೇರಿಕಾವು ಹಫೀಸ್ ಸಯೀದ್ ನನ್ನು ಜಾಗತಿಕ ಮಟ್ಟದಲ್ಲಿ ಉಗ್ರ ಎಂದು ಘೋಷಿಸಿತ್ತು. ಆದ್ದರಿಂದ ಹಫೀಸ್ ಸಯೀದ್ ಮುಖ್ಯಸ್ಥನಾಗಿದ್ದ ಜಮಾತ್ ಉದ್ -ದಾವಾ ಎಂಬ ಸಂಘಟನೆಯನ್ನು ನಿಷೇಧಿಸಲಾಗಿತ್ತು! ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕೆಂದು ಒತ್ತಾಯಿಸುತ್ತಿರುವ ಹಫೀಜ್ ಸಯೀದ್ ಪದೇ ಪದೇ ಭಾರತದ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಲೇ ಬಂದಿದ್ದಾನೆ. ಜಾಗತಿಕ ಮಟ್ಟದಲ್ಲಿ ನಿಷೇಧಿಸಲಾಗಿದ್ದರು ಪಾಕಿಸ್ತಾನ ಹಫೀಜ್ ಸಯೀದ್‍ಗೆ ಆಶ್ರಯ ನೀಡುತ್ತಲೇ ಬಂದಿದ್ದಕ್ಕೆ ಈಗಾಗಲೇ ಹಲವಾರು ರಾಷ್ಟ್ರಗಳು ವಿರೋಧಿತ್ತಾದರೂ ಪಾಕಿಸ್ತಾನ ಮಾತ್ರ ಕ್ಯಾರೇ ಅನ್ನಲಿಲ್ಲ!!

ವಿಶ್ವದ ಭಯೋತ್ಪಾದಕರ ಉತ್ಪಾದನೆಯ ತಾಣ, ಪೋಷಣೆಯ ನೆಲೆ ಎಂದೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನ ತನ್ನ ಉಗ್ರ ಪೋಷಣೆಯನ್ನು ಮುಂದುವರಿಸುತ್ತಲೇ ಇದೆ!! ಮುಂಬೈ ದಾಳಿಯ ಮಾಸ್ಟರ್ ಮೈಂಡ್, ವಿಶ್ವ ಉಗ್ರಪಟ್ಟಿಯಲ್ಲಿರುವ ಭಯೋತ್ಪಾದಕ ಹಫೀಸ್ ಸಯೀದ್‍ಗೆ ಪಾಕಿಸ್ತಾನ ಸರ್ಕಾರವೇ ಭದ್ರತೆ ನೀಡುವ ಮೂಲಕ ಮತ್ತೊಮ್ಮೆ ತನ್ನ ಕರಾಳ ಮುಖವನ್ನು ಈಗಾಗಲೇ ಬಯಲು ಮಾಡಿಕೊಂಡಿತ್ತು!! ಜಮಾತ್ ಉದ್ ದಾವಾ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಹಫೀಸ್ ಸಯೀದ್ ಗೆ ಕೆಲ ತಿಂಗಳ ಹಿಂದೆ ಪಾಕ್ ಕೋರ್ಟ್ ತೀರ್ಪು ನೀಡಿ, ಭದ್ರತೆಯನ್ನು ವಾಪಸ್ ಪಡೆಯಲಾಗಿತ್ತಾದರೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರ ಹಫೀಸ್ ಸಯೀದ್ ಗೆ ಜೀವಕ್ಕೆ ಆತಂಕವಿದ್ದು, ಆದ್ದರಿಂದ ಭದ್ರತೆ ನೀಡಲಾಗುತ್ತಿದೆ ಎಂದು ನೆಪ ಹೇಳಿತ್ತು!!. ಇತ್ತೀಚೆಗೆ ಉಗ್ರ ಹಫೀಸ್ ಸಯೀದ್ ಕಾಶ್ಮೀರದಲ್ಲಿ ಸೈನಿಕರ ಗುಂಡಿಗೆ ಬಲಿಯಾಗಿದ್ದ ಭಯೋತ್ಪಾದಕರ ಸ್ಮರಣೆ ಮಾಡಿ, ಭಾರತ ವಿರೋಧಿ ನಿಲುವು ತಳಿದಿದ್ದ. ಇದೇ ವೇಳೆಯಲ್ಲೇ ಸಯೀದ್ ಗೆ ಭದ್ರತೆ ಒದಗಿಸಿರುವುದು ಪಾಕಿಸ್ತಾನ ನೇರವಾಗಿ ಭಯೋತ್ಪಾದಕರಿಗೆ ನೆರವು ನೀಡುತ್ತಿರುವುದು  ಸಾಬೀತಾಗಿತ್ತು!! ಇದೀಗ ಪಾಕಿಸ್ತಾನದ ಮಿತ್ರ ರಾಷ್ಟ್ರವೇ ಹಫೀಜ್ ಸೈಯದ್‍ಗೆ ಆಶ್ರಯ ನೀಡಿದ್ದಕ್ಕಾಗಿ ತಿರುಗಿ ಬಿದ್ದಿದೆ!!

ಉಗ್ರ ಹಫೀಜ್ ಸೈಯದ್‍ನನ್ನು ಸ್ಥಳಾಂತರಿಸಲು ಚೀನಾ ಪಾಕ್‍ಗೆ ಸಲಹೆ!!

ಜಾಗತಿಕ ಉಗ್ರ ಹಫೀಜ್ ಸೈಯೀದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಮೇಲೆ ಒತ್ತಡ ಹೆಚ್ಚಾಗುತ್ತಿದಂತೆ ಮಿತ್ರ ರಾಷ್ಟ್ರ ಚೀನಾ ಕೂಡ ಸೈಯೀದ್‍ನನ್ನು ಪಶ್ಚಿಮ ಏಷ್ಯಾದ ರಾಷ್ಟ್ರಗಳಿಗೆ ಸ್ಥಳಾಂತರಿಸುವಂತೆ ಸಲಹೆ ನೀಡಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಕಳೆದ ತಿಂಗಳು ಚೀನಾದಲ್ಲಿ ನಡೆದ ಬೋವೊ ಫೆÇೀರಂ ಸಮ್ಮೇಳನ ಬಳಿಕ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ಪಾಕ್ ಪ್ರಧಾನಿ ಶಾಹಿದ್ ಖಾನ್ ಅಬ್ಬಾಸಿ ಅವರಿಗೆ ಸೈಯೀದ್‍ನನ್ನು ಸ್ಥಳಾಂತರಿಸುವಂತೆ ವೈಯಕ್ತಿಕವಾಗಿ ಸಂದೇಶ ರವಾನಿಸಿದ್ದಾರೆ.

Related image

ಸೈಯೀದ್ ಹಫೀಜ್‍ನನ್ನು ಸರ್ಕಾರದಿಂದ ದೂರವಿಡಲು ಯಾವುದಾದರೂ ಪರಿಹಾರವನ್ನು ಶೀಘ್ರವೇ ಹುಡುಕಿಕೊಳ್ಳಿ ಎಂದು ಚೀನಾ ಅಧ್ಯಕ್ಷರು ಪಾಕ್ ಪ್ರಧಾನಿಗೆ ಇದೇ ವೇಳೆ ಒತ್ತಿ ಹೇಳಿದ್ದಾರೆ. 2008ರಲ್ಲಿ ನಡೆದ ಮುಂಬೈ ದಾಳಿಯ ಮುಂದಾಳತ್ವವನ್ನು ಲಷ್ಕರ್ ಇ ತೋಯ್ಬಾ ಸಂಘಟನೆ ಹೊತ್ತುಕೊಂಡಿತ್ತು. ಈ ಘಟನೆಯಲ್ಲಿ ಸುಮಾರು 166 ಮಂದಿ ಸಾವಿಗೀಡಾಗಿದ್ದರು. ಅದರಲ್ಲಿ ಆರು ಮಂದಿ ಅಮೆರಿಕನರು ಮರಣ ಹೊಂದಿದ್ದರು. ನಂತರದ ದಿನಗಳಲ್ಲಿ ಅಮೆರಿಕ ಸರ್ಕಾರ ಸಯೀದ್‍ನನ್ನು ಜಾಗತಿಕ ಉಗ್ರನೆಂದು ಘೋಷಣೆ ಮಾಡಿ 2012 ರಿಂದಲೂ ಆತನ ಬಗ್ಗೆ ಸುಳಿವು ನೀಡಿದವರಿಗೆ ಪ್ರತಿಫಲವಾಗಿ 10 ಮಿಲಿಯನ್ ಡಾಲರ್ ನೀಡುವುದಾಗಿ ಘೋಷಣೆ ಮಾಡಿತ್ತು. ಕಳೆದ ತಿಂಗಳು ಪಾಕಿಸ್ತಾನ ಪಂಜಾಬ್ ಪ್ರಾಂತೀಯ ಸರ್ಕಾರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸೈಯೀದ್‍ಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಮೇ 5 ರಂದು ಹಫೀಜ್ ಲಾಹೋರ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ!!

Related image

ಪಾಕಿಸ್ತಾನದ ವಿರುದ್ಧ ಜಾಗತಿಕ ಮಟ್ಟದಲ್ಲಿ ಧ್ವನಿ ಎತ್ತಿದ ನರೇಂದ್ರ ಮೋದಿ ನೇರವಾಗಿ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದ್ದರು. ಪಾಕಿಸ್ತಾನವನ್ನು ಜಗತ್ತಿನ ಮುಂದೆ ಮೂಲೆಗುಂಪು ಮಾಡುವ ನರೇಂದ್ರ ಮೋದಿಯವರ ಪ್ರಯತ್ನಕ್ಕೆ ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳು ಕೂಡಾ ಕೈ ಜೋಡಿಸಿವೆ!! ಇದೇ ರೀತಿ ವಿಶ್ವದ ಬಲಿಷ್ಟ ರಾಷ್ಟ್ರಗಳ ಮಾತನ್ನು ತ್ಯಜಿಸಿ ಉಗ್ರರಿಗೆ ಪೆÇೀಷಣೆ ನೀಡಿದಲ್ಲಿ ಮುಂದೆ ಪಾಕಿಸ್ತಾನಕ್ಕೆ ಮಾರಕವಾಗುವುದು ಖಂಡಿತ!! ಇದೀಗ ಉಗ್ರ ಹಫೀಜ್ ಸೈಯದ್‍ಗೆ ಪಾಕಿಸ್ತಾನದಲ್ಲೂ ನೆಲೆ ಸಿಗಲ್ಲ ಅಂತ ಅನಿಸುತ್ತಿದೆ!! ಪಾಪಿಗಳ ಲೋಕದಲ್ಲಿ ಇಲ್ಲಿಯವರೆಗೆ ಹಫೀಜ್ ಅನ್ನುವ ಪಾಪಿ ಆಶ್ರಯ ಪಡೆಯುತ್ತಿದ್ದ ಆದರೆ ಇದೀಗ ಪಾಕ್‍ನ ಮಿತ್ರರಾಷ್ಟ್ರ ಕೂಡಾ ಇದನ್ನು ವಿರೋಧಿಸುತ್ತಿದೆ ಎಂದರೆ ಇನ್ನೂ ಈ ಪಾಪಿಗೆ ನೆಲೆ ಸಿಗುವುದು ಕನಸಿನ ಮಾತು ಅಂತ ಅನಿಸುತ್ತಿದೆ!!

source: http://www.thehindu.com/news/international/china-wants-pakistan-to-relocate-hafiz-saeed-to-a-west-asian-country/article23972788.ece

  • ಪವಿತ್ರ
Tags

Related Articles

Close