ಪ್ರಚಲಿತ

ಕಟ್ಟರ್ ಹಿಂದುತ್ವವಾದಿ ಮಹೇಶ್ ವಿಕ್ರಮ್ ಹೆಗ್ಡೆ ಬಂಧನದ ಹಿಂದಿರುವ ಅಸಲೀ ಸತ್ಯವೇನು ಗೊತ್ತಾ?

ಹೊಸದೇನಲ್ಲ. ಇದು ಕಳೆದ 5 ವರ್ಷಗಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಪದ್ದತಿ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಕ್ಷರಷಃ ಹಿಟ್ಲರ್ ಆಡಳಿತವನ್ನು ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವವರ ವಿರುದ್ಧ ಯಾವ ರೀತಿಯ ಪರಿಣಾಮ ಬೀರಿದ್ದಾರೆ ಎಂಬುವುದು ಇದೀಗ ಗುಟ್ಟಾಗಿ ಉಳಿದಿಲ್ಲ.

ಪೋಸ್ಟ್ ಕಾರ್ಡ್ ಮೇಲೆ ಕಣ್ಣಿಟ್ಟಿದ್ದ ಸಿದ್ದರಾಮಯ್ಯ..!

ಪೋಸ್ಟ್ ಕಾರ್ಡ್ ಮಾಧ್ಯಮ. ಸಾಮಾಜಿಕ ಜಾಲತಾಣದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ ದೇಶಪ್ರೇಮವನ್ನು ಮೈತುಂಬಿಕೊಂಡಿರುವ ಮಾಧ್ಯಮ. ದೇಶದ್ರೋಹಿಗಳ ಜಾತಕವನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಅವರ ಕರಾಳ ಮುಖವನ್ನು ಅನಾವರಣ ಮಾಡಿದ ಮಾಧ್ಯಮ ಸಂಸ್ಥೆ. ಕಾಂಗ್ರೆಸ್ ಆಡಳಿತದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಅಷ್ಟೂ ಭ್ರಷ್ಟಾಚಾರಗಳ ಕುರಿತು ಧ್ವನಿ ಎತ್ತಿದ ಮಾಧ್ಯಮ ಸಂಸ್ಥೆ. ಈ ಕಾರಣಕ್ಕಾಗಿಯೇ ಅದೆಷ್ಟೋ ಬಾರಿ ಕಾಂಗ್ರೆಸ್ ನಾಯಕರ ಬೆದರಿಕೆಗೂ ಪೋಸ್ಟ್ ಕಾರ್ಡ್‍ನ ಮಹೇಶ್ ವಿಕ್ರಮ್ ಹೆಗ್ಡೆ ಕಾರಣವಾಗಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅದೆಷ್ಟೋ ಅನ್ಯಾಯ ಅನಾಚಾರಗಳು ನಡೆದಿವೆ. ಭ್ರಷ್ಟಾಚಾರಗಳು ತಾಂಡವವಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಹಿಡಿದು ಕಾಂಗ್ರೆಸ್‍ನ ಸಾಮಾನ್ಯ ಕಾರ್ಯಕರ್ತನೂ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವ ಪ್ರಕರಣಗಳು ಬಯಲಾಗಿದೆ. ಬರೋಬ್ಬರಿ 14 ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಗಳು ನಡೆದಿವೆ. ಆದರೆ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಸತ್ತವರು ಹಿಂದೂಗಳಲ್ವೇ ಎಂದು ಕೈತೊಳೆದುಕೊಂಡಿದೆ.

ಕಾಂಗ್ರೆಸ್ ಸರ್ಕಾರದ ಇಂತಹ ಸೋಗಲಾಡಿತನದ ವಿರುದ್ಧ ಪೋಸ್ಟ್ ಕಾರ್ಡ್ ಮಾಧ್ಯಮದ ಮೂಲಕ ತನ್ನ ಬರವಣಿಗೆಯನ್ನು ಬಿತ್ತರಿಸಿತ್ತು. ಸರ್ಕಾರದ ಒಂದೊಂದೇ ಹಗರಣವನ್ನು ಜಗತ್ತಿಗೆ ತಿಳಿಯುವಂತೆ ತನ್ನ ಪೆನ್ನಿನ ಶಾಯಿಯನ್ನು ಹರಿಸಿತ್ತು. ಪೋಸ್ಟ್ ಕಾರ್ಡ್ ಮಾಧ್ಯಮದ ಈ ಕೆಲಸ ರಾಜ್ಯ ಮಾತ್ರವಲ್ಲದೆ ದೇಶದಲ್ಲೇ ಹೊಸ ಕ್ರಾಂತಿಗೆ ಸಾಕ್ಷಿಯಾಗಿತ್ತು. ಅದಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ನಾಯಕರ ವಕ್ರ ದೃಷ್ಟಿ ಪೋಸ್ಟ್ ಕಾರ್ಡ್ ಮಾಧ್ಯಮ ಸಂಸ್ಥೆಯ ಮೇಲೆ ಬಿದ್ದಾಗಿತ್ತು. ಅದೆಷ್ಟೋ ಬಾರಿ ಪೋಸ್ಟ್ ಕಾರ್ಡ್ ಸುದ್ಧಿಯ ಮೇಲೆ ಪ್ರಕರಣವೂ ದಾಖಲಾಗಿತ್ತು. ಆದರೆ ಪ್ರತಿ ಸುದ್ಧಿಯೂ ಆಧಾರ ಸಹಿತವಾಗಿದ್ದು ಯಾವ ಪ್ರಕರಣವೂ ಅಷ್ಟೊಂದು ಪರಿಣಾಮ ಬೀರಲೇ ಇಲ್ಲ.

ಅದೆಷ್ಟೋ ಪ್ರಯತ್ನದ ನಂತರ ಮಹೇಶ್ ವಿಕ್ರಂ ಹೆಗ್ಡೆಯವರನ್ನು ಕುತಂತ್ರೀ ನೀತಿಯನ್ನು ಅನುಸರಿಸಿ ಕೆಲ ದಿನಗಳ ಕಾಲ ಜೈಲಿನಲ್ಲಿಡುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಯಿತು. ಇದೀಗ ಬಂಧಮುಕ್ತರಾಗಿರುವ ಮಹೇಶ್ ವಿಕ್ರಂ ಹೆಗ್ಡೆಯವರಿಂದಲೇ ಕೆಲವು ಸತ್ಯಗಳು ಲಭ್ಯವಾಗಿವೆ ನೋಡಿ. ಕಾಂಗ್ರೆಸ್ ಸರ್ಕಾರ ಅಷ್ಟೊಂದು ಅವಸರದಲ್ಲಿ ಯಾಕೆ ಮಹೇಶ್ ವಿಕ್ರಂ ಹೆಗ್ಡೆಯವರನ್ನು ಬಂಧಿಸಿದೆ ಎಂಬುವುದನ್ನು ಹೇಳುತ್ತೇವೆ ನೋಡಿ.

ಪ್ರಶ್ನೆಗಳು:

* ಮಹೇಶ್ ವಿಕ್ರಮ್ ಹೆಗ್ಡೆಯವರು ಟ್ವೀಟ್ ಮಾಡಿದ್ದ ವಿಚಾರವಾಗಿ ಬಂಧನವಾಗಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಪ್ರೇರಿತ ಸಿಸಿಬಿ ಪೊಲೀಸರು ನೇರವಾಗಿ ಪೋಸ್ಟ್ ಕಾರ್ಡ್ ನಿಷೇಧ ಮಾಡುವತ್ತಲೇ ಕಾರ್ಯಪ್ರವೃತ್ತರಾಗಿದ್ದರು. ಟ್ವೀಟ್ ಹಾಗೂ ಪೋಸ್ಟ್ ಕಾರ್ಡ್ ಮಾಧ್ಯಮಕ್ಕೂ ಸಂಬಂಧವೇ ಇಲ್ಲ. ಆದರೂ ಪೋಸ್ಟ್ ಕಾರ್ಡ್ ಮಾಧ್ಯಮವನ್ನು ಟಾರ್ಗೆಟ್ ಮಾಡಿದ್ದು ಯಾಕೆ..?

* ಪೋಸ್ಟ್ ಕಾರ್ಡ್ ಪೋರ್ಟಲ್ ಹಾಗೂ ಮಹೇಶ್ ವಿಕ್ರಂ ಹೆಗ್ಡೆಯವರ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ ಗೂ ಸಂಬಂಧವೇ ಇಲ್ಲ. ಅದರೂ ಪೋಸ್ಟ್ ಕಾರ್ಡ್ ಬ್ಯಾನ್ ಮಾಡಬೇಕೆಂಬ ಒತ್ತಡ ಯಾವ ಕಾರಣಕ್ಕಾಗಿ..?

* ಕೇವಲ ಒಂದು ಟ್ವೀಟ್ ಮಾಡಿದ್ದ ವಿಚಾರವಾಗಿ ಬಂಧಿಸಿದ್ದ ಮಹೇಶ್ ವಿಕ್ರಮ್ ಹೆಗ್ಡೆಯವರ ಮೇಲೆ ಅದೆಷ್ಟೋ ತಿಂಗಳುಗಳ ಹಿಂದೆ ಬಿತ್ತರಿಸಿದ್ದ ಪೋಸ್ಟ್ ಕಾರ್ಡ್ ಲೇಖನಗಳನ್ನು ಆವರಿಸಿ ಮತ್ತೆ ಕೆಲವು ಕೇಸು ದಾಖಲಿಸಿದ್ದರ ಹಿಂದಿನ ಮರ್ಮವೇನು.?‌‌‌

* ಜೈನ ಮುನಿಗೆ ಹಲ್ಲೆಯ ಸುದ್ಧಿ ಕೇವಲ ಮಹೇಶ್ ವಿಕ್ರಂ ಹೆಗ್ಡೆಯವರ ವ್ಯಯಕ್ತಿಕ ಟ್ವೀಟ್ ಆಗಿತ್ತು. ಆದರೆ ಪೋಸ್ಟ್ ಕಾರ್ಡ್ ಮಾಧ್ಯಮವೇ ಪೊಲೀಸರ (ಸರ್ಕಾರದ) ಟಾರ್ಗೇಟ್ ಆಗಿದ್ದು ಯಾಕೆ.?

* ಕೇಸ್ ನೀಡಿದ್ದು ಪ್ರಕಾಶ್ ರೈ, ಗಫರ್ ಬೇಗ್ ಆಗಿದ್ದರೂ ಕೂಡಾ ಅದರ ಹಿಂದೆ ಕಾಂಗ್ರೆಸ್ ಕುತಂತ್ರ ಗುಟ್ಟಾಗಿ ಉಳಿದಿಲ್ಲ. ಹಳಿಯಾಳ ಪರೇಶ್ ಮೆಸ್ತಾ ಪ್ರಕರಣದಲ್ಲಿ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸ್ ದಾಖಲಿಸಿದ್ದರ ಹಿಂದಿನ ಮರ್ಮವೇನು.?

* ಇಂಡಿಯಾ ಟುಡೇ, ಫಸ್ಟ್ ನ್ಯೂಸ್ ಹಾಗೂ ಎಮ್ ಎಸ್ ಎಮ್ ಸಹಿತ ಕೆಲವು ಸುದ್ಧಿ ಸಂಸ್ಥೆಗಳು ಫೇಕ್ ನ್ಯೂಸ್ ಬಿತ್ತರಿಸದ ಮಹೇಶ್ ವಿಕ್ರಂ ಹೆಗ್ಡೆ ಬಂಧನ ಎಂದು ಸುದ್ಧಿ ಮಾಡಿವೆ. ನೈಜ ವಿಚಾರವೆಂದರೆ ಟ್ವೀಟ್ ಮಾಡಿದ ವಿಚಾರಕ್ಕೆ ಬಂಧನವಾಗಿದ್ದರು. ಆದರೆ ಕೆಲ ಮಾಧ್ಯಮಗಳು ಸುಳ್ಳು ಸುದ್ಧಿಯನ್ನು ಹರಡಿಸಿದೆ. ಹಾಗಾದರೆ ಸುಳ್ಳು ಸುದ್ಧಿ ಬಿತ್ತರಿಸಿದ ಈ ಮಾಧ್ಯಮಗಳ ಮೇಲೆ ಯಾಕೆ ಕೇಸ್ ದಾಖಲಾಗಿಲ್ಲ..?

* ಇಂಡಿಯಾ ಟುಡೇಯಲ್ಲಿ ಪೋಸ್ಟ್ ಕಾರ್ಡ್‍ನಲ್ಲಿ ಈ ಸುದ್ಧಿ ಪ್ರಕಟವಾಗಿದೆ ಎಂದು ವರದಿ ಮಾಡಿತ್ತು. ಈ ವರದಿ ಸುಳ್ಳು ಎಂಬುವುದು ಗುಟ್ಟಾಗಿ ಉಳಿದಿಲ್ಲ. ಹಾಗಾದರೆ ಈ ಸುದ್ಧಿಯನ್ನು ಬಿತ್ತರಿಸಿದ್ದ ಇಂಡಿಯಾ ಟುಡೇ ವಿರುದ್ಧ ಯಾಕೆ ಕ್ರಮವಿಲ್ಲ..?

* ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಟ್ವಿಟರ್ ಖಾತೆಯಲ್ಲಿ ದಲಿತರ ಮೇಲೆ ಹಲ್ಲೆಯ ವಿಚಾರದಲ್ಲಿ ಉತ್ತರ ಪ್ರದೇಶವೇ ಟಾಪ್ ಎಂದು ಬರೆದುಕೊಂಡಿದ್ದರು. ಇದು ಸುಳ್ಳು ಟ್ವೀಟ್ ಆಗಿದ್ದರಿಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನು ಅಲಿಸಿ ಹಾಕಿದ್ದರು. ಹಾಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಯಾಕೆ ಬಂಧಿಸಿಲ್ಲ.?

* ಟೈಮ್ಸ್ ಆಫ್ ಇಂಡಿಯಾದ ಪತ್ರಕರ್ತ, ರಾಜಸ್ಥಾನದಲ್ಲಿ ಮೇಲ್ವರ್ಗದವರು ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿ ಸುದ್ಧಿ ಬಿತ್ತರಿಸುತ್ತಾನೆ. ಆದರೆ ಇದು ಫೇಕ್ ನ್ಯೂಸ್ ಆಗಿರುತ್ತದೆ.

* ಫಸ್ಟ್ ಪೋಸ್ಟ್ ಜರ್ನಲಿಸ್ಟ್ ತಾರೀಕ್ ಅನ್ವರ್ ಸಾಮೂಹಿಕ ಅತ್ಯಾಚಾರದ ಬಗ್ಗೆ ಸುದ್ಧಿಯನ್ನು ಬಿತ್ತರಿಸುತ್ತಾನೆ. ಇದು ಕೂಡಾ ಒಂದು ಸುಳ್ಳು ಸುದ್ಧಿಯಾಗಿರುತ್ತದೆ.

* ಸಿಎನ್‍ಎನ್ ಐಬಿಎನ್ ಪತ್ರಕರ್ತ ರಾಘವ್ ಛೋಪ್ರಾ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳನ್ನು ಎಡಿಟಿಂಗ್ ಮಾಡಿ ಸುಳ್ಳು ಸುದ್ಧಿ ಹಬ್ಬಿಸುತ್ತಾನೆ. ಆದರೆ ಈ ಸುದ್ಧಿ ಸಂಸ್ಥೆಯ ಮಹಾಶಯರಾರೂ ಜೈಲು ಪಾಲಾಗುವುದಿಲ್ಲ. ಹಾಗಾದರೆ 48 ಗಂಟೆಯ ಟ್ವೀಟ್‍ನ ವಿಚಾರಕ್ಕೆ ಮಹೇಶ್ ವಿಕ್ರಂ ಹೆಗ್ಡೆಯವರ ಬಂಧನ ಯಾಕೆ?

* ಸಾಗಾರಿಕಾ ಘೋಶ್ ಎಂಬವಳು “ಒಂದು ಗುಂಪು ಮುಸಲ್ಮಾನರನ್ನು ಹುಡುಕಿ ಹುಡುಕಿ ಕೊಲ್ಲಲಾಗಿದೆ. ಆದರೆ ಕೊಂದವರಿಗೆ ಶಿಕ್ಷೆ ಯಾಕಿಲ್ಲ” ಎಂಬ ಸುಳ್ಳು ಸುದ್ಧಿಯನ್ನು ಬಿತ್ತರಿಸಿದ್ದರು. ಇದು ಸುಳ್ಳು ಎಂದು ಗೊತ್ತಾದ ನಂತರವೂ ಆಕೆಯನ್ನು ಯಾಕೆ ಬಂಧಿಸಿಲ್ಲ..?

* ಪಲ್ಲವಿ ಘೋಶ್ ಎಂಬಾಕೆ ಉತ್ತರ ಪ್ರದೇಶದಲ್ಲಿ ಬೀಫ್ ತಿಂದ ಮಾತ್ರಕ್ಕೆ ಮಹಿಳೆಯನ್ನು ಗ್ಯಾಂಗ್ ರೇಪ್ ಮಾಡಲಾಗಿದೆ” ಎಂದು ಸುಳ್ಳು ಸುದ್ಧಿ ಬಿತ್ತರಿಸಿದ್ದಳು. ಇದು ಅತಿ ದೊಡ್ಡ ಫೇಕ್ ನ್ಯೂಸ್ ಆಗಿತ್ತು. ಆದರೆ ಇದು ದೇಶದಲ್ಲಿ ಸುದ್ಧಿಯೇ ಆಗೋದಿಲ್ಲ ಯಾಕೆ..?

* ಟ್ವೀಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇರಳಕ್ಕೆ ತೆರಳಿ ಪೋಸ್ಟ್ ಕಾರ್ಡ್ ನ ಸರ್ವರ್‍ನ್ನು (server) ಹುಡುಕಾಡುತ್ತಾರೆ. ನಿಜವಾಗಿಯೂ ಪೊಲೀಸರಿಗೆ ತನಿಖೆಗೆ ಬೇಕಾದದ್ದು ಟ್ವಿಟರ್ ಮಾತ್ರ. ಆದರೆ ಪೋಸ್ಟ್ ಕಾರ್ಡ್ ಸರ್ವರ್ ಯಾಕೆ…?

* ಕಾಂಗ್ರೆಸ್ ನ ಬಹಿರಂಗ ಸಭೆಯೊಂದರಲ್ಲಿ ಮಾಜಿ ಸಂಸದೆ ರಮ್ಯಾ ಫೇಕ್ ಫೇಸ್‌ಬುಕ್‌ ಖಾತೆ ತೆರೆಯಲು ಸಲಹೆ ನೀಡುತ್ತಾಳೆ. ಇದು ರಾಜ್ಯ ಹಾಗೂ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದು ರಮ್ಯಾಳ ಅಸಲೀ ಮುಖವನ್ನು ಬಣ್ಣಿಸಿತ್ತು. ಆದರೆ ಇದರ ಬಗ್ಗೆ ರಮ್ಯಾಳ ವಿರುದ್ಧ ಕ್ರಮವೇಕಿಲ್ಲ..? ತಮ್ಮದೇ ಸರ್ಕಾರ ಇದೆ ಎಂಬ ಮಮಕಾರವೇ..?

ರಮ್ಯಾ ಗ್ರಹಚಾರ ಬಿಡಿಸಿದ್ದ ಮಹೇಶ್ ವಿಕ್ರಮ್ ಹೆಗ್ಡೆ..!

ನಟಿ, ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಕೆಲ ತಿಂಗಳ ಹಿಂದೆ ಭಾರೀ ಅವಾಂತರವೊಂದನ್ನೇ ಸೃಷ್ಟಿಸಿದ್ದರು. ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣಗಳ ಸಭೆಯೊಂದರಲ್ಲಿ ಫೇಸ್ ಬುಕ್‍ನಲ್ಲಿ ನಕಲಿ ಖಾತೆಗಳನ್ನು ತೆರೆಯಿರಿ ಎಂದು ಸಲಹೆ ನೀಡಿದ್ದರು. ರಮ್ಯಾ ನೀಡಿದ ಇಂತಹ ಕಳ್ಳಮುಖದ ಆದೇಶದ ವೀಡಿಯೋ ಪೋಸ್ಟ್ ಕಾರ್ಡ್ ಮಾಧ್ಯಮಕ್ಕೆ ಸ್ವತಃ ಕಾಂಗ್ರೆಸ್ ಕಾರ್ಯಕರ್ತನೇ ನೀಡಿದ್ದರು. ಇದನ್ನು ಮೊದಲಾಗಿ ಪೋಸ್ಟ್ ಕಾರ್ಡ್ ಮಾಧ್ಯಮದಲ್ಲಿ ಬಿತ್ತರಿಸಲಾಗಿತ್ತು.

ಈ ಸುದ್ಧಿಯನ್ನು ಮಹೇಶ್ ವಿಕ್ರಮ್ ಹೆಗ್ಡೆಯವರು ತಮ್ಮ ಟ್ವಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಯಾವಾಗ ಹೆಗ್ಡೆಯವರ ಈ ಟ್ವೀಟ್ ಭಾರೀ ಸುದ್ಧಿಯಾಯ್ತೋ ಅಂದೇ ಕಾಂಗ್ರೆಸ್ ನಾಯಕಿ ರಮ್ಯಾ ಅದಕ್ಕೆ ಉತ್ತರ ನೀಡಿದ್ದರು. “ಮಹೇಶ್ ವಿಕ್ರಮ್ ಹೆಗ್ಡೆ ಎಡಿಟಿಂಗ್ ವೀಡಿಯೋ ಬಿಡುಗಡೆಗೊಳಿಸಿದ್ದಾರೆ. ಖುಷಿ ಪಡಿ” ಎಂದು ಟ್ವೀಟ್ ಮಾಡಿದ್ದರು.

ಆದರೆ ಇದಕ್ಕೆ ಮರು ಉತ್ತರ ನೀಡಿದ್ದ ಮಹೇಶ್ ವಿಕ್ರಮ್ ಹೆಗ್ಡೆ ರಮ್ಯಾಗೆ ಓಪನ್ ಛಾಲೆಂಜ್ ಹಾಕಿದ್ದರು. “ನಾನು ಮಾಡಿದ ಸುದ್ಧಿ ಎಡಿಟಿಂಗ್ ಅಥವಾ ನಕಲಿಯಾಗಿದ್ದರೆ ಯಾಕೆ ನನ್ನನ್ನು ಬಂಧಿಸಿಲ್ಲ? ನಾನು ಎಡಿಟಿಂಗ್ ಮಾಡಿದ್ದರೆ ನನ್ನ ಮೇಲೆ ಕೇಸ್ ದಾಖಲಿಸಿ ಬಂಧಿಸು” ಎಂದು ಓಪನ್ ಛಾಲೆಂಜ್ ಹಾಕಿದ್ದರು. ನಂತರ ಪತರುಗುಟ್ಟಿದ ರಮ್ಯಾ ಮರು ಮಾತಾಡದೆ ಸುಮ್ಮನಾಗಿದ್ದರು.

ಕುತಂತ್ರೀ ನೀತಿ ಅನುಸರಿಸಿ ಮಹೇಶ್ ವಿಕ್ರಮ್ ಹೆಗ್ಡೆ ಅರೆಸ್ಟ್..!

ಇದಾದ ಕೆಲವೇ ದಿನಗಳಲ್ಲಿ ಪೋಸ್ಟ್ ಕಾರ್ಡ್ ಮಾಧ್ಯಮದ ಮಹೇಶ್ ವಿಕ್ರಮ್ ಹೆಗ್ಡೆ ಸಿಸಿಬಿ ಪೊಲೀಸರಿಂದ ಬಂಧನವಾಗುತ್ತಾರೆ. ಜೈನ ಮುನಿಯ ಮೇಲೆ ಮುಸ್ಲಿಂ ವ್ಯಕ್ತಿಯೋರ್ವ ಹಲ್ಲೆ ಮಾಡಿದ್ದಾನೆ ಎಂಬ ಟ್ವೀಟ್‍ನ ವಿಚಾರವಾಗಿ ಹೆಗ್ಡೆ ಟ್ವೀಟ್ ಮಾಡಿದ್ದರು. ಆದರೆ ಇದು ಸುಳ್ಳು ಸುದ್ಧಿ ಎಂದು ತಿಳಿದ ತಕ್ಷಣ ಅದನ್ನು ಅಳಿಸಿ ಹಾಕಿದ್ದರು. ಆದರೆ ಟ್ವೀಟ್ ಮಾಡಿ ಕೆಲ ವಾರಗಳೇ ಕಳೆದ ನಂತರ ಬೆಂಗಳೂರಿಗೆ ತೆರಳಿದ್ದ ಮಹೇಶ್ ವಿಕ್ರಮ್ ಹೆಗ್ಡೆಯವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಕಾಂಗ್ರೆಸ್ ಬೆಂಬಲಿತ ಗಫರ್ ಬೇಗ್ ಎನ್ನುವ ವ್ಯಕ್ತಿಯ ದೂರಿನ ಅನ್ವಯ ಮಹೇಶ್ ವಿಕ್ರಂ ಹೆಗ್ಡೆಯವರನ್ನು ಬಂಧಿಸಲಾಗಿತ್ತು.

ಇದರಲ್ಲಿ ಅನೇಕ ಪ್ರಶ್ನೆಗಳೂ ಉದ್ಭವಿಸುತ್ತವೆ. ಜೈನ ಮುನಿಗೆ ಮುಸ್ಲಿಂ ವ್ಯಕ್ತಿ ಹಲ್ಲೆ ಮಾಡಿದ್ದಾನೆ ಎಂದು ಮಹೇಶ್ ವಿಕ್ರಮ್ ಹೆಗ್ಡೆ ಮಾಡಿದ್ದ ಟ್ವೀಟ್ ಆಧಾರ ರಹಿತ ಎಂದು ತಿಳಿದಾಕ್ಷಣವೇ ಹೆಗ್ಡೆಯವರು ತಮ್ಮ ಟ್ವಿಟರ್ ಖಾತೆಯಲ್ಲಿದ್ದ ಆ ಸಂದೇಶವನ್ನು ಅಲಿಸಿ ಹಾಕಿದ್ದರು. ಆದರೆ ಜೈನ ಮುನಿಗೆ ಮುಸ್ಲಿಂ ವ್ಯಕ್ತಿ ಹಲ್ಲೆ ಮಾಡಿಲ್ಲ ಎಂಬ ವಿಚಾರ ಎಲ್ಲೂ ಬಯಲಾಗಲೇ ಇಲ್ಲ. ಜೈನ ಮುನಿಗೆ ಅಪಘಾತವಾಗಿತ್ತು ಎಂದು ದೂರುದಾರ ಗಫರ್ ಆಪಾದಿಸಿದ್ದನಾದರೂ ಅಪಘಾತ ಮಾಡಿದ ವ್ಯಕ್ತಿಗೆ ಕೇಸ್ ದಾಖಲಿಸಿದ್ದಾಗಲೀ ಅಥವಾ ಜೈನ ಮುನಿಯವರನ್ನು ಕರೆದು ಹೇಳಿಕೆ ಪಡೆಯುವುದಾಗಲಿ ಮಾಡಲಿಲ್ಲ. ಹಾಗಾದರೆ ಇದು ಹಲ್ಲೆ ಅಲ್ಲ ಅಪಘಾತ ಎಂದು ಹೇಗೆ ಒಪ್ಪಿಕೊಳ್ಳೋಕ್ಕೆ ಸಾಧ್ಯ ಎಂಬ ಪ್ರಶ್ನೆಯೂ ಮೂಡುತ್ತದೆ.

ಟ್ವಿಟರ್ ಸಂದೇಶ ನೆಪ ಮಾತ್ರ-ಪೋಸ್ಟ್ ಕಾರ್ಡ್ ಅಲಿಸುವುದೇ ಸೂತ್ರ.!

ಎಸ್… ನಕಲಿ ಟ್ವೀಟ್‍ನ ನೆಪವನ್ನಿಟ್ಟುಕೊಂಡು ಪೋಸ್ಟ್ ಕಾರ್ಡ್ ಮಾಲೀಕ ಮಹೇಶ್ ವಿಕ್ರಮ್ ಹೆಗ್ಡೆಯವರನ್ನು ಬಂಧಿಸಿತ್ತು. ಆದರೆ ಅದು ನೆಪ ಮಾತ್ರವಾಗಿತ್ತು. ಟ್ವೀಟ್ ಮಾಡಿದ 48 ಗಂಟೆಯ ಒಳಗೆ ಆ ಟ್ವೀಟನ್ನು ಅಳಿಸಿ ಹಾಕಿದ್ದರು. ಆದ್ದರಿಂದ ಈ ಪ್ರಕರಣ ಅಷ್ಟೊಂದು ಪರಿಣಾಮ ಬೀರೋದಿಲ್ಲ ಎಂಬುವುದು ಸ್ವತಃ ಪೊಲೀಸರಿಗೂ ಗೊತ್ತಿರುವ ವಿಚಾರವಾಗಿತ್ತು. ಆ ಕಾರಣದಿಂದಲೇ ಮಹೇಶ್ ವಿಕ್ರಮ್ ಹೆಗ್ಡೆಯವರ ಮೇಲೆ ಮತ್ತೆ ಕೆಲ ಪ್ರಕರಣವನ್ನು ಹೂಡಲಾಯಿತು.

ಸಮಯ ನೋಡಿ ಬಾಣ ಬಿಟ್ಟ ಪ್ರಕಾಶ್ ರೈ…

ಪ್ರಕಾಶ್ ರೈ. ಕಾಂಗ್ರೆಸ್ ಓಲೈಕೆಗೆ ಸದಾ ಭಾರತೀಯ ಜನತಾ ಪಕ್ಷವನ್ನು ದೂರುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೆಚ್ಚುಗೆಯನ್ನು ಗಳಿಸಿದ ನಟ. ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಚಾಮಗೋಚರವಾಗಿ ನಿಂದಿಸಿ ತನ್ನ ತೀಟೆಯನ್ನು ತೀರಿಸಿಕೊಳ್ಳುತ್ತಿದ್ದ ವ್ಯಕ್ತಿ. ಅದ್ಯಾವಾಗ ಮಹೇಶ್ ವಿಕ್ರಮ್ ಹೆಗ್ಡೆಯವರನ್ನು ಪೊಲೀಸರು ಬಂಧಿಸಿದರೋ ಅಂದು ಪ್ರಕಾಶ್ ರೈ ಮುಖ ಪೊಲೀಸ್ ಠಾಣೆಯತ್ತ ತಿರುಗಿತ್ತು. ಟ್ವೀಟ್ ವಿಚಾರವಾಗಿ ಮಹೇಶ್ ವಿಕ್ರಮ್ ಹೆಗ್ಡೆಯವರ ಪ್ರಕರಣವು ಕಠಿಣತೆ ಪಡೆಯದ ಹಿನ್ನೆಯಲ್ಲಿ ನಟ ಪ್ರಕಾಶ ರೈ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೆ ಎರಡು ಕೇಸ್ ದಾಖಲಿಸುತ್ತಾರೆ.

ಕೆಲ ತಿಂಗಳ ಹಿಂದೆ ಪೋಸ್ಟ್ ಕಾರ್ಡ್ ಮಾಧ್ಯಮದಲ್ಲಿ ಪ್ರಕಟವಾದ ಎರಡು ಲೇಖನಗಳ ವಿಚಾರವಾಗಿ ಪ್ರಕಾಶ್ ರೈ ಕೇಸ್ ದಾಖಲಿಸುತ್ತಾರೆ. ಅಂದು ನಟ ಪ್ರಕಾಶ್ ರೈ ಪ್ರಧಾನಿ ನರೇಂದ್ರ ಮೋದಿಗೆ ದೇಶ ಆಳುವ ಯೋಗ್ಯತೆ ಇಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಪೋಸ್ಟ್ ಕಾರ್ಡ್‍ನಲ್ಲಿ ಲೇಖನವೊಂದು ಪ್ರಕಟವಾಗಿತ್ತು. “ಮಗನ ಸಾವಿನ ದುಃಖದಲ್ಲಿದ್ದ ಹೆಂಡತಿಯನ್ನು ಸಮಾಧಾನಪಡಿಸುವುದು ಬಿಟ್ಟು, ಡ್ಯಾನ್ಸರ್ ಜೊತೆಗೆ ಓಡಿದ ಪ್ರಕಾಶ್ ರೈಯಂತವರು ಮೋದಿ ಹಾಗೂ ಯೋಗಿಗೆ ಹೇಳುವಷ್ಟು ದೊಡ್ಡವರಾ.?” ಹಾಗೂ “ಮಾನ ಇಲ್ಲದವನಿಂದ ಮಾನ ನಷ್ಟ ಮೊಕದ್ದಮೆ” ಎಂಬ ಶೀರ್ಷಿಕೆಯಡಿ ಲೇಖನ ಬಿತ್ತರಿಸಿತ್ತು. ಮಹೇಶ್ ವಿಕ್ರಮ್ ಹೆಗ್ಡೆಯವರ ಬಂಧನವನ್ನು ಮುಂದಿಟ್ಟುಕೊಂಡು ಈ ಪ್ರಕಾಶ್ ರೈ ಈ ಕೇಸುಗಳನ್ನು ದಾಖಲಿಸುತ್ತಾರೆ. “ಪೋಸ್ಟ್ ಕಾರ್ಡ್ ಮಾಧ್ಯಮದಲ್ಲಿ ಪ್ರಕಟವಾಗಿದ್ದ ಈ ಎರಡು ಲೇಖನಗಳಿಂದ ನನ್ನ ಮನಸ್ಸಿಗೆ ನೋವಾಗಿದೆ. ನನ್ನ ಭಾವನೆಗೆ ಧಕ್ಕೆ ತಂದಿದೆ” ಎಂಬ ಪ್ರಕರಣ ದಾಖಲಿಸುತ್ತಾರೆ.

ಇದೇ ಸಮಯದಲ್ಲಿ ಕಾರವಾರದ ಹಳಿಯಾಳ ಎಂಬಲ್ಲಿ 2 ಪ್ರಕರಣ ದಾಖಲಾಗಿತ್ತು. ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಯಾಗಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ಪರೇಶ್ ಮೆಸ್ತಾ ಪ್ರಕರಣದಲ್ಲಿ ಬರೆದಿದ್ದ ಅಂಕಣವನ್ನು ಹಿಡಿದುಕೊಂಡು 2 ಕೇಸ್ ದಾಖಲಿಸುತ್ತಾರೆ. ಈ ಮೂಲಕ ಮತ್ತೆ ಧಾರವಾಡ ಜೈಲಿನಲ್ಲಿ ಕಾಲ ಕಳೆಯುವಂತೆ ಮಾಡುತ್ತಾರೆ.

ಕೇವಲ ಒಂದು ಟ್ವೀಟ್‍ನ್ನು ನೆಪವಾಗಿಟ್ಟುಕೊಂಡು ಮಹೇಶ್ ವಿಕ್ರಮ್ ಹೆಗ್ಡೆಯವರನ್ನು ಬಂಧಿಸಿದ ಸಿಸಿಬಿ ಪೊಲೀಸ್ ಸಾಲು ಸಾಲು ಪ್ರಕರಣಗಳನ್ನು ದಾಖಲಿಸಿ ಚುನಾವಣೆ ಮುಗಿಯೋವರೆಗೂ ಜೈಲಿನಲ್ಲೇ ಇರಿಸುವ ಕುರಿತು ಭಾರೀ ಆಲೋಚನೆಗಳನ್ನೇ ನಡೆಸುತ್ತಾರೆ. ಆದರೆ ಅಧೃಷ್ಟವಶಾತ್ ಮಹೇಶ್ ವಿಕ್ರಂ ಹೆಗ್ಡೆಯವರ ಮೇಲೆ ಯಾವುದೇ ಪ್ರಕರಣದ ಆರೋಪಗಳು ಸಾಭೀತಾಗದ ಕಾರಣ ಬಂಧನದಿಂದ ಮುಕ್ತಿ ಹೊಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಪ್ರೇರಿತ ಸಿಸಿಬಿ ಪೊಲೀಸರ ಉದ್ಧೇಶ ಒಂದೇ ಆಗಿತ್ತು. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವಾಗ ಪೋಸ್ಟ್ ಕಾರ್ಡ್ ಮಾಧ್ಯಮದ ಮೂಲಕ ಬಿತ್ತರವಾಗುವ ಕಾಂಗ್ರೆಸ್‍ನ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಅನಾಚಾರಗಳ ಸುದ್ಧಿಯನ್ನು ತಡೆಯುವುದು. ಈ ಮೂಲಕ ಪೋಸ್ಟ್ ಕಾರ್ಡ್ ಮಾಧ್ಯಮವನ್ನೇ ನಿಷೇಧ ಮಾಡಿ ಸುಲಭವಾಗಿ ಚುನಾವಣೆಯನ್ನು ಎದುರಿಸುವುದು. ಆದರೆ ಕೋಟ್ಯಾಂತರ ಜನತೆಯ ಒಕ್ಕೊರಳ ಕೂಗಿನಿಂದಾಗಿ ಮಹೇಶ್ ವಿಕ್ರಂ ಹೆಗ್ಡೆಯವರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಈ ಮೂಲಕ ಮೊದಲ ಜಯವನ್ನು ಮಹೇಶ್ ವಿಕ್ರಂ ಹೆಗ್ಡೆಯವರು ಗಿಟ್ಟಿಸಿಕೊಂಡಿದ್ದಾರೆ.

postcard team

Tags

Related Articles

Close