
ಇಸ್ಲಾಮಿಕ್ ಉಗ್ರಗಾಮಿಗಳಿಂದ ಮುಂಬೈ ದಾಳಿ ನಡೆದು ಬರೋಬ್ಬರಿ 14 ವರ್ಷಗಳಾಗಿವೆ. ನಮ್ಮ ದೇಶದ ಕೆಲ ವೀರ ಯೋಧರು ಉಗ್ರರ ಜೊತೆಗಿನ ಹೋರಾಟದಲ್ಲಿ ಪ್ರಾಣ ತೆತ್ತು, ಹುತಾತ್ಮರಾಗಿದ್ದಾರೆ. ಅವರೆಲ್ಲರಿಗೂ ನಮ್ಮ ನಮನಗಳು.
ಅಂದ ಹಾಗೆ ಈ ಉಗ್ರರ ದಾಳಿಯನ್ನು ಹಿಂದೂಗಳ ತಲೆಗೆ ಕಟ್ಟುವ, ಹಿಂದೂ ಉಗ್ರವಾದ ಎಂಬ ಹೆಸರಿಟ್ಟು ಗುರುತಿಸುವ ಹುನ್ನಾರ ನಡೆದಿತ್ತು ಎಂಬುದನ್ನು ನಾವು ಮರೆಯಬಾರದು. ಹಿಂದೂ ಉಗ್ರನಾಗಲು ಸಾಧ್ಯವಿಲ್ಲ, ಉಗ್ರಗಾಮಿ ಎಂದಿಗೂ ಹಿಂದೂ ಧರ್ಮಕ್ಕೆ ಸೇರಿರಲು ಸಾಧ್ಯವಿಲ್ಲ ಎಂಬುದನ್ನು ಸಹ ನಾವು ಗಮನದಲ್ಲಿರಿಸಿಕೊಳ್ಳಬೇಕು. ಆದರೆ ಇಂತಹ ದುಷ್ಕೃತ್ಯಗಳನ್ನು ನಡೆಸಿ ಅದನ್ನು ಹಿಂದೂ ಧರ್ಮದ ತಲೆಗೆ ಕಟ್ಟುವ ಹುನ್ನಾರ ಉಗ್ರಗಾಮಿಗಳಿಂದ ಅಂದಿನಿಂದ ಇಂದಿನವರೆಗೂ ನಡೆದುಕೊಂಡೇ ಬಂದಿದೆ.
ಅಂದ ಹಾಗೆ ಆ ದಾಳಿಯಲ್ಲಿ ಉಗ್ರ ‘ಕಸಬ್’ ಜೀವಂತವಾಗಿ ಸೆರೆ ಸಿಕ್ಕಿದ್ದ. ಒಂದು ವೇಳೆ ಅವನು ಈ ದಾಳಿಯ ಸಂದರ್ಭದಲ್ಲಿ ಯೋಧರ ಗುಂಡಿಗೆ ಸತ್ತಿದ್ದರೆ, ಅವನ ಕೈಯಲ್ಲಿನ ಕೇಸರಿ ದಾರ ಅವನನ್ನು ಹಿಂದೂ ಎಂಬುದಾಗಿಯೇ ಗುರುತಿಸುತ್ತಿತ್ತು. ಈ ಕೃತ್ಯ ಕೇಸರಿ ಭಯೋತ್ಪಾದನೆ, ಹಿಂದೂಗಳೇ ಈ ದಾಳಿ ನಡೆಸಿದ್ದಾರೆ ಎಂಬೆಲ್ಲಾ ಅಪಪ್ರಚಾರ, ಸುಳ್ಳುಗಳು ಹರಿದಾಡುತ್ತಿದ್ದವು. ಆದರೆ, ಹಿಂದೂ ಧರ್ಮದ ಮೇಲಿನ ದೈವ ದೇವರುಗಳ ಆಶೀರ್ವಾದವೋ ಏನೋ ಎಂಬಂತೆ, ಕಸಬ್ ಜೀವಂತವಾಗಿ ಸೆರೆಯಾಗಿದ್ದ. ಈ ದಾಳಿಯ ವೇಳೆ ಅವನ ಹೆಸರನ್ನು ಸಮೀರ್ ಚೌಧರಿ ಎಂದು ಬದಲಾಯಿಸಲಾಗಿತ್ತು. ಅವನಿಗೆ ಹಿಂದೂ ಧರ್ಮದವರಿಗಿಡುವ ಹೆಸರನ್ನು ಇರಿಸಲಾಗಿತ್ತು. ಒಂದು ವೇಳೆ ಈ ದಾಳಿಯಲ್ಲಿ ಪೊಲೀಸ್ ತುಕಾರಾಂ ಓಂಬ್ಲೆ ಅವರು ಈ ಉಗ್ರನನ್ನು ಸೆರೆ ಹಿಡಿಯದೇ ಹೋಗಿದ್ದರೆ, ಆ ದಾಳಿಯ ಸಂಪೂರ್ಣ ಹೊಣೆ ಹಿಂದೂ ಧರ್ಮದ ಮೇಲೆ ಬರುತ್ತಿತ್ತು. ಭಯೋತ್ಪಾದಕರ ಸಂಚಿಗೆ ಹಿಂದೂ ಧರ್ಮ ಬಲಿಯಾಗಬೇಕಿತ್ತು. ಸತ್ಯ ಏನೆಂಬುದು ಕಸಬ್‌ನಂತಹ ದ್ರೋಹಿಯ ಜೊತೆಗೆಯೇ ಸತ್ತು ಹೋಗುತ್ತಿತ್ತು.
ಆ ದಾಳಿಯ ಸಂದರ್ಭದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದದ್ದು ಕಾಂಗ್ರೆಸ್ ಪಕ್ಷ. ಆ ಪಕ್ಷ ಸೆರೆಸಿಕ್ಕ ಕಸಬ್‌ನನ್ನು ಕೊಲ್ಲುವ ಬದಲು, ಆತನಿಗೆ ಜೈಲಿನಲ್ಲಿಯೇ ರಾಜಾತಿಥ್ಯ ನೀಡಿದರು. ಆತನ ಪರ ವಾದ ನಡೆಸಿದ್ದ ವಕೀಲ ಸಹ ಈ ದಾಳಿಯನ್ನು ಹಿಂದೂಗಳು ನಡೆಸಿದ್ದಾಗಿ ನ್ಯಾಯಾಲಯದಲ್ಲಿಯೂ ಅನ್ಯಾಯದ ವಾದ ಮಂಡಿಸಿದ್ದರು. ಹೀಗೆಲ್ಲಾ ಇದ್ದರೂ, ಏನೂ ಕಾಣದಂತೆ, ತಿಳಿಯದಂತೆ ಕುರುಡಾಗಿ ಆಡಳಿತಾರೂಢ ಕಾಂಗ್ರೆಸ್ ಕಣ್ಮುಚ್ಚಿ ಕುಳಿತಿತ್ತು ಎಂಬುದು ನೋವಿನ ಸಂಗತಿ.
ಇನ್ನು ಕಸಬ್‌ನನ್ನು ಜೀವಂತ ಸೆರೆ ಹಿಡಿದಿದ್ದ ಪೊಲೀಸ್ ಅಧಿಕಾರಿ ತುಕಾರಾಂ ಓಂಬ್ಲೆ ಅವರ ದೇಹಕ್ಕೆ ಆ ಕಾರ್ಯಾಚರಣೆಯಲ್ಲಿ 40 ಗುಂಡುಗಳು ಹೊಕ್ಕಿದ್ದವು. ಆ ನೋವಿನ ನಡುವೆಯೂ ಉಗ್ರರ ವಿರುದ್ಧ ತಮ್ಮ ಹೋರಾಟವನ್ನು ನಿಲ್ಲಿಸದ ಅವರು, ಕಸಬ್ ಎಂಬ ಕಸವನ್ನು ಸಜೀವವಾಗಿ ಜನರೆದುರು ನಿಲ್ಲಿಸಿ, ಪ್ರಾಣ ಬಿಟ್ಟಿದ್ದರು. ಹುತಾತ್ಮರಾದರು.
ಈ ಘಟನೆಯಲ್ಲಿ 150 ಕ್ಕೂ ಹೆಚ್ಚು ಪ್ರಾಣಹಾನಿಯಾಗಿತ್ತು. ಈ ದಾಳಿಯ ರೂವಾರಿಗಳನ್ನು ನ್ಯಾಯಾಲಯದ ಮುಂದೆ ತರುವ ಪ್ರಯತ್ನ ಭಾರತದಿಂದ ಆಗುತ್ತಿದೆ. ತಾಜ್, ಒಬೆರಾಯ್ ಹೊಟೇಲ್‌ನಲ್ಲಿ 2008 ರ ನವೆಂಬರ್ 26 ರಂದು ಅದೆಷ್ಟೋ ಜನರು ರಕ್ಷಣೆ ಬೇಡಿ ಕಣ್ಣೀರಿಟ್ಟ ಘಟನೆಯನ್ನು ಭಾರತ ಎಂದೂ ಮರೆತಿಲ್ಲ. ಮರೆಯುವುದೂ ಇಲ್ಲ. 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅದೆಷ್ಟೇ ವರ್ಷ ಕಳೆದರೂ ಈ ಕರಾಳತೆಯ ಉಗ್ರ ನೆನಪು ಭಾರತದ ಎದೆಯಂಗಳದಿಂದ ಮಾಸದು.
ಉಗ್ರಗಾಮಿಗಳ ವಿರುದ್ಧ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಆ ನಡುವೆಯೂ ಹಿಂದೂ ಭಯೋತ್ಪಾದನೆ ಎಂಬ ಹಣೆಪಟ್ಟಿ ಕಟ್ಟಲು ಕೆಲ ದಿನಗಳ ಹಿಂದಷ್ಟೇ ಮಂಗಳೂರಿನಲ್ಲಿಯೂ ಶಾರಿಖ್ ಎಂಬ ಉಗ್ರಗಾಮಿ ನಾಮರ್ಧ ಪ್ರೇಮರಾಜ್ ಹೆಸರಿನಲ್ಲಿ ಕುಕ್ಕರ್ ಬಾಂಬ್ ಸಿಡಿಸಿದ್ದ. ಆತನೂ ಸಹ ಜೀವಂತ ಸೆರೆಯಾಗಿದ್ದಾನೆ. ಸಹೃದಯ ಹಿಂದೂ ಧರ್ಮದ ವಿರುದ್ಧ ಸಂಚು ಹೂಡುವ ಅ’ಶಾಂತಿ’ದೂತರಿಗೆ ಆ ದೇವರೆ ಸರಿಯಾದ ಶಿಕ್ಷೆ ನೀಡುತ್ತಿದ್ದಾನೆ ಎಂಬುದಕ್ಕೆ ಶಾರಿಖ್‌ನ ಕಥೆಯೇ ಸಾಕ್ಷಿ. ಇಂತಹ ಉಗ್ರರ ನಿರ್ನಾಮಕ್ಕೆ ಸರ್ಕಾರ, ಪೊಲೀಸ್ ಇಲಾಖೆ, ಯೋಧರು ಮಾತ್ರ ಶ್ರಮಿಸಿದರೆ ಸಾಲದು. ಅವರೊಂದಿಗೆ ಜನಸಾಮಾನ್ಯರೂ ಯೋಧರಾದಾಗ ಮಾತ್ರ ಇಸ್ಲಾಮಿಕ್ ಉಗ್ರಗಾಮಿಗಳ ಹುಟ್ಟಡಗಿಸಲು ಸಾಧ್ಯ.