ಪ್ರಚಲಿತ

ನಮೋ ಆ್ಯಪ್ ಮೂಲಕ ರೈತರನ್ನು ಹಾಡಿ ಹೊಗಳಿದ ಮೋದಿ!! 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಕಾರ್ಯಪ್ರವೃತ್ತ!!

ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿನಿಂದ ದೇಶವು ಇಂದು ಅಭಿವೃದ್ಧಿಯ ಮೆಟ್ಟಿಲುಗಳನ್ನು ಒಂದೊಂದಾಗಿಯೇ ಏರುತ್ತಿದ್ದು, ಬಡರಾಷ್ಟ್ರ ಎಂದು ಕರೆಸಿಕೊಳ್ಳುತ್ತಿದ್ದ ದೇಶ ಇಂದು ವಿಶ್ವದ ಬಲಿಷ್ಠ ರಾಷ್ಟ್ರಗಳೊಂದಿಗೆ ಸ್ನೇಹ ಬಯಸುತ್ತಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ!! ಆದರೆ ಭಾರತ ಕೃಷಿ ಪ್ರಧಾನ ದೇಶವಾಗಿದ್ದರೂ ಕೂಡ ರೈತರ ಪಾಡು ಹೇಳತೀರದು!! ಹಾಗಾಗಿ ಈ ಕುರಿತಂತೆ ನರೇಂದ್ರ ಮೋದಿಯವರು ದೇಶದ ರೈತರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಇಂದು ಕೃಷಿಯಲ್ಲಿನ ಸಾಧನೆ ಮತ್ತು ಸವಾಲುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ!!

ನಮೋ ಆ್ಯಪ್ ಮೂಲಕ ಇಂದು ದೇಶದ ರೈತರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ದೇಶದ 600ಕ್ಕೂ ಹೆಚ್ಚು ರೈತರ ಸಮಸ್ಯೆಗಳಿಗೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಆಹಾರ ಭದ್ರತೆಯನ್ನು ಖಾತ್ರಿಪಡಿಸುತ್ತಿರುವ ರೈತರ ಶ್ರಮವನ್ನು ಕೊಂಡಾಡಿದ್ದಲ್ಲದೇ, ಜನರ ಉಳಿವಿಗೆ ರೈತ ಅನಿವಾರ್ಯ ಎಂದಿದ್ದಾರೆ.

Related image

ದೇಶದ 600 ಜಿಲ್ಲೆಗಳ ರೈತರೊಂದಿಗೆ ಸಂವಾದ ನಡೆಸಿದ ಅವರು, ‘ರೈತರನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ, ಮತ್ತು ಅವರ ಅಭಿವೃದ್ದಿಗೆ ಹೆಚ್ಚಿಗೆ ಏನನ್ನೂ ಮಾಡಲಾಗಿಲ್ಲ. ರೈತರ ಸಹಾಯಕ್ಕಾಗಿ ತಂತ್ರಜ್ಞಾನಿಕ ಆವಿಷ್ಕಾರಗಳು ಅತ್ಯಗತ್ಯವಾಗಿದ್ದು, ಇದನ್ನು ಮನಗಂಡು ನಮ್ಮ ಸರಕಾರ ರೈತರ ಅಭಿವೃದ್ದಿಗೆ ಮುಂದಾಗಿದೆ. ಅವರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಲಿ ಎಂಬ ಕಾರಣಕ್ಕೆ ವ್ಯವಸ್ಥೆಯಿಂದ ಮಧ್ಯವರ್ತಿಗಳನ್ನು ತೆಗೆದು ಹಾಕುವ ಕಾರ್ಯ ಮಾಡುತ್ತಿದ್ದೇವೆ’ ಎಂದಿದ್ದಾರೆ!! ಅಷ್ಟೇ ಅಲ್ಲದೇ ನಮ್ಮ ದೇಶದಲ್ಲಿ ರೈತರನ್ನು ಅವರ ಪಾಡಿಗೆ ಬಿಟ್ಟುಬಿಡಲಾಗಿದೆ. ಅವರ ಅಭಿವೃದ್ಧಿಗೆ ಹೆಚ್ಚಿನ ಕೆಲಸ ಮಾಡಿಲ್ಲ ಎಂದು ಅಭಿಪ್ರಾಯಪಟ್ಟ ಪ್ರಧಾನಿಗಳು, ರೈತರಿಗೆ ಸಹಾಯ ಮಾಡಲು ತಂತ್ರಜ್ಞಾನದ ಸಂಶೋಧನೆಗಳ ಅಗತ್ಯವಿದೆ ಎಂದರು.

ಕರ್ನಾಟಕ, ಸಿಕ್ಕಿಮ್, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಭಾಗಗಳ ರೈತರು ಪ್ರಧಾನಿಯವರ ವಿಡಿಯೊ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದು, ಕೃಷಿಯಲ್ಲಿನ ಸಾಧನೆ ಮತ್ತು ಸವಾಲುಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಬಗ್ಗೆ ಮಾತಾನಾಡಿರುವ ಮೋದಿ, ರೈತರು ತಾವು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತಾಗಬೇಕಾದರೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪುವಂತಾಗಬೇಕು ಎಂದಿದ್ದಾರೆ!! ಇನ್ನು, 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ನಮ್ಮ ಸರಕಾರ ಕಾರ್ಯಪ್ರವೃತ್ತವಾಗಿದೆ. ಉತ್ಪನ್ನಕ್ಕೆ ಸರಿಯಾದ ಬೆಲೆ ದೊರಕುವುದು ಕಡ್ಡಾಯವಾಗಿದ್ದು,  ಬೆಳೆದ ಬೆಳೆ ನಷ್ಟವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಲ್ಲದೇ ಆದಾಯಕ್ಕೆ ಪರ್ಯಾಯ ಮೂಲವೂ ಅತ್ಯಗತ್ಯ ಎಂದು ಹೇಳಿದ್ದಾರೆ!!

ಕಳೆದ ಮೂರು ವರ್ಷಗಳಿಂದ ಕೃಷಿ ವಲಯದಲ್ಲಿ ಕ್ಷಿಪ್ರ ಬೆಳವಣೆಗೆಯಾಗಿದ್ದು, ಕೃಷಿ ವಲಯಕ್ಕೆ ರೂಪಾಯಿ 2 ಲಕ್ಷ ಕೋಟಿಯನ್ನು ಬಜೆಟ್ ನಲ್ಲಿ ನೀಡಿದ್ದೇವೆ. ದಾಖಲೆ ಮಟ್ಟದಲ್ಲಿ ಧಾನ್ಯಗಳ, ಹಣ್ಣು, ತರಕಾರಿ, ಹಾಲಿನ ಉತ್ಪಾದನೆಯಾಗಿದೆಯಲ್ಲದೇ ನೀಲಿ ಕ್ರಾಂತಿಯ ಫಲವಾಗಿ ಮೀನುಗಾರಿಕ ವಲಯದಲ್ಲಿ ಶೇಕಡ 26ರಷ್ಟು ಪ್ರಗತಿ ಕಂಡಿದೆ. ಇವಿಷ್ಟೇ ಅಲ್ಲದೇ, ಪಶುಸಂಗೋಪನಾ ವಲಯವೂ ಶೇಕಡ 24ರಷ್ಟು ಪ್ರಗತಿ ಕಂಡಿದೆ ಎಂದರು!!

PM Modi, narendra modi, BJP, ideological parties, CPM, ram temple, Indian Express column

ಕೇಂದ್ರ ಸರಕಾರವು ಈಗಾಗಲೇ ಇ-ನಾಮ್ ಎಂಬ ಆನ್ ಲೈನ್ ವೇದಿಕೆಯನ್ನು ಆರಂಭಿಸಿದ್ದು ಈ ಮೂಲಕ ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತಾಗುತ್ತದೆ, ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದಾಗಿದೆ ಎಂದು ಹೇಳಿದ್ದಾರೆ. ಅದಲ್ಲದೇ, ರೈತರಿಗೆ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತಾಗಲು ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ನಿರ್ದಿಷ್ಟ ಬೆಳೆಗಳಿಗೆ ನಿಗದಿಪಡಿಸಿದ್ದು ಅದು ರೈತರ ಬೆಳೆಯ ಖರ್ಚಿನ ಕನಿಷ್ಠ ಒಂದೂವರೆ ಪಟ್ಟು ಹೆಚ್ಚಾಗಿರುತ್ತದೆ ಎಂದಿದ್ದಾರೆ.

ಕಳೆದ ವರ್ಷ ಕೃಷಿ ಉತ್ಪನ್ನಗಳಲ್ಲಿ ಹೆಚ್ಚಳ ಕಂಡುಬಂದಿದೆ ಎಂದ ಪ್ರಧಾನಿ ನರೇಂದ್ರ ಮೋದಿಯವರು, 2017-18ರಲ್ಲಿ ಆಹಾರ ಧಾನ್ಯಗಳ ಉತ್ಪಾದನೆ 280 ದಶಲಕ್ಷ ಟನ್ ಗೂ ಅಧಿಕವಾಗಿತ್ತು. ಸರಾಸರಿ ಉತ್ಪನ್ನ 2010 ರಿಂದ 2014 ರವರೆಗೆ 250 ದಶಲಕ್ಷ ಟನ್ ಗಳಿದ್ದವು. ಅದೇ ರೀತಿ ಧಾನ್ಯಗಳ ಉತ್ಪಾದನೆ ಶೇಕಡಾ 10.5ರಷ್ಟು ಮತ್ತು ತೋಟಗಾರಿಕೆ ವಲಯಗಳಲ್ಲಿ ಶೇಕಡಾ 15ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಹೇಳುವ ಮೂಲಕ ದೇಶದ ರೈತರನ್ನು ಹಾಡಿ ಹೊಗಳಿದ್ದಾರೆ!!

ಮೂಲ: https://indianexpress.com/article/india/narendra-modi-farmer-interaction-live-farm-issue-income-protests-video-conference-5225113/

– ಅಲೋಖಾ

 

Tags

Related Articles

Close