ಪ್ರಚಲಿತ

ಜಮೀರ್ ಅಹ್ಮದ್ ವಿರುದ್ಧ ಸಿಡಿದೆದ್ದ ಜನತೆ..! ಮುಸ್ಲಿಂ ಸಚಿವ ಮಾಡಿದ ಅವಾಂತರವೇನು ಗೊತ್ತಾ..?

ಮಾನ, ಮರ್ಯಾದೆ ಇಲ್ಲದವರು ಊರಿಗೆ ದೊಡ್ಡವರು ಅಂತಾರಲ್ಲ ಹಂಗಾಯ್ತು ಇವರ ಕಥೆ. ತಾವು ಅತಿದೊಡ್ಡ ಕನ್ನಡಾಭಿಮಾನಿಗಳು ಎಂದು ಹೇಳಿಕೊಳ್ಳುವ ಈ ಕಾಂಗ್ರೆಸ್ ಹಾಗೂ ಜನತಾ ದಳದ ಪಕ್ಷದ ನಾಯಕರು ಇದೀಗ ಅದೆಂತಾ ಕನ್ನಡಾಭಿಮಾನವನ್ನು ಹೊಂದಿದ್ದಾರೆ ಎಂದು ಕೊಚ್ಚಿಕೊಳ್ಳುವ ಈ ಉಭಯ ನಾಯಕರು ಇದೀಗ ತಮ್ಮ ಕನ್ನಡ ವಿರೋಧಿ ಮುಖವನ್ನು ಅನಾವರಣಗೊಳಿಸಿದ್ದಾರೆ. 

ಈ ಹಿಂದೆ ಜನತಾ ದಳದಲ್ಲಿ ಶಾಸಕನಾಗಿದ್ದ ಜಮೀರ್ ಅಹ್ಮದ್‍ನನ್ನು ಜನತಾ ದಳದ ನಾಯಕರು ಕಿತ್ತು ಬಿಸಾಕಿದ್ದರು. ಬಂಡಾಯವೆದ್ದಿದ್ದರಿಂದ ಜಮೀರ್ ಅಹ್ಮದ್ ಸಹಿತ 7 ಜನ ಶಾಸಕರನ್ನು ಪಕ್ಷದಿಂದ ಮಾತ್ರವಲ್ಲದೆ ಅವರ ಶಾಸಕ ಸ್ಥಾನದಿಂದಲೇ ಅನರ್ಹ ಮಾಡಿತ್ತು. ನಂತರ ಜನತಾ ದಳದ ಕುಮಾರ್ ಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ತನ್ನ ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ ಚುನಾವಣೆಯನ್ನು ಎದುರಿಸಿದ್ದರು. ಆದರೆ ನಂತರ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೇ ಇದ್ದ ಕಾರಣದಿಂದಾಗಿ ಬದ್ದ ವೈರಿಯಾಗಿದ್ದ ಜನತಾ ದಳದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಮೈತ್ರಿ ಸರ್ಕಾರವನ್ನು ರಚಿಸಿದ್ದರು.

ಭಾರತೀಯ ಜನತಾ ಪಕ್ಷವನ್ನು  ಮಣಿಸಲೇಬೇಕೆಂದು ಪಣತೊಟ್ಟು ವಿಫಲರಾದ ಕಾಂಗ್ರೆಸ್ ಹಾಗೂ ಜನತಾ ದಳದ ಪಕ್ಷದವರು ಕೊನೆಗೆ ಭಾರತೀಯ ಜನತಾ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತದ ಕೊರತೆಯಿಂದಾಗಿ ಸರ್ಕಾರ ರಚಿಸಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ಜನತಾ ದಳ ಸೇರಿಕೊಂಡು ಮೈತ್ರಿ ಮಾಡಿಕೊಂಡು ಬಿಜೆಪಿಗೆ ಸೆಡ್ಡು ಹೊಡೆದಿದ್ದರು.

ಆರಂಭದಲ್ಲಿ ಕಾಂಗ್ರೆಸ್ ಪಕ್ಷ ಜನತಾ ದಳದೊಂದಿಗೆ ಕೈಜೋಡಿಸಿದ್ದರಿಂದ ಜನತಾ ದಳದೊಂದಿಗೆ ಮುನಿಸಿಕೊಂಡು ಪಕ್ಷ ಬಿಟ್ಟಿದ್ದ ಹಾಗೂ ಕುಮಾರ ಸ್ವಾಮಿಯನ್ನು ಕಂಡರೆ ಕೆಂಡ ಕಾರುತ್ತಿದ್ದ ಜಮೀರ್ ಅಹ್ಮದ್ ಕೂಡಾ ಅಧಿಕಾರದ ಆಸೆಗಾಗಿ ಮತ್ತೆ ಒಂದಾದರು.  ಈ ಹಿಂದೆ ಕುಮಾರ ಸ್ವಾಮಿಯವರನ್ನು ಮನಬಂದಂತೆ ನಿಂದಿಸಿದ್ದ ಜಮೀರ್ ಸಹ್ಮದ್ ಮಂತ್ರಿ ಪದವಿಗಾಗಿ ಹಾಗೂ ರಾಜಕೀಯದ ಆಸೆಗಾಗಿ ಮತ್ತೆ ಕುಮಾರ ಸ್ವಾಮಿಯ ಜೊತೆ ಕೈಜೋಡಿಸುತ್ತಾರೆ. ಈ ಮೂಲಕ ತಾನೋರ್ವ ಸ್ವಾಭಿಮಾನಿ ಪುರುಷ ಅಲ್ಲ ಅನ್ನುವಾ ಸಂದೇಶವನ್ನು ಸಾರುತ್ತಾರೆ.

ಇದೀಗ ತಾನು ಆಸೆ ಪಟ್ಟಂತೆ ಮಂತ್ರಿ ಪದವಿಯನ್ನೂ ಜಮೀರ್ ಅಹ್ಮದ್ ಗಿಟ್ಟಿಸಿಕೊಳ್ಳುತ್ತಾರೆ. “ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ, ನಾನು ಶಾಸಕನಾಗಿ ಅವರ ಸಂಪುಟದಲ್ಲಿ ಮಂತ್ರಿಯಾಗುತ್ತೇನೆ” ಎಂದು ಹೇಳಿಕೊಂಡು ಬರುತ್ತಿದ್ದ ಜಮೀರ್ ಅಹ್ಮದ್ ತನ್ನ ಬದ್ಧ ವೈರಿ ಜನತಾ ದಳದ ಕುಮಾರ ಸ್ವಾಮಿ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ.

http://publictv.in/kannadigas-protest-against-zameer-ahmed-khan-on-takes-oath-as-minister-in-english/amp

ಇಷ್ಟೇ ಆಗಿದಿದ್ದರೆ ಒಳಗಿಂದೊಳಗೆ ಬೈದು ಜನರು ಸುಮ್ಮನಾಗುತ್ತಿದ್ದರೋ ಏನೋ. ಆದರೆ ಇದೀಗ ಆದದ್ದೇ ಬೇರೆ. ಜನತಾದಳದಿಂದ ಉಚ್ಚಾಟಿತ  ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮಂತ್ರಿ ಪದವಿ ಸ್ವೀಕರಿಸಿದಾಗ ದೊಡ್ಡ ಅವಾಂತರವನ್ನೇ ಮಾಡಿ ಬಿಟ್ಟಿದ್ದಾರೆ. ಎಲ್ಲಾ ಶಾಸಕರು ಬಂದು ಕನ್ನಡದಲ್ಲೇ ಪ್ರಮಾಣ ವಚನವನ್ನು ಓದುತ್ತಿದ್ದರೆ ಜಮೀರ್ ಅಹ್ಮದ್ ಮಾತ್ರ ಆಂಗ್ಲ ಭಾಷೆಯಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ತಾನೊಬ್ಬ ಕನ್ನಡ ಪರ ನಾಯಕ ಎಂದು ಬಿಂಬಿಸಿಕೊಳ್ಳುತ್ತಿರುವ ಈ ಶಾಸಕ ಹಾಗೂ ಈತನ ಪಕ್ಷ ಇದೀಗ ನಿಜಮುಖ ಅನಾವರಣವಾಗಿದೆ. 

ಇಷ್ಟು ಮಾತ್ರವಲ್ಲದೆ ತಾನೊಬ್ಬ ಕಟ್ಟಾ ಮುಸಲ್ಮಾನ ಎಂಬುವುದನ್ನು ಖಾತ್ರಿಪಡಿಸಲು ಅಲ್ಲಾನ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾನೆ. ಜನತಾ ದಳದೊಂದಿಗೆ ಮತ್ತೆ ಈತನ ಸ್ನೇಹವನ್ನು ನೋಡಿಯೇ ಜನರು ಕ್ಯಾಕರಿಸಿ ಉಗಿದಿದ್ದಾರೆ. ಇದೀಗ ಇಂಗ್ಲಿಷ್‍ನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿ ಕನ್ನಡ ಪ್ರೇಮಿಗಳ ಕೆಂಗಣ್ಣಿಗೆ ಕಾರಣವಾಗಿದ್ದಾನೆ. “ಕನಿಷ್ಟ ಕನ್ನಡ ಓದಲೂ ಬಾರದ ಇಂತಹ ಶಾಸಕ ಈ ರಾಜ್ಯಕ್ಕೆ ಮಂತ್ರಿಯಾಗಬೇಕಾ” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಂತೂ ಆಕ್ರೋಶ ಭುಗಿಲೆದ್ದಿದೆ. ಈ ಕೂಡಲೇ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗು, ನಿನಗೆ ಕನ್ನಡ ನಾಡಿನಲ್ಲಿ ಬದುಕುವ ಯಾವ ಅರ್ಹತೆಯೂ ಇಲ್ಲ ಎಂಬ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆದರೆ ಕೆಲ ಕನ್ನಡ ಪರ ಸಂಘಟನೆಗಳು ಮಾತ್ರ ಬಾಯಿಗೆ ಬೀಗ ಹಾಕಿಕೊಂಡು ತಮ್ಮ ಮೃದು ಧೋರೆಣೆಯನ್ನು ಅನುಸರಿಸಿಕೊಂಡಿವೆ. ಈ ವಿಚಾರಗಳಲ್ಲಿ ಮೂಗು ತೂರಿಸಿಕೊಂಡು ಬರುವ ಈ ಕಾಂಗ್ರೆಸ್ ಪ್ರೇರಿತ ಕನ್ನಡ ಸಂಘಟನೆಗಳು ಈಗ ಬಾಯಿ ಮುಚ್ಚಿಕೊಂಡು ಕುಳಿತಿವೆ.

ಏನೇ ಇರಲಿ ಕರ್ನಾಟಕದಲ್ಲಿ ಇಷ್ಟು ವರ್ಷಗಳ ಕಾಲ ರಾಜಕೀಯದಲ್ಲಿ ಪಳಗಿದರೂ ಕನ್ನಡ ಓದಲು ಬಾರದ ಇಂತಹ ಸೋಗಲಾಡಿ ಶಾಸಕರನ್ನು ಕಂಡಂತಹ ಆ ನಾಡಿನ ಜನತೆಯೇ ಧನ್ಯ! ಕನ್ನಡ ಓದಲು ಬರೋದಿಲ್ವೋ ಅಥವಾ ಕನ್ನಡದ ಮೇಲೆ ಸಿಟ್ಟೋ ಎಂಬ ಜಿಜ್ನಾಸೆಯೂ ಮೂಡುತ್ತಿದೆ.

-ಏಕಲವ್ಯ

Tags

Related Articles

Close