ಪ್ರಚಲಿತ

ಸದ್ದಿಲ್ಲದೆ ಮತ್ತೊಂದು ಮಾತು ಮರೆತ ಸಿಎಂ ಕುಮಾರಸ್ವಾಮಿ.! ದೇವಸ್ಥಾನಕ್ಕೆ ದ್ರೋಹ ಬಗೆದರೇ ಕುಮಾರಣ್ಣ.!

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆಗೂ ಮೊದಲು ಅದ್ಯಾವ ರೀತಿಯಲ್ಲಿ ರಾಜ್ಯದ ಜನರಿಗೆ ಆಶ್ವಾಸನೆಗಳನ್ನು ನೀಡಿದ್ದರೋ ಅದೆಲ್ಲವೂ ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಂಪೂರ್ಣವಾಗಿ ಮರೆತಿದ್ದಾರೆ. ಯಾಕೆಂದರೆ ಕೇವಲ ಅಧಿಕಾರದ ಆಸೆಯಿಂದ ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಮಾಡಿಕೊಂಡು ಸರಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿಯಾಗಿ ಆಯ್ಕೆಯಾದರೆ ಏನೆಲ್ಲಾ ಮಾಡುತ್ತೇನೆ ಎಂದು ಹೇಳಿಕೊಂಡಿದ್ದ ಕುಮಾರಸ್ವಾಮಿ ಅವರು ಇದೀಗ ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ತಿಂಗಳಾಗುತ್ತಾ ಬಂದರೂ ಕೊಟ್ಟ ಮಾತು ಈಡೇರಿಸದೆ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಅವರನ್ನು ಬಿಎಸ್ ಯಡಿಯೂರಪ್ಪ ನವರು ವಚನಭ್ರಷ್ಟ ಎಂದು ಕರೆದಿದ್ದು ಇದೇ ಕಾರಣಕ್ಕಾಗಿ. ಈವರೆಗೆ ಕುಮಾರಸ್ವಾಮಿ ಅವರು ತಾನು ನೀಡಿದ ಯಾವುದೇ ಮಾತನ್ನೂ ಈಡೇರಿಸಿದ ಉದಾಹರಣೆಯೇ ಇಲ್ಲ. ಆದರೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರವಾದರೂ ಕೊಟ್ಟ ಭರವಸೆ ಈಡೇರಿಸಬಹುದು ಎಂಬ ನಂಬಿಕೆಯಿತ್ತು. ಆದರೆ ಅದಕ್ಕೂ ತಣ್ಣೀರೆರಚಿದ್ದಾರೆ ನಮ್ಮ ಮಾನ್ಯ ಮುಖ್ಯಮಂತ್ರಿಗಳು..!

ದೇವಸ್ಥಾನಕ್ಕೆ ಕೊಟ್ಟ ಭರವಸೆ ಮರೆತು ದ್ರೋಹ ಬಗೆದ ಸಿಎಂ..!

ಚುನಾವಣೆಗೂ ಮೊದಲು ಪ್ರತೀ ರಾಜಕೀಯ ಪಕ್ಷಗಳು ಜನರ ಬಳಿ ಹಲವಾರು ಭರವಸೆ ನೀಡುವುದು ಸಾಮಾನ್ಯ. ಯಾವುದು ಈಡೇರುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಕುಮಾರಸ್ವಾಮಿ ಅವರು ಈವರೆಗೆ ಯಾವುದೇ ಮಾತು ಈಡೇರಿಸಿಲ್ಲ ಎಂಬೂದೇ ವಿಪರ್ಯಾಸ. ಇದೀಗ ವಿಧಾನಸಭಾ ಚುನಾವಣೆಗೂ ಮೊದಲು ಕುಮಾರಸ್ವಾಮಿ ಅವರು ಸಂಡೂರಿನ ಪುರಾತನ ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಹತ್ತಿರದಲ್ಲೇ ಗಣಿಗಾರಿಕೆ ನಡೆಯುತ್ತಿರುವ ವಿಚಾರವನ್ನು ದೇವಾಲಯದ ಸಿಬ್ಬಂದಿಗಳು ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದು, ಗಣಿಗಾರಿಕೆಯಿಂದ ದೇವಾಲಯಕ್ಕೆ ಆಗುವ ಸಮಸ್ಯೆಯ ಬಗ್ಗೆ ವಿವರಿಸಿದ್ದರು. ಆದರೆ ಕುಮಾರಸ್ವಾಮಿ ಅವರು, ತಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ ಕೂಡಲೇ ಈ ಗಣಿಗಾರಿಕೆಯನ್ನು ರದ್ದು ಮಾಡುವುದಾಗಿ ಹೇಳಿಕೊಂಡಿದ್ದರು.

Image result for kumaraswamy

ಆದರೆ ಇದೀಗ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದಾರೆ, ಅಧಿಕಾರವೂ ಕೈಯಲ್ಲಿದೆ, ಆದರೆ ಕೊಟ್ಟ ಭರವಸೆ ಮಾತ್ರ ಈಡೇರಿಸದೆ ಮೂಲೆಗೆಸೆದಿದ್ದಾರೆ. ಯಾಕೆಂದರೆ ಕೇವಲ ಚುನಾವಣೆಗೂ ಮುನ್ನ ನಾಲಗೆ ಹರಿಬಿಡುವ ಕುಮಾರಸ್ವಾಮಿ ಅಂತವರು ಕೇವಲ ಭರವಸೆ ಮಾತ್ರ ನೀಡುತ್ತಾರೆ ವಿನಃ ಅದನ್ನು ಈಡೇರಿಸುವ ಗೋಜಿಗೆ ಹೋಗುವುದಿಲ್ಲ.!

ಮತ್ತೊಂದು ಗಣಿಗಾರಿಕೆಗೆ ಪರವಾನಿಗೆ ನೀಡಿದ ಕುಮಾರಣ್ಣ..!

ಕುಮಾರಸ್ವಾಮಿ ಅವರ ಬಳಿ ಗಣಿಗಾರಿಕೆಯಿಂದ ದೇವಾಲಯಕ್ಕೆ ಆಗುವ ತೊಂದರೆಗಳನ್ನು ವಿವರಿಸಿದ ನಂತರ ಅಧಿಕಾರ ಸಿಕ್ಕರೆ ಎಲ್ಲವನ್ನೂ ನಿಲ್ಲಿಸುವುದಾಗಿ ಹೇಳಿಕೊಂಡಿದ್ದ ಕುಮಾರಣ್ಣ, ಇದೀಗ ಅದೇ ದೇವಾಲಯದ ಸುತ್ತಮುತ್ತ ಮತ್ತೊಂದು ಗಣಿಗಾರಿಕಾ ಕಂಪನಿಗೆ ಅನುಮತಿ ನೀಡಿದ್ದಾರೆ. ದೇವಾಲಯದ ಸುತ್ತ ಮೂರು ಕಿಲೋಮೀಟರ್ ವರೆಗೂ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಇದೀಗ ಅಧಿಕಾರ ಕೈಗೆ ಸಿಗುತ್ತಲೇ ತನ್ನೆಲ್ಲಾ ಮಾತು ಮರೆತಿದ್ದಾರೆ.
ಸಿಎಂ ಆಗಿ ಒಂದೇ ವಾರಕ್ಕೆ ಸದ್ದಿಲ್ಲದೆ ದೇವಾಲಯದ ಕೇವಲ ಎರಡು ಕಿಲೋಮೀಟರ್ ಅಂತರದಲ್ಲಿ ಗಣಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿ ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ.!

ಈ ದೇವಾಲಯದ ಸುತ್ತ ಗಣಿಗಾರಿಕೆ ನಡೆಸಬಹುದೇ ಎಂಬ ವಿಚಾರವಾಗಿ ಕೋರ್ಟ್ ಸೂಚನೆಯ ಮೇರೆಗೆ ಕೇಂದ್ರ ಪುರಾತತ್ವ ಇಲಾಖೆ ಈಗಾಗಲೇ ಪರಿಶೀಲಿಸಿದ್ದು, ದೇವಸ್ಥಾನದ ಸುತ್ತ ಗಣಿಗಾರಿಕೆ ನಡೆಸಬಹುದೇ ಎಂಬ ವರದಿಯನ್ನು ಶೀಘ್ರವೇ ಸಲ್ಲಿಸಲಿದೆ. ಆದರೆ ವರದಿ ಬರುವುದಕ್ಕೂ ಮೊದಲೇ ಸಿಎಂ ಕುಮಾರಸ್ವಾಮಿ ಅವರು ಗಣಿಕಾರಿಕೆಗೆ ಗುತ್ತಿಗೆ ನೀಡಿದ್ದು, ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದಾರೆ.!
ಆದ್ದರಿಂದ ಕುಮಾರಸ್ವಾಮಿ ಅವರು ಕೇವಲ ಅಧಿಕಾರಕ್ಕಾಗಿ ಯಾವ ರೀತಿಯ ಭರವಸೆ ನೀಡಿದ್ದರೋ ಅದನ್ನೆಲ್ಲಾ ಇದೀಗ ಮರೆತಿರುವುದು ರಾಜ್ಯದ ಜನರ ದೌರ್ಭಾಗ್ಯವೇ ಸರಿ.!

–ಅರ್ಜುನ್

Tags

Related Articles

Close