ಪ್ರಚಲಿತ

ಎಪ್ಪತ್ತು ವರ್ಷಗಳಿಂದ ಅಭಿಶಾಪಕ್ಕೊಳಗಾಗಿದ್ದ ವಾರಾಣಸಿಯಂಬ ದೇವನಗರಿ ಕೇವಲ ನಾಲ್ಕೇ ವರ್ಷಗಳಲ್ಲಿ ಅಪ್ಸರೆಯಂತೆ ಕಂಗೊಳಿಸುತ್ತಿರುವುದು ಮೋದಿಯವರ ವಿಕಾಸವಾದದ ಫಲ!!

ವಾರಾಣಸಿ ಎಂದರೆ ಸಾಕು ಸನಾತನಿಗಳ ಮೈಯಲ್ಲಿ ರೋಮಾಂಚನವಾಗುತ್ತದೆ. ಗಂಗೆ ಎಂದರೆ ಸಾಕು ಹಿಂದೂಗಳ ಆತ್ಮದಲ್ಲಿ ಮಿಂಚಿನ ಸಂಚಾರವಾಗುತ್ತದೆ. ವಿಶ್ವದ ಅತ್ಯಂತ ಪ್ರಾಚೀನ ಮತ್ತು ಪ್ರಖ್ಯಾತ ದೇವಾಲಯ ಕಾಶಿಯ ವಿಶ್ವನಾಥನ ಸನ್ನಿಧಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕು, ಗಂಗಾನದಿಯಲ್ಲಿ ಪಾಪ ತೊಳೆಯಬೇಕು ಎನ್ನುವುದು ಕೋಟಿ ಕೋಟಿ ಸನಾತನಿಗಳ ಹೆಬ್ಬಯಕೆ. ಅಂಥ ವಾರಾಣಸಿ, ಆಳುವವರ ಅಗಾಧ ನಿರ್ಲಕ್ಷ್ಯಗೊಳಗಾಗಿ ಶಾಪಗ್ರಸ್ತಅಪ್ಸರೆಯಂತೆ ವಿಕಾರ ರೂಪು ತಳೆದಿತ್ತು. ವಿಶ್ವ ಪ್ರಸಿದ್ದ ವಾರಾಣಸಿಯಲ್ಲಿ ಹೊಲಸು ತುಂಬಿ, ಪರಮ ಪಾವನೆ ಗಂಗೆ ಕೊಳೆತು ನಾರುತ್ತಿದ್ದಳು. ಜಗದ ಪಾಪ ತೊಳೆವ ಗಂಗೆಗೇ ಇಂತಹ ದೌರ್ಭಾಗ್ಯ!! ಆಳುವವರ ನಿರ್ಲಕ್ಯದ ಪರಮಾವಧಿ ಹೇಗಿತ್ತು ಎನ್ನುವುದನ್ನು ನೀವೆ ಯೋಚಿಸಿ.

ಸಕಲ ಸೌಲಭ್ಯಗಳಿಂದ ಸರ್ವಾಲಂಕಾರ ಭೂಷಿತೆಯಾಗಿ ಕಂಗೊಳಿಸಬೇಕಿದ್ದ ಅಪ್ಸರೆ, ಚಿಂದಿ ಉಟ್ಟು ತಲೆಕೆದರಿಕೊಂಡ ಭಿಕಾರಿಣಿಯಂತಿತ್ತು ವಾರಾಣಸಿಯ ನೋಟ. ಇಂತಹ ವಾರಾಣಸಿಯನ್ನು ಶಾಪ ಮುಕ್ತವಾಗಿಸಲೆಂದೇ ನಾಲ್ಕು ವರ್ಷಗಳ ಹಿಂದೆ ಒಬ್ಬ ಮಹಾಪುರುಷನ ಆಗಮನವಾಯಿತು. ಆ ಮಹಾಪುರುಷ ವಾರಾಣಸಿಗೆ ಕಾಲಿಟ್ಟಿದ್ದೇ ತಡ, ಅಪ್ಸರೆಯ ಶಾಪ ವಿಮೋಚನೆಯಾಯಿತು. ವಾರಾಣಸಿಯೆಂಬ ಭಗವದ್ ನಗರಿಯ ಶಾಪ ವಿಮೋಚನೆ ಮಾಡಿದ್ದು ಬೇರಾರೂ ಅಲ್ಲ, ನಮ್ಮ ಪ್ರಧಾನ ಸೇವಕ ಮೋದಿ! ಮೋದಿ ವಾರಾಣಸಿಗೆ ಕಾಲಿಟ್ಟ ಘಳಿಗೆಯಿಂದಲೆ ಅಲ್ಲಿನ ಚಿತ್ರಣ ಬದಲಾಗತೊಡಗಿತು. ವಾರಾಣಸಿಯಿಂದ ಮೋದಿಯವರು ಸಂಸತ್ತಿಗೆ ಚುನಾಯಿತರಾದಾಗಿನಿಂದ ಇಲ್ಲಿ ಅಭಿವೃದ್ದಿಗೆ ವೇಗ ದೊರಕಿದೆ ಎಂದು ಇಲ್ಲಿನ ನಿವಾಸಿಗಳೆ ಒಪ್ಪುತ್ತಾರೆ.

ಒಂದು ಕಾಲದಲ್ಲಿ ಗಬ್ಬೆದ್ದು ನಾರುತ್ತಿದ್ದ ವಾರಾಣಸಿಯ ಮೂಲೆ ಮೂಲೆಗಳಲ್ಲಿ ಇಂದು ಶೌಚಾಲಯ ಮತ್ತು ಕಸದ ಬುಟ್ಟಿಗಳಿವೆ. ನಗರದಲ್ಲಿ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ರೈಲು ನಿಲ್ದಾಣಗಳು ಅತ್ಯಂತ ಸ್ವಚ್ಛವಾಗಿವೆ. ‘ಸುಲಬ್ ಇಂಟರ್ನ್ಯಾಷನಲ್’ ಸಂಸ್ಥೆಯು ಜನರಿಗಾಗಿ ಶೌಚಾಲಯ ಮತ್ತು ಸ್ನಾನದ ಸೌಲಭ್ಯಗಳೊಂದಿಗೆ ದೊಡ್ಡ ಸಂಕೀರ್ಣವನ್ನು ನಿರ್ಮಿಸಿದ್ದರೆ, ಸರ್ಕಾರೇತರ ಸಂಸ್ಥೆ ಗಂಗಾ ಘಾಟ್ ನ ನಿರ್ವಹಣೆ ನೋಡಿಕೊಳ್ಳುತ್ತಿದೆ. ಖುದ್ದು ಪ್ರಧಾನಮಂತ್ರಿಯೆ ಈ ಸಂಸ್ಥೆಗಳ ಕಾರ್ಯವನ್ನು ಮನಪೂರ್ವಕವಾಗಿ ಶ್ಲಾಘಿಸಿದ್ದಾರೆ.

ದೇವ ಭೂಮಿಯ ಅಸ್ಸಿ ಘಾಟ್ ನ ಸೌಂದರ್ಯ ವರ್ಧನೆಯ ಕಾರ್ಯವು ಭರದಿಂದ ಸಾಗುತ್ತಿದೆ. ತಟದ ಸುತ್ತ ಮುತ್ತ ಸರಕಾರ ವಿದ್ಯುತ್ ದೀಪಗಳನ್ನು ಸ್ಥಾಪಿಸಿದೆ. ಸೂರ್ಯಾಸ್ತದ ನಂತರವೂ ಅಸ್ಸಿ ಘಾಟ್ ದೀಪದ ಬೆಳಕಿನಲ್ಲಿ ಝಗಮಗಿಸುತ್ತಿದೆ. ಘಾಟ್ ಗೆ ಹೋಗುವ ದಾರಿಯಲ್ಲಿ ಕಾಂಕ್ರೀಟ್ ಮಾರ್ಗ ಮತ್ತು ಸ್ಲ್ಯಾಬ್ಗಳನ್ನು ಅಳವಡಿಸಲಾಗಿದೆ. 2014 ರ ಉತ್ತರಾರ್ಧದಲ್ಲಿ ‘ಸುಬಹ್-ಎ-ಬನಾರಸ್’ ಎನ್ನುವ ಹೊಸ ಪರಿಕಲ್ಪನೆಯನ್ನು ಸ್ಥಾಪಿಸಲಾಯಿತು. ಈ ಪ್ರದೇಶದಲ್ಲಿ ಕಲಾವಿದರು ತಮ್ಮ ತಮ್ಮ ಕಲಾ ನೈಪುಣ್ಯತೆಯನ್ನು ಜನರ ಮುಂದೆ ಪ್ರದರ್ಶನಕ್ಕಿಟ್ಟು ಹೆಚ್ಚು ಹೆಚ್ಚು ಜನರು ಘಾಟಿಗೆ ಬರುವಂತೆ ಪ್ರೇರೇಪಿಸುತ್ತಿದ್ದಾರೆ.

ಇಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಮೋದಿಯವರ ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಾನೆ. ಮೋದಿಯವರ ಕೃಪೆಯಿಂದ ಇಲ್ಲಿ ತುಂಬಾ ಕೆಲಸಗಳು ನಡೆಯುತ್ತಿವೆ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ. ಎಪ್ಪತ್ತು ವರ್ಷಗಳ ಘೋರ ನಿರ್ಲ್ಯಕ್ಷದಿಂದಾಗಿ ಹಲವಾರು ವಿಷಯಗಳು ಇನ್ನೂ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ಘಾಟಿನ ಸುತ್ತ ಮುತ್ತ ಜನರ ಗಿಜಿಗುಡುವಿಕೆ, ವಾಹನಗಳ ನಿಧಾನಗತಿಯ ಸಂಚಾರ, ಕಳಪೆ ನಾಗರಿಕ ನಿರ್ವಹಣೆ, ತೆರೆದ ಚರಂಡಿಗಳು, ಬೀದಿಯಲ್ಲಿ ತಿರುಗಾಡುವ ಪ್ರಾಣಿಗಳು, ದುರ್ನಾತ ಬೀರುತ್ತಿರುವ ಪ್ರದೇಶಗಳು ಹಿಂದಿನ ಸರಕಾರಗಳು ವಾರಾಣಸಿಗೆ ಕೊಟ್ಟ ಕೊಡುಗೆಯ ಜೀವಂತ ನಿದರ್ಶನವಾಗಿದೆ. 2014 ಹಿಂದೆ ಇದಕ್ಕಿಂತಲೂ ಕೆಟ್ಟ ವಾತಾವರಣದಲ್ಲಿ ಬದುಕು ಸಾಗಿಸಬೇಕಾಗಿತ್ತು ಈಗ ಎಷ್ಟೋ ವಾಸಿ ಎನ್ನುವುದು ಇಲ್ಲಿನವರ ಅಂಬೋಣ.

 

ಹಿಂದೆಲ್ಲ ವಾರಾಣಸಿಯ ಕಿರಿದಾದ ಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ವಿದ್ಯುತ್ ತಂತಿಗಳು ನೇತಾಡುತ್ತಿದ್ದವು. ಎಂಬತ್ತಾರು ವರ್ಷಗಳ ಬಳಿಕ ಮೊದಲ ಬಾರಿಗೆ ವಾರಾಣಸಿ ಸಂಪೂರ್ಣವಾಗಿ ‘ವೈಯರ್ ಲೆಸ್’ ನಗರವಾಗಿ ಪರಿವರ್ತಿತವಾಗಿದೆ. ಈಗ ವಾರಾಣಸಿಯ ಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ವಿದ್ಯುತ್ ತಂತಿಗಳು ನೇತಾಡುವುದಿಲ್ಲ, ಬದಲಾಗಿ ಭೂಗತ ಕೇಬಲ್ ವ್ಯವಸ್ತೆ ಮಾಡಲಾಗಿದೆ. ಇಷ್ಟೆಲ್ಲವೂ ನಡೆದದ್ದು ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಎನ್ನುವುದನ್ನು ನೆನಪಿಡಿ. ತನ್ನನ್ನು ಚುನಾಯಿಸಿದ ಮತದಾರರಿಗೆ ‘ಚೂನಾ’ ಹಾಕಿ ಓಡುವ ಜಾಯಮಾನದವರಲ್ಲ ಮೋದಿ. ಮೋದಿ ದೇಶಕ್ಕಾಗಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಕೇಳುವವರು ಒಮ್ಮೆ ವಾರಾಣಸಿಗೆ ಹೋಗಿ ಅಲ್ಲಿಯ ಜನರನ್ನು ಭೇಟಿಯಾಗಿ ಬರುವುದರ ಜೊತೆಗೆ 30 ವರ್ಷಗಳಿಂದ ಕಾಂಗ್ರೆಸಿನ ರಾಜ ಪರಿವಾರದ ಕ್ಷೇತ್ರವಾದ ಅಮೇಠಿ-ರಾಯ ಬರೇಲಿಗೂ ಭೇಟಿ ಕೊಟ್ಟು ನೋಡುವುದು ಒಳಿತು.

ಕಳೆದ ಮೂವತ್ತು ವರ್ಷಗಳಿಂದ ಅಮೇಠಿ-ರಾಯಬರೇಲಿಯನ್ನು ತಮ್ಮ ಪಿತ್ರಾರ್ಜಿತ ಆಸ್ತಿ ಎಂಬತೆ ಕಂಡುಕೊಂಡ ಪರಿವಾರ ಪಕ್ಷ ತಮ್ಮನ್ನು ಚುನಾಯಿಸಿದ ಮತದಾರರಿಗೆ ಕೊಟ್ಟದ್ದು ದೊಡ್ಡ ಸೊನ್ನೆ. ಪರಿವಾರವನ್ನು ಗೆಲ್ಲಿಸಿದ ರಾಯಬರೇಲಿ ಇಂದು ವಿಕಾಸಕ್ಕಾಗಿ ಹಪ ಹಪಿಸುತ್ತಿದೆ. ಮೋದಿ ಅವರು ವಾರಾಣಸಿಗೆ ನಾಲ್ಕು ವರ್ಷಗಳಲ್ಲಿ ಕೊಟ್ಟ ಅಭಿವೃದ್ದಿಯ ಕೊಡುಗೆಯನ್ನು ಮೂವತ್ತು ವರ್ಷ ಕಳೆದರೂ ಅಮ್ಮ-ಮಗನಿಗೆ ಅಮೇಠಿಗೆ ಕೊಡಲಾಗಿಲ್ಲ. ಎಂತಹ ನಾಚಿಗೆ ಗೇಡಿನ ವಿಚಾರ ಇದು. ಅಂಗೈಯಗಲದ ತಮ್ಮ ಕ್ಷೇತ್ರವನ್ನೆ ಅಭಿವೃದ್ದಿ ಮಾಡಲಾಗದವರು ದೇಶದ ಅಭಿವೃದ್ದಿಯ ಬಗ್ಗೆ ಭಾಷಣ ಮಾಡುತ್ತಾರೆ. ತಮಗೆ ಮತ ನೀಡಿದ ಮತದಾರರಿಗೆ ನಲವತ್ತೆಂಟು ವರ್ಷಗಳಿಂದಲೂ ಪರಿವಾರ ನೀಡಿದ್ದು ಕೇವಲ ಖಾಲಿ ಚೊಂಬು ಮತ್ತು ಮೂರು ನಾಮ. ಅದಕ್ಕೆ ಇಂದು ದೇಶದ ಮತದಾರ ಅಮ್ಮ-ಮಗನ ಕೈ ಗೆ ಚೆಂಬಿತ್ತಿದ್ದಾರೆ ಮತ್ತು ಪಟಗೋಸಿ ಪಕ್ಷಗಳ ಎದುರು ನಿಂತು ಭಿಕ್ಷೆ ಬೇಡುವಂತೆ ಮಾಡಿದ್ದಾರೆ!! ಸೊನ್ನೆಗೆ- ಸೊನ್ನೆ, ಅಲ್ಲಿಗೆ ಲೆಕ್ಕ ಚುಕ್ತಾ.. ಭಾರತವಿನ್ನು ಕಾಂಗ್ರೆಸ್ ಮುಕ್ತ…..

-ಶಾರ್ವರಿ

Tags

Related Articles

Close