ಪ್ರಚಲಿತ

ಭಾರತದ ಗೌರವದ ಪ್ರತೀಕವಾಗಿದ್ದ ಆ ವಿಶ್ವ ವಿದ್ಯಾಲಯವನ್ನು ಸಾವಿರಾರು ವಿದ್ಯಾರ್ಥಿಗಳ ಸಮೇತ ಸುಟ್ಟು ಬೂದಿ ಮಾಡಿದ ವಿಚಾರ ತಿಳಿದಿದೆಯಾ? !! ಹಾಗಾದರೆ ಆ ಪ್ರಸಿದ್ಧ ವಿಶ್ವವಿದ್ಯಾಲಯವನ್ನು ನಾಶ ಮಾಡಿದ್ದು ಯಾರು ಗೊತ್ತೇ?!

ಭಾರತ ದೇಶ ಎಂದರೆ ಎಷ್ಟು ಗತ ವೈಭವಾಗಿತ್ತೆಂದರೆ ಅದನ್ನು ಯಾರೂ ಬಾಯಿ ಮಾತಲ್ಲಿ ಹೇಳಲು ಸಾಧ್ಯವಿಲ್ಲ!!  ಆಗಿದ್ದ ಸಂಪತ್ತು ಸಂಸ್ಕøತಿ ಈಗ ಇಲ್ಲದಿರಲು ಕಾರಣ ಮುಸಲ್ಮಾನರ ಆಕ್ರಮಣ!! 800 ವರ್ಷಗಳ ಹಿಂದೆ ಜಗತ್ಪ್ರಸಿದ್ದ ವಿಶ್ವವಿದ್ಯಾಲಯ ಒಂದಿತ್ತು!! ಆದರೆ ಆ ಪ್ರಸಿದ್ಧ ವಿಶ್ವವಿದ್ಯಾಲಯವನ್ನು ನಮ್ಮಿಂದ ಉಳಿಸಲು ಸಾಧ್ಯವಾಗಲಿಲ್ಲ!! ಭಾರತದ ಇತಿಹಾಸದಲ್ಲಿ ಮರೆಯಲಾರದಂತಹ ಒಂದು ಘಟನೆ ನಡೆದು ಹೋಯಿತು. ಇದಕ್ಕೆ ಕಾರಣ ಮತಾಂದ ಒಬ್ಬ ಅರಬ್ ಸ್ಥಾನದ ಮುಸ್ಲಿಂ!! ಅವನ ಹೆಸರು ಭಕ್ತಿಯಾರ್ ಖಿಲ್ಜಿ 16 ಮಂದಿ ಸಹಚರರೊಂದಿಗೆ ನಳಂದಾ ವಿಶ್ವವಿದ್ಯಾಲಯಕ್ಕೆ ದಾಳಿ ಮಾಡಿದ!!. ಈತ ಮತ್ತು ಈತನ ಧರ್ಮಾಂದ ಪಡೆ ಬೃಹತ್ ವಿದ್ಯಾಲಯವನ್ನು ಸರ್ವನಾಶ ಮಾಡಿದರು. ‘ನ ಅಲಂ ದ ಇತಿ ನಳಂದಾ’ ಎಂದಾಗುತ್ತದೆ. ಅಂದರೆ ವಿದ್ಯಾದಾನದ ವಿಷಯದಲ್ಲಿ ಅಲಂ (ಸಾಕು) ಎಂಬುವುದೇ ಗೊತ್ತಿರದಿದ್ದಂತಹ ಬೃಹತ್ ವಿಶ್ವವಿದ್ಯಾಲಯವಾಗಿತ್ತು!!

ನಳಂದ ಇದು ನಮ್ಮ ದೇಶದ ಪ್ರಾಚೀನ ಕಾಲದ ಉನ್ನತ ವ್ಯಾಸಂಗ ಕೇಂದ್ರದ ಪ್ರಸಿದ್ಧ ಹೆಸರು. ನಳಂದ ಪ್ರಾಂತ್ಯವು ಭಾರತದ ರಾಜ್ಯ ಬಿಹಾರದ ರಾಜಧಾನಿಯಾದ ಪಾಟ್ನಾದ ಆಗ್ನೇಯ ಭಾಗದಲ್ಲಿ ಸುಮಾರು 55 ಮೈಲು ದೂರದಲ್ಲಿದೆ ಮತ್ತು ಕ್ರಿ.ಶ. 427 ರಿಂದ 1197 ವರೆಗೆ ಬುದ್ಧ ಪ್ರಣೀತ ತತ್ವಜ್ಞಾನದ ವ್ಯಾಸಂಗ ಕೇಂದ್ರವಾಗಿತ್ತು. ಇದು “ಇತಿಹಾಸದಲ್ಲಿ ನಮೂದಿತವಾದ ಮೊದಲ ಅತಿ ಶ್ರೇಷ್ಠವಾದ ವಿಶ್ವವಿದ್ಯಾಲಯ” ಎಂದು ಕರೆಯಲ್ಪಟ್ಟಿದೆ.

Image result for nalanda university

ಕೆಲವು ಕಟ್ಟಡಗಳನ್ನು ಮೌರ್ಯ ವಂಶದ ಚಕ್ರವರ್ತಿ ಅಶೋಕನು ನಿರ್ಮಿಸಿದ್ದಾನೆ. ಗುಪ್ತಾ ಸಾಮ್ರಾಜ್ಯವೂ ಕೆಲವು ಮಠಗಳನ್ನು ನಿರ್ಮಿಸಲು ಪೆÇ್ರೀತ್ಸಾಹಿಸಿತು. ಇತಿಹಾಸಜ್ಞರ ಪ್ರಕಾರ, ನಳಂದವು ಗುಪ್ತ ರಾಜ ಶಕ್ರಾದಿತ್ಯ(ಕುಮಾರಗುಪ್ತನೆಂದೂ ಕರೆಯುವರು, ಆಳ್ವಿಕೆ 415-55) ಮತ್ತು ಬೌದ್ಧ ಸಾಮ್ರಾಟರಾದ ಹರ್ಷ ಹಾಗೂ ಪಾಲ ಸಾಮ್ರಾಜ್ಯದ ನಂತರದ ಕೆಲವು ಚಕ್ರವರ್ತಿಗಳ ಕಾಲದಲ್ಲಿ ಪ್ರವರ್ಧಮಾನದಲ್ಲಿತ್ತು. ಅಲ್ಲಿಯ ಸಂಕೀರ್ಣವು ಕೆಂಪು ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿತ್ತು ಮತ್ತು ಅದರ ಭಗ್ನಾವಶೇಷವು 14 ಎಕರೆಗಳಷ್ಟು ಸ್ಥಳವನ್ನು ಆಕ್ರಮಿಸಿತ್ತು. ತನ್ನ ಉತ್ತುಂಗ ಸ್ಥಿತಿಯಲ್ಲಿ ಈ ವಿಶ್ವವಿದ್ಯಾಲಯವು ಚೈನಾ, ಗ್ರೀಸ್ ಮತ್ತು ಪರ್ಶಿಯಾದಂತಹ ದೂರದೂರುಗಳ ಪಂಡಿತರು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಿತ್ತು.

ನಳಂದವು 1193ರಲ್ಲಿ ಭಕ್ತಿಯಾರ್ ಖಿಲ್ಜಿಯ ನೇತೃತ್ವದಲ್ಲಿ ಟರ್ಕಿಯ ಮುಸ್ಲಿಮ್ ಧಾಳಿಕೋರರಿಂದ ದೋಚಲ್ಪಟ್ಟಿತು, ಇದು ಭಾರತದಲ್ಲಿ ಬೌದ್ಧರ ಪ್ರಾಬಲ್ಯದ ಇಳಿಮುಖದ ಮೈಲಿಗಲ್ಲಾಯಿತು. 2006ರಲ್ಲಿ ಸಿಂಗಪೂರ್, ಚೈನಾ, ಭಾರತ, ಜಪಾನ್ ಮತ್ತು ಇತರ ದೇಶಗಳು ಈ ಐತಿಹಾಸಿಕ ಪ್ರಾಂತ್ಯವನ್ನು ನಳಂದ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಎಂದು ನವೀಕರಿಸುವ ಮತ್ತು ಪುನರುಜ್ಜೀವನಗೊಳಿಸುವ ಯೋಜನೆಯ ಪ್ರಸ್ತಾಪವನ್ನು ಮುಂದಿಟ್ಟಿತು. ನಳಂದ ವಿಶ್ವವಿದ್ಯಾಲಯದ ಗ್ರಂಥಾಲಯವು ಎಷ್ಟು ದೊಡ್ಡದಿತ್ತೆಂದರೆ, ಮೊಘಲರು ಅಲ್ಲಿ ಬೆಂಕಿ ಹಚ್ಚಿದ ಮೂರು ತಿಂಗಳವರೆಗೂ ಆ ಸ್ಥಳವು ಉರಿಯುತ್ತಿತ್ತೆಂದು ವರದಿಯಾಗಿತ್ತು. ಆ ಸ್ಥಳದಿಂದ ಸಂತರನ್ನು ಹೊರಗೆ ಕಳಿಸಿ, ಮಠಗಳನ್ನು ನಾಶಮಾಡಿದ್ದರು.

Related image

ಸುಮಾರು 10,000 ಸಾವಿರ ವಿದ್ಯಾರ್ಥಿಗಳು ವ್ಯಾಸಾಂಗ ನಡೆಸುತ್ತಿದ್ದ ಆ ವಿಶ್ವವಿದ್ಯಾಲಯದಲ್ಲಿ 2,500 ಭೋಧಕೇತರ ಸಿಬ್ಬಂದಿ ವರ್ಗದವರೂ ಕಾರ್ಯನಿರತರಾಗಿದ್ದರು. ಭಾರತೀಯ ಸಂಸ್ಕೃತಿ ವಿದ್ಯಾ ಸಂಪನ್ನತೆಗಳ ಶಿಖರ ಪ್ರಾಯವಾಗಿತ್ತು ನಳಂದಾ. ಅದಕ್ಕೆ ಆ ವಿದ್ಯಾಲಯದ ಮೇಲೆ ಭಕ್ತಿಯಾರ್ ಖಲ್ಜಿ ಕಣ್ಣು ಹಾಕಿದ, ಅವನಿಗೆ ಬೇಕಾಗಿದ್ದದ್ದು ಅಲ್ಲಿ ಏನು ಇರಲಿಲ್ಲ ಅದರ ಅವಶ್ಯಕತೆ ಅವನಿಗೆ ಇರಲೂ ಇಲ್ಲ. ಕಾರಣ ಭಾರತೀಯ ಸಂಸ್ಕೃತಿಯನ್ನು ಅದ: ಪತನಗೊಳಿಸುವ ಹುಚ್ಚು ಕಲ್ಪನೆ ಅಷ್ಟೇ. ತನ್ನ ಸಂಗಡಿಗರನ್ನು ಗೂಳಿಗಳಂತೆ ವಿದ್ಯಾಸರಸ್ವತಿಯ ಮಂದಿರಕ್ಕೆ ನುಗ್ಗಿಸಿದ, ಸಿಕ್ಕಲ್ಲೆಲ್ಲಾ ಲೂಟಿ ಮಾಡಿದ, ತಡೆದವರನ್ನು ಕೊಚ್ಚಿ ಹಾಕಿದ. ಅಷ್ಟಕ್ಕೂ ತಣ್ಣಗಾಗದ ಮತಾಂದ ಖಲ್ಜಿ ಪವಿತ್ರ ವಿದ್ಯಾಲಯಕ್ಕೆ ಬೆಂಕಿಯಿಟ್ಟ. ಆ ಬೆಂಕಿ ಹಲವು ತಿಂಗಳುಗಳ ಕಾಲ ನಂದಲೇ ಇಲ್ಲ. ವಿದ್ಯಾಸರಸ್ವತಿಯ ಕಿರೀಟದಂತಿದ್ದ ನಳಂದಾ ಬೂದಿಯಾಗುತ್ತಾ ಹೋಗುತ್ತಿತ್ತು. ಅಷ್ಟು ಸಮಯ ಹೊತ್ತಿ ಉರಿಯಬೇಕಾದರೆ ಅಲ್ಲಿನ ಪುಸ್ತಕ ಸಂಪತ್ತು ಎಷ್ಟಿತ್ತೆ0ಬುವುದನ್ನು ಊಹಿಸಬಹುದು. ಅತ್ಯಮೂಲ್ಯ ಜ್ಞಾನದ ಭಂಡಾರ ವಿದೇಶಿ ದಾಳಿಕೋರನ ಪೈಶಾಚಿಕ ಕೃತ್ಯಕ್ಕೆ ಒಳಗಾಯಿತು. ಇದು ಭಾರತದ ಇತಿಹಾಸದಲ್ಲಿ ಮರೆಯಲಾಗದ ಒಂದು ಘಟನೆಯಾಗಿ ಹೋಯಿತು ಯಾವುದೇ ಪ್ರತಿಕಾರವಿಲ್ಲದೆ!!

ಅಂದಿನಿಂದ ಇಂದಿನ ತನಕ ನಾಶಗೊಂಡ ನಳಂದಾ ವಿಶ್ವವಿದ್ಯಾಲಯವನ್ನು ಪುನರುಜ್ಜೀವನಗೊಳಿಸಲು ಯಾರೂ ಮುಂದಾಗಲಿಲ್ಲ. ಮುಘಲ್ ಆಳ್ವಿಕೆಯ ಸಂದರ್ಭ ಅನೇಕ ಹಿಂದೂ ದೇಗುಲಗಳು ಸರ್ವನಾಶಗೊಂಡಿತ್ತಲ್ಲದೆ, ಚಿನ್ನಾಭರಣ, ವಜ್ರ-ವೈಢೂರ್ಯಗಳ ಲೂಟಿ ನಡೆಯಿತು. ಭಾರತ ಸ್ವತಂತ್ರಗೊಂಡ ನಂತರವೂ ನಳಂದಾದತ್ತ ಕಣ್ಣು ಹಾಯಿಸುವವರೂ ಇರಲಿಲ್ಲ. ಆದರೆ ತೀರಾ ಇತ್ತೀಚೆಗೆ ಕೇಂದ್ರದಲ್ಲಿರುವ ಮೋದಿ ಸರಕಾರ ನಳಂದಾದ ನೆನಪಿಗಾಗಿ ಅದನ್ನು ಪುನರ್ನಿಮಾಣಗೊಳಿಸಲು ಮುಂದಾಗಿದೆ. ಗತಕಾಲದ ಶೈಕ್ಷಣಿಕ ಮೌಲ್ಯವನ್ನು ಎತ್ತಿಹಿಡಿಯಬೇಕು ಎಂಬ ಕಾಯಿದೆಯನ್ವಯ, ನಳಂದಾದ ಸವಿನೆನಪಿಗಾಗಿ ಅದನ್ನು ಪುನರುಜ್ಜೀವನಗೊಳಿಸಲು ನಿಧಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಮುಘಲ್ ಆಳ್ವಿಕೆಯ ಕಾಲದಲ್ಲಿ ನಳಂದ ವಿಶ್ವವಿದ್ಯಾಲಯವನ್ನು ನಾಶ ಮಾಡಿದಕ್ಕಿಂತ ಹಲವು ಪಟ್ಟು ದೊಡ್ಡ ಮಟ್ಟದ ನಾಶ ನಡೆದಿದೆ. ಮೂರ್ತಿಪೂಜೆ ಮಾಡುವುದು ಖುರಾನ್‍ಗೆ ವಿರುದ್ಧ ಎಂಬ ಕಾರಣಕ್ಕೆ ಹಲವಾರು ದೇವಸ್ಥಾನಗಳು, ಗ್ರಂಥಗಳನ್ನು ನಾಶಮಾಡಲಾಯಿತು. ಇಂದೂ ಕೂಡಾ ಇಸ್ಲಾಂನ ಮತಾಂಧತೆ ಇಡೀ ಜಗತ್ತಿಗೇ ಸವಾಲಾಗಿ ಪರಿಣಮಿಸಿದೆ.

 

Tags

Related Articles

Close