ಪ್ರಚಲಿತ

ನಮೋ ಬ್ರೇಕಿಂಗ್! ಒಡಿಶಾದಲ್ಲಿ ಅಬ್ಬರಿಸಿದ ಮೋದಿ..! ಕಾಂಗ್ರೆಸ್‍ನ್ನು ಹಿಗ್ಗಾಮುಗ್ಗಾ ಝಾಡಿಸಿದ ರಾಷ್ಟ್ರನಾಯಕ…

ಇಂದು ಭಾರತ ಮಾತೆಯ ಪುತ್ರ ಹೆಮ್ಮೆಯ ಪುತ್ರ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ 4 ವರ್ಷಗಳನ್ನು ಪೂರೈಸಿದೆ. ದೇಶದಲ್ಲಿ ನಶಿಸುತ್ತಿದ್ದ ಪ್ರಜಾಪ್ರಭುತ್ವದ ಉಳಿವಿಗಾಗಿ ಪುಟಿದೆದ್ದ ಭಾರತೀಯ ಜನತಾ ಪಕ್ಷ ಅಂದು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ತಮ್ಮ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಅಂದಿನಿಂದ ಈ ರಾಷ್ಟ್ರದಲ್ಲಿ ಹೊಸ ಅಲೆಯೇ ಏರ್ಪಟ್ಟಿತ್ತು. “ಅಬ್ ಕೀ ಬಾರ್ ಮೋದಿ ಸರ್ಕಾರ್” ಎಂಬ ಘೋಷ ವಾಕ್ಯ ಮನೆ ಮನೆಯಲ್ಲೂ ಪ್ರತಿನಿಧಿಸಿತು. ಮುದಿ ವಯಸ್ಕರಿಂದ ಹಿಡಿದು ತೊದಲು ಮಾತ ನುಡಿವ ಮಕ್ಕಳಲ್ಲೂ ಅಬ್ ಕೀ ಬಾರ್ ಮೋದಿ ಸರ್ಕಾರ್ ಎಂಬ ವಾಕ್ಯ ಪಸರಿಸಿ ಬಿಟ್ಟಿತ್ತು. “ಹರ್ ಹರ್ ಮೋದಿ, ಘರ್ ಘರ್ ಮೋದಿ” ಎಂದು ಮೋದಿಯನ್ನು ದೇಶದ ಪ್ರತಿ ಪ್ರಜೆಯೂ ತಮ್ಮ ಮನೆಯಲ್ಲಿ ಸ್ಥಾಪಿಸತೊಡಗಿದರು. 

ಅಂದುಕೊಂಡಂತೆಯೇ ಪ್ರಧಾನಿ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ 282 ಸ್ಥಾನಗಳನ್ನು ಗೆದ್ದು ಯಾವುದೇ ಮಿತ್ರ ಪಕ್ಷಗಳ ಬೆಂಬಲ ಇಲ್ಲದೆನೇ ಅಧಿಕಾರ ಹಿಡಿಯುವಂತಹಾ ಮಟ್ಟಿಗೆ ಸ್ಥಾನಗಳನ್ನು ಗಳಿಸಿಬಿಟ್ಟಿತ್ತು. ಅಂದು ಶುರುವಾದ ನಮೋ ಮೇನಿಯಾ ಇಂದಿಗೂ ಕಡಿಮೆಯಾಗಿಲ್ಲ. ದೇಶವಿರಲಿ ವಿದೇಶವೇ ಇರಲಿ, ಹಳ್ಳಿ ಇರಲಿ ದಿಲ್ಲಿಯೇ ಇರಲಿ, ಎತ್ತ ಹೋದರೂ ಅಲ್ಲಿ ಮೋದಿ ಮೋದಿ ಎಂಬ ಉಧ್ಘೋಷ ಮುಗಿಲು ಮುಟ್ಟುತ್ತಿರುತ್ತೆ. ಇದೀಗ ಮೋದಿ ಸರ್ಕಾರ 4ನೇ ಸಂವತ್ಸರಗಳನ್ನು ಪೂರೈಸಿ 5ನೇ ವರ್ಷಕ್ಕೆ ಕಾಲಿಡುತ್ತಿದೆ.

ಒಡಿಶಾದಲ್ಲಿ ಗುಡುಗಿದ ನಮೋ..!

ಪ್ರಧಾನಿ ಮೋದಿ ಸರ್ಕಾರ 4 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಒಡಿಶಾದ ಕಟಕ್‍ನಲ್ಲಿ ಅಬ್ಬರಿಸಿದ್ದರು. ಈ ಹಿಂದೆ 60 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷವನ್ನು ಉಲ್ಲೇಖಿಸಿ ಆ ಪಕ್ಷವನ್ನು ಝಾಡಿಸಿದ್ದರು. ಕಾಂಗ್ರೆಸ್ ಪಕ್ಷದ ಕುಟುಂಬ ಹಾಗೂ ಭ್ರಷ್ಟ ರಾಜಕಾರಣವನ್ನು ನೋಡಿಯೇ ಜನರು ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಮನೆಗೆ ಅಟ್ಟಿದ್ದರು. ಆದರೆ ಆ ಪಕ್ಷ ಇಂದಿಗೂ ಕುಟುಂಬ ರಾಜಕಾರಣ ಹಿಂದೆ ಓಡುವುದನ್ನು ಬಿಟ್ಟಿಲ್ಲ. ಈ ಪಕ್ಷಕ್ಕೆ ದೇಶದಲ್ಲಿ ಎಷ್ಟು ಶೌಚಾಲಯವಿದೆ ಎಂಬುವುದರ ಬಗ್ಗೆ ಚಿಂತೆ ಇಲ್ಲ, ಎಷ್ಟು ಮನೆಗಳಿಗೆ ವಿದ್ಯುತ್ ಎಂದು ಗೊತ್ತಿಲ್ಲ. ಆದರೆ ಕುಟುಂಬ ರಾಜಕಾರಣವನ್ನು ಮಾತ್ರ ನಿಲ್ಲಿಸುತ್ತಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ದುರಾಡಳಿತ ಮುಗಿಲು ಮುಟ್ಟಿತ್ತು. 48 ವರ್ಷಗಳ ಕಾಲ ಒಂದೇ ಕುಟುಂಬದಿಂದ ಈ ದೇಶ ಆಡಳಿತವನ್ನು ಕಂಡಿದೆ. ಈ ಹಿಂದೆ ರಿಮೋಟ್ ಕಂಟ್ರೋಲ್ ಸರ್ಕಾರ ಕೆಲಸ ಮಾಡುತ್ತಿತ್ತು.

ಕಾಂಗ್ರೆಸ್ ಪಕ್ಷದವರು ಕೇವಲ ಒಂದು ಕುಟುಂಬವನ್ನು ಮಾತ್ರವೇ ಉದ್ಧರಿಸುತ್ತಾ ಬಂದಿದ್ದರು. ಅವರು ಫ್ಯಾಮಿಲಿ ಫಸ್ಟ್ ಎನ್ನುತ್ತಿದ್ದಾರೆ. ಆದರೆ ನಾವು ನೇಷನ್ ಫಸ್ಟ್ ಎನ್ನುತ್ತೇವೆ. ನಮ್ಮದು ಜನಪಥ ಸರ್ಕಾರ ಅಲ್ಲ. ನಮ್ಮದು ಜನಮತದಿಂದ ಬಂದ ಸರ್ಕಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಮ್ಮದು ಕನ್ ಫ್ಯೂಷನ್ ಸರ್ಕಾರ್ ಅಲ್ಲ, ಜನರಿಗಾಗಿ ಕಮಿಟೆಡ್ ಸರ್ಕಾರ ಎಂದು ನಮೋ ಹೇಳಿದ್ದಾರೆ. ಪಂಚಾಯತ್‍ನಿಂದ ಪಾರ್ಲಿಮೆಂಟ್‍ನ ವರೆಗೂ ಭಾರತೀಯ ಜನತಾ ಪಕ್ಷದ ಯಶೋಗಾಥೆ ಇದೆ. ಹೀಗಾಗಿ ಎಲ್ಲೆಲ್ಲೂ ಕೇಸರಿ ಹಾರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ದೇಶದ 20 ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರವಿದೆ. ಆಯುಷ್ಮಾನ್ ಯೋಜನೆಯ ಮೂಲಕ 50 ಕೋಟಿ ಜನರಿಗೆ ಆರೋಗ್ಯ ವಿಮೆಯನ್ನು ನಾವು ನೀಡಿದ್ದೇವೆ. ಈ ಮೂಲಕ ಪ್ರತಿ ಗ್ರಾಮವನ್ನೂ ನಾವು ತಲುಪಿದ್ದೇವೆ. ಭೇಟಿ ಪಡಾವೋ, ಭೇಟಿ ಬಚಾವೋ, ಮುದ್ರಾ ಯೋಜನೆ, ಸ್ವಚ್ಛ ಭಾರತ, ಸಹಿತ ಅನೇಕ ಯೋಜನೆಗಳು ನಮ್ಮ ಸರ್ಕಾರದಿಂದ ಆಗಿದೆ. ಜೀವನ ಜ್ಯೋತಿ ಯೋಜನೆಯ ಮೂಲಕ ಜನರಿಗೆ ವಿಮೆ ನೀಡಲಾಗುತ್ತಿದೆ. ಭಾರತದ ಆರ್ಥಿಕ ಪ್ರಗತಿ ಬಗ್ಗೆ ವಿಶ್ವ ಬ್ಯಾಂಕ್‍ನಿಂದ ಪ್ರಮಾಣ ಪತ್ರ ಸಿಕ್ಕಿದೆ.

ಹೀಗೆ ಒಂದರ ಮೇಲೊಂದರಂತೆ ಪ್ರಧಾನಿ ಮೋದಿಯವರು ತಮ್ಮ ಸರ್ಕಾರದ ಸಾಧನೆ ಬಗ್ಗೆ ಭಂಡಾರವನ್ನೇ ಬಿಚ್ಚಿಟ್ಟಿದ್ದರು. ಮೋದಿಯನ್ನು 2019ರ ಚುನಾವಣೆಯಲ್ಲಿ ಎದುರಿಸಲು ತೃತೀಯ ರಂಗದ ಮೂಲಕ ಎಲ್ಲಾ ಪಕ್ಷಗಳೂ ಒಂದಾಗಿರುತ್ತಿದ್ದು, ತಾನು ಅಥವಾ ತನ್ನ ಪಕ್ಷ ಒಂದೇ ಈ ಎಲ್ಲಾ ವಿರೋಧ ಪಕ್ಷದ ಹೋರಾಟ ಮಾಡಲು ಶಸ್ತ್ರ ಸನ್ನದ್ಧವಾಗಿದೆ ಎಂದು ಅಬ್ಬರಿಸಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close