ಪ್ರಚಲಿತ

ಆಮಿಷಕ್ಕೆ ಬಲಿಯಾಗಿ ‘ಮೋದಿ’ ಎಂಬ ಅತ್ಯಮೂಲ್ಯ ರತ್ನವನ್ನು ಕಳೆದುಕೊಳ್ಳದಿರಿ

ಆಮಿಷಕ್ಕೆ ಬಲಿಯಾಗಿ ‘ಮೋದಿ’ ಎಂಬ ಅತ್ಯಮೂಲ್ಯ ರತ್ನವನ್ನು ಕಳೆದುಕೊಳ್ಳದಿರಿ

ಪ್ರಧಾನಿ ಮೋದಿ ಅವರು ಈ ದೇಶದ ಆಡಳಿತ ಚುಕ್ಕಾಣಿ ಹಿಡಿದ ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಅಭಿವೃದ್ಧಿಯ ಮಹಾಪೂರವೇ ಹರಿದಿದೆ. ಇದರಲ್ಲಿ ಪ್ರಧಾನಿ ಮೋದಿ ವಿರೋಧಿಗಳಿಗೂ ಎಳ್ಳಷ್ಟೂ ಸಂದೇಹ ಇರಲಿಕ್ಕಿಲ್ಲ.

ವಿರೋಧಿಗಳು ಬಾಯಲ್ಲಿ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ಬಗ್ಗೆ ಏನೇ ಹೇಳಿದರೂ, ಅವರೊಳಗಿನ ಭಯ ಏನೆಂದರೆ ‘ಪ್ರಧಾನಿ ಮೋದಿ ಇವರ ಸಕಾರಾತ್ಮಕ, ಅಭಿವೃದ್ಧಿ‌ಗೆ ಪೂರಕವೆನಿಸಿದ, ಎಲ್ಲರಿಂದಲೂ ಸಮ್ಮತವಾದ ಆಡಳಿತದ ಅಲೆಯ ರಭಸಕ್ಕೆ, ಏನೂ ಕಡಿದು ಕಟ್ಟೆ ಹಾಕದೆ, ಕೇವಲ ಪ್ರಧಾನಿ ಮೋದಿ ಮತ್ತು ಬಿಜೆಪಿಯ ವಿರುದ್ಧ ಅಪಪ್ರಚಾರ ಮಾಡುವುದರಲ್ಲೇ ಕಾಲ‌ಕಳೆದ ನಮ್ಮ ಮತ ವಿರೋಧಿಗಳು ಕೊಚ್ಚಿ ಹೋಗಬಹುದೇನೋ ಎಂಬುದು.

ಪ್ರಧಾನಿ ಮೋದಿ ಅವರು ಈ ದೇಶಕ್ಕಾಗಿ, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡವರು. ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ಈ ದೇಶದ ತಳ ಮಟ್ಟದಲ್ಲಿ ಸಂಕಷ್ಟದ ಬದುಕು ನಡೆಸುತ್ತಿದ್ದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹೀಗೆ ಎಲ್ಲಾ ರೀತಿಯಿಂದಲೂ ಮೇಲಕ್ಕೆತ್ತಲು ಸರ್ವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿ, ಕಾರ್ಯಗತಗೊಳಿಸಿ, ಸಮರ್ಥವಾಗಿ ಯಶಸ್ವಿಗೊಳಿದವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ದೇಶದ ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಅದೆಷ್ಟೋ ಹೊಸ ಹೊಸ ನೀತಿಗಳನ್ನು ರೂಪಿಸಿದವರು. ಕೃಷಿಕರು, ಬಡವರಿಗೆ ನೆಲೆ ಕಲ್ಪಿಸಲು ಸೂಕ್ತ ಯೋಜನೆಗಳನ್ನು ಜಾರಿಗೆ ತಂದವರು.

ಹಾಗೆಯೇ ಈ ದೇಶಕ್ಕೆ ಉತ್ತಮ ರಸ್ತೆ, ದೇಶದ ಕುಗ್ರಾಮಗಳೂ ಸೇರಿದಂತೆ ಎಲ್ಲ ಮನೆಗಳಿಗೂ ವಿದ್ಯುತ್, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರನ್ನು ಪೈಪ್ ಲೈನ್ ಮೂಲಕ ಎಲ್ಲರಿಗೂ ಒದಗಿಸಿದ್ದು, ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವುದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಯೋಜನೆ, ಕೃಷಿಕರ ಅಭಿವೃದ್ಧಿಗಾಗಿ ಯೋಜನೆಗಳು, ಎಲ್ಲರಿಗೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡುವ ಮೂಲಕ ಸರ್ಕಾರದ ಎಲ್ಲಾ ಯೋಜನೆಗಳ ಹಣವನ್ನು ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡುವ ಮೂಲಕ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಂಡದ್ದು, ಸ್ವ ಉದ್ಯೋಗಾಕಾಂಕ್ಷಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ದೇಶದ ಸಾಮಾನ್ಯ ಜನರಿಗೂ ಭಾರತದ ಪ್ರತಿಷ್ಟಿತ ಪುರಸ್ಕಾರಗಳು ದೊರೆಯುವಂತೆ ಮಾಡಿದ್ದು ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ದೇಶದ ಅಭಿವೃದ್ಧಿಗೆ ದಾರಿಯನ್ನು ನಿರ್ಮಾಣ ಮಾಡಿಕೊಟ್ಟ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ.

ಅಷ್ಟೇ ಅಲ್ಲದೆ ಕಳೆದ ಹತ್ತು ವರ್ಷಗಳಿಗೂ ಮೊದಲು ಭಾರತವನ್ನು ಹೀನವಾಗಿ ಕಾಣುತ್ತಿದ್ದ ವಿದೇಶಗಳ ಮುಂದೆ ಭಾರತದ ಶಕ್ತಿ ಪ್ರದರ್ಶನ ಮಾಡಿದ್ದು, ಆ ಮೂಲಕ ಇಂದು ಎಲ್ಲಾ ರಾಷ್ಟ್ರಗಳಿಗೂ ಭಾರತದ ಸ್ನೇಹ ಬೇಕಾಗಿರುವುದು ಸಹ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಫಲವಾಗಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೊರೋನಾ ಸಂದರ್ಭದಲ್ಲಿ ಜಗತ್ತು ಆರ್ಥಿಕವಾಗಿ ಹತೋಟಿ ಕಳೆದುಕೊಂಡು ಪರಿತಪಿಸುತ್ತಿದ್ದರೆ, ಭಾರತ ಮಾತ್ರ ತನ್ನ ಆರ್ಥಿಕತೆಯನ್ನು ಮರು ಸ್ಥಾಪನೆ ಮಾಡಲು ಯಶಸ್ವಿಯಾಯಿತು ಎಂದರೆ ಅದರ ಹಿಂದಿನ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇಂತಹ ನಾಯಕನ ಕಾರಣಕ್ಕೆ ಇಂದು ಭಾರತದ ಅಭಿವೃದ್ಧಿಯ ವೇಗ ವಿಶ್ವದ ಅಚ್ಚರಿಗೆ ಕಾರಣವಾಗಿರುವುದು. ಮಾತ್ರವಲ್ಲ, ಭಾರತ ವಿಶ್ವವಂದ್ಯವಾಗುತ್ತಿರುವುದು.

ಪ್ರಧಾನಿ ಮೋದಿ ಅವರಿಗೆ ಸ್ವಾತಂತ್ರ್ಯದ ಶತ ಸಂಭ್ರಮದಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಬೇಕು ಎನ್ನುವ ಮಹದಾಸೆ ಇದೆ. ಅದಕ್ಕಾಗಿ ಅವರ ನೇತೃತ್ವದ ಸರ್ಕಾರ ದಣಿವರಿಯದೆ ದುಡಿದಿದೆ. ಪ್ರಗತಿಯ ವೇಗ ಮತ್ತಷ್ಟು ಹೆಚ್ಚಾಗಲು ಮತ್ತೆ ನಾವು ಪ್ರಧಾನಿ ಮೋದಿ ಅವರಿಗೆಯೇ ಈ ದೇಶದ ಆಡಳಿತ ಚುಕ್ಕಾಣಿ ನೀಡಬೇಕಿದೆ. ವಿರೋಧ ಪಕ್ಷಗಳ ಆಮಿಷಗಳಿಗೆ ಬಲಿಯಾಗಿ ನಾವೇನಾದರೂ ಪ್ರಧಾನಿ ಮೋದಿ ಅವರಿಗೆ ಮತ ನೀಡದೇ ಹೋದೆವು, ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡದೆ ಹೋದಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿ ಒಕ್ಕೂಟ ಈ ದೇಶದ ಆಡಳಿತಕ್ಕೇರಿ ದೇಶವನ್ನು ಗುಡಿಸಿ ಗುಂಡಾಂತರ ಮಾಡುತ್ತದೆ. ನಾವು ಮತ್ತೆ ಬಿಕ್ಷುಕರಾಗಿಯೇ ಬದುಕಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯ ಬೇಡ.

ಹಾಗಾಗಿ ವಿರೋಧಿಗಳ ಆಮಿಷಕ್ಕೆ ಬಲಿಯಾಗಿ ನಾವು ಕರ್ನಾಟಕವನ್ನು ಸಂಕಷ್ಟಕ್ಕೆ ದೂಡಿಕೊಂಡಿದ್ದೇವೆ. ಇಲ್ಲಿ ಹಿಂದೂಗಳಿಗೆ ನೆಲೆ ಬೆಲೆ ಇಲ್ಲದಾಗಿದೆ. ಇದೇ ಪರಿಸ್ಥಿತಿ ದೇಶಕ್ಕೆ ಬಾರದೇ ಇರಬೇಕಾದರೆ ಕೇಂದ್ರದ ಆಡಳಿತ ಪ್ರಧಾನಿ ಮೋದಿ ಅವರ ಕೈಯಲ್ಲಿ ಭದ್ರವಾಗಿ ಇರಬೇಕು. ಹಾಗಾಗಿ ಮೋದಿ ವಿರೋಧಿಗಳ ಆಮಿಷಕ್ಕೆ ಬಲಿಯಾಗಿ ‘ಮೋದಿ’ ಎಂಬ ಅಮೂಲ್ಯ ರತ್ನವನ್ನು ಕಳೆದುಕೊಳ್ಳದಿರೋಣ. ಮತ್ತೆ ಮೋದಿ ಅವರನ್ನೇ ಪ್ರಧಾನಿ ಪಟ್ಟಕ್ಕೆ ಏರಿಸುವ ಮೂಲಕ ಸಶಕ್ತ, ಅಭಿವೃದ್ಧಿ ಹೊಂದಿದ ದೇಶ ನಿರ್ಮಾಣಕ್ಕೆ ನಮ್ಮ ಕೊಡುಗೆ ನೀಡೋಣ.

Tags

Related Articles

Close