ಪ್ರಚಲಿತ

ಹಿಂದೂ ರಾಷ್ಟ್ರವಾಗಲು ರಾಜಸ್ತಾನದಿಂದ ಮೊದಲ ಹೆಜ್ಜೆ!! ಆಡಳಿತಾತ್ಮಕ ಪರೀಕ್ಷೆಗಳಲ್ಲಿ ರಾಜಸ್ತಾನ ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರವನ್ನು ಕೇಳಿದರೆ ಹೆಮ್ಮೆ ಪಡುತ್ತೀರಾ!!

ತ್ರಿಪುರಾ ರಾಜ್ಯವು 25 ವರ್ಷಗಳ ಕಮ್ಯುನಿಸ್ಟರ ಆಡಳಿತಕ್ಕೆ ತುತ್ತಾಗಿ ಬೇಸತ್ತು ಹೋಗಿತ್ತಲ್ಲದೇ ಚೀನಾ ಪ್ರೇರಿತ ಎಡ ಪಂಥೀಯ ಸರ್ಕಾರ ಭಾರತದ ತ್ರಿಪುರಾ ರಾಜ್ಯವನ್ನು ಮಾತ್ರವಲ್ಲದೇ ಪಠ್ಯಪುಸ್ತಕದಲ್ಲಿಯೂ ಕಾರ್ಲ್ ಮಾಕ್ರ್ಸ್, ಹಿಟ್ಲರ್ ಗಳಿಂದಲೇ ತುಂಬಿಹೋಗಿತ್ತು. ಆದರೆ ಕಮ್ಯುನಿಸ್ಟರ ಆಡಳಿತಕ್ಕೆ ಸೆಡ್ಡು ಹೊಡೆದ ಬಿಜೆಪಿ ಸರ್ಕಾರವು ತ್ರಿಪುರಾದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಇತಿಹಾಸ ವಿಷಯದಲ್ಲಿ ಭಾರತೀಯ ಇತಿಹಾಸದ ಬಗ್ಗೆ ಹೊಸ ಪಠ್ಯಕ್ರಮಗಳನ್ನು ಸೇರಿಸುವ ಮೂಲಕ ಎಲ್ಲೆಡೆ ಸುದ್ದಿಯಾಗಿದ್ದರು!! ಆದರೆ ಇದೀಗ ರಾಜಸ್ತಾನ ಸರ್ಕಾರವು “ನಾಗರಿಕ ಸೇವಾ ಪರೀಕ್ಷೆ 2018” ಪಠ್ಯಕ್ರಮದಲ್ಲಿ ಸಾಮಾನ್ಯ ಜ್ಞಾನದ ಪತ್ರಿಕೆಯಲ್ಲಿ ಹೊಸ ವಿಷಯಗಳನ್ನು ಸೇರಿಸುವ ಮೂಲಕ ಸುದ್ದಿಯಾಗಿದೆ!!

ಹೌದು… ಭಾರತೀಯ ಪಠ್ಯಪುಸ್ತಗಳಲ್ಲಿ ಮೊಘಲರ ಇತಿಹಾಸವೇ ತುಂಬಿ ತುಳುಕಾಡುತ್ತಿದ್ದು, ಭಾರತದ ಇತಿಹಾಸವನ್ನು ಅರಿಯುವುದಕ್ಕಿಂತಲೂ ಹೆಚ್ಚಾಗಿ ಮೊಘಲರ ಇತಿಹಾಸವನ್ನೇ ತಿಳಿದಿದ್ದೇ ಹೆಚ್ಚು!! ಹೀಗಿರಬೇಕಾದರೆ, ಭಾರತೀಯ ಸಂಸ್ಕøತಿ, ಭಾರತದ ಇತಿಹಾಸ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರು, ಮುಂತಾದ ಅದೆಷ್ಟೋ ವಿಚಾರಗಳು ಭಾರತೀಯ ಪಠ್ಯಪುಸ್ತಕದಲ್ಲಿ ಮಾಯವಾಗಿ ಬರೀ ಮೊಘಲ್ ಸ್ರಾಮ್ಯಾಜ್ಯವೇ ತುಂಬಿಹೋಗಿತ್ತು!!! ನೆಹರೂರವರ ವಂಶಾಡಳಿತದ ಸರ್ಕಾರದಲ್ಲಿ ಮಕ್ಕಳಿಗೆ ಭಾರತದ ನೈಜ್ಯ ಇತಿಹಾಸವನ್ನು ತಿಳಿಸುವ ಯಾವುದೇ ಒಂದು ಕಾರ್ಯವನ್ನು ಮಾಡಲಿಲ್ಲ. ಅಷ್ಟೇ ಅಲ್ಲದೇ ಮದನ್ ಲಾಲ್ ಥಿಂಗ್ರಿ, ಬಟುಕೇಶ್ವರ ದತ್ತ್, ಖುದಿರಾಮ್ ಬೋಸ್ ಮುಂತಾದವರ ಸಾಹಸಗಾಥೆಗಳನ್ನೆಲ್ಲ ಮರೆ ಮಾಚಿಯೇ ಬಿಟ್ಟರು!!

ಆದರೆ ಕೆಂಪು ಪಕ್ಷದ ಆಡಳಿತಕ್ಕೆ ಬೇಸತ್ತಿರುವ ತ್ರಿಪುರಾದಲ್ಲಿ ಇತ್ತೀಚೆಗಷ್ಟೇ ವಿಧಾನಸಭೆಯಲ್ಲಿ ರಾಷ್ಟ್ರಗೀತೆ ಮೊಳಗಿಸುವ ಮೂಲಕ ಸುದ್ದಿಯಲ್ಲಿದ್ದು, ತದನಂತರ ತ್ರಿಪುರಾ ಪಠ್ಯಪುಸ್ತಕಗಳು ಕೇವಲ ಮಾರ್ಕ್‍ವಾದವನ್ನು ಪ್ರಚಾರಪಡಿಸುತ್ತಿದ್ದು, ಮಾವೋ, ರಷ್ಯಾ ಕ್ರಾಂತಿ, ಫ್ರೆಂಚ್ ಕ್ರಾಂತಿ, ನಾಝಿಸಂನ್ನು ಒಳಗೊಂಡಿರುವ ಈ ಪುಸ್ತಕಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆಯಾಗಲಿ ಅಥವಾ ಹಿಂದೂ ರಾಜರ ಬಗ್ಗೆಯಾಗಲಿ ಉಲ್ಲೇಖಗಳಿರಲಿಲ್ಲ. ಹಾಗಾಗಿ ತ್ರಿಪುರಾದ ನೂತನ ಸರ್ಕಾರವು ಮಹಾತ್ಮ ಗಾಂಧಿಯವರ ಬಗೆಗಿನ ಪಾಠವನ್ನಲ್ಲದೇ ಸುಭಾಷ್ ಚಂದ್ರ ಬೋಸ್, ರಾಣೀ ಲಕ್ಷ್ಮೀ ಬಾಯ್ ಅವರ ಪಠ್ಯಗಳನ್ನು ಸೇರಿಸಿ ಭಾರತದ ಇತಿಹಾಸದ ಬಗ್ಗೆ ಮಕ್ಕಳಿಗೆ ಅರಿವು ಮೂಡುವಂತೆ ಮಾಡಲು ಮುಂದಾಗಿರುವ ವಿಚಾರ ಗೊತ್ತೇ ಇದೆ!!

ಆದರೆ ಇದೀಗ, ರಾಜಸ್ತಾನ ನಾಗರಿಕ ಸೇವಾ ಪರೀಕ್ಷೆ 2018 ಪಠ್ಯಕ್ರಮದಲ್ಲಿ ಸಾಮಾನ್ಯ ಜ್ಞಾನದ ಪತ್ರಿಕೆಯಲ್ಲಿ ಭಗವದ್ಗೀತೆಯಿಂದ ಕೆಲವು ಆಯ್ದ ಭಾಗಗಳನ್ನು ಆಯ್ದ ಭಾಗಗಳು ‘ನೀತಿಶಾಸ್ತ್ರ’ ಎಂಬ ಹೊಸ ಘಟಕದ ಮೂಲಕ ಸೇರಿಸಲಾಗಿದೆ. ಅಷ್ಟೇ ಅಲದೇ, ಪಠ್ಯಕ್ರಮದಲ್ಲಿ ಭಗವದ್ಗೀತೆಯೊಂದಿಗೆ, ಮಹಾತ್ಮ ಗಾಂಧಿಯವರ ಜೀವನ, ರಾಷ್ಟ್ರೀಯ ನಾಯಕರು, ಸಾಮಾಜಿಕ ಸುಧಾರಕರು ಮತ್ತು ಆಡಳಿತಾಧಿಕಾರಿಗಳ ಜೀವನ ಚಿತ್ರಣವನ್ನು ಒಳಗೊಂಡಿದೆ.

ಹೌದು… ಆಧುನಿಕ ಜಗತ್ತಿನಲ್ಲಿ ಮಕ್ಕಳ ಮನಸ್ಥಿತಿ ಬದಲಾಗಿದ್ದು, ಬಹುತೇಕ ವಿದ್ಯಾರ್ಥಿಗಳು ಭಗವದ್ಗೀತೆ ಓದುವುದು ಬಿಡಿ ಅದರ ಸಂದೇಶವನ್ನು ಅರಿಯುವ ಗೋಜಿಗೆ ಹೋಗುವುದೇ ಇಲ್ಲ. ಹಾಗಾಗಿ ಇದನ್ನು ಮನಗಂಡಿರುವ ರಾಜಸ್ತಾನ ಸರ್ಕಾರವು, ಈಗ ತಾನು ನಡೆಸುವ ರಾಜಸ್ತಾನ ಆಡಳಿತ ಸೇವೆ ಪರೀಕ್ಷೆಯಾದ ರಾಜಸ್ಥಾನ “ಲೋಕಸೇವಾ ಆಯೋಗದ” ಪಠ್ಯಕ್ರಮದಲ್ಲಿ ಭಗವದ್ಗೀತೆಯ ಅಧ್ಯಾಯಗಳನ್ನು ಸೇರಿಸಿದೆ. ಹಾಗಂತ ಸುಖಾಸುಮ್ಮನೆ ಪಠ್ಯಕ್ರಮದಲ್ಲಿ ಭಗವದ್ಗೀತೆಯ ಅಧ್ಯಾಯಗಳನ್ನು ಸೇರಿಸಿಲ್ಲ. ಬದಲಾಗಿ, ಭಗವದ್ಗೀತೆಯಲ್ಲಿ ಆಡಳಿತ ಮತ್ತು ನಿರ್ವಹಣೆ ಕುರಿತು ಇರುವ ಅಂಶಗಳನ್ನು ಗುರುತಿಸಿ ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ.

ಆರ್.ಎ.ಎಸ್ 2018 ರ ಪರೀಕ್ಷೆಗಾಗಿ ತಯಾರಿ ನಡೆಸುವವರಿಗೆ ನಿರ್ವಹಣೆ ಮತ್ತು ಆಡಳಿತಾತ್ಮಕ ಪ್ರಶ್ನೆಗಳನ್ನು ಕೇಳಬಹುದು. ಈ ಸೇವಾ ಪರೀಕ್ಷೆಯ ಪಠ್ಯಕ್ರಮದಲ್ಲಿ ಕುರುಕ್ಷೇತ್ರ ಯುದ್ದಲ್ಲಿ ಕೃಷ್ಣ ಮತ್ತು ಅರ್ಜುನ್ ನಡುವಿನ ಸಂವಾದಕ್ಕೆ ಸಂಬಂಧಿಸಿದ 18 ಅಧ್ಯಾಯಗಳನ್ನು ನಿಗದಿಪಡಿಸಲಾಗಿದೆ. ಆದ್ದರಿಂದ, ಇನ್ನು ಮುಂದೆ ಪರೀಕ್ಷೆಗಾಗಿ ತಯಾರಿ ನಡೆಸುವ ಅಭ್ಯರ್ಥಿಗಳು ಸಂಪೂರ್ಣವಾಗಿ ಭಗವದ್ಗೀತೆ ಓದಲೇ ಬೇಕಾಗಿರುವುದು ಖಡ್ಡಾಯವಾದಂತಿದೆ!!

ಒಟ್ಟಿನಲ್ಲಿ ರಾಜಸ್ತಾನ ನಾಗರಿಕ ಸೇವಾ ಆಯೋಗವು 2018 ರ ಬಡ್ತಿಗಾಗಿ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಇದೆ ಏಪ್ರಿಲ್ 12ರಿಂದ ಪ್ರಾರಂಭಿಸಿದೆ. ಹಾಗಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮುಂದೆ ಅಧಿಕಾರಿಯಾದ ಬಳಿಕ ನಿರ್ವಹಣೆ ಹಾಗೂ ಆಡಳಿತದಲ್ಲಿ ದಕ್ಷತೆ ಕಾಪಾಡಿಕೊಳ್ಳಲಿ, ಭಗವದ್ಗೀತೆಯ ಸಾತ್ವಿಕ ವಿಚಾರಗಳನ್ನು ಅಭ್ಯರ್ಥಿಗಳನ್ನು ಅವುಗಳನ್ನು ಅಳವಡಿಸಿಕೊಂಡು ಯಶಸ್ವಿ ಅಧಿಕಾರಿಯಾಗಲಿ ಎಂಬ ದೃಷ್ಟಿಯಿಂದ ರಾಜಸ್ತಾನ ಆಡಳಿತ ಸೇವೆ ಪರೀಕ್ಷೆಯ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

ಮೂಲ: http://zeenews.india.com/rajasthan/rajasthan-public-service-commission-rpsc-includes-lesson-from-bhagwad-gita-to-gk-gs-papers-ras-2018-syllabus-revised-2100535.html

http://zeenews.india.com/kannada/india/bhagwad-gita-added-to-rajasthan-civil-services-curriculum-5104
– ಅಲೋಖಾ

 

Tags

Related Articles

Close