ಪ್ರಚಲಿತ

ಭಾರತ-ಪಾಕಿಸ್ತಾನ ಗಡಿಯಲ್ಲಿ “ಅದೃಶ್ಯ ಪ್ರಹರಿಗಳನ್ನು” ನಿಯೋಜಿಸಿ ಉಗ್ರರ ಮಾರಣ ಹೋಮ ನಡೆಸಲಿದೆ ಮೋದಿ ಸರಕಾರ!! ಉಗ್ರರನ್ನು ಯಮಪುರಿಗಟ್ಟುವ ‘ಆಪರೇಶನ್ ಪಾಯಿಂಟ್ ಬ್ಲಾಂಕ್ ಯೋಜನೆ ಕೈಗೊಳ್ಳಲಿದೆ ಸೇನೆ!

ಭಾರತ- ಪಾಕಿಸ್ತಾನ ಗಡಿಯಲ್ಲಿ ಉಗ್ರರ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಕೇಂದ್ರದಲ್ಲಿ ಮೋದಿ ಸರಕಾರ ಬಂದ ಮೇಲೆ ಭಾರತದ ಗಡಿ ದಾಟಲಾರದೆ ಚಡಪಡಿಸುತ್ತಿರುವ ಉಗ್ರರು ನಮ್ಮ ಸೈನಿಕರ ಮೇಲೆ ದಿನ ನಿತ್ಯ ದಾಳಿ ನಡೆಸುತ್ತಿದ್ದಾರೆ. ಭಾರತವನ್ನು ರಕ್ಷಿಸಲು ಮಹಾ ಗೋಡೆಯಂತೆ ನಿಂತಿರುವ ಭಾರತೀಯ ಗಡಿ ರಕ್ಷಣಾ ಪಡೆಯ ಅಬೇಧ್ಯ ಕೋಟೆಯನ್ನು ಬೇಧಿಸುವುದು ಅಸಾಧ್ಯ. ಈ ಗೋಡೆಯನ್ನು ಇನ್ನೂ ಒಂದು ಹೆಜ್ಜೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಅದೃಶ್ಯ ಪ್ರಹರಿಗಳನ್ನು ನಿಯೋಜಿಸಲಿದೆ ಮೋದಿ ಸರಕಾರ.

ಯಾರೀ ಅದೃಶ್ಯ ಪ್ರಹರಿಗಳು?

ಭಾರತೀಯ ಗಡಿ ರಕ್ಷಣಾ ಪಡೆ(BSF)ಯ ಸೈನಿಕರ ಸ್ನೈಪರ್ ಪಡೆಯನ್ನೆ ಅದೃಶ್ಯ ಪ್ರಹರಿಗಳೆನ್ನುತ್ತಾರೆ. ಶತ್ರುಗಳನ್ನು ಹೊಂಚು ಹಾಕಿ ಕೊಲ್ಲುವುದರಲ್ಲಿ ಈ ಸ್ನೈಪರ್ ಗಳದ್ದು ಎತ್ತಿದ ಕೈ. ಸ್ನೈಪರ್ ಗಳ ಇರುವಿಕೆಯ ಬಗ್ಗೆ ಶತ್ರುಗಳಿಗೆ ಸುಳಿವು ಕೂಡಾ ಇರುವುದಿಲ್ಲ!! ಕಲ್ಲಿನ ಮಧ್ಯೆ ಕಲ್ಲಿನಂತೆ, ಹುಲ್ಲಿನ ಮಧ್ಯೆ ಹುಲ್ಲಿನಂತೆ ವೇಷ ಮರೆಸಿ ಗಂಟೆ ಗಟ್ಟಲೆ ನಿಂತಲ್ಲೇ ನಿಂತು ಅಥವಾ ಕುಳಿತಲ್ಲೇ ಕುಳಿತು ಹೊಂಚು ಹಾಕುತ್ತಿರುತ್ತಾರೆ ಸ್ನೈಪರ್ ಗಳು. ತಮ್ಮ ಶತ್ರುವಿನ ಆಗಮನಕ್ಕಾಗಿ ಅನ್ನ-ನೀರು-ನಿದ್ದೆ ಬಿಟ್ಟು ಕಣ್ಣ ರೆಪ್ಪೆ ಮಿಟುಕಿಸದೆ ಕಾಯುವ ಈ ಸ್ನೈಪರ್ ಗಳ ಸಹನಾ ಶಕ್ತಿ ಎಂಥವರನ್ನೂ ದಂಗು ಬಡಿಸುತ್ತದೆ.

ಇರುವೆ ಕಚ್ಚಿದರೂ, ಮುಳ್ಳು ಚುಚ್ಚಿದರೂ ಸ್ನೈಪರ್ ಗಳು ಮಿಸುಕಾಡುವಂತಿಲ್ಲ, ತಮ್ಮ ಇರುವಿಕೆಯ ಸುಳಿವೂ ಶತ್ರುಗಳಿಗೆ ಗೊತ್ತಾಗದಂತೆ ಉಸಿರು ಬಿಗಿ ಹಿಡಿದು ಕಾದು ಕುಳಿತಿರಬೇಕು. ಶತ್ರು ಕಣ್ಣಿಗೆ ಬಿದ್ದ ಕೂಡಲೆ ಆತನ ಮೇಲೆ ಗುಂಡು ಹಾರಿಸಬೇಕು. ಅದು ಕೂಡಾ ಯದ್ವಾ ತದ್ವ ಗುಂಡು ಹಾರಿಸುವಂತಿಲ್ಲ. ಒಂದು ಶತ್ರುವಿಗೆ ಒಂದು ಬುಲೆಟ್!! ಇದು ಸ್ನೈಪರ್ ನಿಯಮ. ಆ ಒಂದು ಬುಲೆಟ್ ಶತ್ರುವನ್ನು ನೇರವಾಗಿ ಯಮಲೋಕಕ್ಕೆ ಕಳುಹಿಸಬೇಕು. ಅಪ್ಪಿ ತಪ್ಪಿ ಆ ಬುಲೆಟ್ ತನ್ನ ಲಕ್ಷ್ಯವನ್ನು ಬೇಧಿಸದಿದ್ದರೆ ಅಲ್ಲಿಗೆ ಸ್ನೈಪರ್ ಕಥೆ ಮುಗಿಯಿತು.

ಶತ್ರುಗಳಿಗೆ ಸ್ನೈಪರ್ ಇರುವಿಕೆ ಗೊತ್ತಾದರೆ ಅವರು ಸುಮ್ಮನೆ ಬಿಡುತ್ತಾರೆಯೆ? ಆ ಸೈನಿಕನ ಕಥೆ ಮುಗಿದಂತೆಯೆ. ಇತ್ತೀಚಿನ ದಿನಗಳಲ್ಲಿ ಉಗ್ರರು ಎಕೆ47 ಬಂದೂಕುಗಳಲ್ಲಿ ಸ್ಟೀಲ್ ಗುಂಡುಗಳನ್ನು ಉಪಯೋಗಿಸುತ್ತಿದ್ದಾರೆ ಎಂದು ವರದಿಯಗಿದೆ. ಈ ಸ್ಟೀಲ್ ಗುಂಡುಗಳು ಬುಲೆಟ್ ಪ್ರೂಫ್ ಜಾಕೆಟ್ ಅನ್ನು ಬೇಧಿಸುವ ಸಾಮರ್ಥ್ಯ ಹೊಂದಿರುವ ಕಾರಣ ಬುಲೆಟ್ ಪ್ರೂಫ್ ಜಾಕೆಟ್ ತೊಟ್ಟಿದ್ದರೂ ನಮ್ಮ ಸೈನಿಕರು ತಮ್ಮ ಪ್ರಾಣವನ್ನು ಕಳೆದು ಕೊಳ್ಳುವಂತಾಗಿದೆ. ಪಾಕಿಸ್ತಾನದ ಈ ಹಲಕಾ ಕೆಲಸಕ್ಕೆ ಚೀನಾ ನೆರವು ನೀಡುತ್ತಿದೆ ಎನ್ನಲಾಗಿದೆ.

ಅದಕ್ಕಾಗಿಯೆ ಶತ್ರುಗಳನ್ನು ಅವರದೆ ನೆಲದಲ್ಲಿ ಮಟ್ಟ ಹಾಕಲು ಗಡಿ ರಕ್ಷಣಾ ಪಡೆ ಸ್ನೈಪರ್ ತಂಡವನ್ನು ಸಜ್ಜುಗೊಳಿಸುತ್ತಲಿದೆ ಎಂದು ಹೇಳಲಾಗುತ್ತಿದೆ. ಸ್ನೈಪರ್ ಎನ್ನುವ ಹೆಸರು ಸ್ನೈಪ್ ಎನ್ನುವ ಹಕ್ಕಿಯಿಂದ ಬಂದಿದ್ದೆನ್ನಲಾಗುತ್ತದೆ. ಹೊಂಚು ಹಾಕಿ ತನ್ನ ಆಹಾರದ ಮೇಲೆ ತಟ್ಟನೆ ಎಗರುವುದು ಅದರ ಪ್ರವೃತ್ತಿ. ಥೇಟ್ ಸ್ನೈಪ್ ಹಕ್ಕಿಯಂತೆ ತನ್ನ ಶತ್ರುಗಳ ಮೇಲೆ ಅವರ ಅರಿವಿಲ್ಲಂದತೆಯೆ ಎಗರುವುದು ಸ್ನೈಪರ್ ಗಳ ಪ್ರವೃತ್ತಿ. ಭಾರತೀಯ ಸ್ನೈಪರ್ ಗಳ ಘೋಷ ವಾಕ್ಯ “The quick The dead”. ಭಾರತೀಯ ಸ್ನೈಪರ್ ಗಳು ಎಷ್ಟು ತ್ವರಿತವಾಗಿ ಆಕ್ರಮಣ ಮಾಡುತ್ತಾರೆಂದರೆ ಶತ್ರು ಬದುಕುಳಿಯುವ ಅವಕಾಶವೆ ಇರುವುದಿಲ್ಲ.

ಭಾರತ-ಪಾಕಿಸ್ತಾನದ ಗಡಿಯುದ್ದಕ್ಕೂ ಇಂತಹ ಸ್ನೈಪರ್ ಗಳನ್ನು ನಿಯೋಜಿಸಿ ಪಾಪಿ ಉಗ್ರರನ್ನು ಯಮ ಲೋಕಕ್ಕಟ್ಟುವ ‘ಆಪರೇಶನ್ ಪಾಯಿಂಟ್ ಬ್ಲಾಂಕ್’ ಯೋಜನೆಗೆ ಮೋದಿ ಸರಕಾರ ಸಜ್ಜಾಗುತ್ತಿದೆ ಎಂದು ಗುಪ್ತಚರದ ಮೂಲಗಳು ತಿಳಿಸಿವೆ ಎಂದು ಜೀ ಟಿವಿ ವರದಿ ಮಾಡಿದೆ. ಒಂದೆಡೆ ಭಾರತೀಯ ಸೇನೆಯ ಸೈನಿಕರು ಉಗ್ರರನ್ನು ಕಂಡ ಕೂಡಲೆ ‘ಶೂಟ್ ಅಟ್ ಸೈಟ್’ ಕೈಗೊಳ್ಳುತ್ತಿದ್ದರೆ, ಇನ್ನೊಂದೆಡೆ, ಸ್ನೈಪರ್ ಗಳು ಮರೆಯಲ್ಲಿ ನಿಂತು ಉಗ್ರರ ಮೇಲೆರಗಲಿದ್ದಾರೆ!! ‘ಆಪರೇಶನ್ ಆಲ್ ಔಟ್’ ಯೋಜನೆ ಜಾರಿಗೊಳಿಸಿರುವ ಸೇನೆ ಉಗ್ರರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುತ್ತಿದೆ. ಪಾಕಿಸ್ತಾನ ಪೋಷಿತ ಉಗ್ರರನ್ನು ಡೋಲಿನಂತೆ ಎರಡೂ ಕಡೆಯಿಂದಲೂ ಬಾರಿಸುವ ಯೋಜನೆಗೆ ಮೋದಿ ಸರಕಾರ ಸಜ್ಜಾಗಿದೆ. ಈ ಡೋಲಿನ ಶಬ್ದ ಜಗತ್ತಿಗೆ ಕೇಳಿಸುವ ಕಾಲ ಹತ್ತಿರ ಬಂದಿದೆ ಎಂದರೆ ತಪ್ಪಾಗಲಾರದು. ಡೋಲು ಪಾಕಿನದ್ದು, ಬಾರಿಸುತ್ತಿರುವುದು ನಮ್ಮ ಸೈನಿಕರು, ಕುಣಿಯುವುದು ದೇಶಭಕ್ತರು ಮತ್ತು ಅಳುತ್ತಿರುವುದು…… ನಿಮೆಗೆ ಗೊತ್ತಿರಬೇಕಲ್ಲ?

-ಶಾರ್ವರಿ

Tags

Related Articles

Close