ಪ್ರಚಲಿತ

ಕೇವಲ ನಾಲ್ಕು ವರ್ಷದಲ್ಲಿ ಮೋದಿ ಸರ್ಕಾರದಿಂದ 10 ಕೋಟಿ ಎಲ್‍ಪಿಜಿ ಗ್ಯಾಸ್ ಕನೆಕ್ಷನ್!! ಹಾಗಾದರೆ ಕಾಂಗ್ರೆಸ್ ಸರ್ಕಾರ ಮಾಡಿದ್ದೇನು?!

ಪ್ರಧಾನಿ ನರೇಂದ್ರ ಮೋದಿಯವರು ಬಡವರ ಏಳಿಗೆಗಾಗಿ ಈಗಾಗಲೇ ಹತ್ತು ಹಲವಾರು ಯೋಜನೆಗಳನ್ನು ಹೊರತಂದಿದ್ದು, ಬಡ ಕುಟುಂಬದ ಮಹಿಳೆಯರಿಗಾಗಿ ಉಪಯುಕ್ತವಾಗಲಿ ಎಂದು `ಪ್ರಧಾನಮಂತ್ರಿ ಉಜ್ವಲ ಯೋಜನೆ’ಯನ್ನು ಜಾರಿ ಮಾಡುವುದರ ಮೂಲಕ ಕೋಟ್ಯಾಂತರ ಜನರಿಗೆ ಉಪಯೋಗಕಾರಿಯಾಗಿದ್ದಾರೆ!! ಈ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಎಲ್.ಪಿ.ಜಿ ಸೌಲಭ್ಯ ಕಲ್ಪಿಸಲಾಗಿದ್ದು ಇದೀಗ ಮೋದೀಜೀ ಆಡಳಿತದ ನಾಲ್ಕು ವರ್ಷದಲ್ಲಿ 10 ಕೋಟಿ ಹೊಸ ಗ್ರಾಹಕರಿಗೆ ಎಲ್‍ಪಿಜಿ ಸೌಲಭ್ಯ ದೊರಕಿಸಿಕೊಡುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ!!

ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ `ಪ್ರಧಾನಮಂತ್ರಿ ಉಜ್ವಲ’ ಯೋಜನೆ ಮಹಿಳೆಯರ ಪಾಲಿಗೆ ನಿಜಕ್ಕೂ ವರದಾನವಾಗಿದೆ. ಬಡ ಕುಟುಂಬದ ಮಹಿಳೆಯರಿಗೆ ಉಚಿತ ಅಡುಗೆ ಅನಿಲ (ಎಲ್‍ಪಿಜಿ) ಸಂಪರ್ಕ ಒದಗಿಸಲು 8,000 ಕೋಟಿ ರೂಪಾಯಿ ಯೋಜನೆಗೆ ಸಂಪುಟ ಅನುಮೋದನೆ ನೀಡಿ, ಹೊಗೆ ಗೂಡುಗಳಲ್ಲಿ ಬೇಯುತ್ತಿದ್ದ ಗ್ರಾಮೀಣ ಮಹಿಳೆಯರಿಗೆ ಕೊನೆಗೂ ಮುಕ್ತಿ ಸಿಗುವ ರೀತಿ ಮಾಡಿದ್ದಾರೆ!! ಇದೀಗ ಪ್ರಧಾನಿ ನರೇಂದ್ರ ಮೋದೀಜಿಯವರ ಉಜ್ವಲ ಯೋಜನೆಯನ್ನು ಇಡೀ ದೇಶವೇ ಹಾಡಿಹೊಗಳುತ್ತಿದೆ!!

ಕೇವಲ ನಾಲ್ಕು ವರ್ಷದಲ್ಲಿ ಮೋದಿ ಸರಕಾರದಿಂದ 10 ಕೋಟಿ ಎಲ್‍ಪಿಜಿ ಸಂಪರ್ಕ!!

ಉಜ್ವಲ ಯೋಜನೆಯ ಮುಖಾಂತರ ಮೋದಿ ಸರ್ಕಾರವು ಕಳೆದ 4 ವರ್ಷಗಳಲ್ಲಿ 10 ಕೋಟಿ ಹೊಸ ಗ್ರಾಹಕರಿಗೆ ಎಲ್‍ಪಿಜಿ ಸಂಪರ್ಕವನ್ನು ಕಲ್ಪಿಸಿದೆ. ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ಕಳೆದ 60 ವರ್ಷಗಳಲ್ಲಿ ಕೇವಲ 13 ಕೋಟಿ ಗ್ರಾಹಕರಿಗೆ ಮಾತ್ರ ಎಲ್‍ಪಿಜಿ ಸಂಪರ್ಕ ನೀಡಿದೆ!!. ನಿನ್ನೆ ಉಜ್ವಲ ಯೋಜನೆಯ ಫಲಾನುಭವಿಗಳೊಂದಿಗೆ ಮಾತನಾಡಿದ ಮೋದಿಜೀಯವರು, ತಂತ್ರಜ್ಞಾನದ ಸಹಾಯದಿಂದ ದೇಶದ ಪ್ರತಿಯೊಬ್ಬರೊಂದಿಗೆ ಸಂಪರ್ಕ ಬೆಳೆಸಿ ಅವರಿಂದ ಮಾಹಿತಿ ಪಡೆದು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಹಾಯಕವಾಗಿದೆ ಎಂದು ತಿಳಿಸಿದರು.

ಈ ವೇಳೆ ಕಥೆ ಪ್ರೇಮ್‍ಚಂದ್‍ರವರು ರಚಿಸಿದ ಹಿಂದಿಯ `ಈದ್ಗಾ’ ಕಥೆಯಲ್ಲಿನ ಹಮೀದ್ ಎಂಬ ಬಾಲಕನ ಬಗ್ಗೆ ಮೋದಿ ಪ್ರಸ್ತಾಪಿಸಿದರು. ಹಮೀದ್ ತಾಯಿ ರೊಟ್ಟಿಯನ್ನು ಸುಡುವಾಗ ತನ್ನ ಕೈಯನ್ನು ಸುಟ್ಟುಕೊಳ್ಳುತ್ತಿದ್ದರು. ಅಜ್ಜಿಯ ನೋವನ್ನು ಕಂಡು ಬಾಲಕ ಹಮೀದ್ ಅಂಗಡಿಯಲ್ಲಿ ಮಿಠಾಯಿಯನ್ನು ಖರೀದಿಸದೇ ಇಕ್ಕುಳಗಳನ್ನು ತಂದು ಕೊಟ್ಟು ಕೈ ಸುಡದಂತೆ ಮಾಡಿದ್ದ ಎಂದರು. ಈ ವೇಳೆ ಚಿಕ್ಕವರಿದ್ದಾಗ ತಮ್ಮ ತಾಯಿಯವರು ಹೊಗೆ ತುಂಬಿದ್ದ ಅಡುಗೆ ಕೋಣೆಯಲ್ಲಿ ಕಷ್ಟ ಪಡುತ್ತಿರುವುದನ್ನು ನೆನಪಿಸಿಕೊಂಡು ಭಾವುಕರಾದ ಮೋದಿ ಅಂದು ಎಲ್‍ಪಿಜಿ ಸಂಪರ್ಕವು ಈ ಮೊದಲು ಕೇವಲ ಶ್ರೀಮಂತರು ಹಾಗೂ ಪ್ರತಿಷ್ಠೆಯ ರೂಪದಲ್ಲಿ ಜಾರಿಯಲ್ಲಿತ್ತು ಎಂದು ಹೇಳಿದರು.

ಈ ಹಿಂದೆ ಅಡುಗೆ ಮಾಡಲು ಸೀಮೆಎಣ್ಣೆ, ಕಟ್ಟಿಗೆ, ಬೆರಣಿ ಹಾಗೂ ಇನ್ನಿತರೆ ಕಚ್ಛಾವಸ್ತುಗಳನ್ನು ಬಳಸುತ್ತಿದ್ದರಿಂದ ಪರಿಸರ ಮಾಲಿನ್ಯ ಉಂಟಾಗುತಿತ್ತು. ಮಹಿಳೆಯರು ಕಟ್ಟಿಗೆಗಳನ್ನು ಸಂಗ್ರಹಿಸಲು ದಿನಗಟ್ಟಲೇ ಸಮಯ ಕಳೆಯುತ್ತಿದ್ದರು. ಈ ಯೋಜನೆಯಲ್ಲಿ ಮಹಿಳೆಯರು ಯಾವುದೇ ಮಾಲಿನ್ಯವಿಲ್ಲದೆ ಉತ್ತಮ ವಾತಾವರಣದಲ್ಲಿ ಕಡಿಮೆ ಅವಧಿಯಲ್ಲಿ ಅಡುಗೆ ಕೆಲಸವನ್ನು ಮುಗಿಸಿ, ಇತರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಚ್ಚಿನ ಆದಾಯ ಗಳಿಸುವ ಮೂಲಕ ಆರ್ಥಿಕವಾಗಿ ಸಧೃಢರನ್ನಾಗುವಂತೆ ಮಾಡಿದೆ ಎಂದು ವಿವರಿಸಿದರು.

ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿಮಾಡುವಾಗ ಹಿಂದಿನ ಯುಪಿಯ ಸರ್ಕಾರವು 445 ಪೆಟ್ರೋಲ್ ಪಂಪ್‍ಗಳನ್ನು ದಲಿತರಿಗೆ ನೀಡಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ 1200 ಪೆಟ್ರೋಲ್ ಪಂಪ್‍ಗಳನ್ನು ದಲಿತ ಕುಟುಂಬದ ಸದಸ್ಯರಿಗೆ ನೀಡಿದ್ದೇವೆ. ಈ ಯೋಜನೆಯಲ್ಲಿ ಶೇಕಡ 45 ರಷ್ಟು ದಲಿತ ಮತ್ತು ಬಡಕುಟುಂಬದ ಒಟ್ಟು 1300 ಕುಟುಂಬಗಳಿಗೆ ಎಲ್‍ಪಿಜಿ ಸಂಪರ್ಕವನ್ನು ನೀಡಿದ್ದೇವೆಂದು ತಿಳಿಸಿದರು. 2014ರ ತನಕ ಒಟ್ಟು 13 ಕೋಟಿ ಕುಟುಂಬಗಳು ಎಲ್‍ಪಿಜಿ ಸಂಪರ್ಕವನ್ನು ಹೊಂದಿತ್ತು. ಅಂದರೆ ಒಟ್ಟು 60 ವರ್ಷಗಳಲ್ಲಿ ಕೇವಲ 13 ಕೋಟಿ ಕುಟುಂಬಗಳು ಮಾತ್ರವೇ ಸಂಪರ್ಕವನ್ನು ಪಡೆದುಕೊಂಡಿದೆ. ಯುಪಿಎ ಸರಕಾರದ ಅವಧಿಯಲ್ಲಿ ಕೇವಲ ಶ್ರೀಮಂತ ಕುಟುಂಬಗಳಿಗೆ ಮಾತ್ರವೇ ಎಲ್‍ಪಿಜಿ ಸಂಪರ್ಕ ನೀಡಲಾಗಿದ್ದು ಈ ಸಂದರ್ಭದಲ್ಲಿ ಯಾವ ಬಡತನದವರನ್ನು ಅಭಿವೃದ್ಧಿ ಮಾಡಿಲ್ಲ ಎನ್ನುವುದಕ್ಕೆ ಜ್ವಲಂತ ಉದಾಹರಣೆ ಕಳೆದ 60 ವರ್ಷದಲ್ಲಿ 12 ಕೋಟಿ ಎಲ್‍ಪಿಜಿ ಗ್ಯಾಸ್ ವಿತರಣೆಯಲ್ಲೇ ತಿಳಿದುಕೊಳ್ಳಬಹುದು!!.

ಉರುವಲು ಆಧಾರಿತ ಒಲೆಗಳು ಮಹಿಳೆಯರ ಆಯುಷ್ಯವನ್ನೇ ಮುಕ್ಕುತ್ತಿತ್ತು. ಅವರ ಜೀವನ ಮಟ್ಟವನ್ನೇ ಶಿಥಿಲಗೊಳಿಸುತ್ತಿತ್ತು. ಉಜ್ವಲ ಯೋಜನೆ ಎಲ್ಲೆಡೆ ಪರಿಣಾಮಕಾರಿಯಾಗಿ ಜಾರಿಯಾದರೆ ಇದೊಂದು ದೊಡ್ಡ ಆರೋಗ್ಯ ರಕ್ಷೆ ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಕೇವಲ ಹೆಣ್ಣು ಮಕ್ಕಳಷ್ಟೇ ಅಲ್ಲ; ಇಡೀ ಕುಟುಂಬದ ಜೀವನ ಮಟ್ಟ ಸುಧಾರಣೆಯಲ್ಲೂ ಗಣನೀಯ ಕೊಡುಗೆ ನೀಡಬಲ್ಲದು. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಸಿಲಿಂಡರ್ ಪೂರೈಕೆಯ ಉದ್ಯೋಗ ಕೂಡ ಉಂಟಾಗುತ್ತದೆ.

ಕೃಪೆ : ಪಬ್ಲಿಕ್ ಟಿವಿ

  • ಪವಿತ್ರ
Tags

Related Articles

Close