ಪ್ರಚಲಿತ

ಆರ್‍ಎಸ್‍ಎಸ್ ಭಾಷಣಕ್ಕಾಗಿ ಮಗಳ ಮಾತನ್ನೇ ಧಿಕ್ಕರಿಸಿ ಸಂಘದಂಗಳಕ್ಕೆ ಧುಮುಕಿದರೇ ಮಾಜಿ ರಾಷ್ಟ್ರಪತಿ? ಕಾಂಗ್ರೆಸ್ ವಿರೋಧಿಸಿದರೂ ದಾದಾ ಇಟ್ಟ ಕಠಿಣ ಹೆಜ್ಜೆ ಇದು!

ಕಳೆದ 4 ವರ್ಷಗಳಿಂದ ದೇಶ ಪ್ರಧಾನಿ ಮೋದಿಯವರ ಭಾಷಣವನ್ನು ಕೇಳಲು ಛಾತಕ ಪಕ್ಷಿಯಂತೆ ಕಾಯುತ್ತಿದ್ದರು. ಮೋದಿಯವರು ಏನು ಮಾತನಾಡುತ್ತಾರೆ, ಅವರ ಭಾಷಣದ ವಾಗ್ಚರಿ ಹೇಗಿರುತ್ತೆ ಎಂಬ ಕುತೂಹಲದಿಂದ ಅದೆಷ್ಟೇ ಗಂಟೆಗಳೇ ಆಗಲಿ ಮೋದಿ ಭಾಷಣವನ್ನು ಎದುರು ನೋಡುತ್ತಾ ಕಾಯುತ್ತಾರೆ. ಮೋದಿಯವರೂ ಜನರ ನಿರೀಕ್ಷೆಗಳನ್ನು ಹುಸಿ ಮಾಡಿಲ್ಲ ಬಿಡಿ. ವಿಭಿನ್ನ ಶೈಲಿಯ ಅವರ ಮಾತುಗಳು ಕೇಳುಗರನ್ನು ಮಂತ್ರ ಮುಗ್ದರನ್ನಾಗಿಸಿದ್ದು ಹೊಸ ವಿಚಾರವೇನಲ್ಲ. ಆದರೆ ಇದೀಗ ಅದಕ್ಕಿಂತಲೂ ಅತಿದೊಡ್ಡ ಕುತೂಹಲವೊಂದನ್ನು ಹುಟ್ಟುಹಾಕಿದ ಘಟನೆ ದೇಶದಲ್ಲಿ ನಡೆದಿದೆ. ಕೇವಲ ಒಂದು ಭಾಷಣಕ್ಕಾಗಿ ಕೇವಲ ದೇಶ ಮಾತ್ರವಲ್ಲದ ಇಡಿಯ ವಿಶ್ವವೇ ಕಾಯುತ್ತಾ ಕುಳಿತಿದೆ. ಅಂದಹಾಗೆ ಜನತೆ ಕಾಯುತ್ತಿರುವುದು ಪ್ರಧಾನಿ ಮೋದಿಯವರ ಭಾಷಣಕ್ಕಾಗಿ ಅಲ್ಲ. 

ಇದೀಗ ಇಡೀ ಜಗತ್ತೇ ಕಾದು ಕುಳಿತಿದ್ದು ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣಕ್ಕಾಗಿ. ಅವರು ವಾಗ್ಮಿಯಂತನೂ ಅಥವಾ ವಿಶ್ವನಾಯಕನಂತನೂ ಅವರ ಭಾಷಣಕ್ಕಾಗಿ ಜನತೆ ಕಾಯುತ್ತಿರುವುದು ಅಲ್ಲ. ಬದಲಾಗಿ ಅವರೋರ್ವ ಕಾಂಗ್ರೆಸ್ ನಾಯಕರಾಗಿ ಕೆಲಸ ಮಾಡಿದವರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಸಂಸದನಾಗಿ, ವಿತ್ತ ಸಚಿವನಾಗಿ, ನಂತರ ಅದೇ ಕಾಂಗ್ರೆಸ್ ಪಕ್ಷದ ಕೃಪೆಯಿಂದಾಗಿ ರಾಷ್ಟ್ರಪತಿ ಹುದ್ದೆಯನ್ನೂ ಅಲಂಕರಿಸಿದವರು.

ಕಾಂಗ್ರೆಸ್ ಅಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಅತ್ಯಂತ ಹೆಚ್ಚಾಗಿ ಧ್ವೇಷಿಸುವ ಪಕ್ಷ ಎನ್ನುವುದು ಇದೀಗ ಗುಟ್ಟಾಗಿ ಉಳಿದಿಲ್ಲ.  ಸಂಘ ಇಡುವ ಪ್ರತಿಯೊಂದು ಹೆಜ್ಜೆಗೂ ಆಕ್ಷೇಪವನ್ನು ವ್ಯಕ್ತಪಡಿಸುತ್ತಾ ಅಲ್ಪ ಸಂಖ್ಯಾತರ ಓಲೈಕೆಯನ್ನು ಮಾಡುತ್ತಿರುವ ಒಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ಇಂತಹಾ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಪ್ರಣಬ್ ಮುಖರ್ಜಿ ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಳಕ್ಕೆ ಬಂದು ಮಾತನಾಡುತ್ತಾರೆ ಎಂದರೆ ಒಮ್ಮೆ ಎಲ್ಲರಿಗೂ ಅಚ್ಚರಿಯಾಗಲೇ ಬೇಕು. ಬಿಡಿ, ಕಾಂಗ್ರೆಸ್ ಪಕ್ಷಕ್ಕಂತೂ ಶಾಕ್ ಆಗಲೇ ಆಗಿದೆ.

ಪ್ರಣಬ್ ನಿರ್ಧಾರಕ್ಕೆ ಕಾಂಗ್ರೆಸ್ ಆಕ್ಷೇಪ..!

ಅದ್ಯಾವಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮಕ್ಕೆ ತಾನು ಆಗಮಿಸುತ್ತೇನೆ ಎಂದು ಒಪ್ಪಿಗೆ ನೀಡಿದರೋ ಅಂದಿನಿಂದ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ತಳಮಳ ಉಂಟಾಗಿದೆ. ಸಂಘದ ನೆರಳಿನಲ್ಲಿ ಬದುಕುವುದೇ ಅತಿದೊಡ್ಡ ಅಪರಾದ ಎಂದು ಹೇಳಿಕೊಂಡಿರುವ ಕಾಂಗ್ರೆಸ್ ಇದೀಗ ಮಾಜಿ ರಾಷ್ಟ್ರಪತಿಯೋರ್ವರಿಗೆ ಸಂಘದ ಭಾಷಣಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ಅನೇಕ ಕಾಂಗ್ರೆಸ್ ಮುಖಂಡರು ಪ್ರಣಬ್ ನಿಧಾರಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಪ್ರಣಬ್ ಮುಖರ್ಜಿ ಮಾತ್ರ ಡೋಂಟ್ ಕೇರ್ ಎಂದಿದ್ದಾರೆ.

ಮಗಳ ಮಾತನ್ನೂ ಲೆಕ್ಕಿಸಲಿಲ್ಲ ದಾದಾ..!

ಎಲ್ಲಾ ಬಿಡಿ, ತನ್ನ ಮಗಳು ಹೇಳಿದ್ದ ಮಾತನ್ನೇ ಪ್ರಣಬ್ ದಾದಾ ಕಿವಿಗೆ ಹಾಕಿಕೊಂಡಿಲ್ಲ. ಕಾಂಗ್ರೆಸ್ ನಾಯಕರು ಅದೆಷ್ಟೇ ಆಕ್ಷೇಪ ವ್ಯಕ್ತಪಡಿಸಿದರೂ ಕೇರ್ ಮಾಡದ ಮಾಜಿ ರಾಷ್ಟ್ರಪತಿ ನಂತರ ಮಗಳ ಮಾತನ್ನೂ ಕೇಳಲಿಲ್ಲ. ತನ್ನ ತಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಭಾಗವಹಿಸುತ್ತಿರುವುದರ ವಿರುದ್ಧ ಟ್ವಿಟರ್‍ನಲ್ಲಿ ಅಸಮಧಾನ ವ್ಯಕ್ತಪಡಿಸಿದ ಮಗಳು ಶರ್ಮಿಷ್ಟಾ, “ಆರ್‍ಎಸ್‍ಎಸ್ ಸಮಾಜಕ್ಕೆ ಸುಳ್ಳು ಕಥೆಗಳನ್ನು ಹರಡುವ ಮತ್ತು ತಪ್ಪು ಸಂದೇಶಗಳನ್ನು ನೀಡುವ ವೇದಿಕೆಗೆ ಮಾಜಿ ರಾಷ್ಟ್ರಪತಿಯವರು ಅವಕಾಶ ಕಲ್ಪಸಿಕೊಟ್ಟಿದ್ದಾರೆ. ಅವರ ಭೇಟಿ ದೂರಗಾಮಿ ಪರಿಣಾಮಗಳನ್ನು ಬೀರಲಿದೆ” ಎಂದು ಹೇಳಿದ್ದರು.

ಕಾಂಗ್ರೆಸ್ ಹಾಗೂ ತನ್ನ ಮಗಳೂ ಇತ್ತ ಆಕ್ಷೇಪಗಳನ್ನು ಪ್ರಣಬ್ ದಾದಾ ಲೆಕ್ಕಿಸಲೇ ಇಲ್ಲ.  “ನಾನು ಏನು ಹೇಳಬೇಕೆಂದಿದ್ದೇನೋ ಅದನ್ನೆಲ್ಲಾ ಅಲ್ಲೇ ಹೇಳುತ್ತೇನೆ” ಎನ್ನುವ ಮೂಲಕ ಆಕ್ಷೇಪವೆತ್ತಿದವರಿಗೆ ಮುಖಕ್ಕೆ ಭಾರಿಸಿದಂಗೆ ಹೇಳಿಬಿಟ್ಟಿದ್ದರು.

ಇದೀಗ ಸಂಘದ ಕಾರ್ಯಕ್ರಮಕ್ಕೆಂದು ನಾಗ್ಪುರಕ್ಕೆ ಮಾಜಿ ರಾಷ್ಟ್ರಪತಿಯವರು ಆಗಮಿಸಿ ಆಗಿದೆ. ಏನು ಮಾತನಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಸಂಘದ ಪರವಾಗಿ ಮಾತನಾಡುತ್ತಾರೋ ಅಥವಾ ಸಂಘದ ವಿರುದ್ಧ ಮಾತನಾಡುತ್ತಾರೋ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಇದಕ್ಕೆಲ್ಲಾ ಉತ್ತರ ಮುಖರ್ಜಿಯವರ ಭಾಷಣ.

source :http://www.newskannada.in/pranab-dtr/

-ಸುನಿಲ್ ಪಣಪಿಲ

Tags

Related Articles

Close