ಪ್ರಚಲಿತ

ಖಲೀಸ್ತಾನಿ ಹೋರಾಟಗಾರ ಅಮೃತಪಾಲ್‌ಗೆ ಪಾಕ್ ನಂಟು

ಖಲೀಸ್ತಾನಿ ಹೋರಾಟದಲ್ಲಿ ಗುರುತಿಸಿಕೊಂಡಿರುವ ಅಮೃತ ಪಾಲ್ ಸಿಂಗ್‌ನನ್ನು ಪಂಜಾಬ್ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಹುಡುಕಾಟ ನಡೆಸುತ್ತಿವೆ. ಈ ನಡುವೆಯೇ ಖಲಿಸ್ತಾನಿ ಪರ ಹೋರಾಟಗಾರರು ವಿದೇಶಗಳಲ್ಲಿಯೂ ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವುದು, ಭಾರತದ ಧ್ವಜಕ್ಕೆ ವಿಮಾನ ಮಾಡುತ್ತಿರುವ ಘಟನೆಗಳೂ ಜೋರಾಗಿ ಸುದ್ದಿಯಾಗಿವೆ.

ಇದೆಲ್ಲದರ ನಡುವೆಯೇ ಖಲೀಸ್ತಾನಿ ಪರ ಹೋರಾಟಗಾರರಲ್ಲಿ ಗುರುತಿಸಿ ಕೊಂಡಿರುವ ಅಮೃತಪಾಲ್‌ಗೆ ಪಾಕಿಸ್ತಾನದ ಮಾಫಿಯಾ ಜೊತೆಗೆ ನಂ ಟಿ ಇರುವ ಸಂಗತಿ ಬಹಿರಂಗವಾಗಿದೆ. ಪಾಕಿಸ್ತಾನಿ ಡ್ರಗ್ಸ್ ಮಾಫಿಯಾ, ಅಕ್ರಮ ಶಸ್ತ್ರಾಸ್ತ್ರ ಲಾಭಿಯ ಜೊತೆಗೆ ಸಂಪರ್ಕ ಹೊಂದಿರುವುದಾಗಿಯೂ ತಿಳಿದು ಬಂದಿದೆ. ಆತ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಪಡೆದು ತನ್ನ ಬೆಂಬಲಿಗರಿಗೆ ಹಂಚಿರುವುದಾಗಿಯೂ ಮಾಹಿತಿ ತಿಳಿದು ಬಂದಿದೆ.

ಈತನ ಅಕ್ರಮ ಚಟುವಟಿಕೆಗಳ ಪಟ್ಟಿ ದೊಡ್ಡದಾಗಿದೆ. ಪಂಜಾಬ್ ಅನ್ನು ಕೋಮುವಾದದಿಂದ ವಿಭಜನೆ ಮಾಡಲು ಆತ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡಿದ್ದಾನೆ. ಆತನ ಮೇಲೆ ಹಲವು ಆರೋಪಗಳಿದ್ದು, ಅವನ ಸಹಚರರು ಕಾನೂನು ಸುವ್ಯವಸ್ಥೆ ಹದೆಗೆಡಿಸುವ ಸಂದರ್ಭದಲ್ಲಿ ಈ ಎಲ್ಲಾ ಅಂಶಗಳು ಬಯಲಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈತ ಅಕ್ರಮವಾಗಿ ಡಿ ಅಡಿಕ್ಷನ್ ಸೆಂಟರ್‌ಗಳನ್ನು ನಡೆಸುತ್ತಿದ್ದ. ಅಲ್ಲಿ ಕಾನೂನು ಬಾಹಿರ ಷಡ್ಯಂತ್ರಗಳನ್ನು ರೂಪಿಸುತ್ತಿದ್ದ. ಆತ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದ. ಈತನ ಮೇಲೆ ಮಾರ್ಚ್ ೧೮ ರಂದು ಎನ್‌ಎಸ್‌ಎ ವಿಧಿಸಲಾಗಿದೆ. ಸದ್ಯ ಈತ ಪೊಲೀಸರಿಗೆ ಶರಣಾಗುವ ಬದಲು ತಲೆಮರೆಸಿಕೊಂಡಿದ್ದಾನೆ. ತನಿಖೆಯಲ್ಲಿ ಈತನ ಸಹಚರರು ಆಘಾತಕಾರಿ ಅಂಶಗಳನ್ನು ಬಹಿರಂಗ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ಖಲೀಸ್ತಾನಿ ಚಟುವಟಿಕೆಗಳು ಭಾರತದಲ್ಲಿ ಮತ್ತೆ ಗರಿಗೆದರುವ ಎಲ್ಲ ಸಾಧ್ಯತೆಗಳು ಕಾಣುತ್ತಿದ್ದು, ವಿದೇಶದಲ್ಲಿಯೂ ಭಾರತ ವಿರೋಧಿ ಚಟುವಟಿಕೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಈ ಹಿಂದೆ ಕೇಂದ್ರ ಸರ್ಕಾರದ ರೈತ ಪರ ಕಾನೂನನ್ನು ವಿರೋಧಿಸಿ ಪ್ರತಿ ಪಕ್ಷಗಳು, ನಕಲಿ ಹೋರಾಟಗಾರರು ನಡೆಸಿದ ಪ್ರತಿಭಟನೆಯಲ್ಲಿಯೂ ಖಲೀಸ್ತಾನಿ ವಾಸನೆ ಇದ್ದಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

Tags

Related Articles

Close