ಪ್ರಚಲಿತ

ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪಾಕ್‌ಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿದ ಭಾರತ

ಎಷ್ಟೇ ಹೀನಾಯ ಪರಿಸ್ಥಿತಿಗೆ ಪಾಕಿಸ್ತಾನ ತಲುಪಿದರೂ, ತನ್ನ ನರಿ ಬುದ್ಧಿ ಮಾತ್ರ ಬಿಡಲೊಲ್ಲದು. ಆರ್ಥಿಕ, ಆಹಾರ ಸಂಕಷ್ಟಕ್ಕೆ ತುತ್ತಾದರೂ ಬೇರೆ ದೇಶಗಳ ಮೇಲೆ ಮಸಲತ್ತು ಮಾಡುವ ದುರ್ಬುದ್ಧಿ ಪಾಕ್‌ಗೆ ಇನ್ನೂ ಕಡಿಮೆಯಾಗಿಲ್ಲ.

ಭಾರತದ ವಿರುದ್ಧ ಸದಾ ಕಾಲ ಆರೋಪ ಮಾಡುವುದನ್ನೇ ಸಾಧನೆ ಎಂದುಕೊಂಡಿರುವ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ವೇದಿಕೆಯಲ್ಲಿ ನಿಂತು ಭಾರತ ಖಡಕ್ ಉತ್ತರ ನೀಡಿದೆ.

ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಆರೋಪ ಮಾಡುವ ಮುನ್ನ ನೆರೆಯ ರಾಷ್ಟ್ರಗಳು ತಮ್ಮ ವ್ಯವಹಾರಗಳನ್ನು ನೋಡಿಕೊಳ್ಳಬೇಕು ಎಂದು ಪಾಕ್‌ಗೆ ಭಾರತ ಹೇಳಿದೆ. ಜಮ್ಮು ಕಾಶ್ಮೀರವನ್ನು ಭಾರತ ಆಕ್ರಮಣ ಮಾಡಿದೆ ಎಂದು ಪಾಕ್ ಹೇಳಿತ್ತು. ಈ ಹೇಳಿಕೆಗೆ ಭಾರತ ವಿರೋಧ ವ್ಯಕ್ತಪಡಿಸಿದೆೆ.

ಈ ಸಂಬಂಧ ಪಾಕ್ ವಿರುದ್ಧ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರಾಯಬಾರಿ ರುಚಿರಾ ಕಾಂಬೋಜ್ ಮಾತನಾಡಿದ್ದು, ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಹಾಗೆ ಭಾರತದ ವಿರುದ್ಧ ಪಾಕ್ ಈ ರೀತಿಯಾಗಿ ಹೇಳಿಕೆ ನೀಡಿರುವುದು ಹಾನಿಕಾರಕ ಮತ್ತು ದಾರಿ ತಪ್ಪಿಸುವ ಹುನ್ನಾರವಾಗಿದೆ ಎಂದು ಕಿಡಿ ಕಾರಿದ್ದಾರೆ.

ಒಟ್ಟಿನಲ್ಲಿ ಪಾಕಿಸ್ತಾನ ಉಸಿರಾಡುವುದಕ್ಕೂ ತ್ರಾಣವಿಲ್ಲದ ಇಂತಹ ಪರಿಸ್ಥಿತಿಯಲ್ಲಿಯೂ ಭಾರತದ ವಿರುದ್ಧ ಬೇಕಾಬಿಟ್ಟಿಯಾಗಿ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಕೆಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನಕ್ಕೆ ಅದ್ಯಾವಾಗ ಬುದ್ಧಿ ಬರುವುದೋ ದೇವರೇ ಬಲ್ಲ.

Tags

Related Articles

Close