ಪ್ರಚಲಿತ

ಬ್ರೇಕಿಂಗ್! ಸಿದ್ದರಾಮಯ್ಯನನ್ನು ಮಟ್ಟಹಾಕಲು ಮುಂದಾದ ಡಿಕೆಶಿ – ಪರಮೇಶ್ವರ್.! ಹೈಕಮಾಂಡ್ ನಿರ್ಧಾರಕ್ಕೆ ಮಂಡಿಯೂರುತ್ತಾರಾ ಮಾಜಿ ಸಿಎಂ‌‌..?

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ರಚನೆಯಾದ ದಿನದಿಂದಲೇ ಎರಡೂ ಪಕ್ಷಗಳ ಮುಖಂಡರಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಭಿನ್ನಾಭಿಪ್ರಾಯ ಕಡಿಮೆ ಆಗುವ ಲಕ್ಷಣ ಕಾಣುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕ ಸಿದ್ದರಾಮಯ್ಯನವರು ಮೈತ್ರಿ ಸರಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ಮೈತ್ರಿ ಸರಕಾರ ಸಿದ್ದರಾಮಯ್ಯನವರನ್ನು ಕಡೆಗಣಿಸುತ್ತಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಲೇ ಇತ್ತು. ಆದ್ದರಿಂದಲೇ ಸಿದ್ದರಾಮಯ್ಯನವರು ಪರೋಕ್ಷವಾಗಿ ಮೈತ್ರಿ ಸರಕಾರ ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು, ಅದಕ್ಕೆ ಪೂರಕವಾಗುವಂತೆ ಸಿದ್ದರಾಮಯ್ಯನವರೂ ಕೂಡ ತಮ್ಮ ಬೆಂಬಲಿತ ಶಾಸಕರನ್ನು ಒಟ್ಟು ಸೇರಸಿ ಬಹಿರಂಗವಾಗಿಯೇ ಕುಮಾರಸ್ವಾಮಿ ಸರಕಾರದ ವಿರುದ್ಧ ಸಮರ ಸಾರಿದ್ದರು.

ಈಗಾಗಲೇ ಹತ್ತಕ್ಕೂ ಹೆಚ್ಚು ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಇದ್ದಾರೆ ಎಂಬ ಸಂಶಯವಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಇವರು ಮೈತ್ರಿ ಸರಕಾರದ ವಿರುದ್ಧ ತಿರುಗಿಬೀಳಬಹುದು ಎಂಬ ಆತಂಕ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರಿಗೆ ಉಂಟಾಗಿದೆ. ಇತ್ತ ಹೈಕಮಾಂಡ್ ಕೂಡ ಸಿದ್ದರಾಮಯ್ಯನವರ ಬಾಯಿ ಮುಚ್ಚಿಸಲು ಮುಂದಾಗಿದ್ದು, ರಾಜ್ಯ ಕಾಂಗ್ರೆಸ್ ನಾಯಕರನ್ನೇ ಬಳಸಿಕೊಂಡು ಸಿದ್ದರಾಮಯ್ಯನವರನ್ನು ಕಟ್ಟಿಹಾಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.!

ಸಿದ್ದರಾಮಯ್ಯನವರ ಮಾತಿಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ..!

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಅವರ ಆಡಳಿತ ವೈಖರಿಗೆ ಬೇಸತ್ತಿದ್ದ ಪಕ್ಷದ ಮುಖಂಡರು ಯಾವುದೇ ಬೇರೆ ದಾರಿ ಇಲ್ಲದೇ ಇದ್ದಿದ್ದರಿಂದ ಸುಮ್ಮನಾಗಿದ್ದರು. ಆದರೆ ಇದೀಗ ಸಿದ್ದರಾಮಯ್ಯನವರು ಕೇವಲ ಒಂದು ಕ್ಷೇತ್ರದ ಶಾಸಕರಷ್ಟೇ ಹೊರತು ಬೇರೇನಲ್ಲ. ಆದ್ದರಿಂದ ಇದೀಗ ಮೈತ್ರಿ ಸರಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತಿಗೆ ಯಾವುದೇ ಕಿಮ್ಮತ್ತು ನೀಡಲಾಗುತ್ತಿಲ್ಲ. ಇತ್ತ ಸಿದ್ದರಾಮಯ್ಯನವರು ರಾಜ್ಯ ಸರಕಾರದ ವಿರುದ್ಧ ಕತ್ತಿ ಮಸೆಯುತ್ತಿದ್ದರೆ , ಮೈತ್ರಿ ಸರಕಾರದ ಪ್ರಮುಖರಾದ ಡಿಕೆ ಶಿವಕುಮಾರ್ ಮತ್ತು ಡಿಸಿಎಂ ಜಿ ಪರಮೇಶ್ವರು ಅವರು ಬಹಿರಂಗವಾಗಿಯೇ ಸಿದ್ದರಾಮಯ್ಯನವರ ವಿರುದ್ಧ ಸಿಡದೆದ್ದಿದ್ದು, ಯಾವುದೇ ಕಾರಣಕ್ಕೂ ಎರಡೂ ಪಕ್ಷಗಳ ಶಾಸಕರಾಗಲಿ , ಮುಖಂಡರಾಗಲಿ ಸಿದ್ದರಾಮಯ್ಯನವರ ಮಾತಿಗೆ ಬೆಂಬಲ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಹೈಕಮಾಂಡ್ ಆದೇಶದ ಮೇರೆಗೆ ಸಭೆ ನಡೆಸಿದ ಪರಮೇಶ್ವರ್ ಮತ್ತು ಡಿಕೆಶಿ ನೇತ್ರತ್ವದ ತಂಡ, ಸಿದ್ದರಾಮಯ್ಯನವರು ಇತ್ತೀಚಿಗೆ ಮೈತ್ರಿ ಸರಕಾರಕ್ಕೆ ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ಶಾಸಕರು ಯಾರೂ ಕೂಡ ಅವರ ಮಾತಿಗೆ ಧ್ವನಿಕೂಡಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಸಿದ್ದರಾಮಯ್ಯನವರು ಪ್ರಶ್ನಾತೀತ ವ್ಯಕ್ತಿಯಲ್ಲ, ಆದರೆ ಅವರ ಹೇಳಿಕೆಗಳು ಸರಕಾರಕ್ಕೆ ತೊಂದರೆಯಾಗುವ ರೀತಿ ಇದೆ. ಆದ್ದರಿಂದ ಇಂತಹ ಹೇಳಿಕೆಗಳಿಗೆ ಯಾರೂ ಗಮನಹರಿಸುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರಿಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ ಪರಮೇಶ್ವರ್.!

ಸ್ಟ್ರಾಂಗ್ ಲೀಡರ್ಸ್‌ಗಳ ಮಾತಿಗೆ ಬಗ್ಗುತ್ತಾರಾ ಸಿದ್ದು..?

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸ್ವತಃ ತಮ್ಮ ಪಕ್ಷದ ಮುಖಂಡರನ್ನೇ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಹೈಕಮಾಂಡ್‌ಗೂ ಎದೆ ಕೊಟ್ಟು ನಿಲ್ಲುತ್ತಿದ್ದ ಸಿದ್ದರಾಮಯ್ಯನವರು ಇದೀಗ ಪರಮೇಶ್ವರ್ ಮತ್ತು ಡಿಕೆಶಿ ಮಾತಿಗೆ ಬಗ್ಗುತ್ತಾರಾ ಎಂಬ ಕುತೂಹಲ ಉಂಟಾಗಿದೆ. ಯಾಕೆಂದರೆ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯನವರು ಚದುನಾವಣೆಗೂ ಮುನ್ನವೇ ವಿರೋಧಿಸುತ್ತಾ ಬಂದಿದ್ದರಿಂದ ಮೈತ್ರಿ ಮಾಡಿಕೊಂಡ ನಂತರ ಈ ಸಿಟ್ಟು ಹೆಚ್ಚಾಗಿತ್ತು. ಆದ್ದರಿಂದಲೇ ಇದೀಗ ಸಿದ್ದರಾಮಯ್ಯನವರನ್ನು ಹದ್ದುಬಸ್ತಿನಲ್ಲಿಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಇದಕ್ಕಾಗಿ ರಾಜ್ಯ ನಾಯಕರನ್ನೇ ಬಳಸಿಕೊಂಡಿದೆ.!

–ಅರ್ಜುನ್

Tags

Related Articles

Close