ಪ್ರಚಲಿತ

2019 ರಲ್ಲಿ ಅಪ್ಪಳಿಸಲಿದೆ ಮೋದಿ ಸುನಾಮಿ!! ಟೈಮ್ಸ್ ಆಫ್ ಇಂಡಿಯಾ ನಡೆಸಿದ ಮಹಾ ಮತದಾನದ ಸಮೀಕ್ಷೆಯಲ್ಲಿ ಮತ್ತೊಮ್ಮೆ ಮೋದಿಗೆ ಜೈ ಎಂದ 71.9% ಮತದಾರ!!

ದೇಶದಲ್ಲಿ ಮೋದಿ ಅಲೆ ಇಲ್ಲ, ಮೋದಿ ಮತ್ತೊಂದು ಅವಧಿಗೆ ಪ್ರಧಾನಮಂತ್ರಿ ಆಗುವುದಿಲ್ಲ ಎನ್ನುತ್ತಿದ್ದ ವಿರೋಧಿಗಳೆಲ್ಲ ಕೊಚ್ಚಿಕೊಂಡು ಹೋಗಬೇಕು, ಆ ರೀತಿಯಾಗಿ ಅಪ್ಪಳಿಸಲಿದೆ ಮೋದಿ ಸುನಾಮಿ!! ಮೆಗಾ ಟೈಮ್ಸ್ ಗ್ರೂಪ್ ಸಮೀಕ್ಷೆಯಲ್ಲಿ 71.9% ಭಾರತೀಯರು 2019 ರಲ್ಲಿ “ಮತ್ತೊಮ್ಮೆ ನರೇಂದ್ರ ಮೋದಿ” ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವಂತೆ ಮತ ಚಲಾಯಿಸುತ್ತೆವೆ ಎಂದು ಮೋದಿ ಪರವಾಗಿ ಮತ ಚಲಾಯಿಸಿದ್ದಾರೆ. 71.9% ಅಂದರೆ 2/3 ಬಹುಮತವೆಂದೆ ಪರಿಗಣಿತವಾಗುತ್ತದೆ. ಅಂದರೆ ಭಾರೀ ಬಹುಮತದಿಂದ ಮೋದಿ ಮತ್ತೊಮ್ಮೆ ಪ್ರಧಾನ ಸೇವಕನಾಗಿ ಅಧಿಕಾರ ಸ್ವೀಕರಿಸಿ ದೇಶ ಸೇವೆ ಮಾಡಲಿದ್ದಾರೆ!!

 

ಟೈಮ್ಸ್ ಆಫ್ ಇಂಡಿಯಾ ನಡೆಸಿದ ‘ಪಲ್ಸ್ ಆಫ್ ದಿ ನೇಷನ್’ ಸಮೀಕ್ಷೆಯಲ್ಲಿ ಜನರ ನಾಡಿಮಿಡಿತ ಇನ್ನೂ ಮೋದಿಗಾಗಿಯೆ ತುಡಿಯುತ್ತಿದೆ ಎನ್ನುವುದು ತಿಳಿದುಬರುತ್ತಿದೆ. 8,44, 646 ಮಂದಿ ಪ್ರತಿಕ್ರಿಯಿಸಿರುವ ಈ ಸಮೀಕ್ಷೆಯಲ್ಲಿ ಮೋದಿ ಅವರಿಗೆ ಬಹುಮತ ಬಂದಿದೆ ಎಂದಾದರೆ, 130 ಕೋಟಿ ಜನಸಂಖ್ಯೆಯಲ್ಲಿ ಮೋದಿಗಾಗಿ ತುಡಿಯುತ್ತಿರುವ ಎಷ್ಟು ಜನರಿರಬಹುದೆಂದು ಅಂದಾಜಿಸಲೂ ಅಸಾಧ್ಯ!! 1/3 ರಷ್ಟು ವಿರೋಧೀ ಮತಗಳನ್ನು ಕಡೆಗಣಿಸಿದರೂ ಉಳಿದ 2/3 ಜನಸಂಖ್ಯೆ ನಾಲ್ಕು ವರ್ಷಗಳ ಬಳಿಕವೂ ಮೋದಿಯವರ ಜೊತೆ ಇದೆ ಎನ್ನುವುದು ಮೋದಿ ಮೋಡಿ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಸಾಕ್ಷಿ. ಇಂದು ಲೋಕಸಭೆಗೆ ಸಾರ್ವತ್ರಿಕ ಚುನಾವಣೆಯೇನಾದರೂ ನಡೆದರೆ ತಾವು ಮೋದಿ ಅವರಿಗೆ ಮತ ನೀಡುವುದಾಗಿ 71.9% ಜನರು ಸಮೀಕ್ಷೆಯಲ್ಲಿ ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಗೆ ಒಂದು ವರ್ಷಕ್ಕಿಂತಲೂ ಕಡಿಮೆ ಸಮಯ ಉಳಿದಿದೆ. ಇಂತಹ ಅವಧಿಯಲ್ಲಿ 73.3% ಜನರು ಮುಂದಿನ ಬಾರಿಯೂ ಮೋದಿ ನೇತೃತ್ವದ ಸರ್ಕಾರವೆ ಬರುವುದು ಎಂದು ಪ್ರತಿಪಾದಿಸುತ್ತಿದ್ದಾರೆ. 16.1% ಜನರು ತಮ್ಮ ಮತವನ್ನು ಮೋದಿ ಅಥವಾ ರಾಹುಲ್ ಗಾಂಧಿ ಹೊರತುಪಡಿಸಿ ಬೇರೆ ಅಭ್ಯರ್ಥಿಗಳಿಗೆ ಕೊಡುತ್ತೇವೆ ಎಂದರೆ, ಕಾಂಗ್ರೆಸಿನ ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿಯಾಗಿ ಕೇವಲ 11.93 ಜನರು ನೋಡಲು ಇಷ್ಟ ಪಡುತ್ತಿದ್ದಾರೆ. ಅಲ್ಲಿಗೆ ತೃತೀಯ ರಂಗದ ಪ್ರಧಾನಿ ಅಭ್ಯರ್ಥಿಯಾಗಿ ಮಂದ ಬುದ್ದಿ ಪಪ್ಪು ಆಯ್ಕೆ ಆಗುವುದು ಸಂಶಯಾಸ್ಪದ!! ತೃತೀಯ ರಂಗ ಗೆಲ್ಲುವುದೇ ಸಂಶಯಾಸ್ಪದ ಎಂದ ಮೇಲೆ ಪಪ್ಪು ಪ್ರಧಾನಿ ಆಗುವುದು ಕನಸಿನ ಮಾತು.

ಸಮೀಕ್ಷೆಯಲ್ಲಿ ಮೋದಿ ಸರಕಾರದಲ್ಲಿ ಅಲ್ಪ ಸಂಖ್ಯಾತರು ಅಸುರಕ್ಷಿತತೆ ಅನುಭವಿಸುತ್ತಿದ್ದಾರೆಯೆ ಎಂದು ಕೇಳಲಾದ ಪ್ರಶ್ನೆಗೆ 59.41% ಜನರು ದೇಶದಲ್ಲಿ “ಅಲ್ಪಸಂಖ್ಯಾತರು ಅಸುರಕ್ಷಿತವಾಗಿಲ್ಲ” ಎಂದು ಹೇಳಿದ್ದಾರೆ. ಮೇ 23-25ರ ನಡುವೆ ಆನ್ಲೈನ್ ಮೂಲಕ ​ ಟೈಮ್ಸ್ ನ ವಿವಿಧ ಮಾಧ್ಯಮಗಳ ಒಂಭತ್ತು ಭಾಷೆಯಲ್ಲಿ ಈ ​ಸಮೀಕ್ಷೆಯನ್ನು ನಡೆಸಲಾಗಿದೆ. ಮೋದಿ ಅವರ ನಾಲ್ಕು ವರ್ಷದ ಆಡಳಿತವನ್ನು 47.4% ಜನರು ” ಅತ್ಯಂತ ಚೆನ್ನಾಗಿದೆ” ಎಂದು ಒಪ್ಪಿಕೊಂಡಿದ್ದಾರೆ. 20.6% ಮಂದಿ ‘ಒಳ್ಳೆಯದು’. 11.38% ರಷ್ಟು ಜನರು ‘ಸರಾಸರಿ’ ಎಂದು ಹೇಳಿದ್ದರೆ, 20.55% ಜನರು ಅದನ್ನು “ಕಳಪೆ” ಎಂದು ಕಂಡುಕೊಂಡಿದ್ದಾರೆ.

ಸಮೀಕ್ಷೆಯಲ್ಲಿ ಮೋದಿ ಅತಿದೊಡ್ಡ ಯಶಸ್ಸನ್ನು ವಿಮರ್ಶಿಸಲು ಕೇಳಲಾದ ಪ್ರಶ್ನೆಯಲ್ಲಿ ಜಿ.ಎಸ್.ಟಿ ಗೆ 33.42% ಜನರು ಜೈ ಎಂದಿದ್ದರೆ, ನೋಟ್ ಬ್ಯಾನ್ ನಿರ್ಧಾರ ಅತಿದೊಡ್ಡ ಯಶಸ್ಸೆಂದು 21.9% ಜನರು ಹೇಳಿದ್ದಾರೆ. ಜಿ.ಎಸ್.ಟಿ ಮತ್ತು ನೋಟ್ ಬ್ಯಾನಿಂದಾಗಿ ಜನರು ಮೋದಿ ಅವರನ್ನು ದ್ವೇಷಿಸುತ್ತಾರೆ ಎನ್ನುವ ವಿರೋಧಿಗಳ ಕುತರ್ಕಕ್ಕೆ ಕವಡೆ ಕಾಸಿನ ಕಿಮ್ಮತ್ತು ಜನರು ನೀಡುತ್ತಿಲ್ಲವೆನ್ನುವುದು ಸಾಬೀತಾಯಿತು. ನಿಜ ಹೇಳಬೇಕೆಂದರೆ ಜನಸಾಮಾನ್ಯರು ಮೋದಿ ಅವರ ನೋಟ್ ಬ್ಯಾನ್ ಮತ್ತು ಜಿ.ಎಸ್.ಟಿ ನಿರ್ಧಾರಗಳಿಂದ ಅತ್ಯಂತ ಪ್ರಭಾವಿತರಾಗಿದ್ದಾರೆ. ತಮಗೆ ಕಷ್ಟವಾದರೂ ಪರವಾಗಿಲ್ಲ, ದೇಶಕ್ಕೆ ಒಳಿತಾಗುವುದಾದರೆ ಮೋದಿ ಯಾವ ಕಠೋರ ನಿರ್ಧಾರ ಬೇಕಾದರೂ ತೆಗೆದುಕೊಳ್ಳಲಿ ನಾವು ಮೋದಿಯವರ ಜೊತೆಗಿದ್ದೇವೆ ಎಂದು ಪ್ರತಿ ರಾಜ್ಯದ ಮತದಾನದಲ್ಲಿಯೂ ಮತ್ತೆ ಮತ್ತೆ ತೋರಿಸುತ್ತಿದ್ದಾರೆ.

ಹೌದು ಮೋದಿ ಅಲೆ ಹೋಗಿದೆ. ಇನ್ನೇನಿದ್ದರೂ ಮೋದಿ ಸುನಾಮಿ ಅಷ್ಟೆ. ಮೋದಿ ಏನೇ ಮಾಡಿದರೂ ಅದು ದೇಶದ ಒಳಿತಾಗಿ ಮಾಡುತ್ತಾರೆ ಎನ್ನುವುದು ದೇಶದ ಜನರಿಗೆ ಅರ್ಥವಾಗಿದೆ. ತನಗಾಗಿ ಏನೂ ಆಸ್ತಿ ಮಾಡದ, ಭ್ರಷ್ಟಾಚಾರದ ಒಂದೇ ಒಂದು ಆರೋಪವಿರದ, ದಿನಕ್ಕೆ ಇಪ್ಪತ್ತು ಘಂಟೆ ದುಡಿಯುವ, ಇದುವರೆಗೂ ಒಂದೇ ಒಂದು ರಜೆಯನ್ನೂ ತೆಗೆದುಕೊಳ್ಳದ, ದೇಶಕ್ಕಾಗಿ ಎಂತಹ ಕಠೋರ ನಿರ್ಧಾರಗಳನ್ನಾದರೂ ತೆಗೆದುಕೊಳ್ಳುವ 56″ ಛಾತಿಯಿರುವ ಮೋದಿ ಬಗ್ಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಗೌರವ ಭಾವನೆ ಹೆಚ್ಚುತ್ತಿದೆ. 2019 ರಲ್ಲಿ ಭಾರತದಲ್ಲಿ ಮೋದಿ ಸುನಾಮಿ ಅಪ್ಪಳಿಸಿ ವಿರೋಧಿಗಳೆಲ್ಲ ಸಮುದ್ರ ಸೇರಲಿ ಎನ್ನುವುದು ದೇಶ ಭಕ್ತರ ಹಾರೈಕೆ…

ಪುಕಾರ್ ದಿಲ್ ಸೇ ಮೋದಿ ಫಿರ್ ಸೇ….2019 ಮತ್ತೊಮ್ಮೆ ಮೋದಿ…

-ಶಾರ್ವರಿ

Tags

Related Articles

Close