ಪ್ರಚಲಿತ

ಕಾಂಗ್ರೆಸ್ ಪಕ್ಷದ ಕರ್ನಾಟಕದ ಚುನಾವಣಾ ಪ್ರಣಾಳಿಕೆಯು ನೆಹರು-ಗಾಂಧಿಯೆಂಬ ಉಪನಾಮದಷ್ಟೇ ಸುಳೇ ಸುಳ್ಳು!!

ಕಾಂಗ್ರೆಸಿನ ರಾಜ ಪರಿವಾರದ ನೆಹರೂ-ಗಾಂಧಿಯೆಂಬ ಉಪನಾಮ ಎಷ್ಟು ಸುಳ್ಳೋ ಅಷ್ಟೇ ಸುಳ್ಳು ಕಾಂಗ್ರೆಸ್ ಎಂಬ ಪಕ್ಷ ಮತ್ತು ಪ್ರತಿ ಚುನಾವಣೆಗೂ ಅದು ಹೊರಡಿಸುವ ಘೋಷಣಾ ಪತ್ರ. ಕರ್ನಾಟಕದ ಚುನಾವಣಾ ರಣ ಕಹಳೆ ತಾರಕ್ಕಕ್ಕೇರಿರುವ ಈ ಸಮಯದಲ್ಲಿ ಕಾಂಗ್ರೆಸ್ ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯೊಂದಿಗೆ ಅಖಾಡಾಕ್ಕಿಳಿದಿದೆ.

ಕಾಂಗ್ರೆಸಿನ ಚುನಾವಣಾ ಪ್ರಣಾಳಿಕೆಯ ಕೆಲ ಅಂಶಗಳು ಹೀಗಿವೆ:

ಕರ್ನಾಟಕದ ಐಟಿ ಕ್ಷೇತ್ರಕ್ಕೆ 300 ಬಿಲಿಯನ್ ಅಮೇರಿಕನ್ ಡಾಲರ್ ಕೊಡುಗೆ: ಕಾಂಗ್ರೆಸ್ ಪ್ರಕಾರ ಕರ್ನಾಟಕದ ಐಟಿ ಕ್ಷೇತ್ರದಲ್ಲಿ ಪ್ರಸ್ತುತ 60 ಶತಕೋಟಿ ಡಾಲರಿನಷ್ಟಿರುವ ವಹಿವಾಟನ್ನು ಬರೋಬ್ಬರಿ 300 ಬಿಲಿಯನ್ ಅಮೇರಿಕನ್ ಡಾಲರಿಗೇರಿಸಿ ಕರ್ನಾಟಕದ ಒಟ್ಟು ಅರ್ಥಿಕತೆಯನ್ನು ಮೇಲ್ದರ್ಜೆಗೇರಿಸುವುದಂತೆ! ಸಾದ್ಯವೇ ಇದು? ಪ್ರಸ್ತುತ ಕರ್ನಾಟಕದ ಒಟ್ಟು ಜಿಡಿಪಿ 190 ಬಿಲಿಯನ್ ಅಮೆರಿಕನ್ ಡಾಲರ್. ಕಾಂಗ್ರೆಸ್ ಪ್ರಕಾರ ಅದು ಐದು ವರ್ಷಗಳಲ್ಲಿ ಐಟಿ ಕ್ಷೇತ್ರದಲ್ಲಿ 300 ಬಿಲಿಯನ್ ಡಾಲರ್ ತರುವುದಂತೆ! ಅಂದರೆ ಕೇವಲ ಐಟಿ ಒಂದರಿಂದಲೇ ಕರ್ನಾಟಕದ ಪ್ರಸ್ತುತ ಜಿಡಿಪಿಯನ್ನು ಮೀರಿಸಲಾಗುತ್ತದೆ ಎಂದರ್ಥವೇ?

ಜೈವಿಕ ತಂತ್ರಜ್ಞಾನಕ್ಕೆ 50 ಬಿಲಿಯನ್ ನಿರಾಧಾರ ಕೊಡುಗೆ: ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ 50 ಬಿಲಿಯನ್ ನಿರಧಾರ ಕೊಡುಗೆ ನೀಡುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ಕಾಂಗ್ರೆಸ್ ಪ್ರಕಾರ ಕರ್ನಾಟಕದ ಬಯೋಟೆಕ್ ವಲಯವು ದೇಶಕ್ಕೆ 2015 ರಲ್ಲಿ 6.5 ಶತಕೋಟಿ ಡಾಲರ್ ಕೊಡುಗೆ ನೀಡಿತು. ಆದರೆ ಇಂಡಿಯಾ ಬ್ರಾಂಡ್ ಇಕ್ವಿಟಿ ಫೌಂಡೇಶನ್ ನ ಪ್ರಕಾರ 2015 ರಲ್ಲಿ ದೇಶದಲ್ಲಿ ಬಯೋಟೆಕ್ ವಲಯ 7 ಶತಕೋಟಿ ಅಮೆರಿಕನ್ ಡಾಲರ್ ಸಂಪಾದನೆ ಮಾಡಿದೆ ಮತ್ತು ಅನುಮಾನಗಳ ಪ್ರಕಾರ 2017ರ ಆರ್ಥಿಕ ವರ್ಷದಲ್ಲಿ ಇದು 11.6ಕ್ಕೇರುವ ನಿರೀಕ್ಷೆ ಇದೆ. ಹಾಗಾದರೆ ಇಡಿ ದೇಶದ ಬಯೋಟೆಕ್ ಆದಾಯವೇ 7 ಶತಕೋಟಿ ಡಾಲರ್ ಇರುವಾಗ ಕರ್ನಾಟಕ ಒಂದರಿಂದಲೇ 6.5 ಶತಕೋಟಿ ಡಾಲರ್ ಕೊಡುಗೆ ಬಂತಾ?

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 50 ಶತಕೋಟಿ ಕೊಡುಗೆ ನೀಡುವುದಾಗಿ ಹೇಳಿದೆಯೇ ಹೊರತು ಎಷ್ಟು ವರ್ಷದ ಅಧಿಕಾರಾವಧಿಯಲ್ಲಿ ಎಂದು ಹೇಳೇ ಇಲ್ಲ ಎನ್ನುವುದನ್ನು ನೆನಪಿಡಿ. 11.6ರಷ್ಟಿರುವ ಕರ್ನಾಟಕದ ಜೈವಿಕ ಉದ್ಯಮದ ಗಾತ್ರದ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ 50 ಬಿಲಿಯನ್ ಕೊಡುಗೆ ನೀಡುವುದು ಸಾಧ್ಯವೇ?

ಉದ್ಯೋಗ ಸೃಷ್ಟಿ ಎಂಬ ಕಾಂಗ್ರೆಸ್ ಬೂಟಾಟಿಕೆ: ಕಳೆದ ಐದು ವರ್ಷಗಳಲ್ಲಿ 50 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಕಾಂಗ್ರೆಸ್ ಬೂಟಾಟಿಕೆ ಮೆರೆಸುತ್ತಿದೆ ಆದರೆ ಇವರದೇ ಮಂತ್ರಿ, ಕರ್ನಾಟಕದ ದೊಡ್ಡ ಮತ್ತು ಮಧ್ಯಮ ಉದ್ಯಮಗಳ ಸಚಿವ ಆರ್.ವಿ.ದೇಶಪಾಂಡೆ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 14 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಹೇಳಿದ್ದಾರೆ. ಹಾಗಾದರೆ 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿರುವುದಕ್ಕೆ ಪುರಾವೆ ಎಲ್ಲಿದೆ? ಅಂದರೆ ಕಾಂಗ್ರೆಸ್ ನ ಸುಳ್ಳಿನ ಸರಮಾಲೆಗೆ ಇನ್ನೊಂದು ಮಣಿ ಪೋಣಿಸಿದಂತಾಯ್ತು. ಇನ್ನೊಂದು ಗಮ್ಮತ್ತಿನ ವಿಚಾರವೆಂದರೆ ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂದು ಮೋದಿಜಿಯನ್ನು ದೂರುತ್ತಾ ತಿರುಗುವ ಕಾಂಗೆಸ್ ಕರ್ನಾಟಕದಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಬಂಬಡಾ ಬಜಾಯಿಸುತ್ತಿದೆ!

ಅಡುಗೆ ಅನಿಲದೊಂದಿಗೆ ಕೌಶಲಗಳನ್ನು ಗೊಂದಲಗೊಳಿಸುವುದು: ಕೌಶಲ್ಯ ಮತ್ತು ಉದ್ಯೋಗ ವಿಭಾಗದಲ್ಲಿ ಸಾಧನೆಗಳ ಪಟ್ಟಿಯನ್ನು ತಯಾರಿಸುವ ಪ್ರಯತ್ನದಲ್ಲಿ, ಕ್ಷೇತ್ರದ ಪ್ರಮುಖ ಸಾಧನೆಯಂತೆ ಬಡ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕವನ್ನು ಒದಗಿಸುವುದನ್ನು ಕಾಂಗ್ರೆಸ್ ತನ್ನ ಘೋಷಣಾ ಪತ್ರದಲ್ಲಿ ಪಟ್ಟಿ ಮಾಡುತ್ತದೆ. ಕೇಂದ್ರ ಸರಕಾರದ ಅತ್ಯಂತ ಸಫಲ ಉಜ್ವಲಾ ಯೋಜನೆಯಿಂದ ಪ್ರೇರಿತವಾದ ಈ ಯೋಜನೆ ಕೌಶಲ್ಯವನ್ನು ಅಡುಗೆ ಅನಿಲದೊಂದಿಗೆ ಜೋಡಿಸುವ ಪ್ರಯತ್ನವಾಗಿದೆ. ಇದರಿಂದಲೇ ತಿಳಿಯುತ್ತದೆ ಕಾಂಗ್ರೆಸಿನ “ಕಾಶಲ್ಯ” ಯಾವ ಮಟ್ಟದಲ್ಲಿದೆಯೆಂದು.

ಕೌಶಲ್ಯ ಅಭಿವೃದ್ಧಿ ಕುರಿತು ಕಾಂಗ್ರೆಸ್ ಇನ್ನೂ ಯೋಜನೆಯನ್ನು ಯೋಜಿಸುತ್ತಾ ಇದೆ: ಕೌಶಲ ಎಂದರೇನೆಂದೇ ತಿಳಿಯದ ಕಾಂಗ್ರೆಸ್ ಕೌಶಲ್ಯಾಭಿವೃದ್ದಿ ಮಾಡುವುದಾದರೂ ಹೇಗೆ. ಕರ್ನಾಟಕದ ಜನಸಂಖ್ಯಾ ಲಾಭಾಂಶವನ್ನು ಉಲ್ಲೇಖಿಸುವಾಗ ರಾಜ್ಯದಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಅಳೆಯುವ ತನ್ನ ಸರ್ಕಾರದ ಯೋಜನೆಯನ್ನು ಕಾಂಗ್ರೆಸ್ ಕರ್ನಾಟಕ ಪ್ರಣಾಳಿಕೆಯು ಇಟ್ಟಿದೆ. ಆದಾಗ್ಯೂ, ಮುಂದಿನ 5 ವರ್ಷಗಳಲ್ಲಿ ನಡೆಸಲು ಯೋಜಿಸುವ ವ್ಯಾಯಾಮದಂತೆ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ತಂತ್ರವನ್ನು ಯಾವ ರೀತಿ ಅಭಿವೃದ್ಧಿಪಡಿಸಲಾಗುವುದೆಂದು ಕಾಂಗ್ರೆಸಿಗೆ ಇನ್ನೂ ಹೊಳೆದಿಲ್ಲ.

ಉಲ್ಲೇಖವನ್ನು ಹೊರತುಪಡಿಸಿ ಮಕ್ಕಳ ಬಗ್ಗೆಏನೂ ಇಲ್ಲ: ಪ್ರಣಾಳಿಕೆಯು ಮಕ್ಕಳನ್ನು ಒಂದು ಪ್ರತ್ಯೇಕ ಗುಂಪಾಗಿ ಉಲ್ಲೇಖಿಸುತ್ತಿದ್ದರೂ, ಇದು ಕರ್ನಾಟಕ ಸರ್ಕಾರವು ಮಗುವಿನ ಕಲ್ಯಾಣ ಮತ್ತು ಭದ್ರತೆಗಾಗಿ ತೆಗೆದುಕೊಂಡ ಯಾವುದೇ ಕ್ರಮಗಳನ್ನು ನಿರ್ದಿಷ್ಟವಾಗಿ ಹೇಳುವುದಿಲ್ಲ. ತಮ್ಮ ಮುಂದಿನ ಐದು ವರ್ಷದ ಯೋಜನೆಗಳಿಗೆ ಕೂಡಾ ಪ್ರಾಣಾಳಿಕೆ ಬಹುಮಟ್ಟಿಗೆ ಮಕ್ಕಳನ್ನು ತೊರೆದಿದೆ ಮತ್ತು ಕೇವಲ ವಾಕ್ಚಾತುರ್ಯದಿಂದಷ್ಟೇ ಕೂಡಿದೆ. ಇನ್ನು ಮಹಿಳಾ ಸಶಕ್ತೀಕರಣದ ಬಗ್ಗೆ ಹೇಳಬೇಕೆಂದರೆ ಕರ್ನಾಟಕ ಮಹಿಳಾ ಅಭಿವೃದ್ದಿ ಯೋಜನೆಯನ್ನು ಪ್ರಾರಂಭ ಮಾಡಿದ್ದಷ್ಟೇ ಬಂತು. ಆದರೆ ಈ ಯೋಜನೆಯಿಂದ ನಿರ್ದಿಷ್ಟವಾಗಿ ಯಾರಿಗೆ ಪ್ರಯೋಜವಾಗಿದೆಯೋ ಪರಮಾತ್ಮನಿಗೇ ಗೊತ್ತು! ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರಗಳು ನೀತಿಗಳನ್ನು ಮತ್ತು ಕಾರ್ಯಕ್ರಮಗಳನ್ನು ರೂಪಿಸಿವೆ ಆದರೆ ಅವೆಲ್ಲವೂ ಕಾರ್ಯರೂಪಕ್ಕೆ ಬಂದೇ ಇಲ್ಲ.

ಹುತಾತ್ಮರಾದ ಕರ್ನಾಟಕದ ಸೈನಿಕರ ಮೇಲೆ ಅವಲಂಬಿತರಾದವರಿಗೆ ಸರಕಾರಿ ಉದ್ಯೋಗಗಳು: ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾದ ಪ್ರಮುಖ ಸಾಧನೆಗಳಲ್ಲಿ ಹುತಾತ್ಮರಾದ ಕರ್ನಾಟಕದ ಸೈನಿಕರ ಮೇಲೆ ಅವಲಂಬಿತರಾದವರಿಗೆ ಸರಕಾರಿ ಉದೋಗ ದೊರಕಿಸಿ ಕೊಟ್ಟಿದೆ ಎಂಬುದಾಗಿದೆ. ಭಂಡ ಕಾಂಗ್ರೆಸ್ ಸರಕಾರದ ಸುಳ್ಳು ಸಿಯಾಚಿನ್ ನಲ್ಲಿ ಹುತಾತ್ಮಾರಾದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರ ಹೆಂಡತಿಗೆ ಉದ್ಯೋಗ ಕೊಡಿಸುವ ವಿಚಾರದಲ್ಲಿ ಜಗಜ್ಜಾಹೀರಾಗಿದೆ. ಪತಿ ಮೃತ ಪಟ್ಟು ಒಂದು ವರ್ಷ ಕಳೆದರೂ ಪತ್ನಿಗೆ ಒಂದು ಉದ್ಯೋಗ ಕೊಡಿಸಲಾಗದ ನಾಲಾಯಕ್ ಸರ್ಕಾರ, ಕೇಂದ್ರೀಯ ಮಂತ್ರಿ ಸ್ಮೃತಿ ಇರಾನಿ ಅವರು ಕೊಡಿಸಿದ ಉದ್ಯೋಗವನ್ನು ತಾನು ಕೊಡಿಸಿದ್ದೆನ್ನುತ್ತದೆ. ನಾಚಿಗೆಟ್ಟ ರಾಜ್ಯ ಸರಕಾರ, ಮೋದಿ ಸರಕಾರದ ಸಾಧನೆಗಳನ್ನು ತನ್ನದೆಂದು ಬಿಂಬಿಸಿಕೊಳ್ಳುತ್ತದೆ.

ಒಂದು ಸಮುದಾಯದವರ ಓಲೈಕೆ ನಡೆಸುವ ಪ್ರಣಾಳಿಕೆ: ಅಲ್ಪಸಂಖ್ಯಾತ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಗಳ ಆರೋಗ್ಯ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಮಾ ಯೋಜನೆ ಒದಗಿಸಲು ಕಾಂಗ್ರೆಸ್ ಪ್ರಣಾಳಿಕೆ ಭರವಸೆ ನೀಡುತ್ತದೆ. ಆದರೆ ಬಹುಸಂಖ್ಯಾತರ ಬಗ್ಗೆ ಒಂದೇ ಒಂದು ಉಲ್ಲೇಖವಿಲ್ಲ. ಒಡೆದಾಳುವ ನೀತಿಯ ಕಾಂಗ್ರೆಸಿನಿಂದ ಇನ್ನೇನು ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯ? ಅಲ್ಪರ ಓಲೈಕೆಗೆ ಕಟಿ ಬದ್ದ ಸರಕಾರ ಎಪ್ಪತ್ತು ವರ್ಷಗಳಿಂದಲೂ ಬಹುಸಂಖ್ಯಾರಿಗೆ ಅನ್ಯಾಯ ಮಾಡುತ್ತಿದೆ. ಮುಂದೆ ಗದ್ದುಗೆ ಏರಿದರೂ ಅದು ತನ್ನ ಹಳೆ ಚಾಳಿಯನ್ನೇ ಮುಂದುವರಿಸುತ್ತದೆ ಎನ್ನುವುದನ್ನು ಅದರ ಪ್ರಣಾಳಿಕೆಯೇ ಸಾಬೀತು ಪಡಿಸಿದೆ.

ಕಾಂಗ್ರೆಸಿನ ಚುನಾವಣಾ ಪ್ರಣಾಳಿಕೆ ಕಾಂಗ್ರೆಸಿನಷ್ಟೇ ಟೊಳ್ಳು. ಅಭಿವೃದ್ಧಿಯ ಬಗ್ಗೆ ಯಾವುದೇ ಸ್ಪಷ್ಟ ದೃಷ್ಟಿ ಕೋನವಿರದ ಈ ಪ್ರಣಾಳಿಕೆ ಕಾಂಗ್ರೆಸ್ ಗದ್ದುಗೆ ಏರಿದ ಮೇಲೆ ಕಸದ ಬುಟ್ಟಿ ಸೇರುವುದು ಖಚಿತ. ಐದು ವರ್ಷದ ಆಡಳಿತದ ವೈಖರಿ ನೋಡಿದ ಜನತೆ ಕಾಂಗ್ರೆಸಿನ ಈ ಘೋಷಣಾ ಪತ್ರವನ್ನು ನಂಬುತ್ತಾರೆ ಎನ್ನುವ ನಂಬಿಕೆ ಕಾಂಗ್ರೆಸಿಗಿದೆಯೆ? ದೇವರೆ ಬಲ್ಲ!

-sharvari

Source
thetruepicture
Tags

Related Articles

Close