ಪ್ರಚಲಿತ

ಹಗರಣಗಳಲ್ಲಿ ಭಾಗಿಯಾದವರನ್ನು ಏನೂ ಮಾಡುವುದಿಲ್ಲ..! ಮತ್ತೆ ಲೂಟಿಕೋರರಿಗೆ ಆಶ್ರಯ ನೀಡಲು ಕುಮಾರಸ್ವಾಮಿ ನಿರ್ಧಾರ..?

ಇಂತವರಿಂದ ಮತ್ತೇನನ್ನೂ ಊಹಿಸಲು ಸಾಧ್ಯವಿಲ್ಲ, ರೈತರ ಪರ ಎಂದವರು ತಕ್ಷಣ ರೈತರ ಸಮಸ್ಯೆಗಳನ್ನು ಬಗೆಹರಿಸಲು ಹಿಂದೇಟು ಹಾಕುತ್ತಿದ್ದಾರೆ, ಜನಾದೇಶಕ್ಕೆ ತಲೆ ಬಾಗುತ್ತೇವೆ ಎಂದವರು ಇಡೀ ರಾಜ್ಯದ ಜನರ ಆದೇಶವನ್ನೇ ಧಿಕ್ಕರಿಸಿದರು, ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅಬ್ಬರಿಸಿದವರು ಇಂದು ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡರು, ಪರಸ್ಪರ ಕಿತ್ತಾಡಿಕೊಂಡಿದ್ದವರು ಇಂದು ಅವಕಾಶವಾದಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದರೆ ರಾಜ್ಯದ ಜನತೆ ಇವರಿಂದ ಅಭಿವೃದ್ಧಿಯನ್ನು ಊಹಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ಮಠಾಧೀಶರಿಗೆ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿನ್ನೆ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ ಎಂದರೆ ಇವರ ನಾಟಕೀಯ ರಾಜಕಾರಣ ಎಷ್ಟರ ಮಟ್ಟಿಗೆ ಇದೆ ಎಂಬುದು ತಿಳಿಯುತ್ತದೆ.!

ಕಾಂಗ್ರೆಸ್‌ನ ಕರ್ಮಕಾಂಡಕ್ಕೆ ಕೈ ಹಾಕುವುದಿಲ್ಲ..!

ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ನಾನು ಈ ಹಿಂದಿನ ಸರಕಾರಗಳು ಮಾಡಿರುವ ಯಾವುದೇ ಹಗರಣಗಳಿಗೂ ಕೈ ಹಾಕುವುದಿಲ್ಲ, ಅವುಗಳ ಬಗ್ಗೆ ಯೋಚಿಸಲೂ ಹೋಗುವುದಿಲ್ಲ ಮತ್ತು ಈ ವಿಚಾರವಾಗಿ ನಾನು ಈ ಹಿಂದಿನ ಕಾಂಗ್ರೆಸ್ ಸರಕಾರದ ಹಗರಣಗಳನ್ನೂ ಕೆದಕಲು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಆಡಳಿತದಲ್ಲಿ ನಡೆಸಿದ ಕೋಟಿ ಕೋಟಿ ಹಗರಣಗಳನ್ನು ತನಿಖೆ ನಡೆಸದೆ ಎಲ್ಲಾ ಪ್ರಕರಣಗಳನ್ನು ಮುಚ್ಚಿಹಾಕುವ ಮುನ್ಸೂಚನೆ ನೀಡಿದ್ದಾರೆ.

ಆದ್ದರಿಂದ ಸಿದ್ದರಾಮಯ್ಯನವರ ಆಡಳಿತದಲ್ಲಿ ಸ್ವತಃ ಸಿದ್ದರಾಮಯ್ಯನವರೇ ರಚಿಸಿದ ಎಸಿಬಿಯಲ್ಲಿ ಕಾಂಗ್ರೆಸ್ ವಿರುದ್ಧ ಸುಮಾರು ೬೫ ಪ್ರಕರಣಗಳು ದಾಖಲಾಗಿದ್ದು, ಇದೀಗ ಕುಮಾರಸ್ವಾಮಿ ಅವರ ಆಡಳಿತದಲ್ಲಿ ಈ ಎಲ್ಲಾ ಪ್ರಕರಣಗಳು ಮೂಲೆ ಸೇರಲಿದೆ. ಆದ್ದರಿಂದ ಮೈತ್ರಿ ಮಾಡಿಕೊಂಡ ಕಾಂಗ್ರೆಸ್-ಜೆಡಿಎಸ್ ಮತ್ತೆ ಈ ರಾಜ್ಯದಲ್ಲಿ ಲೂಟಿಹೊಡೆಯುವವರಿಗೆ ಅವಕಾಶ ಮಾಡಿಕೊಡಲಿದ್ದಾರೆ ಎಂಬುದು ಸ್ಪಷ್ಟ..!

Image result for kumaraswamy with siddaramaiah

ಕೊಟ್ಟ ಮಾತು ತಪ್ಪುವುದೇ ಎಚ್‌ಡಿಕೆ ಕಾರ್ಯ..!

ಕುಮಾರಸ್ವಾಮಿ ಅವರು ಇಂದು ಒಂದು ಹೇಳಿಕೆ ನೀಡಿದರೆ ನಾಳೆ ಅದಕ್ಕೆ ವಿರುದ್ಧವಾಗಿ ಇನ್ನೊಂದು ಹೇಳಿಕೆ ನೀಡುತ್ತಾರೆ ಎಂಬುದು ಇಡೀ ರಾಜ್ಯಕ್ಕೆ ತಿಳಿದ ವಿಚಾರ. ಅದೇ ರೀತಿ ಚುನಾವಣೆಗೂ ಮೊದಲು ಸಿದ್ದರಾಮಯ್ಯನವರ ಸರಕಾರ ನಡೆಸಿದ ಎಲ್ಲಾ ಹಗರಣಗಳನ್ನು ನಾನು ಅಧಿಕಾರಕ್ಕೆ ಬಂದರೆ ಬಯಲಿಗೆಳೆದು ಅದಕ್ಕೆ ತಕ್ಕ ಶಿಕ್ಷೆ ನೀಡುತ್ತೇನೆ ಎಂದು ಹೋದಲ್ಲೆಲ್ಲಾ ಹೇಳಿಕೊಳ್ಳುತ್ತಿದ್ದ ಕುಮಾರಸ್ವಾಮಿ ಅವರು ಇದೀಗ ನಾನು ಅಧಿಕಾರ ಹಿಡಿದಿರುವುದು ಈ ಹಿಂದಿನ ಸರಕಾರ ನಡೆಸಿದ ಹಗರಣಗಳನ್ನು ನೋಡಿಕೊಂಡು ಕೂರುವುದಕ್ಕಲ್ಲ, ನಮ್ಮದು ಸಮ್ಮಿಶ್ರ ಸರಕಾರ , ನಾನು ಒಬ್ಬಂಟಿಯಾಗಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಹೇಳಿರುವುದು ಇದೀಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ..!

ಕುಮಾರಸ್ವಾಮಿ ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಯಾಕೆಂದರೆ ಚುನಾವಣೆಗೂ ಮೊದಲು ಸಿದ್ದರಾಮಯ್ಯನವರು ಮತ್ತು ಕುಮಾರಸ್ವಾಮಿ ಅವರು ಯಾವ ಮಟ್ಟಕ್ಕೆ ವಾಗ್ದಾಳಿ ನಡೆಸುತ್ತಿದ್ದರು ಎಂದರೆ ಇನ್ನು ಮುಂದೆ ಈ ಇಬ್ಬರೂ ವೇದಿಕೆ ಕೂಡಾ ಹಂಚಿಕೊಳ್ಳುವುದಿಲ್ಲ ಎಂಬಂತಿತ್ತು. ಆದರೆ ಅಧಿಕಾರದ ಆಸೆಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದು ಮತ್ತೆ ಪ್ರದರ್ಶಿಸಿದ್ದಾರೆ..!

–ಅರ್ಜುನ್

Tags

Related Articles

Close