ಪ್ರಚಲಿತ

ಮತ್ತೊಂದು ಸಮೀಕ್ಷೆಯಲ್ಲೂ ಅನಾವರಣಗೊಂಡ ಮೋದಿ ಹವಾ!! ಭಾರತೀಯ ಸಮೀಕ್ಷೆಯಲ್ಲಿ ಬಯಲಾಯಿತು ದೇಶದ 100 ಪ್ರಭಾವಿ ನಾಯಕರ ಪಟ್ಟಿ!!

ನರೇಂದ್ರ ಮೋದಿ ಸರ್ಕಾರದ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಭಾರತವು ಇಂದು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದ್ದರೆ ಮತ್ತೊಂದೆಡೆ ವಿಶ್ವದ ಪ್ರಬಲ ರಾಷ್ಟ್ರಗಳು ಭಾರತದ ಸ್ನೇಹವನ್ನು ಬಯಸುವುದರೊಂದಿಗೆ ಭಾರತ ಇಂದು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವುದೇ ಹೆಮ್ಮೆಯ ವಿಚಾರವಾಗಿದೆ!! ಯೂತ್ ಐಕಾನ್ ಆಗಿ ವಿಶ್ವದ ಗಮನ ಸೆಳೆದಿರುವ ನರೇಂದ್ರ ಮೋದಿಯವರ ಕಾರ್ಯ ವೈಖರಿಗೆ ಇಡೀ ವಿಶ್ವವೇ ಮಾರುಹೋಗುತ್ತಿದೆಯಲ್ಲದೇ ಟೈಮ್ಸ್ ಮ್ಯಾಗಜೀನ್ ನ ಸಮಕಾಲೀನ ಜಗತ್ತಿನ ಮೇಲೆ ಪ್ರಭಾವ ಬೀರಿದ 100 ಪ್ರಭಾವಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಥಾನ ಪಡೆದುಕೊಂಡಿದ್ದರು!!

ಆದರೆ ಇದೀಗ ಭಾರತದ ಅತ್ಯಂತ ಪ್ರಭಾವಶಾಲಿ ನಾಯಕರ ಪಟ್ಟಿಯೊಂದು ಬಿಡುಗಡೆಯಾಗಿದ್ದು, ಇದರಲ್ಲೂ ನರೇಂದ್ರ ಮೋದಿ ಪ್ರಭಾವಿ ವ್ಯಕ್ತಿಯಾಗಿ ಬಿಂಬಿತರಾಗಿದ್ದಾರೆ!! ‘ಇಂಡಿಯನ್ ಎಕ್ಸ್ ಪ್ರೆಸ್’ ಇಂಗ್ಲೀಷ್ ಸಂಸ್ಥೆಯು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸ್ವತಂತ್ರ ಭಾರತದ ಅತ್ಯಂತ ಶಕ್ತಿಶಾಲಿ ನಾಯಕನೆಂದೇ ಬಿಂಬಿತವಾಗುತ್ತಿರುವ ಇಪ್ಪತ್ತೆರಡು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರವನ್ನು ಸ್ಥಾಪಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ!!

ಅಷ್ಟೇ ಅಲ್ಲದೇ ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಮತ್ತು ಬಿಹಾರದ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು, ಜನಪ್ರಿಯತೆಗೆ ಒಂದಿಷ್ಟೂ ಧಕ್ಕೆಯಾಗಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಬ್ಲೂಮ್ ಸಂಸ್ಥೆಯು ಈ ಹಿಂದೆ ಸಮೀಕ್ಷೆಯನ್ನು ಕೈಗೊಂಡಿತ್ತು!! ಆ ಪ್ರಕಾರ, 2019ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೇರುವ ಜತೆಗೆ, 2024ರ ನಂತರದಲ್ಲೂ ಪ್ರಧಾನಿಯಾಗಿ ಆಡಳಿತ ನಡೆಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಬ್ಲೂಮ್ ಸಂಸ್ಥೆಯ ಸಮೀಕ್ಷೆ ವರದಿ ಮಾಡಿತ್ತು!!

ಆದರೆ ಇದೀಗ ಇಂಡಿಯನ್ ಎಕ್ಸ್ ಪ್ರೆಸ್ ಬಿಡುಗಡೆ ಮಾಡಿರುವ 100 ಪ್ರಭಾವಿ ಭಾರತೀಯ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ!! ಈಗಾಗಲೇ ಟೈಮ್ಸ್ ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ, ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮೈಕ್ರೋಸಾಫ್ಟ್ ನ ಸಿಇಒ ಸತ್ಯ ನಾದೆಳ್ಲ, ಇತ್ತೀಚೆಗಷ್ಟೇ ಆಯ್ಕೆಯಾದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮುಂತಾದವರ ಪೈಕಿ ಪ್ರಧಾನಿ ನರೇಂದ್ರ ಮೋದಿಯವರು ಈ ಪಟ್ಟಿಯಲ್ಲಿ ಮಿಂಚಿದ್ದರು!!

ಅಷ್ಟೇ ಅಲ್ಲದೇ ವಾರ್ಷಿಕವಾಗಿ ಬಿಡುಗಡೆ ಮಾಡುವ ವಿಶ್ವದ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ಹಾಗೂ ಭಾರತೀಯ ಮೂಲದ ಮೈಕ್ರೋಸಾಫ್ಟ್ ನ ಸಿಇಒ ಸ್ಥಾನ ಪಡೆದಿದ್ದು ಅಂತಿಮ ಪಟ್ಟಿ ಈ ತಿಂಗಳು ಪ್ರಕಟವಾಗಲಿದೆ ಎಂದು ತಿಳಿಸಿದೆ!! ಪ್ರಭಾವಿಗಳ ಪಟ್ಟಿಗೆ ಸಂಬಂಧಿಸಿದಂತೆ ಈಗಾಗಲೇ ಓದುಗರಿಗೆ ಆನ್ ಲೈನ್ ಓಟಿಂಗ್ ಮಾಡುವಂತೆ ಟೈಮ್ಸ್ ಮ್ಯಾಗಜೀನ್ ಮಾಡಿದ್ದು, 100 ಪ್ರಭಾವಿಗಳ ಪಟ್ಟಿಯ ರೇಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯೂ ಸ್ಥಾನ ಪಡೆದುಕೊಂಡಿವುದೇ ಹೆಮ್ಮೆಯ ವಿಚಾರವಾಗಿದೆ!!

Related image

ಆದರೆ ಇದೀಗ ‘ಇಂಡಿಯನ್ ಎಕ್ಸ್ ಪ್ರೆಸ್’ ಇಂಗ್ಲೀಷ್ ಸಂಸ್ಥೆಯು ಭಾರತದ ಅತ್ಯಂತ ಪ್ರಭಾವಶಾಲಿ ನಾಯಕರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಈ ಸಮೀಕ್ಷೆಯಲ್ಲೂ ನರೇಂದ್ರ ಮೋದಿಯವರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ!! ಇನ್ನು ನರೇಂದ್ರ ಮೋದಿಯವರ ಬೆನ್ನಿಗೆ ನಿಂತು, ಭಾರತೀಯ ಜನತಾ ಪಕ್ಷವನ್ನು ರಾಷ್ಟ್ರದೆಲ್ಲೆಡೆ ಅದ್ಭುತವಾಗಿ ಸಂಘಟಿಸುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಸುಪ್ರಿಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು 3ನೇ ಮತ್ತು ವಿಶ್ವದ ಅತಿ ದೊಡ್ಡ ಸ್ವಯಂ ಸೇವಾ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಅವರು 4ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪ್ರಭಾವಿಗಳ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು 5ನೇ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರಷ್ಟೇ ಅಲ್ಲದೇ, ಸುಷ್ಮಾ ಸ್ವರಾಜ್ ಅವರಿಗೆ 21ನೇ, ನಿರ್ಮಲಾ ಸೀತಾರಾಮನ್ ಅವರಿಗೆ 22ನೇ ಸ್ಥಾನ ದೊರೆತಿದೆ.

ಇಂಡಿಯನ್ ಎಕ್ಸ್ ಪ್ರೆಸ್ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ನೂರು ಜನ ಪ್ರಭಾವಶಾಲಿ ವ್ಯಕ್ತಿಗಳನ್ನು ಹೆಸರಿಸಿದ್ದು, ಅದರಲ್ಲಿ ಆರು ಜನ ಕನ್ನಡಿಗರೂ ಸ್ಥಾನವನ್ನು ಪಡೆದುಕೊಂಡಿದ್ದಾರೆ!! ಆ ಪೈಕಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 19ನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಇನ್ನು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರ ಕನ್ನಡಿಗರೆಂದರೆ ನಂದನ್ ನಿಲೇಕಣಿ 68 ನೇ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಕನ್ನಡದ ಮೂಲದ ನಟ ರಜನಿಕಾಂತ್ ಕೂಡ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿದ್ದು 78ನೇ ಸ್ಥಾನ ಪಡೆದಿದ್ದಾರೆ!! ಇನ್ನು ಮತ್ತೋರ್ವ ಕನ್ನಡ ಮೂಲದ ನಟಿ ದೀಪಿಕಾ ಪಡುಕೋಣೆ 79ನೇ ಹಾಗೂ ವೈದ್ಯಕೀಯ ರಂಗದಲ್ಲಿ ಹೆಸರು ಮಾಡಿರುವ ಡಾ ದೇವಿ ಶೆಟ್ಟಿ 92ನೇ ಸ್ಥಾನ ಪಡೆದಿದ್ದಾರೆ.

Image result for modi

ಇನ್ನು ಕೇಂದ್ರ ಸಚಿವರುಗಳು ಈ ಪಟ್ಟಿಯಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದು, ಗೃಹ ಸಚಿವರಾದ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ರಮವಾಗಿ 7, 8, 9 ನೇ ಸ್ಥಾನವನ್ನು ಪಡೆದಿದ್ದಾರೆ!! ಅಷ್ಟೇ ಅಲ್ಲದೇ ಖ್ಯಾತ ಉದ್ಯಮಿ ರಿಲಯನ್ಸ್ ಗ್ರೂಪ್ ಮುಕೇಶ್ ಅಂಬಾನಿ ಹತ್ತನೇ ಸ್ಥಾನ ಪಡೆದುಕೊಂಡಿದ್ದರೆ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷನಾಗಿರುವ ರಾಹುಲ್ ಗಾಂಧಿ ಹನ್ನೊಂದನೇ ಸ್ಥಾನ ಪಡೆದುಕೊಂಡಿದ್ದಾರೆ!! ಕಳೆದ ಬಾರಿ ಐವತ್ತನೇ ಸ್ಥಾನದಲ್ಲಿದ್ದ ಬಹುಜನ ಸಮಾಜವಾದಿ ಪಕ್ಷದ ಮಾಯಾವತಿ ಈ ಬಾರಿ ಹದಿನಾಲ್ಕನೆಯ ಸ್ಥಾನಕ್ಕೇರಿದ್ದಾರೆ.

ಇನ್ನು, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ 15ನೇ ಸ್ಥಾನ ಪಡೆದುಕೊಂಡಿದ್ದರೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ 16 ಹಾಗೂ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ 20ನೇ ಸ್ಥಾನ ಪಡೆದುಕೊಂಡಿದ್ದಾರೆ!! ಆದರೆ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಇಂಡಿಯನ್ ಎಕ್ಸ್ ಪ್ರೆಸ್ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಸ್ಥಾನ ದೊರೆತಿಲ್ಲವಾದರೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಅವರು 58ನೇ ಸ್ಥಾನ ಪಡೆದುಕೊಂಡಿರುವ ಮೂಲಕ ಭಾರತದ ಪ್ರಭಾವಿ ವ್ಯಕ್ತಿಗಳಾಗಿ ಮಿಂಚಿದ್ದಾರೆ!!

ಒಟ್ಟಿನಲ್ಲಿ ನರೇಂದ್ರ ಮೋದಿಯವರು ಭಾರತದಲ್ಲಿ ನೋಟ್ ಬ್ಯಾನ್ ಭಾರತದ ಆರ್ಥಿಕತೆಯ ಮೇಲೆ ಪೆಟ್ಟು ನೀಡಿದೆ ಅಂತ ಪ್ರತಿ ಪಕ್ಷಗಳು ಆರೋಪಿಸಿದ್ದರೆ, ವ್ಯಾಪಾರಿಗಳ ಮೇಲೆ ಹೊರೆ ಹೊರೆಸಲಾಯಿತು ಅಂತಾ ಜಿ ಎಸ್ ಟಿ ಯೋಜನೆಗಳ ಮೇಲೆ ಟೀಕೆಗಳು ಬಂದವು. ಆದರೆ ನೋಟ್ ಬ್ಯಾನ್ ಜಿ ಎಸ್ ಟಿ ಯೋಜನೆಯಿಂದಾಗಿಯೇ ಇಂದು ನರೇಂದ್ರ ಮೋದಿಯವರು ವಿಶ್ವದ ಗಮನ ಸೆಳೆಯುತ್ತಿದ್ದಾರೆಯಲ್ಲದೇ ಆರ್ಥಿಕತೆಯಲ್ಲಿಯೂ ಭಾರತ ಉನ್ನತ ಸ್ಥಾನಕ್ಕೆ ಏರುತ್ತಿದೆ ಎಂದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರ ಮತ್ತೊಂದಿಲ್ಲ!!

source:
http://indianexpress.com/article/india/ie100-list-from-narendra-modi-to-rahul-gandhi-meet-the-top-20-powerful-politicians-5117118/
– ಅಲೋಖಾ

Tags

Related Articles

Close