ಪ್ರಚಲಿತ

ಬಿಗ್ ಬ್ರೇಕಿಂಗ್! ಕಾಶ್ಮೀರದಲ್ಲಿ ಮೊದಲ ವಿಕೆಟ್ ಪತನ..! ಶುರುವಾಯಿತು ಅಸಲೀ ಆಟ! ದೀಪಾವಳಿ ಆಚರಣೆಗೆ ಕ್ಷಣಗಣನೆ…!

ಈವರೆಗೆ ಹೆಜ್ಜೆ ಹೆಜ್ಜೆಗೂ ಜಮ್ಮು ಕಾಶ್ಮೀರದ ಸರ್ಕಾರದ ಅಪ್ಪಣೆಗೆ ಕಾಯುತ್ತಿದ್ದ ಅಲ್ಲಿನ ಪೊಲೀಸರು ಹಾಗೂ ಸೈನಿಕರು ಇದೀಗ ದಾಸ್ಯದಿಂದ ಮುಕ್ತರಾಗಿದ್ದಾರೆ. ನಿರೀಕ್ಷೆಯಂತೆ ಜಮ್ಮು ಕಾಶ್ಮೀರದ ಪೊಲೀಸರು ಹಾಗೂ ಸೈನಿಕರು ತಮ್ಮ ಅಸಲಿ ಆಟವನ್ನು ಶುರುವಿಟ್ಟುಕೊಂಡಿದ್ದಾರೆ. ಪಿಡಿಪಿ ಸರಕಾರಕ್ಕೆ ಭಾರತೀಯ ಜನತಾ ಪಕ್ಷ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದು ಸರ್ಕಾರವನ್ನು ಉರುಳಿಸುವ ಮೂಲಕ ಹಾಗೂ ಅದರ ನಂತರ ರಾಷ್ಟ್ರಪತಿ ಆಡಳಿತ ತರುವ ಮೂಲಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ.

ಮೊದಲ ವಿಕೆಟ್ ಪತನ..!

ಇದು ಸಮಸ್ತ ಭಾರತೀಯರೇ ಕುಣಿದು ಕುಪ್ಪಳಿಸುವಂತಹ ಸುದ್ಧಿ. ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರರಿಗಿಂತಲೂ ದೇಶದೊಳಗೆ ಅಂದರೆ ಜಮ್ಮು ಕಾಶ್ಮೀರದಲ್ಲಿನ ಪ್ರತ್ಯೇಕವಾದಿಗಳ ಸಮಸ್ಯೆ ಹೆಚ್ಚಾಗಿತ್ತು. ಭಾರತೀಯ ಸೇನೆಯ ಪ್ರತಿ ಕಾರ್ಯಾಚರಣೆಗೂ ಈ ಪ್ರತ್ಯೇಕ ವಾದಿಗಳ ಗುಂಪು ಕಗ್ಗಂಟಾಗಿ ಪರಿಣಮಿಸುತ್ತಿತ್ತು. ಸೇನೆಯ ಮೇಲೆ ಕಲ್ಲು ಎಸೆಯುವುದು, ಸೇನಾ ವಾಹನಗಳನ್ನು ಹಾನಿ ಮಾಡುವುದರಿಂದ ಹಿಡಿದು ಭಾರತೀಯ ಸೈನಿಕರನ್ನು ಹಿಡಿದು ಕೊಲೆ ಮಾಡುವ ಹಂತಕ್ಕೂ ಈ ಪ್ರತ್ಯೇಕವಾದಿಗಳ ಸಮಸ್ಯೆ ಇದೆ. ಒಂದರ್ಥದಲ್ಲಿ ಈ ಪ್ರತ್ಯೇಕವಾದಿಗಳು ಪಾಕಿಸ್ತಾನ ಉಗ್ರರ ಮತ್ತೊಂದು ಮುಖ ಎಂದರೆ ತಪ್ಪಾಗಲಾರದು.

 

ಇನ್ನು ಮುಂದೆ ಇಂತಹ ಕೃತ್ಯಗಳಿಗೆ ಅವಕಾಶ ಇಲ್ಲ. ಪ್ರತ್ಯೇಕ ವಾದಿಗಳನ್ನು ಮಟ್ಟ ಹಾಕಲು ಭಾರತೀಯ ಸೇನೆ ಹಾಗೂ ಜಮ್ಮು ಕಾಶ್ಮೀರದ ಪೊಲೀಸರು ಸಿದ್ದರಾಗಿದ್ದಾರೆ. ಇದರ ಒಂದು ಭಾಗವೇ ಪ್ರತ್ಯೇಕವಾದಿ ನಾಯಕ ಯಾಸೀನ್ ಮಲ್ಲಿಕ್ ಅರೆಸ್ಟ್. ಉಗ್ರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಮೂಲಕ ಜಮ್ಮು ಕಾಶ್ಮೀರದ ಪೊಲೀಸರಿಗೇ ಕಗ್ಗಂಟಾಗಿದ್ದ ಪ್ರತ್ಯೇಕವಾದಿ ನಾಯಕ ಯಾಸೀನ್ ಮಲ್ಲಿಕ್ ಎಂಬಾತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಮುಂದೆ ಪ್ರತ್ಯೇಕ ವಾದಿಗಳಿಗಿದೆ ಮಾರಿ ಹಬ್ಬ ಎನ್ನುವ ಮುನ್ಸೂಚನೆಯನ್ನು ನೀಡಿದ್ದಾರೆ.

ಸೇನೆಯಿಂದಲೂ ಭರ್ಜರಿ ಭೇಟೆ.!

ರಂಜಾನ್ ತಿಂಗಳಲ್ಲಿ ಉಗ್ರ ಕಾರ್ಯಾಚರಣೆಗೆ ವಿರಾಮ ತೆಗೆದುಕೊಂಡಿದ್ದ ಭಾರತೀಯ ಸೇನೆ ಶಾಂತಿ ಕಾಪಾಡುವ ಸಲುವಾಗಿ ಯಾವುದೇ ರೀತಿಯ ಕಾರ್ಯಾಚರಣೆ ಮಾಡಿರಲಿಲ್ಲ.ಆದರೆ ಇದೀಗ ರಂಜಾನ್ ಕೂಡ ಮುಗಿದಿದ್ದು, ಸೇನೆ ಮತ್ತೆ ಭರ್ಜರಿ ಕಾರ್ಯಾಚರಣೆ ಆರಂಭಿಸಿದೆ. ಅದೇ ರೀತಿ ಸರಕಾರ ಕೂಡ ಮುರಿದುಬಿದ್ದಿದ್ದು ರಾಜ್ಯಪಾಲರ ಆಳ್ವಿಕೆಯಲ್ಲಿ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದ್ದು, ಸೈನಿಕರು ಮತ್ತೆ ಭೇಟೆ ಆರಂಭಿಸಿದ್ದಾರೆ. ಭಾರತೀಯ ಸೈನಿಕರ ಮೇಲೆ ಕಲ್ಲೆಸೆಯುತ್ತಿದ್ದ ಪ್ರತ್ಯೇಕವಾದಿಗಳು ಕೂಡ ಇದೀಗ ನಡುಗುತ್ತಿದ್ದಾರೆ. ರಾಜ್ಯಪಾಲರ ಆಳ್ವಿಕೆ ಎಂದರೆ , ಹೆಚ್ಚು ಕಮ್ಮಿ ಅದು ಕೇಂದ್ರ ಸರಕಾರದ ಆಡಳಿತವೇ ಆಗಿರುತ್ತದೆ. ಆದ್ದರಿಂದ ಇನ್ನು ಮುಂದೆ ಯಾವುದೇ ಅಟ್ಟಹಾಸಕ್ಕೆ ಎಡೆ ಮಾಡಿಕೊಡಲು ನಮ್ಮ ಸೇನೆ ಬಿಡುವುದಿಲ್ಲ.!

ದೇಶದಲ್ಲೇ ಇದ್ದು,ದೇಶಕ್ಕೆ ದ್ರೋಹ ಬಗಿಯುವ ದೇಶದ್ರೋಹಿಗಳಿಗೆ ಇನ್ನು ಮುಂದೆ ಉಳಿಗಾಲವಿಲ್ಲ. ಯಾಕೆಂದರೆ ಸೈನಿಕರಿಗೆ ಈವರೆಗೆ ಜಮ್ಮು ಕಾಶ್ಮೀರದ ಸರಕಾರದ ಆದೇಶಕ್ಕೆ ಕಾಯಬೇಕಾಗಿತ್ತು. ಆದರೆ ಇದೀಗ ಎಲ್ಲವೂ ಕೇಂದ್ರ ಅಥವಾ ರಾಜ್ಯಪಾಲರ ಅಡಿಯಲ್ಲೇ ಇರುವುದರಿಂದ ಸೈನಿಕರ ಭೇಟೆಗೆ ಯಾರೂ ಅಡ್ಡಿಪಡಿಸುವುದಿಲ್ಲ. ಆದ್ದರಿಂದ ಕಾಶ್ಮೀರದಲ್ಲಿ ಪದೇ ಪದೇ ಗಲಭೆ ಎಬ್ಬಿಸಿ ಅದನ್ನು ಮೋದಿ ಸರಕಾರದ ಮೇಲೆ ಆರೋಪಿಸುತ್ತಿದ್ದವರು ಇನ್ನು ಮುಂದೆ ಭಾರತೀಯ ಸೇನೆಯ ಅಸಲಿ ಆಟ ನೋಡಬೇಕಾದ ಪರಿಸ್ಥಿತಿ ಬಂದೊದಗಿದೆ.!

 

ಆರಂಭದಲ್ಲಿಯೇ ಜಮ್ಮು ಡಿಜಿಪಿ ಎಸ್ಪಿ ವೈಡ್ ಅವರು ಹೇಳಿಕೊಂಡ ಪ್ರಕಾರ, ರಾಜ್ಯಪಾಲರ ಆಳ್ವಿಕೆಯಲ್ಲಿ ನಮ್ಮ ಉಗ್ರರ ವಿರುದ್ಧದ ಕಾರ್ಯಾಚರಣೆ ಇನ್ನಷ್ಟು ವೇಗವಾಗಿ ನಡೆಯುತ್ತದೆ. ರಂಜಾನ್ ತಿಂಗಳಲ್ಲಿ ಸ್ಥಗಿತವಾಗಿದ್ದ ಪೊಲೀಸ್ ಕಾರ್ಯಾಚರಣೆ ಕೂಡ ಇದೀಗ ಆರಂಭವಾಗಿದ್ದು, ಯಾವುದೇ ಕಾರಣಕ್ಕೂ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರು. ಈಗ ಓರ್ವ ಪ್ರತ್ಯಕ್ಷ ವಾದಿ ನಾಯಕನನ್ನು ಬಂಧಿಸಿದ್ದು ಮತ್ತೆ ದೀಪಾವಳಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಈಗಾಗಲೇ ಭಾರತೀಯ ಸೇನೆ ತಮ್ಮ ಉಗ್ರರ ವಿರುದ್ಧದ ಕಾರ್ಯಾಚರಣೆ ಆರಂಭವಾಗಿದ್ದು, ಉಗ್ರರು ಮಾತ್ರವಲ್ಲದೆ ಪ್ರತ್ಯೇಕವಾದಿಗಳಿಗೂ ಇದರ ಬಿಸಿ ತಟ್ಟಲಿದೆ. ಗಡಿ ಕಾಯುವ ಯೋಧರಿಗೆ ಪಾಕ್ ಉಗ್ರರ ಮತ್ತು ಪಾಕಿಸ್ತಾನ ಸೈನಿಕರ ಉಪಟಳ ಒಂದೆಡೆಯಾದರೆ , ಇತ್ತ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರಿಗೆ ಜಮ್ಮು ಕಾಶ್ಮೀರ ಪ್ರತ್ಯೇಕವಾದಿಗಳು ಭಾರೀ ತೋಂದರೆ ನೀಡುತ್ತಿದ್ದರು. ಆದ್ದರಿಂದಲೇ ಇದೀಗ ಇವೆಲ್ಲದಕ್ಕೂ ತಕ್ಕ ಉತ್ತರ ನೀಡಲು ಸೇನೆಗೆ ಒಳ್ಳೆಯ ಅವಕಾಶ ಬಂದಿದ್ದು, ಭಾರತೀಯ ಸೈನಿಕರ ಭೇಟೆ ಇನ್ನು ಮುಂದೆ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.!

-ಸುನಿಲ್ ಪಣಪಿಲ

Tags

Related Articles

Close