ಪ್ರಚಲಿತ

ಸೈನಿಕರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್!! ಬುಲೆಟ್ ಪ್ರೂಫ್ ಜಾಕೆಟ್’ನ್ನು ಸೆಡ್ಡು ಹೊಡೆಯಲಿದೆ ಬಾಬಾ ಕವಚ್!!

ದೇಶ ಕಾಯುವ ಭಾರತೀಯ ಸೈನಿಕರಿಗೆ ನಾನಾ ಸವಲತ್ತುಗಳನ್ನು ನೀಡುತ್ತಲೇ ಬರುತ್ತಿರುವ ನರೇಂದ್ರ ಮೋದಿ ಸರ್ಕಾರವು ಬೇಡಿಕೆ ಸಲ್ಲಿಸಿ 9 ವರ್ಷಗಳಾದ ಬಳಿಕ ಮೊದಲ ಬಾರಿಗೆ ಬುಲೆಟ್ ಫ್ರೂಫ್ ಜಾಕೆಟ್’ಗಳನ್ನು ನೀಡುವ ಮೂಲಕ ಸೈನಿಕರಿಗೆ ಹೊಸ ಭರವಸೆಯನ್ನು ನೀಡಿದ್ದರು!! ಅಷ್ಟೇ ಅಲ್ಲದೇ ಪ್ರತಿ ಬಾರಿಯೂ ರಕ್ಷಣಾ ಕ್ಷೇತ್ರಕ್ಕೆ ವಿಶೇಷವಾದ ಒತ್ತು ನೀಡುತ್ತಲೇ ಬರುತ್ತಿರುವ ನರೇಂದ್ರ ಮೋದಿ ಸರ್ಕಾರವು ಸಿ ಆರ್ ಪಿ ಎಫ್ ಸಿಬ್ಬಂದಿಗಳಿಗೂ ಶೀಘ್ರದಲ್ಲೇ ಲಘು ತೂಕದ ಬಾಬಾ ಕವಚ್ ಗಳನ್ನು ಒದಗಿಸಲು ನಿರ್ಧರಿಸಲಾಗಿದೆ.

ಹೌದು…. ಗಡಿ ಕಾಯುವ ಯೋಧರಿಗೆ ನಾನಾ ಸವಲತ್ತುಗಳನ್ನು ನೀಡುತ್ತಲೇ ಬರುತ್ತಿರುವ ನರೇಂದ್ರ ಮೋದಿ ಸರ್ಕಾರವು ನಾನಾ ಸವಲತ್ತುಗಳನ್ನು ನೀಡುವುದರ ಜೊತೆಗೆ ಶತ್ರುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯುದ್ಧ ಸಂದರ್ಭಗಳಲ್ಲಿ 360 ಡಿಗ್ರಿಯಲ್ಲೂ ಸುರಕ್ಷತೆಯನ್ನು ಒದಗಿಸಲು ಬುಲೆಟ್ ಪ್ರೂಫ್ ಜಾಕೆಟ್‍ಗಳನ್ನು ನೀಡುತ್ತಿರುವ ವಿಚಾರ ಗೊತ್ತೇ ಇದೆ!! ಆದರೆ ಇದೀಗ ಸಿ.ಆರ್.ಪಿ.ಎಫ್ ಸಿಬ್ಬಂದಿಗಳಿಗೆ ಶೀಘ್ರದಲ್ಲೇ ಲಘು ತೂಕದ ಬುಲೆಟ್ ಫ್ರೂಫ್ ಜಾಕೆಟ್ ಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲದೇ, ಇದು ಪ್ರಸ್ತುತ ಇರುವ ಜಾಕೆಟ್ ಗಳಿಗಿಂತ ಇದು ಹೆಚ್ಚು ಸಮರ್ಥವಾಗಿರಲಿದೆ.

ಈಗಾಗಲೇ ಸೈನಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಬುಲೆಟ್ ಪ್ರೂಫ್ ಜಾಕೆಟ್ ತಯಾರಿಸಲು ಅನುಮತಿ ನೀಡಿದ್ದು, ಆ ಮೂಲಕ ಕಳೆದ ಒಂಬತ್ತು ವರ್ಷದ ಹಿಂದೆ ಕೇಂದ್ರ ಸರ್ಕಾರಕ್ಕೆ ಬುಲೆಟ್ ಪ್ರೂಫ್ ಜಾಕೆಟ್ ನೀಡಬೇಕು ಎಂದು ಮನವಿ ಸಲ್ಲಿಸಿ ಸೈನಿಕರ ಆಸೆಯನ್ನು ತಣಿಸಿದ್ದಂತೂ ಅಕ್ಷರಶಃ ನಿಜ!! ಅಷ್ಟೇ ಅಲ್ಲದೇ, ಈ ಹಿಂದೆ ಕೇಂದ್ರ ಸರ್ಕಾರವು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ರಕ್ಷಣಾ ಸಚಿವಾಲಯ ಈ ಜಾಕೆಟ್ ಗಳ ತಯಾರಿಕೆಗೆ ರಕ್ಷಣಾ ಸಂಸ್ಥೆ ಜೊತೆ ಒಪ್ಪಂದಕ್ಕೆ ಸಹಿ ಹಾಕಿತ್ತಲ್ಲದೇ ರೂಪಾಯಿ 639 ಕೋಟಿ ವೆಚ್ಚದಲ್ಲಿ 1.86ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ ಗಳು ತಯಾರಾಗಲಿದೆ ಎಂದು ಒಪ್ಪಂದದಲ್ಲಿ ಹೇಳಲಾಗಿತ್ತು!! ಆದರೆ ಇದೀಗ ಸಿ.ಆರ್.ಪಿ.ಎಫ್ ಸಿಬ್ಬಂದಿಗಳಿಗೆ ಶೀಘ್ರದಲ್ಲೇ ಲಘು ತೂಕದ ಬಾಬಾ ಕವಚ್ ಗಳನ್ನು ಒದಗಿಸಲು ನಿರ್ಧರಿಸುವ ಮೂಲಕ ಸೈನಿಕ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ.

ಅಷ್ಟಕ್ಕೂ ಏನಿದು ಈ ಬಾಬಾ ಕವಚ್??

ನರೇಂದ್ರ ಮೋದಿ ಸರ್ಕಾರವು ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರದಲ್ಲಿ ಸೇನೆಗೆ ಮುಕ್ತ ಸಹಕಾರ ಮತ್ತು ಬೆಂಬಲವನ್ನು ನೀಡುತ್ತಲೇ ಬರುತ್ತಿದ್ದು ಇದರೊಂದಿಗೆ ಸೈನಿಕರಿಗೆ ಬೇಕಾದ ಬುಲೆಟ್ ಫ್ರೂಫ್ ಜಾಕೆಟ್ ಮತ್ತು ಹೆಲ್ಮೆಟ್ ಗಳನ್ನು ನೀಡಿದ್ದಲ್ಲದೇ ಸಾಕಷ್ಟು ಇನ್ನಿತರ ಸವಲತ್ತುಗಳನ್ನು ನೀಡಿದೆ. ಅಷ್ಟೇ ಅಲ್ಲದೇ, ಇತ್ತೀಚೆಗೆ ಕೇಂದ್ರ ಸರ್ಕಾರ ಭಾರತದ ಗಡಿ ಪ್ರದೇಶದಲ್ಲಿನ “ತ್ವರಿತ ಪ್ರಾಬಲ್ಯ”ಕ್ಕಾಗಿ ಫ್ಯೂಚರ್ ರೆಡಿ ಕಾಂಬಟ್ ವೆಹಿಕಲ್ (ಎಫ್.ಆರ್.ಸಿ.ವಿ)ನ್ನು ತರಲಿದೆಯಲ್ಲದೆ, ಈ ಅಭಿವೃದ್ಧಿಯ ನಂತರ ಪಾಕಿಸ್ತಾನ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಈ ಅತ್ಯಾಧುನಿಕ ಎಫ್.ಆರ್.ಸಿ.ವಿ ಟ್ಯಾಂಕ್ ಗಳನ್ನು ನಿಯೋಜಿಸಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಒಟ್ಟಾರೆಯಾಗಿ 2,000 ಕ್ಕಿಂತಲೂ ಹೆಚ್ಚು ವಾಹನಗಳನ್ನು ತಯಾರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿತ್ತು!!

ಆದರೆ ಇದೀಗ ಸಿ.ಆರ್.ಪಿ.ಎಫ್ ಸಿಬ್ಬಂದಿಗಳಿಗೆ ಶೀಘ್ರದಲ್ಲಿಯೇ ಬಾಬಾ ಕವಚ್ ನೀಡಲು ನಿರ್ಧರಿಸುವ ಮೂಲಕ ಹೊಸ ಬದಲಾವಣೆಯನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ!! ಅಷ್ಟಕ್ಕೂ ಈ ಬಾಬಾ ಕವಚ್ ಅಂದರೆ ಏನು ಗೊತ್ತೇ?? ಎಕೆ-47 ರೈಫಲ್ ಗಳಿಂದ 5-10 ಮೀಟರ್ ದೂರದಿಂದ ಫೈಯರ್ ಆದ ಎಂಟು 7.62 ಎಂ ಎಂ ಬುಲೆಟ್ ನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯವನ್ನು ಹೊಂದಿರುವ ಈ ಬಾಬಾ ಕವಚ್ ನ್ನು ಬಾಬಾ ಅಟೋಮಿಕ್ ರಿಸಚ್ ಸೆಂಟರ್ ಈ ಜಾಕೆಟ್ ನ್ನು ಅಭಿವೃದ್ಧಿ ಪಡಿಸಿದೆ!!

ಯೋಧರಿಗೆ ಸಿಗಲಿದೆ ಲಘು ತೂಕದ ಬುಲೆಟ್ ಫ್ರೂಫ್ ಜಾಕೆಟ್ !!

ಹೌದು………. ಬಾಬಾ ಅಟೋಮಿಕ್ ರಿಸಚ್ ಸೆಂಟರ್ ಅಭಿವೃದ್ದಿ ಪಡಿಸಿರುವ ಈ ಜಾಕೆಟ್ ನ್ನು “ಬಾಬಾ ಕವಚ್” ಎಂದು ಹೆಸರಿಸಲಾಗಿದೆ. ಪ್ರಸ್ತುತ ಇರುವ ಜಾಕೆಟ್ ಗಳಿಗಿಂತ ಇದರ ತೂಕ ಶೇಕಡಾ 50ರಷ್ಟು ಕಡಿಮೆ ಇರಲಿದ್ದು, 3.1 ಕೆಜಿಯಿಂದ 6.6 ಕೆ.ಜಿ ತೂಕ ಇರಲಿದೆ. ಅಷ್ಟೆ ಅಲ್ಲದೇ ಇದು, ಎಂಟು 7.62 ಎಂಎಂ ಬುಲೆಟ್ ನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯವನ್ನು ಹೊಂದಿದೆ!!

ಅಷ್ಟೇ ಅಲ್ಲದೇ ಇಂಡಿಯನ್ ಸ್ಮಾಲ್ ಆಮ್ರ್ಸ್ ಸಿಸ್ಟಮ್ ನ 5.6 ಎಂ ಎಂ ಬುಲೆಟ್ ಮತ್ತು ಸೆಲ್ಪ್‍ಲೋಡಿಂಗ್ ರೈಫಲ್ 7.65 ಎಂ ಎಂ ಬುಲೆಟ್ ನ್ನು ಎದುರಿಸುವ ಸಾಮಥ್ರ್ಯ ಹೊಂದಿದೆ ಎಂದು ತಿಳಿದು ಬಂದಿದೆ!! ಒಟ್ಟಿನಲ್ಲಿ ಬುಲೆಟ್ ಪ್ರೂಫ್ ಜಾಕೆಟ್ ಗಳಿಗಿಂತಲೂ ಲಘು ತೂಕದ ಬುಲೆಟ್ ಪ್ರೂಪ್ ಜಾಕೆಟ್ ಗಳು ಸೈನಿಕರಿಗೆ ಹೆಚ್ಚು ಉಪಯೋಗವಾಗಲಿದ್ದು, ಸೈನಿಕರ ಮೊಗದಲ್ಲಿ ಸಂತಸ ಮನೆಮಾಡುವಂತೆ ಮಾಡಿದೆ!!

ಈಗಾಗಲೇ ಸರ್ಕಾರವು ಮೇಕ್ ಇಂಡಿಯಾ ಯೋಜನೆಯಡಿಯಲ್ಲಿ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದ ಬೆನ್ನಲ್ಲೇ ಇದೀಗ ಲಘು ತೂಕದ ಬುಲೆಟ್ ಫ್ರೂಫ್ ಜಾಕೆಟ್ ಗಳನ್ನು ಒದಗಿಸಲು ನಿರ್ಧರಿಸಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ!!!

ಮೂಲ: http://news13.in/archives/101188

– ಅಲೋಖಾ

Tags

Related Articles

Close