ಪ್ರಚಲಿತ

ವಿಶ್ವಸಂಸ್ಥೆಯ ವರದಿಯನ್ನು ತಿರಸ್ಕರಿಸಿದ ಭಾರತೀಯ ಸೇನೆ! ಯು.ಎನ್.ಹೆಚ್.ಆರ್.ಸಿ ವರದಿ ವಿರುದ್ಧ ಸೇನಾ ಮುಖ್ಯಸ್ಥ ಕೆಂಡಾಮಂಡಲ..! ಭಗ್ನವಾದ ಭಾರತ ವಿರೋಧಿಗಳ ವಿಘ್ನಕನಸು!

ಭವ್ಯ ಭಾರತದ ಕಲಶ, ಭಾರತದ ಕಿರೀಟ ಎಂದೇ ಕರೆಯಲಾಗುವ ಜಮ್ಮು-ಕಾಶ್ಮೀರದಲ್ಲಿ ಇದೀಗ ಎಲ್ಲವೂ ಸೈನ್ಯದ್ದೇ ಕಾರುಬಾರು. ಪಿಡಿಪಿ ಸರ್ಕಾರಕ್ಕೆ ಭಾರತೀಯ ಜನತಾ ಪಕ್ಷ ನೀಡಿದ್ದ ಬೆಂಬಲವನ್ನು ವಾಪಾಸ್ ಪಡೆದ ನಂತರ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಆರಂಭವಾಗಿತ್ತು. ಯಾವಾಗ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿ ರಾಜ್ಯಪಾಲರಿಗೆ ಅಧಿಕಾರ ಬಂತೋ ಅಂದಿನಿಂದ ಕಾಶ್ಮೀರದಲ್ಲಿ ಎಲ್ಲವೂ ಸೈನಿಕರದ್ದೇ ಕಾರುಬಾರು. ಕೇವಲ ನಾಲ್ಕೇ ನಾಲ್ಕು ದಿನದಲ್ಲಿ ಬರೋಬ್ಬರಿ 13 ಉಗ್ರರನ್ನು ಹೆಡೆಮುರಿ ಕಟ್ಟಿ ಗುಂಡಿಕ್ಕಿ ಕೊಂದು ಬಿಸಾಕಿದ್ದರು. ಮಾತ್ರವಲ್ಲದೆ ಉಗ್ರರಿಗೆ ನೆರವಾಗುತ್ತಿದ್ದ ಪ್ರತ್ಯೇಕವಾದಿ ನಾಯಕರಾದ ಯಾಸೀನ್ ಮಲ್ಲಿಕ್,ಉಮರ್ ಫಾರೂಕ್,ಹಿಲಲ್ ವಾರ್ ಸೇರಿದಂತೆ ಇತರೆಲ್ಲಾ ದೇಶಪ್ರೇಮಿಗಳನ್ನು ಜೈಲಿಗಟ್ಟಲಾಯಿತು. ಜಮ್ಮು ಕಾಶ್ಮೀರದಲ್ಲಿ ಮತ್ತೆ ನಿರ್ಭೀತಿ ಜೀವನದ ವಾತಾವರಣ ಉಂಟಾಗಿತ್ತು. 

ಇದನ್ನು ದೇಶದ್ರೋಹಿಗಳಿಗೆ ಹಾಗೂ ಪಾಕಿಸ್ಥಾನದ ನಾಯಕರಿಗೆ ಸಹಿಸಲಾಗುತ್ತಿರಲಿಲ್ಲ. ಜಮ್ಮು-ಕಾಶ್ಮೀರದ ಮೇಲೆ ಕಣ್ಣಿಟ್ಟು ಇಡಿಯ ದೇಶದಲ್ಲೇ ಅಶಾಂತಿ ನಿರ್ಮಾಣ ಮಾಡಲು ಹೊರಟ ಪಾಕಿಸ್ಥಾನ ಎಂಬ ಪಾಪಿ ರಾಷ್ಟ್ರಕ್ಕೆ ಭಾರತೀಯ ಜನತಾ ಪಕ್ಷದ ಈ ನಡೆ ಸಹಿಸಿಕೊಳ್ಳಲಾಗುತ್ತಿರಲಿಲ್ಲ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ತಲೆತಗ್ಗಿಸುವಂತೆ ಮಾಡಬೇಕು ಎಂಬ ಜಿದ್ದಿಗೆ ಬೀಳುತ್ತೆ ಪಾಕಿಸ್ಥಾನ.

ಶ್ರೀ ನರೇಂದ್ರ ಮೋದಿ ಭಾರತದ ಪ್ರಧಾನಮಂತ್ರಿಯಾದ ನಂತರ ಜಗತ್ತು ಭಾರತದ ಕಡೆ ತಿರುಗಿ ನೋಡಿತ್ತು. ಭಾರತದ ಮಾತೆಂದರೆ ವೇದವಾಕ್ಯದಂತಿತ್ತು. ವಿಶ್ವಕ್ಕೆ ವಿಶ್ವವೇ ಭಾರತವನ್ನು ಹಿಂಬಾಲಿಸಲು ಆರಂಭಿಸಿತ್ತು. ಮೋದಿ ಹೋದಲ್ಲೆಲ್ಲಾ ಸ್ವತಃ ಆ ದೇಶದ ಅಧ್ಯಕ್ಷ ಹಾಗೂ ಪ್ರಧಾನ ಮಂತ್ರಿಯಿಂದ ಹಿಡಿದು ಎಲ್ಲಾ ನಾಯಕರೂ ಕೂಡಾ ವಿಮಾನ ನಿಲ್ದಾಣಕ್ಕೇ ಆಗಮಿಸಿ ಸ್ವಾಗಿತಿಸುತ್ತಿದ್ದರು. ಇದು ಮೋದಿಗೆ ಸಿಕ್ಕ ಗೌರವ ಅಲ್ಲ, ಬದಲಾಗಿ ಭಾರತಕ್ಕೆ ಸಿಗುತ್ತಿರುವ ಗೌರವ ಎಂದು ಸ್ವತಃ ಪ್ರಧಾನಿ ಮೋದಿಯೇ ಹೇಳುತ್ತಿದ್ದರು.

Related image

ವಿರೋಧಿಗಳು ಎಷ್ಟೇ ಪ್ರಯತ್ನ ಪಟ್ಟರೂ ಭಾರತವನ್ನು ಮಣಿಸಲು ಸಾಧ್ಯವಾಗಲೇ ಇಲ್ಲ. ಉಗ್ರ ನಿಗ್ರಹದ ವಿಚಾರವಾಗಿ ಎಲ್ಲಾ ರಾಷ್ಟ್ರಗಳೂ ಭಾರತವನ್ನು ಬೆಂಬಲಿಸಿದ್ದವು. ಪಾಕಿಸ್ಥಾನ ಒಂಟಿಯಾಗಿತ್ತು. ಸ್ವತಃ ಪಾಕಿಸ್ಥಾನದ ಇತ್ರ ರಾಷ್ಟ್ರ ಅಮೇರಿಕಾ ಹಾಗೂ ಚೀನಾ ಕೂಡಾ ಭಾರತವನ್ನು ಬೆಂಬಲಿಸಿ ಪಾಕಿಸ್ಥಾನವನ್ನು ದೂರವಿಟ್ಟಿತ್ತು. ಆದರೆ ಇದೀಗ ಸಮಯ ನೋಡಿಕೊಂಡು ಪಾಕ್ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸುತ್ತಿದೆ. ಭಾರತವನ್ನು ಶತಾಯ ಗತಾಯ ವಿಶ್ವದ ವೇದಿಕೆಯಲ್ಲಿ ತಲೆ ತಗ್ಗಿಸಬೇಕೆಂಬ ಹಠದಲ್ಲಿದೆ. ಕಾಶ್ಮೀರಕ್ಕೆ ಸೇನೆಯನ್ನು ನುಗ್ಗಿಸಿದ ಭಯದಲ್ಲಿರುವ ಪಾಕ್ ವಿಶ್ವ ಸಂಸ್ಥೆಯ ಮೇಲೆ ಒತ್ತಡ ಹೇರುವ ಹೇಯ ಕೃತ್ಯವನ್ನು ಮಾಡುತ್ತಿದೆ. ಇದರ ಪರಿಣಾಮವೇ ಯು.ಎನ್.ಹೆಚ್.ಆರ್.ಸಿ ವರದಿ.

ಹೌದು, ಇತ್ತೀಚೆಗೆ ವಿಶ್ವ ಸಂಸ್ಥೆಯೊಂದು ವರದಿಯನ್ನು ಸಲ್ಲಿಸಿ ಭಾರತದ ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಅಂಶವನ್ನು ಬಿತ್ತರಿಸಿತ್ತು. ಯು.ಎನ್.ಹೆಚ್.ಆರ್.ಸಿ ಎಂಬ ಟೀಂ ಈ ವರದಿಯನ್ನು ವಿಶ್ವಸಂಸ್ಥೆಗೆ ಸಲ್ಲಿಸಿ ನಂತರ ಈ ಬಗ್ಗೆ ವಿಶ್ವ ಸಂಸ್ಥೆ ಭಾರತವನ್ನು ಪ್ರಶ್ನಿಸಿತ್ತು. ಭಾರತದ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅಲ್ಲಿ ಹತ್ಯೆಯಂತಹಾ ಕೃತ್ಯಗಳು ನಡೆಯುತ್ತಿದೆ ಎಂದು ಹೇಳಿತ್ತು.

ಕೆಲ ದಿನಗಳ ನಂತರ ಇದರ ಹಿಂದಿರುವ ನಿಜವಾದ ಮುಖವಾಡ ಬಯಲಾಗಿತ್ತು. ಯು.ಎನ್.ಹೆಚ್.ಆರ್.ಸಿ ವರದಿಯನ್ನು ಮಂಡಿಸಿ ಬಿತ್ತರಿಸಿದ್ದ ಆ ವ್ಯಕ್ತಿ ಮುಸಲ್ಮಾನನಾಗಿದ್ದು ಈತ ಪಾಕಿಸ್ಥಾನದ ನಿಕಟ ಸಂಪರ್ಕಉಳ್ಳ ವ್ಯಕ್ತಿಯಾಗಿದ್ದ ಎಂಬ ವಿಚಾರ ಬಯಲಿಗೆ ಬಂದಿತ್ತು. ಈ ವಿಚಾರ ಗೊತ್ತಾಗುತ್ತಲೇ ಸ್ವತಃ ವಿಶ್ವ ಸಂಸ್ಥೆಯೇ ಸುಮ್ಮನಿದ್ದುಬಿಟ್ಟಿತ್ತು. ಜಮ್ಮು-ಕಾಶ್ಮೀರದಲ್ಲಿ ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿಲ್ಲ ಎಂಬ ವಿಚಾರವನ್ನು ಭಾರತ ಸರ್ಕಾರ ವಿಶ್ವ ಸಂಸ್ಥೆಯ ಗಮನಕ್ಕೆ ತಂದಿತ್ತು.

ಬಿಪಿನ್ ಕಿಡಿ..!

ಇನ್ನು ಭಾರತದ ವಿರುದ್ಧವಾಗಿ ಯು.ಎನ್.ಹೆಚ್.ಆರ್.ಸಿ ಸಲ್ಲಿಸಿದ್ದ ವರದಿಯನ್ನು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಖಂಡಿಸಿದ್ದಾರೆ. ಇದರಲ್ಲಿರುವ ಯಾವ ಅಂಶವೂ ನಿಜವಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿಲ್ಲ. ಅಮಾಯಕರನ್ನು ಸದೆಬಡಿಯಲಾಗುತ್ತಿಲ್ಲ ಹಾಗೂ ಅವರನ್ನ ನಾವು ರಕ್ಷಿಸುತ್ತಿದ್ದೇವೆ. ಆದರೆ ಉಗ್ರರ ಹಾಗೂ ಅವರಿಗೆ ಸಹಾಯ ನೀಡುವವರನ್ನು ನಾವು ವಿರೋಧಿಸಿ ದಂಡಿಸಬೇಕಾಗುತ್ತದೆ. ಇದು ನಮ್ಮ ಸ್ಪಷ್ಟ ನಿಲುವು. ಈ ಕಾರಣಕ್ಕಾಗಿ ನಾವು ಯು.ಎನ್.ಹೆಚ್.ಆರ್.ಸಿ ವರದಿ ಪ್ರಕಾರ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಯು.ಎನ್.ಹೆಚ್.ಆರ್.ಸಿ ವರದಿಯನ್ನಿ ತಿರಸ್ಕರಿಸಿದ್ದಾರೆ.

Related image

ಒಟ್ಟಾರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕಾರಣರಾದ ನಂತರ ಪಾಕಿಸ್ಥಾನ ಹಾಗೂ ಪಾಕ್ ಪ್ರೇರಿತ ಭಾರತ ವಿರೋಧಿಗಳಿಗೆ ನಡುಕವುಂಟಾಗಿದೆ. ಇನ್ನೇನು ಉಗ್ರರ ಹೆಣಗಳು ಕಣಿವೆ ರಾಜ್ಯದಲ್ಲಿ ರಾರಾಜಿಸಲಿವೆ ಎಂಬುವುದನ್ನು ಊಹಿಸುವಾಗಲೇ ಈ ವಿದ್ರೋಹಿಗಳಿಗೆ ಚಳಿಉಂಟಾಗುತ್ತಿದೆ. ಈ ಕಾರಣಕ್ಕಾಗಿಯೇ ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರುವ ಮೂಲಕ ಮೋದಿ ಬಲವನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

-ಸುನಿಲ್ ಪಣಪಿಲ

Tags

Related Articles

Close