ಪ್ರಚಲಿತ

ಜೀಸಸ್ ಸರ್ವೋಚ್ಚ ಎಂದಿದ್ದಕ್ಕೆ ಮರಣ ದಂಡನೆ

A 4158

ಭಾರತದಲ್ಲಿ‌ದ್ದುಕೊಂಡು ನೆರೆಯ ಪಾಕಿಸ್ತಾನ ಅಥವಾ ಇನ್ಯಾವುದೋ ದೇಶದಲ್ಲಿ ಸಹಿಷ್ಣುತೆ ಹೆಚ್ಚು, ಭಾರತ ಅಸಹಿಷ್ಣು ರಾಷ್ಟ್ರ ಎಂಬುದಾಗಿ ಬೊಬ್ಬಿರಿವ ಅನೇಕ ದೇಶ ದ್ರೋಹಿಗಳು ಭಾರತದಲ್ಲಿ ಇದ್ದಾರೆ. ಕೆಲವರಿಗಂತೂ ಪಾಕಿಸ್ತಾನ‌ವೇ ಶ್ರೇಷ್ಟ. ಅಲ್ಲಿಗೆ ಹೋಗಿ ಜೀವಿಸುವುದೇ ಲೇಸು ಎನ್ನುವ ಮನೋಭಾವ ಹೊಂದಿದವರಿಗೂ ಕಡಿಮೆಯೇನಿಲ್ಲ. ಈ ದೇಶದಲ್ಲಿ‌ ಇದ್ದುಕೊಂಡೇ ಈ ದೇಶದಲ್ಲಿ ಇರಲು ಭಯವಾಗುತ್ತಿದೆ ಎನ್ನುವ ಭಂಡರೂ ನಮ್ಮ ನಡುವೆಯೇ ಇದ್ದಾರೆ.

ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧವಿಲ್ಲದೆ ಭಾರತ ಈ ನೆಲದಲ್ಲಿ ವಾಸಿಸಲು ಎಲ್ಲಾ ತರದ ಅನುಕೂಲ‌ಗಳನ್ನು, ಅವಕಾಶ‌ಗಳನ್ನು ಮಾಡಿಕೊಟ್ಟಿದೆ. ಹಿಂದೂ ಧರ್ಮ ಭಾರತದ ಉಸಿರು. ಈ ಧರ್ಮ‌ವನ್ನೇ ನಿಂದಿಸಿ ತಮ್ಮ ಅನ್ನ ಹುಟ್ಟಿಸಿಕೊಳ್ಳುವ ಕೆಲವು ಮುಸಲ್ಮಾನ, ಕ್ರೈಸ್ತ‌ರು ಅಷ್ಟೇ ಏಕೆ ಕೆಲವು ಹಿಂದೂಗಳಿಗೂ ಯಾವುದೇ ಭಯವಿಲ್ಲದೆ ಭಾರತದಲ್ಲಿ ಬದುಕುವ ಸ್ವಾತಂತ್ರ್ಯ ಇದೆ. ಹೀಗಿದ್ದರೂ ಭಾರತದ ಶತ್ರು ರಾಷ್ಟ್ರ ಪಾಕ್ ಪರ ಒಲವು ಹೊಂದಿ,.ಭಾರತದಲ್ಲಿದ್ದುಕೊಂಡೇ ಭಾರತವನ್ನು ದ್ವೇಷಿಸುವವರಿಗೇನೂ ಕಡಿಮೆ ಇಲ್ಲ. ಅಂತಹ ನರಸತ್ತವರಿಗಾಗಿ ಇಲ್ಲೊಂದು ಕಥೆ ಇದೆ. ಓದಿ.

ಪಾಕಿಸ್ತಾನ‌ದಲ್ಲಿ ನಡೆದ ನೈಜ ಘಟನೆ ಇದು. ಸರಿಸುಮಾರು 5 ವರ್ಷಗಳ ಹಿಂದೆ ಕ್ರೈಸ್ತ ಮೆಕ್ಯಾನಿಕ್ ಓರ್ವನಿಗೆ ಧರ್ಮ ನಿಂದನೆಯ ಆರೋಪದಡಿ ಪಾಕಿಸ್ತಾನದ ನ್ಯಾಯಾಲಯ‌ವು ಮರಣದಂಡನೆ ವಿಧಿಸಿದ ಕಥೆ. ತಾನು ನೀಡಿದ ಸೇವೆಗಳಿಗೆ ಸರಿಯಾದ ಹಣ ಪಾವತಿಸುವಂತೆ ಗ್ರಾಹಕನ ಜೊತಗೆ ಮೆಕ್ಯಾನಿಕ್ ಅಶ್ಫಾಕ್ ಮಸಿಹ್ ಎಂಬಾತನಿಗೆ ಸಣ್ಣ ಮಟ್ಟದ ಜಗಳ ನಡೆಯುತ್ತದೆ‌. ಇದಕ್ಕಾಗಿ 2017 ರ ಜೂನ್ ತಿಂಗಳಿನಲ್ಲಿ ಆತನನ್ನು ಪಾಕಿಸ್ತಾನ‌ದ ಪೊಲೀಸರು ಬಂಧಿಸುತ್ತಾರೆ. ಆತನ ಗ್ಯಾರೇಜ್‌ಗೆ ಧಾರ್ಮಿಕ ವ್ಯಕ್ತಿ‌ಯೊಬ್ಬ ಬೈಕ್ ರಿಪೇರಿಗೆ ತಂದು, ತನಗೆ ರಿಯಾಯಿತಿ ನೀಡಬೇಕು. ತಾನೊಬ್ಬ ಧಾರ್ಮಿಕ ವ್ಯಕ್ತಿ ಎಂಬುದಾಗಿ ಕೇಳಿದಾಗ, ಇದಕ್ಕೆ ಮಸಿಹ್ ನಿರಾಕರಿಸುತ್ತಾನೆ. ‘ನಾನು ಕ್ರೈಸ್ತ‌ನನ್ನು ಮಾತ್ರ ನಂಬುತ್ತೇನೆ. ಕ್ರೈಸ್ತರಿಗೆ ಜೀಸಸ್ ಸರ್ವೋಚ್ಚ’ ಎಂದು ಹೇಳುತ್ತಾನೆ. ಇದು ಕೋಮು ಸಂಘರ್ಷ‌ಕ್ಕೆ ಕಾರಣವಾಗುತ್ತದೆ. ಕೂಡಲೇ ಅಲ್ಲಿ ಹಲವಾರು ಮುಸಲ್ಮಾನ‌ರು ಸೇರಿ, ಮೆಕ್ಯಾನಿಕ್ ಪ್ರವಾದಿ ಮುಹಮ್ಮದ್ ನನ್ನು ಆತ ಅಗೌರವಿಸಿದ್ದಾಗಿ ವಾದ ಮಾಡುತ್ತಾರೆ.

ಈ ಆರೋಪದ ಹಿನ್ನೆಲೆಯಲ್ಲಿ ಕ್ರೈಸ್ತ ಮೆಕ್ಯಾನಿಕ್‌ನನ್ನು ಧರ್ಮ ನಿಂದನೆಯ ಆರೋಪದಡಿ ಪೋಲೀಸರು ಬಂಧಿಸುತ್ತಾರೆ. 2022 ರ ಜೂನ್ ತಿಂಗಳಿನಲ್ಲಿ ಈ ಕ್ಷುಲ್ಲಕ ಕಾರಣಕ್ಕಾಗಿ ಮಸಿಹ್‌ನಿಗೆ ಪಾಕಿಸ್ತಾನ‌ದ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿದೆ.

ಪಾಕಿಸ್ತಾನದಲ್ಲಿ ಭದ್ರತೆ ಹೆಚ್ಚು ,ಭಾರತದಲ್ಲಿ ಭದ್ರತೆ ಕಡಿಮೆ. ಭಾರತದಲ್ಲಿ ಜೀವಿಸಲು, ಉಸಿರಾಡಲು ಕಷ್ಟವಾಗುತ್ತದೆ ಎಂದು ಬೊಬ್ಬೆ ಹೊಡೆದು, ಪಾಕಿಸ್ತಾನ‌ವನ್ನು ಹೊಗಳಿ ಬದುಕುವ ಷಂಡರು ಈ ಕಥೆಯನ್ನೊಮ್ಮೆ ಓದಿದರೆ ಸಾಕು. ಆವರಿಗೆ ಭಾರತ ಯಾಕೆ ಸೇಫ್ ಎಂಬುದಕ್ಕೆ ಉತ್ತರ ದೊರೆಯುತ್ತದೆ. ಈ ದೇಶದ ವಿರುದ್ಧ ಎಷ್ಟೇ ಅರಚಾಡಿದರೂ ನೀವಿನ್ನೂ ಇಲ್ಲಿ ಯಾವುದೇ ಅಪಾಯ ಇಲ್ಲದೆ, ನಿಮಗೆ ಬೇಕಾದ ಹಾಗೆ ಬದುಕಿದ್ದೀರಿ ಎಂದರೆ ಈ ದೇಶದ ಸಹಿಷ್ಣುತೆ ಎಷ್ಟಿರಬೇಕು ಆಲೊಚಿಸಿ.

ಪಾಕಿಸ್ತಾನ ಇಸ್ಲಾಂ ದೇಶ‌. ಅಲ್ಲಿ ಇಸ್ಲಾಂ‌ಗೆ ಯಾವುದೇ ಧಕ್ಕೆ ಬರಲಿ, ಯಾರು ಆ ಕೃತ್ಯ ಎಸಗಿದ್ದವರಿಗೆ ಮರಣ ದಂಡನೆ ಅಥವಾ ಇನ್ಯಾವುದೋ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ‌. ನೀವು ಪಾಕಿಸ್ತಾನದ ಮಣ್ಣಲ್ಲಿ ಇದ್ದುಕೊಂಡು ಆ ದೇಶದ ಬಗ್ಗೆ ಅವಹೇಳನ‌ಕಾರಿಯಾಗಿ ಅಥವಾ ಏನಾದರೂ ಅಲ್ಲಿನ ಜನರಿಗೆ ಜೀರ್ಣವಾಗದಂತಹ ಶಬ್ಧಗಳನ್ನಾಡಿದಿರೋ, ಆ ಕ್ರೈಸ್ತ ಮೆಕ್ಯಾನಿಕ್‌ಗಾದ ಶಿಕ್ಷೆ‌ಯೇ ನಿಮಗೂ ದೊರೆತೀತು.

ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನವನ್ನು ಹೊಗಳಿ ಅಟ್ಟಕ್ಕೇರಿಸುವವರಿಗೆ ಭಾರತದ ಶ್ರೇಷ್ಟತೆ ಅರಿವಾಗಬೇಕಾದರೆ, ಅವರು ಪಾಕಿಸ್ತಾನ ಒಮ್ಮೆ ಭೇಟಿ ನೀಡಿ, ಅಲ್ಲಿನ ಮುಸ್ಲಿಂ‌ರನ್ನು, ಅವರ ಜೀವನವನ್ನು ನೋಡಿದರೆ, ಊಹಿಸಿಕೊಂಡಂರೆ ಅನುಭವಕ್ಕೆ, ಅರಿವಿಗೆ ಬರುತ್ತದೆ. ನಮ್ಮ ಸನಾತನ ಹಿಂದೂ ಧರ್ಮ, ನಮ್ಮ ದೇಶ ಯಾಕೆ ಸರ್ವ ಶ್ರೇಷ್ಟ ಎನ್ನುವು ಸಹ ಗೊತ್ತಾಗುತ್ತಾದೆ.

Tags

Related Articles

Close