ಪ್ರಚಲಿತ

ಹೆತ್ತವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಗಳಿಗೆ ಕಟ್ಟುವ ಹಣವನ್ನು ಮತಾಂತರದ ಧಂಧೆ ನಡೆಸುವ ಮಿಷನರಿಗಳಿಗೆ ವರ್ಗಾಯಿಸುತ್ತಿವೆಯೆ ಕ್ರಿಶ್ಚಿಯನ್ ಶಾಲೆಗಳು?

ಭಾರತದಲ್ಲಿ ಶಿಕ್ಷಣ, ಇಂಗ್ಲಿಷ್ ಮತ್ತು ಪಾಶ್ಚಾತ್ಯ ಪರಿಕಲ್ಪನೆಗಳನ್ನು ಪರಿಚಯಿಸುವಲ್ಲಿ ಲಾರ್ಡ್ ಮೆಕಾಲೆ ಪ್ರಮುಖ ಪಾತ್ರ ವಹಿಸಿದ್ದ ಎನ್ನುವುದು ಎಲ್ಲರಿಗೂ ತಿಳಿದಿದೆ. 8 ಮೇ 1813 ರ ಒಂದು ಖಾಸಗಿ ಪತ್ರದಲ್ಲಿ ” ಕ್ರಿಶ್ಚಿಯನ್ ಧರ್ಮವನ್ನು ರಾಷ್ಟ್ರಕ್ಕೆ ಪರಿಚಯಿಸುವುದರಲ್ಲಿ ಭಾರತವು ಬಹಳ ಆಸಕ್ತಿಯನ್ನು ತೆಗೆದುಕೊಳ್ಳುತ್ತಿದೆ ಎಂದು ನನಗೆ ತುಂಬಾ ಸಂತೋಷವಾಗಿದೆ. ” ಎಂದು ಬರೆಯುತ್ತಾನೆ! ಮೆಕಾಲೆ ಭಾರತಕ್ಕೆ ಬಂದಿದ್ದ ಉದ್ದೇಶವೆ ಭಾರತೀಯ ಗುರುಕುಲ ಶಿಕ್ಷಣ ಪದ್ದತಿಯನ್ನು ಧ್ವಂಸ ಮಾಡಿ, ಭಾರತವನ್ನು ಸಂಪೂರ್ಣವಾಗಿ ಕ್ರೈಸ್ತೀಕರಣ ಮಾಡುವುದಾಗಿತ್ತು. ಆತ ಇನ್ನೂರು ವರ್ಷಗಳ ಹಿಂದೆ ಯಾವುದನ್ನು ಬರೆದು ಸತ್ತನೋ ಅದನ್ನು ಭಾರತದ ಕ್ರಿಶ್ಚಿಯನ್ ಶಾಲೆಗಳು ಮತ್ತು ಮಿಷನರಿಗಳು ಶಿರಸಾವಹಿಸಿ ಪಾಲಿಸುತ್ತಿವೆ.

ನಿಮ್ಮ ಮಕ್ಕಳು ಕ್ರಿಶ್ಚಿಯನ್ ಶಾಲೆಗಳಲ್ಲಿ ಕಲಿಯುತ್ತಿದ್ದರೆ, ದಯವಿಟ್ಟು ಒಮ್ಮೆ ನೀವು ಶಾಲೆಗೆ ಕಟ್ಟುತ್ತಿರುವ ಹಣ ಎಲ್ಲಿ ಉಪಯೋಗವಾಗುತ್ತಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ನಿಮ್ಮ ಮಕ್ಕಳು ಶಾಲೆ ಕಲಿಯಲೆಂದು ಹಣ ಕಟ್ಟುತ್ತೀರಿ. ಆದರೆ ಕ್ರಿಶ್ಚಿಯನ್ ಶಾಲೆಗಳು ಆ ಹಣವನ್ನು ಮಿಷನರಿಗಳ ಮತಾಂತರದ ಧಂಧೆಗೆ ವರ್ಗಾಯಿಸುತ್ತವೆಯೋ ಇಲ್ಲ ಶಾಲೆಗಾಗಿ ಖರ್ಚು ಮಾಡುತ್ತವೆಯೋ ಎನ್ನುವುದನ್ನು ತಿಳಿದುಕೊಳ್ಳಿ. ದಪ್ಪ ಮಂಡೆಯ ಹಿಂದೂಗಳೇ, ಗಾಢ ನಿದ್ದೆಯಿಂದ ಎದ್ದೇಳಿ…ನಿಮ್ಮ ಹಣ ನಿಮ್ಮದೆ ಧರ್ಮದ ವಿನಾಶಕ್ಕೆ ಉಪಯೋಗವಾಗುತ್ತಿದ್ದರೂ ಕುಂಭಕರ್ಣರಂತೆ ನಿದ್ರೆ ಮಾಡುತ್ತೀದ್ದೀರಾ? ಸಮಯ ಮೀರುವ ಮುನ್ನ ಎಚ್ಚೆತ್ತುಕೊಳ್ಳಿ.

ಉತ್ತರ ಪ್ರದೇಶದ ಮೀರತ್ ನಲ್ಲಿ ಸೋಫಿಯಾ ಸೊಸೈಟಿ ನಡೆಸುತ್ತಿರುವ ಸೋಫಿಯಾ ಶಾಲೆ ಇದೆ. ಈ ಶಾಲೆಯು ಕ್ರಿಶ್ಚಿಯನ್ ಮಿಷನರಿ ಟ್ರಸ್ಟ್ ಗಳಿಗೆ ಹಣವನ್ನು ವರ್ಗಾವಣೆ ಮಾಡುತ್ತಿದೆ ಎಂದು ತನಿಖೆಗಳಿಂದ ಬಯಲಾಗಿದೆ. 2006 ರಿಂದ 2014 ರವರೆಗೆ ಸೋಫಿಯಾ ಸೊಸೈಟಿಯ ಮೂಲಕ 2,64,90,000 ರೂಪಾಯಿಗಳನ್ನು ಶಾಲೆಯಿಂದ ಸಂಗ್ರಹಿಸಿ, ವಿವಿಧ ಕ್ರಿಶ್ಚಿಯನ್ ಮಿಷನರಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ಶಾಲೆಯಲ್ಲಿ ಮಾಹಿತಿ ಕೇಳಿದಾಗ ಉತ್ತರ ನೀಡಲಾಗದೆ ಬ್ಬೆಬ್ಬೆಬ್ಬೆ ಎಂದು ತಡವರಿಸುತ್ತಿದೆ ಶಾಲಾ ಆಡಳಿತ ಮಂಡಳಿ. ಶಾಲೆಯಿಂದ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಿ ಮಿಷನರಿಗಳಿಗೆ ನೀಡುವ ಅಗತ್ಯವಾದರೂ ಏನು?

ಫಲಾನುಭವಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವ ಸಂಸ್ಥೆಗಳು:

ಕ್ರಿಶ್ಚಿಯನ್ ಉಪದೇಶದ ಮತ್ತು ಯೇಸುವಿನ ಪ್ರೀತಿಯನ್ನು ಹರಡುವ ಅಜ್ಮೇರಿನ ಮಿಶನ್ ಸಿಸ್ಟರ್ಸ್: 2.11 ಕೋಟಿ ರುಪಾಯಿ
ಮೀರತ್ ನ ಫಾಥಿಮಾ ಸೊಸೈಟಿ: 44.30 ಲಕ್ಷ ರೂ
ಸೋಫಿಯಾ ಎಜುಕೇಶನ್ ಸೊಸೈಟಿ: 7.5 ಲಕ್ಷ ರೂ
ಸೇಂಟ್ ಕ್ಲೇರ್ ಸೇವಾ ಸದಾನ್: 50 ಸಾವಿರ ರೂ
ಗೋವಾದ ಮಾಡೆಲ್ ಸ್ಕೂಲ್ ಎಜುಕೇಶನ್ ಸೊಸೈಟಿ: 1.5 ಲಕ್ಷ ರೂ

ಹೇಗಿದೆ? ಹಿಂದೂಗಳ ದುಡ್ಡು, ಮಿಷನರಿಗಳ ದಂಧೆ! ಸೊಸೈಟಿ ಕಾನೂನಿನ ಪ್ರಕಾರ ನಿಧಿಯನ್ನು ಕೇವಲ ಶಾಲೆಗಳ ಕೆಲಸಕ್ಕೆ ವಿನಿಯೋಗಿಸಬೇಕೆಂದಿದೆ. ಆದರೆ ನಿಯಮಗಳನ್ನು ಗಾಳಿಗೆ ತೂರಿ ಇಷ್ಟು ದೊಡ್ಡ ಮೊತ್ತದ ಹಣವನ್ನು ವರ್ಗಾವಣೆ ಮಾಡಿದ್ದು ಯಾಕೆ? ಈ ಬಗ್ಗೆ ಮೀರತ್ ನ ರಿಜಿಸ್ಟ್ರಾರ್ ತನಿಖೆಯನ್ನೂ ಆರಂಭಿಸಿದ್ದಾರೆ. 2015-2018ರ ಅವಧಿಯಲ್ಲಿ ಬೃಹತ್ ಪ್ರಮಾಣದ ಮೊತ್ತವನ್ನು ವರ್ಗಾವಣೆ ಮಾಡಲಾಗಿದೆಯೆನ್ನುವ ಅನುಮಾನದ ಮೇಲೆ, ರಿಜಿಸ್ಟ್ರಾರ್ ಗೆ ಬಾಲೆನ್ಸ್ ಶೀಟ್ ಸಲ್ಲಿಸುವಂತೆ ಆದೇಶಿಸಲಾಗಿದೆ. ಆದರೆ ಈ ತನಕ ಶಾಲೆಯು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ.

ಹಣ ವರ್ಗಾವಣೆಯಾಗಿರುವ ಸಂಸ್ಥೆಗಳಲ್ಲಿ ಮಿಶನ್ ಸಿಸ್ಟರ್ಸ್ ಅಜ್ಮೇರ್ ವಿದೇಶದಿಂದ ಕಾರ್ಯ ನಿರ್ವಹಿಸುವ ಮಿಷನರಿ ಸಂಸ್ಥೆ. ಈ ಸಂಸ್ಥೆಯ ಮೂಲ ಉದ್ದೇಶವೆ ಮನೆ ಮನೆಗೆ ತೆರಳಿ ಜನರಿಗೆ ಮಂಕುಬೂದಿ ಎರಚಿ ಮತಾಂತರ ಮಾಡುವುದು. ಹಾಗಿರುವಾಗ ಒಂದು ಶಾಲೆಯ ಹಣವನ್ನು ಇಂತಹ ಸಂಸ್ಥೆಗೆ ವರ್ಗಾಯಿಸುವುದರ ಹಿಂದಿನ ಮರ್ಮವೇನು?

ಇನ್ನು ಕರ್ನಾಟಕದ ಮೈಸೂರಿನಲ್ಲಿ ಕೆಲವು ಶಾಲೆಗಳು ಕ್ರಿಶ್ಚಿಯನ್ ಪ್ರಾರ್ಥನೆ ಮಾಡುತ್ತವೆ ಮತ್ತು ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗಲು ತಾಕೀತು ಮಾಡುತ್ತವೆ. ಪ್ರಾರ್ಥನೆಗೆ ಹಾಜರಾಗದವರಿಗೆ ಆ ದಿನದ ಅಟೆಂಡೆನ್ಸ್ ನೀಡುವುದಿಲ್ಲ ಎನ್ನಲಾಗುತ್ತದೆ. ಆದರೂ ಹಿಂದೂಗಳು ಗಪ್ ಚುಪ್! ಕ್ರಿಶ್ಚಿಯನ್ ಶಾಲೆಗಳಲ್ಲಿ ಕ್ರೈಸ್ತರು ರೋಸರಿ ಮಣಿ, ಕ್ರಾಸ್ ಧರಿಸಬಹುದು ಆದರೆ ಹಿಂದೂಗಳು ರುದ್ರಾಕ್ಷಿ ಧರಿಸುವಂತಿಲ್ಲ, ಕುಂಕುಮ ಇಡುವಂತಿಲ್ಲ. ಕ್ರಿಶ್ಚಿಯನ್ ಶಾಲೆಗಳಲ್ಲಿ 99% ಕ್ರೈಸ್ತ ಅಧ್ಯಾಪಕರೇ ಇರುತ್ತಾರೆ ಮತ್ತು ಹಿಂದೂ ಅಧ್ಯಾಪಕರು ಅತಿ ಕಡಿಮೆ ಸಂಖ್ಯೆಯಲ್ಲಿರುತ್ತಾರೆ. ಏಕೆ ಈ ತಾರತಮ್ಯ? ಬೆಂಗಳೂರಿನ ಸುಸ್ಥಾಪಿತ ಕ್ರಿಶ್ಚಿಯನ್ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ 10 ನೇ ತರಗತಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದಾರೆ ಅಥವಾ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡಿದ್ದಾರೆ. ಎಲ್ಲಾ ಶಾಲೆಗಳಿಗೆ ಒಂದು ಕಾನೂನಾದರೆ ಇವರದ್ದು ಬೇರೆಯೆ ಕಾನೂನು ಅದೇಕೆ? ಇವರನ್ನೆಲ್ಲ ಪ್ರಶ್ನಿಸುವವರು ಯಾರು?

‘ಮೋರಲ್ ಸೈನ್ಸ್’ ತರಗತಿಯಲ್ಲಿ ಹಿಂದೂಗಳ ಆಚಾರ-ವಿಚಾರಗಳನ್ನು ಹೀಯಾಳಿಸುವುದು ಮತ್ತು ಕ್ರೈಸ್ತ ಆಚರಣೆಗಳನ್ನು ಹೊಗಳುವುದು ಈ ತೆರನಾದ ವಿಷಯಗಳನ್ನು ಕಲಿಸಿಕೊಡಲಾಗುತ್ತದೆ. ಅನೇಕ ದೇವರನ್ನು ಪೂಜಿಸುವುದು ಕೆಟ್ಟದ್ದು, ಮಾನವಕುಲವನ್ನು ಉಳಿಸಲು ಯೇಸು ಜನಿಸಿದನು ಎಂದು ಮಕ್ಕಳ ತಲೆಗೆ ತುರುಕಲಾಗುತ್ತದೆ. ಅಂತಿಮವಾಗಿ ಶಾಂತಿಗಾಗಿ ಪ್ರಾರ್ಥನೆಯ ಹೆಸರಿನಲ್ಲಿ ಕ್ರಿಶ್ಚಿಯನ್ ಪ್ರಾರ್ಥನೆಯನ್ನು ಹಾಡಿಸಿ ಮಕ್ಕಳನ್ನು ಕ್ರಿಶ್ಚಿಯಾನಿಟಿ ಕಡೆಗೆ ವಾಲುವಂತೆ ಮಾಡುತ್ತಾರೆ. ವಿದ್ಯಾದಾನ ಮಾಡುವ ಶಾಲೆಗಳನ್ನು ಮತಾಂತರದ ಧಂಧೆಗೆ ಉಪಯೋಗಿಸುವುದು ಘೋರ ಅಪರಾದ. ಆದರೂ ಇಂತಹ ಅಪರಾಧಗಳನ್ನು ಕೈಗೊಳ್ಳುವ ಶಾಲೆಗಳ ಮೇಲೆ ಯಾವ ಕಾನೂನೂ ಜರಗುವುದಿಲ್ಲ. ಹಿಂದೂ ಹೆತ್ತವರು ಎಲ್ಲವನ್ನೂ ಕಂಡೂ ಕಾಣದಂತೆ ಸುಮ್ಮನಿದ್ದು ಬಿಡುತ್ತಾರೆ!

ನಿಮ್ಮ ಮಕ್ಕಳು ಕಲಿಯುತ್ತಿರುವ ಶಾಲೆಗಳಲ್ಲಿ ಇಂತಹ ಅಕ್ರಮ ವ್ಯವಹಾರಗಳು ನಡೆಯುತ್ತಿವೆಯೋ ಎನ್ನುವುದನ್ನು ಒಮ್ಮೆ ಅವಲೋಕಿಸಿ. ಮಕ್ಕಳ ಭವಿಷ್ಯ ಒಳ್ಳೆಯದಿರಲೆಂದು ಹಾರೈಸುವ ಭರದಲ್ಲಿ, ನಮ್ಮ ಕೈಯಾರೆ ಸನಾತನದ ಕಗ್ಗೊಲೆ ನಡೆಯುವಂತಾಗದಿರಲಿ. ನಿಮ್ಮ ಮಕ್ಕಳು ಕಲಿಯುತ್ತಿರುವ ಶಾಲೆಗಳ ಮೇಲೆ ಒಂದು ಕಣ್ಣಿಟ್ಟಿರಿ. ಮಕ್ಕಳ ಭವಿಷ್ಯ ಎಷ್ಟು ಮುಖ್ಯವೋ ಸನಾತನವೂ ಅಷ್ಟೆ ಮುಖ್ಯ. ಸನಾತನದ ರಕ್ಷಣೆ ಮಾಡುವುದು ಕೂಡಾ ನಮ್ಮದೆ ಜವಾಬ್ದಾರಿ ಮರೆಯದಿರಿ.

-ಶಾರ್ವರಿ

Source
indiafacts
Tags

Related Articles

Close