ಇತಿಹಾಸ

ಸನಾತನ ಧರ್ಮವೆಂದರೆ ಮೂಗು ಮುರಿಯುವ ಜಾತ್ಯಾತೀತ ಬುದ್ದಿಜೀವಿಗಳು ಇಂಡೋನೇಶಿಯಾದ ಬಾಲಿಯನ್ನೊಮ್ಮೆ ನೋಡಿ ಬರಬೇಕು!

ನಮ್ಮಲ್ಲಿ ಮಾತು ಮಾತಿಗೂ ಸನಾತನ ಧರ್ಮ ಮತ್ತು ಅದರ ನಂಬಿಕೆಗಳನ್ನು ಹಳಿಯುವ ಕುಬುದ್ದಿಯ ಬುದ್ಧಿಜೀವಿಗಳಿದ್ದಾರೆ. ರಾಮ ಹುಟ್ಟೇ ಇಲ್ಲ, ಕೃಷ್ಣ ದೇವರೇ ಅಲ್ಲ, ದುರ್ಗೆ ವೇಷ್ಯಾವಾಟಿಕೆಯ ಹೆಣ್ಣು, ಹೋಳಿಗೆ ಬಣ್ಣ ಹಚ್ಚಬೇಡಿ, ದೀಪಾವಳಿಗೆ ಪಟಾಕಿ ಹೊಡೆಯಬೇಡಿ, ದೇವರಿಗೆ ಆರತಿ ಎತ್ತಬೇಡಿ, ಘಂಟೆ ಹೊಡೆಯಬೇಡಿ, ಶಿವಲಿಂಗಕ್ಕೆ ಹಾಲೆರೆಯಬೇಡಿ, ಹಣೆಗೆ ಕುಂಕುಮ ಹಚ್ಚಬೇಡಿ, ಅಮರನಾಥ ಯಾತ್ರೆಯಲ್ಲಿ ಉದ್ಘೋಷ ಹಾಕಬೇಡಿ…. ಹೀಗೆ ಹತ್ತು ಹಲವು ಪಟ್ಟಿ, ಮತ್ತು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು “ಭಾರತ ಜಾತ್ಯಾತೀತ ದೇಶ” ಎಂಬ ಸೋಗು.

ಈ ಬುದ್ದಿಜೀವಿಗಳ ಜಾತ್ಯಾತೀತದ ಸೋಗು ಕೇವಲ ಹಿಂದೂಗಳಿಗೆ ಮಾತ್ರ. ಇತರ ಸಮುದಾಯದ ಸಂಪ್ರದಾಯಗಳ ಬಗ್ಗೆ ಮಾತಾಡ್ರೀ ಎಂದಾಗ ಇವರು ಅತ್ತಿತ್ತ ತಲೆಯಾಡಿಸುತ್ತಾ ಕೈ ಸನ್ನೆ ಬಾಯಿ ಸನ್ನೆ ಮಾಡುತ್ತಾ ಕೆಪ್ಪ-ಮೂಗರಂತೆ ನಾಟಕವಾಡುತ್ತಾ ಸಂವಿಧಾನವನ್ನು ಜೋಳಿಗೆಯೊಳಗೆ ಬಚ್ಚಿಡುತ್ತಾರೆ! ಸನಾತನ ಧರ್ಮದಲ್ಲಿ ಹುಟ್ಟಿಯೂ, ಹಿಂದೂ ಹೆಸರುಗಳನ್ನಿಟ್ಟು ಕೊಂಡು ಮಾತೃಧರ್ಮವನ್ನೇ ಹೀಯಾಳಿಸುತ್ತಾ ತಮ್ಮ ಕಿಸಿ ತುಂಬಿಸಿಕೊಳ್ಳುವ ಇವರದೂ ಒಂದು ಜನ್ಮ. ಇಂತಹ ಸೋಗಲಾಡೀ ಜಾತ್ಯಾತೀತ ಬುದ್ದಿಜೀವಿಗಳನ್ನು ಮುಸ್ಲಿಂ ಬಾಹುಳ್ಯದೇಶದ ಇಂಡೋನೇಶಿಯಾದ ಬಾಲಿ ದ್ವೀಪಕ್ಕೊಮ್ಮೆ ಕಳಿಸಿಕೊಡಬೇಕು.

ಜಗತ್ತಿನಲ್ಲೇ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ದೇಶ ಇಂಡೋನೇಶಿಯಾ. ಇಲ್ಲಿಯ ಪುಟ್ಟ ರಾಜ್ಯ ಬಾಲಿ. ಇಂಡೋನೇಶಿಯಾದ ಪೂರ್ವಜರೆಲ್ಲರೂ ಹಿಂದೂಗಳೇ, ಆದರೆ ಮುಸಲ್ಮಾನರ ಆಕ್ರಮಣದಿಂದಾಗಿ ಇವರೆಲ್ಲರೂ ಇಸ್ಲಾಂ ಗೆ ಮತಾಂತರ ಹೊಂದಿದರು. ಬಾಲಿ ಹಿಂದೂ ಬಾಹುಳ್ಯದ ರಾಜ್ಯ. ಇಲ್ಲಿನ 93% ಹಿಂದೂಗಳು. ಇಂಡೋನೇಶಿಯಾ ಮತ್ತು ಬಾಲಿಗಳಲ್ಲಿ ಇವತ್ತಿಗೂ ಹಿಂದೂ ಧರ್ಮದ ಕುರುಹುಗಳನ್ನು ಕಾಣಬಹುದು. ಇಂಡೋನೇಶಿಯಾದ ನೋಟಿನಲ್ಲಿ ಹಿಂದೂ ದೇವರಾದ ಗಣಪತಿಯ ಚಿತ್ರವನ್ನು ನೀವು ಇವತ್ತಿಗೂ ಕಾಣಬಹುದು. ಕಾರಣ ಕೇಳಿದರೆ ನಮ್ಮ ಪೂರ್ವಜರೆಲ್ಲಾ ಹಿಂದೂಗಳು, ಆದ್ದರಿಂದ ನಮ್ಮ ಸನಾತನ ಸಂಸ್ಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎನ್ನುತ್ತಾರೆ ಇಲ್ಲಿನ ಮುಸ್ಲಿಂ ನಿವಾಸಿಗಳು!!

ಇಂಡೋನೇಶಿಯಾದ ರಾಜಧಾನಿ ಜಕಾರ್ತಾದಲ್ಲಿ ಕೃಷ್ಣನ ಭಗವದ್ಗೀತೆಯ ಗೀತೋಪದೇಶದ ಮೂರ್ತಿಗಳನ್ನು ರಚಿಸಲಾಗಿದೆ ಎಂದರೆ ನಂಬುತ್ತೀರಾ? ಇಲ್ಲಿನ ರಾಷ್ಟ್ರಪತಿಯವರೇ ಸ್ವತಃ ಕೃಷ್ಣನ ಗೀತಾ ಸಾರವಾದ ಕರ್ಮ ಮಾಡಿ ಫಲದ ಬಗ್ಗೆ ಚಿಂತಿಸಬೇಡಿ ಎನ್ನುವ ಮಾತುಗಳನ್ನು ಜನರಿಗೆ ಬೋಧಿಸುತ್ತಾರೆಂದರೆ ನಂಬುತ್ತೀರಾ? ಭಾರತದಲ್ಲಿ ಋಷಿ -ಮುನಿ-ಋಷಿಕಾಗಳ ಹೆಸರು ಎಷ್ಟು ಜನರಿಗೆ ಗೊತ್ತೋ ಆದರೆ ಬಾಲಿಯ ಪ್ರತಿ ಮಕ್ಕಳಿಗೂ ಸನಾತನ ಕಾಲದ 402 ಋಷಿ-ಋಶಿಕಾರ ಹೆಸರು ಗೊತ್ತೆಂದರೆ ನಂಬುತ್ತೀರಾ? ಬಾಲಿಯ ಶಾಲೆಗಳಲ್ಲಿ ವೇದಾಧ್ಯಯನ, ರಾಮಾಯಣ-ಮಹಾಭಾರತ, ಗಾಯತ್ರೀ ಮಂತ್ರ ಪಠಣ ಹೇಳಿಕೊಡಲಾಗುತ್ತದೆಂದರೆ ನಂಬುತ್ತೀರಾ? ದಿನದ ಮೂರು ಹೊತ್ತು ಸೂರ್ಯನಿಗೆ ತಿಕಾಲ ಸಂಧ್ಯಾವಂದನೆ ಮಾಡುತ್ತಾರೆ ಮಾತ್ರವಲ್ಲ ರೇಡಿಯೋಗಳಲ್ಲು ಮಂತ್ರಗಳ ರಿಲೇ ಮಾಡುತ್ತಾರೆಂದರೆ ಅವರ ಸನಾತನ ಪ್ರೇಮದ ಬಗ್ಗೆ ಹೆಮ್ಮೆ ಮೂಡುತ್ತದೆ.

ಭಾರತದಲ್ಲಿ ಇಂಥದ್ದನು ಅನುಷ್ಠಾನ ಮಾಡುವುದು ಬಿಡಿ ಸೊಲ್ಲೆತ್ತಿದ್ದರೂ ಸಾಕು ಬುದ್ದಿಜೀವಿಗಳು ಕತ್ತಿ-ಸುತ್ತಿಗೆ ಹಿಡಿದು ಕಡಿಯಲು ಓಡೋಡಿ ಬರುತ್ತಾರೆ! ಲಕ್ಷಾಂತರ ಜನರ ನಿರ್ಮಮ ಹತ್ಯೆ ಮಾಡಿದ ವಿದೇಶೀ ಲೆನಿನ್ ನ ಪ್ರತಿಮೆಗಳನ್ನು ಇಲ್ಲಿ ಸ್ಥಾಪಿಸಬಹುದು ಆದರೆ ಹಿಂದುತ್ವಕ್ಕಾಗಿ ಹೋರಾಡಿದ ಶಿವಾಜಿ ಪ್ರತಿಮೆ ಸ್ಥಾಪಿಸುವುದು ಜಾತ್ಯಾತೀತದ ಕಗ್ಗೊಲೆ. ನೋಟಿನಲ್ಲಿ ಬಿಡಿ, ಶಾಲೆಯಲ್ಲಿ, ಸಂಸತ್ತಿನಲ್ಲಿ, ಸರಕಾರೀ ಜಾಗಗಳಲ್ಲಿ ಹಿಂದೂ ದೇವರ ಚಿತ್ರಗಳನ್ನು ಇಡುವಂತೆಯೇ ಇಲ್ಲ. ನಮ್ಮದು ಜಾತ್ಯಾತೀತ ದೇಶ ಕಣ್ರೀ, ಹಿಂದೂ ದೇವರ ಚಿತ್ರ, ಹಿಂದೂ ದೇವರ ಬಗ್ಗೆ ಪಾಠ, ಊಹೂಂ ಸಲ್ಲದು-ಸಲ್ಲದು. ಸಂವಿಧಾನಕ್ಕೆ ಅಪಮಾನ. ಸಂವಿಧಾನದ ಮೇಲೆ ಏನು ಪ್ರೀತಿ, ಏನು ಭಕ್ತಿ, ಏನು ಗೌರವ! ಹಿಂದೂ ಎನ್ನುವುದು ಕೋಮು ಪದ. ಹಿಂದುತ್ವ ಎಂದರೆ ಕೋಮುವಾದ. ಹಿಂದುತ್ವದ ಬಗ್ಗೆ ಮಾತನಾಡುವವರೆಲ್ಲ ಕೋಮುವಾದಿಗಳು. ಸರಕಾರೀ ಶಾಲೆಯಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡಿದರೆ ಅದು ಸಾಂಪ್ರದಾಯಿಕತೆ. ಅದೆ ಯೇಸು ಗಾನ, ನಮಾಜು ಮಾಡಿಸಿದರೆ ಅದು ಜಾತ್ಯಾತೀತತೆ! ವಾಹ್ ಬುದ್ದಿಜೀವಿಗಳೇ ನಿಮ್ಮ ಕುತರ್ಕಕ್ಕೊಂದು ಸಾಷ್ಟಾಂಗ ನಮಸ್ಕಾರ. ದೇಶದ ಸಂಸ್ಕೃತಿಯನ್ನು ನಿರ್ನಾಮ ಮಾಡಲು ವಿದೇಶೀ ಶತ್ರುಗಳೇ ಬೇಕೆಂದಿಲ್ಲ, ಕೇವಲ ಬುದ್ದಿಜೀವಿಗಳಿದ್ದರೆ ಸಾಕು.

ಇದೇ ರವಿವಾರ ಇಡಿಯ ದೇಶವೇ ಹೊಸ ವರ್ಷ ಆಚರಿಸಿತಲ್ಲ? ನಾವೊಬ್ಬರೇ ಹೊಸ ವರ್ಷ ಆಚರಿಸಿಕೊಂಡದ್ದಲ್ಲ. ಬಾಲಿ ಕೂಡಾ ನಮ್ಮಂತೆಯೇ ಹೊಸ
ವರ್ಷವನ್ನಾಚರಿಸಿಕೊಂಡಿತು. ಭಾರತದ ಶಕ ಪರಂಪರೆಯ ಅನುಸಾರ “ಇಸಾಕವರ್ಸ” ಎಂಬ ಹೊಸ ಸಂವತ್ಸರದಂದು ‘ನೈಪೀ’ ಎನ್ನುವ ಆಚರಣೆಯನ್ನು
ಶತಮಾನಗಳಿಂದಲೂ ಬಾಲಿಯ ಜನರು ಆಚರಿಸುತ್ತಾ ಬರುತ್ತಿದ್ದಾರೆ. ಆವತ್ತು ಬಾಲಿಯ ಜನರೆಲ್ಲರೂ ಇಡೀ ದಿನ ಮೌನ ವ್ರತಾಚರಣೆ ಮಾಡುತ್ತಾ ದೇವರ ಸ್ಮರಣೆ ಮಾಡುತ್ತಾರೆ. ದುಷ್ಟ ಶಕ್ತಿಗಳನ್ನು ಉಚ್ಚಾಟಿಸಲು “ಭೂತ ಯಜ್ಜ” ಮಾಡುತ್ತಾರೆ! ಇಡೀ ದಿನ ಉಪವಾಸವಿದ್ದು, ಸಮುದ್ರ ತೀರದ ದೇವಸ್ಥಾನಗಳಲ್ಲಿ ಪೂಜೆ ಗೈಯುತ್ತಾರೆ. ವರ್ಷ ಪೂರ್ತಿ ಪ್ರವಾಸಿಗರಿಂದ ಗಿಜಿಗುಡುವ ಬಾಲಿ ಅಂದು ಸಂಪೂರ್ಣ ಸ್ಥಬ್ದ. ವಾಹನ, ವಿಮಾನ ಯಾನ, ಮಾತು, ಹರಟೆ. ಟಿ.ವಿ ಅಷ್ಟೇ ಏಕೆ ಇಂಟರ್ನೆಟ್ ಕೂಡಾ ಸಂಪೂರ್ಣ ಸ್ಥಗಿತ! ಆ ದಿನ ಬಾಲಿಯ ಜನರೆಲ್ಲರೂ ರಾಷ್ಟ್ರೀಯ ಉಡುಪಾದ ಬಿಳಿ ಬಣ್ಣದ ಧೋತಿ-ಅಂಗಿ ತೊಡುತ್ತಾರೆ. ಭಾರತದ ರಾಷ್ಟ್ರೀಯ ಉಡುಪು ಹರಿದ ಜೀನ್ಸ್ ಪ್ಯಾಂಟು- ಕಿತ್ತೋದ ಟಿ.ಶರ್ಟು!

ಭಾರತದಲ್ಲಂತೂ ಇತ್ತೀಚೆಗೆ ಇಂಟರ್ನೆಟ್ಟಿನಲ್ಲೇ ಹಬ್ಬ ಹರಿದಿನಗಳನ್ನು ಆಚರಿಸಿ ಮುಗಿಸಿಬಿಡುವ ಸಂಪ್ರದಾಯ! ಆದರೆ ಬಾಲಿ ತನ್ನ ಸನಾತನ ಮೂಲ್ಯಗಳನ್ನು ಬಿಟ್ಟು ಕೊಟ್ಟಿಲ್ಲ. ಇಂಡೋನೇಶಿಯಾದಂತಹ ಮುಸ್ಲಿಂ ದೇಶ ಮತ್ತು ಆ ದೇಶದಲ್ಲಿರುವ ಪುಟ್ಟ ಬಾಲಿ ತನ್ನ ಸನಾತನ ಧರ್ಮ ಮತ್ತು ಆಚರಣೆಗಳನ್ನು ತಲೆತಲಾಂತರದಿಂದಲೂ ಅನೂಚಾನವಾಗಿ ಅನುಸರಿಸಿಕೊಂಡು ಬಂದಿದೆಯೆಂದಾದರೆ ಹಿಂದೂ ದೇಶವಾದ ಭಾರತಕ್ಕೆ ಇದೇಕೆ ಸಾಧ್ಯವಾಗುತ್ತಿಲ್ಲ? ಅಯ್ಯೋ ಮರೆತೆ ನಮ್ಮದು ಜಾತ್ಯಾತೀತ ದೇಶ.

  • Sharvari
Tags

Related Articles

Close