ಪ್ರಚಲಿತ

ತೈಲ ಸಂಪನ್ನ ದೇಶಗಳ ಸೊಕ್ಕು ಮುರಿಯಲು ಒಂದಾದ ಭಾರತ-ಚೀನಾ!! ತೈಲ ಬೆಲೆ ಏರಿಕೆಗೆ ತಿರುಗೇಟು ನೀಡಲು OPEC ವಿರುದ್ದ ದ್ವಿದೇಶಿ ಬ್ಲಾಕ್ ರಚಿಸಲು ಸಮ್ಮತಿ ನೀಡಿದ ಡ್ರಾಗನ್!!

ತೈಲ ರಫ್ತು ಮಾಡುವ ದೇಶಗಳ ಸೊಕ್ಕು ಮುರಿಯಲು ಭಾರತ ಮತ್ತು ಚೀನಾ ತಮ್ಮ ವೈಯಕ್ತಿಕ ಸ್ಪರ್ಧೆ ಮರೆತು ಒಂದಾಗಲಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪಾರಂಪರಿಕ ಪ್ರತಿ ಸ್ಪರ್ಧಿಗಳಾದ ಭಾರತ ಮತ್ತು ಚೀನಾ ತಮ್ಮ ಸ್ಪರ್ಧೆ ಬದಿಗಿರಿಸಿ ಒಟ್ಟಾಗಿ ಒಪೆಕ್ ದೇಶಗಳ ವಿರುದ್ದ ದ್ವಿದೇಶಿ ಬ್ಲಾಕ್ ರಚಿಸಲಿದೆ ಎಂದು ವರದಿ ತಿಳಿಸಿದೆ. ತೈಲ ಕೊಳ್ಳುವವರ ಕ್ಲಬ್ ರೂಪಿಸಲು ಬೀಜಿಂಗ್ನಲ್ಲಿ ಮಾತುಕತೆ ನಡೆಸಿದ ಎರಡೂ ಪಕ್ಷಗಳು ಸೋಮವಾರ ಈ ನಿರ್ಧಾರಕ್ಕೆ ಬಂದಿವೆ ಎನ್ನಲಾಗಿದೆ.

ಏನಿದು OPEC?

Organization of the Petroleum Exporting Countries:ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಘಟನೆ. ಇಂದೊಂದು ಅಂತರಸರ್ಕಾರಿ ಸಂಸ್ಥೆಯಾಗಿದೆ. ಇದರ ಕೇಂದ್ರ ಆಸ್ಟ್ರಿಯಾದ ವಿಯೆನ್ನಾದಲ್ಲಿದೆ ಮತ್ತು ಇದರಲ್ಲಿ ಆಲ್ಜೀರಿಯಾ, ಅಂಗೋಲ, ಈಕ್ವೆಡಾರ್, ಈಕ್ವಟೋರಿಯಲ್ ಗಿನಿಯಾ, ಗಾಬೊನ್, ಇರಾನ್, ಇರಾಕ್, ಕುವೈತ್, ಲಿಬಿಯಾ, ನೈಜೀರಿಯಾ, ಕತಾರ್, ಸೌದಿ ಅರೇಬಿಯಾ ಮುಂತಾದ ತೈಲ ರಫ್ತು ಮಾಡುವ ದೇಶಗಳಿವೆ. ಈ ದೇಶಗಳು ಸರ್ವಾಧಿಕಾರಿ ಧೋರಣೆ ತೋರುತ್ತಾ ಮನಬಂದ ಬೆಲೆಗೆ ಏಷ್ಯಾದ ದೇಶಗಳಿಗೆ ತೈಲ ರಫ್ತು ಮಾಡುತ್ತವೆ ಮತ್ತು ಈ ತಿಂಗಳ ಅಂತ್ಯದೊಳಗೆ ಉತ್ಪಾದನಾ ಕಡಿತ ಒಪ್ಪಂದವನ್ನು ರದ್ದುಗೊಳಿಸುವ ನಿರ್ಧಾರ ಮಾಡಿವೆ.

ಇದರ ವಿರುದ್ದವಾಗಿ ಭಾರತ-ಚೀನಾ ಒಂದಾಗಿ ತೈಲ ಕೊಳ್ಳುವವರ ಕ್ಲಬ್ ರೂಪಿಸಿ ಸಮಂಜಸವಾದ ಬೆಲೆಗೆ ತೈಲಕೊಳ್ಳಲು ಚರ್ಚೆ ನಡೆಸಲಿವೆ.

ಭಾರತ-ಚೀನಾಕ್ಕೆ ಏನು ಲಾಭ?

ಕಳೆದ ವರ್ಷದ ವರದಿಯ ಪ್ರಕಾರ ವಿಶ್ವ ತೈಲ ಸೇವನೆಯ ಸುಮಾರು 17% ರಷ್ಟು ಭಾರತ ಮತ್ತು ಚೀನಾ ದೇಶಗಳೆ ಖರೀದಿ ಮಾಡಿವೆ. ಪ್ರತ್ಯೇಕವಾಗಿ ತೈಲ ಖರೀದಿಸುವ ಬದಲು ಜಂಟಿಯಾಗಿ ಖರೀದಿಸುವುದರಿಂದ ಭಾರತ ಮತ್ತು ಚೀನಾ ಎರಡೂ ದೇಶಗಳಿಗೆ ಕಡಿಮೆ ದರಕ್ಕೆ ತೈಲ ಸಿಗುವಂತಾಗುತ್ತದೆ. ಕಚ್ಚಾ ತೈಲ ಖರೀದಿ ನಡೆಸುವಾಗ ಒಪೆಕ್ ದೇಶಗಳ ಜೊತೆ ಚರ್ಚೆ ಮಾಡಲು ಸುಲಭವಾಗುತ್ತದೆ. ತರಕಾರಿ ತೆಗೆದುಕೊಳ್ಳಲು ಒಬ್ಬರೆ ಹೋಗುವುದಕ್ಕಿಂತ ನೆರೆಮನೆಯವರನ್ನೂ ಕರೆದುಕೊಂಡು ಹೋಗಿ ತರಕಾರಿ ಅಂಗಡಿಯವನ ಜೊತೆ ಚರ್ಚೆ ಮಾಡಿ ಕಮ್ಮಿ ಬೆಲೆಗೆ ತರಕಾರಿ ತೆಗೆದುಕೊಂಡು ಬರುವಂತೆಯೆ ಇದು ಕೂಡಾ. ಇದರಿಂದ ಇಬ್ಬರಿಗೂ ಲಾಭ!!

ವಿಶೇಷವೆಂದರೆ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಈ ವಿಚಾರವಾಗಿ ಚೀನಾದ ರಾಜ್ಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಎರಡು ತಿಂಗಳೊಳಗೆ ಭಾರತ ಮತ್ತು ಚೀನಾದ ತೈಲ ಕಂಪೆನಿಗಳ ನಡುವೆ ಒಪ್ಪಂದ ಏರ್ಪಟ್ಟಿದೆ. ಈ ವಿಷಯದಲ್ಲಿ ಎರಡೂ ದೇಶಗಳು ಪೈಪೋಟಿ ನಡೆಸುವ ಬದಲು ಒಟ್ಟಿಗೆ ಕಾರ್ಯನಿರ್ವಹಿಸಲಿವೆ ಎಂದು ಮೂಲಗಳು ತಿಳಿಸಿವೆ. ಅಮೇರಿಕಾದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆ ಉತ್ತುಂಗದಲ್ಲಿರುವ ಈ ಕಾಲ ಘಟ್ಟದಲ್ಲಿ ಒಪೆಕ್ ದೇಶಗಳ ಜೊತೆ ತೈಲ ಬೆಲೆಯಲ್ಲಿ ಚರ್ಚೆ ನಡೆಸಲು ಇದು ಸಕಾಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಮೇರಿಕಾವನ್ನು ಮುಂದಿಟ್ಟುಕೊಂಡು ಒಪೆಕ್ ದೇಶಗಳು ತಮ್ಮ ಬೇಡಿಕೆಗಳಿಗೆ ಒಪ್ಪುವಂತೆ ಮಾಡಲು ಭಾರತ-ಚೀನಾ ಪ್ರಯತ್ನಿಸಬಹುದು.

ಬದಲಾದ ಸನ್ನಿವೇಶದಲ್ಲಿ ತೈಲ ಮಾರುಕಟ್ಟೆಯು ಏಷ್ಯಾಗೆ ಸ್ಥಳಾಂತರಿತವಾಗಿದೆ. ಆರ್ಥಿಕವಾಗಿ ನಾಗಾಲೋಟದಲ್ಲಿರುವ ಭಾರತ ಮತ್ತು ಚೀನಾದ ತೈಲ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಅಂತಹ ಸಂಧರ್ಭದಲ್ಲಿ ಎರಡೂ ದೇಶಗಳು ವ್ಯಾಪಾರ ಸಂಬಂಧವನ್ನು ಗಟ್ಟಿಗೊಳಿಸುತ್ತಿವೆ. ಕಡಿಮೆ ಬೆಲೆ ತೈಲ ಸಿಕ್ಕುವಂತಾದರೆ ನಮಗೂ ಲಾಭವೆ. ತೈಲ ಬೆಲೆ ಏರಿತು ಎಂದು ಮೋದಿಯನ್ನು ದೂರುವವರು ಕಡಿಮೆ ಬೆಲೆಗೆ ದೊರೆಯುವ ಪೆಟ್ರೋಲ್-ಡೀಸಲ್ ಅನ್ನು ಕುಡಿಯಲೂಬಹುದು ಅದರಿಂದ ಸ್ನಾನನೂ ಮಾಡಬಹುದು! ಒಟ್ಟಿನಲ್ಲಿ ಮೋದಿ ಏನೆ ನಿರ್ಧಾರ ತೆಗೆದುಕೊಂಡರೂ ಅದರಲ್ಲಿ ದೇಶದ ಹಿತವೆ ಅಡಗಿರುತ್ತದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ದೊರೆತಿದೆ.

-ಶಾರ್ವರಿ

Tags

Related Articles

Close