ಪ್ರಚಲಿತ

ಸ್ಫೋಟಕ ಮಾಹಿತಿ ಬಯಲು! ಕಾಂಗ್ರೆಸ್- ಜೆಡಿಎಸ್‌ ಶಾಸಕರು ರೆಸಾರ್ಟ್ ರಾಜಕೀಯಕ್ಕೆ ಬಳಸಿದ್ದು ಎಷ್ಟು ಕೋಟಿ ಗೊತ್ತಾ.? ಸಾಲ ಮನ್ನಾ ಮಾಡಲಾಗದ ಸರಕಾರ ಅಧಿಕಾರಕ್ಕಾಗಿ ಮಾಡಿದ ಕಥೆ ಏನು.?

ಚುನಾವಣೆ ಎಂದರೆ ಏನು ಬೇಕಾದರೂ ನಡೆಯಬಹುದು, ಇಂದು ಒಟ್ಟಾಗಿದ್ದವರು ನಾಳೆ ದೂರವಾಗಬಹುದು, ನೆನ್ನೆವರೆಗೂ ಕಿತ್ತಾಡಿಕೊಂಡಿದ್ದವರು ಇಂದು ಒಟ್ಟಾಗಬಹುದು. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ. ಚುನಾವಣೆಗೂ ಮೊದಲು ಪರಸ್ಪರ ಕಿತ್ತಾಡಿಕೊಂಡಿದ್ದವರು ಇದೀಗ ಅಧಿಕಾರದ ಆಸೆಗೆ ಬಿದ್ದು ಒಡಹುಟ್ಟಿದವರಂತೆ ಒಂದಾಗಿದ್ದಾರೆ. ಕೇವಲ ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ಒಟ್ಟಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ ಇದೀಗ ರಾಜ್ಯದ ಜನತೆಗೆ ಹೊಸ ಹೊಸ ಭರವಸೆ ನೀಡಿ ಮೋಸಗೊಳಿಸಲು ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ಆದರೆ ಇಡೀ ರಾಜ್ಯದ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದಿದ್ದ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಉಲ್ಟಾ ಹೊಡೆದಿದ್ದರು. ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದವರು ತಮ್ಮ ಶಾಸಕರಿಗೆ ಮಾಡಿದ ಖರ್ಚು ನೋಡಿದರೆ ಜನರು ದಂಗಾವುದು ಖಂಡಿತ..!

ಕೇವಲ ೮ ದಿನದ ಶಾಸಕರ ಖರ್ಚು ಕೋಟಿ ಕೋಟಿ..!

ಬಹುಮತ ಸಾಧಿಸಲಾಗದ ಭಾರತೀಯ ಜನತಾ ಪಕ್ಷ ಬಹುಮತ ಬೆಂಬಲಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಶಾಸಕರತ್ತ ಬಲೆ ಬೀಸಿತ್ತು. ಆಪರೇಷನ್ ಕಮಲ ನಡೆಸಿ ತಮಗೆ ಬೇಕಾದಷ್ಟು ಶಾಸಕರನ್ನು ಕರೆಸಿಕೊಳ್ಳುತ್ತಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಕೈ ಮತ್ತು ಜೆಡಿಎಸ್‌ ಮುಖಂಡರು ಕಂಗಾಲಾಗಿದ್ದರು. ಅದೇ ಕಾರಣಕ್ಕಾಗಿ ತಮ್ಮ ಬಳಿ ಇರುವ ಶಾಸಕರನ್ನು ರಕ್ಷಿಸುವ ಸಲುವಾಗಿ ರೆಸಾರ್ಟ್ ರಾಜಕಾರಣ ನಡೆಸಿದ್ದರು. ಮೊದಲು ತಮ್ಮ ಎಲ್ಲಾ ಶಾಸಕರನ್ನು ಬೆಂಗಳೂರಿನ ಈಗಲ್‌ಟನ್ ರೆಸಾರ್ಟ್ ನಲ್ಲಿ ಕೂಡಿ ಹಾಕಿ ನಂತರದಲ್ಲಿ ಬಿಜೆಪಿಯ ಆಪರೇಷನ್ ಜೋರಾಗುತ್ತಿದ್ದಂತೆ ಭಯಭೀತರಾದ ಕಾಂಗ್ರೆಸ್ ಮತ್ತು ಜೆಡಿಎಸ್‌ ಮುಖಂಡರು ತಮ್ಮ ಎಲ್ಲಾ ಶಾಸಕರನ್ನು ಹೈದರಾಬಾದ್‌ಗೆ ಕರೆದುಕೊಂಡು ಹೋಗಿ ಹೊಟೇಲ್ ಒಂದರಲ್ಲಿ ಇರುವಂತೆ ಮಾಡಿದ್ದರು. ಈ ಎಲ್ಲಾ ಶಾಸಕರ ಕೇವಲ ಎಂಟು ದಿನಗಳ ಖರ್ಚು ಬರೋಬ್ಬರಿ ೪ ಕೋಟಿ ೯೦ ಲಕ್ಷ ಎಂದರೆ ರಾಜ್ಯದ ಜನರು ದಂಗಾಗುವುದು ಖಂಡಿತ.

ಯಾಕೆಂದರೆ ಅಧಿಕಾರ ಕೈಗೆ ಸಿಗುತ್ತಿದ್ದಂತೆ ಸರಕಾರದ ಬಳಿ ಈಗಲೇ ರೈತರ ಸಾಲ ಮನ್ನಾ ಮಾಡುವಷ್ಟು ಹಣ ಇಲ್ಲ ಎಂದ ಕುಮಾರಸ್ವಾಮಿ ಅವರು ಶಾಸಕರ ರಕ್ಷಣೆಗೆ ವ್ಯಯಿಸಿದ ಖರ್ಚು ನೋಡಿದರೆ ತಿಳಿಯುತ್ತದೆ ಇವರಿಗೆ ಕೇವಲ ಅಧಿಕಾರ ಮಾತ್ರ ಬೇಕೇ ವಿನಃ ರಾಜ್ಯದ ಅಭಿವೃದ್ಧಿಯಲ್ಲ.

ಒಬ್ಬ ಶಾಸಕನ ವಾರದ ಖರ್ಚು…?

ಸುಮಾರು ಎಂಟು ದಿನಗಳ ಕಾಲ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌‌ನ ಒಬ್ಬೊಬ್ಬ ಶಾಸಕನಿಗೆ ಒಂದು ವಾರಕ್ಕೆ ಸುಮಾರು ೭ ಲಕ್ಷ ಖರ್ಚು ಮಾಡಿದ್ದಾರೆ ಎಂದರೆ , ಈ ಶಾಸಕರ ಜೀವನ ಅದ್ಯಾವ ರೀತಿಯಲ್ಲಿ ಐಃಶಾರಾಮಿ ಆಗಿರುತ್ತದೆ ಎಂಬುದು ತಿಳಿಯುತ್ತದೆ. ಕೇವಲ ಬೆಳಿಗ್ಗಿನ ಬ್ರೇಕ್‌ಫಾಸ್ಟ್ ಗೆ ತಲಾ ಒಬ್ಬರಿಗೆ ೧,೩೦೦ ಮಧ್ಯಾಹ್ನದ ಊಟದ ಖರ್ಚು ೧,೬೦೦ ಮತ್ತು ರಾತ್ರಿಯ ಊಟದ ಖರ್ಚು ೧,೮೦೦. ಇಷ್ಟೊಂದು ಖರ್ಚು ಮಾಡಿ ಈ ರೀತಿಯ ಐಶಾರಾಮಿ ಜೀವನ ನೀಡಿದ ಈ ಎರಡೂ ಪಕ್ಷಗಳು ಇಷ್ಟೊಂದು ಹಣವನ್ನು ಎಲ್ಲಿಂದ ಭರಿಸಿದ್ದಾರೆ? ಎಂಬೂದೇ ಪ್ರಶ್ನೆ. ಒಬ್ಬ ಶಾಸಕನ ಒಂದು ದಿನದ ಖರ್ಚು ಸುಮಾರು ೨೦ ರಿಂದ ೨೫ ಸಾವಿರ ಖರ್ಚು ಮಾಡಲಾಗಿತ್ತು‌.

ಒಟ್ಟು ೧೧೭ ಶಾಸಕರ ೮ ದಿನ ಖರ್ಚಿಗೆ ಈ ರೀತಿ ಕೋಟಿ ಕೋಟಿ ಹಣ ಭರಿಸಿದ್ದಾರೆ ಎಂದರೆ ಈ ಎರಡೂ ಪಕ್ಷಗಳು ಶಾಸಕರ ರಕ್ಷಣೆಗೆ ಯಾವುದಾದರೂ ಸಂಘಟನೆಗಳಿಗೆ ಗುತ್ತಿಗೆ ನೀಡಿದ್ದಾರೆಯೇ, ಅಥವಾ ಯಾವುದಾದರೂ ಮೂಲದಿಂದ ಹಣ ಪಡೆದಿದ್ದಾರೆಯೇ ಎಂಬ ಪ್ರಶ್ನೆ ಮೂಡುವುದು ಸಹಜ..! ಅಷ್ಟಕ್ಕೂ ಈ ರೀತಿ ಶಾಸಕರನ್ನು ರಕ್ಷಿಸುವ ಅವಶ್ಯಕತೆ ಏನಿತ್ತು ಎಂಬೂದೇ ನಿಗೂಢ..!

–ಅರ್ಜುನ್

Tags

Related Articles

Close