ಪ್ರಚಲಿತ

ಭ್ರಷ್ಟಾಚಾರಿಗಳ ಎದೆಯಲ್ಲಿ ನಗಾರಿ ಬಾರಿಸಿದ್ದ ಮೋದಿ ಮತ್ತೆ ಮಾಡಿದ್ದಾರೆ ಮೋಡಿ!! ರಾಷ್ಟ್ರ ವಿರೋಧಿಗಳ ತಂತ್ರಕ್ಕೆ ಮೋದಿಯ ಪ್ರತಿತಂತ್ರ!!

ದೇಶದಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಎಷ್ಟೇ ಕಡಿವಾಣ ಹಾಕಿದರೂ ಕೂಡ, ಪರರ ಹಣದಾಸೆಗೆ ದೇಶದ ಹಿತಾಸಕ್ತಿಯ ವಿರುದ್ಧವಾದ ಚಟುವಟಿಕೆಗಳ ಸಂಖ್ಯೆ ಹೆಚ್ಚುತ್ತಿರುವುದು ಮಾತ್ರ ನಿಜಕ್ಕೂ ಕೂಡ ಬೇಸರದ ಸಂಗತಿ. ಹಾಗಾಗಿ ಇದಕ್ಕೆಲ್ಲಾ ಅಂತ್ಯ ಹಾಡಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದ್ದು, ದೇಶ ವಿರೋಧಿಗಳ ತಂತ್ರಗಳಿಗೆ ಪ್ರತಿತಂತ್ರವನ್ನು ಹೂಡಿದ್ದಾರೆ.

Image result for modi

ಈಗಾಗಲೇ ದೇಶದಲ್ಲಿ ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಒ) ನಾಯಿಕೊಡೆಗಳಂತೆ ದಿನೇ ದಿನೇ ಹೆಚ್ಚುತ್ತಿದ್ದು, ಕೆಲ ಸರ್ಕಾರೇತರ ಸಂಸ್ಥೆ(ಎನ್.ಜಿ.ಒ)ಗಳು ದೇಶಕ್ಕೆ ಒಳಿತನ್ನು ಬಯಸುತ್ತಿದ್ದರೆ ಇನ್ನು ಅದೆಷ್ಟೋ ಸರ್ಕಾರೇತರ ಸಂಸ್ಥೆಗಳು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡು ಉಪ್ಪು ತಿಂದ ಮನೆಗೆ ದ್ರೋಹ ಬಗೆಯುತ್ತಿರುವುದೇ ವಿಪರ್ಯಾಸ !! ಹಾಗಾಗಿ ಇದಕ್ಕೆಲ್ಲ ಅಂತ್ಯ ಹಾಡಲು ನರೇಂದ್ರ ಮೋದಿ ಸರ್ಕಾರವು ಮುಂದಾಗಿದ್ದು, ಇದೀಗ ಕೆಲ ಸರ್ಕಾರೇತರ ಸಂಸ್ಥೆ(ಎನ್.ಜಿ.ಒ)ಗಳಿಗೆ ನಡುಕ ಉಂಟಾಗಿದೆ.

ಹೌದು… ಈಗಾಗಲೇ ಕಪ್ಪುಹಣದ ವಿರುದ್ಧ ಸಮರ ಸಾರಿರುವ ನರೇಂದ್ರ ಮೋದಿ ಸರಕಾರವು ಭ್ರಷ್ಟಾಚಾರಿಗಳ ಎದೆಯಲ್ಲಿ ನಗಾರಿ ಬಾರಿಸಿದ್ದರು!! ಅಷ್ಟೇ ಅಲ್ಲದೇ ಬೇನಾಮಿ ಆಸ್ತಿಯ ವಿರುದ್ಧ ಸಮರ ಸಾರಿರುವ ನರೇಂದ್ರ ಮೋದಿ ಸರಕಾರವು ರಾತ್ರೋ ರಾತ್ರಿ ನೋಟ್ ಬ್ಯಾನ್ ಮಾಡಿ ಭ್ರಷ್ಟಕುಳಗಳಿಗೆ ಭಯ ಹುಟ್ಟಿಸಿದ್ದಲ್ಲದೇ ಇದು ನರೇಂದ್ರ ಮೋದಿಯವರ “ಎದೆಗಾರಿಕೆಯ ನಿರ್ಧಾರ” ಎಂದು ವಿಶ್ವದ ಅದೆಷ್ಟೋ ಆರ್ಥಿಕ ತಜ್ಞರು ನರೇಂದ್ರ ಮೋದಿಯವರ ರಾಜತಾಂತ್ರಿಕ ನಿರ್ಧಾರಕ್ಕೆ ಮೆಚ್ಚುಗೆಯ ಸುರಿಮಳೆಯನ್ನು ಹರಿಸಿದ್ದರು.

ಆದರೆ ಇದೀಗ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸರ್ಕಾರೇತರ ಸಂಸ್ಥೆ(ಎನ್.ಜಿ.ಒ)ಗಳಿಗೆ ಹೇಗೆ ಆರ್ಥಿಕ ನೆರವು ಹರಿದು ಬರುತ್ತಿದೆ ಎಂಬುದನ್ನು ತಿಳಿಯಲು ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ, ಆಯಾ ರಾಜ್ಯಗಳ ಪೊಲೀಸ್ ಸಹಕಾರದೊಂದಿಗೆ ಅಂತಹ ಎನ್.ಜಿ.ಒ ಗಳನ್ನು ಪತ್ತೆ ಹಚ್ಚುವಂತೆ ಭದ್ರತಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇತ್ತೀಚಿನ ಕೆಲ ಘಟನೆಗಳು ಎನ್.ಜಿ.ಒ ಗಳ ಉದ್ದೇಶಗಳ ಬಗ್ಗೆಯೇ ಸಂಶಯವನನ್ನು ಹುಟ್ಟು ಹಾಕುವಂತೆ ಮಾಡಿದ್ದು, ಈ ಎನ್.ಜಿ.ಒ ಗಳ ಪಾರದರ್ಶಕತೆ ಕುರಿತಂತೆ ಸುಪ್ರೀಂ ಕೋರ್ಟ್ ಕೂಡಾ ಪ್ರಶ್ನಿಸಿತ್ತು. ಬಹುತೇಕ ಎನ್.ಜಿ.ಒ ಗಳು ಯಾವುದೇ ಜವಾಬ್ದಾರಿಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಸಿಬಿಐ ವರದಿ ಕೂಡಾ ಹೇಳಿತ್ತು. ಈ ಸರ್ಕಾರೇತರ ಸಂಸ್ಥೆಗಳು ಸಾಮಾಜಿಕ ಬದಲಾವಣೆಗೆ ಎಷ್ಟು ಮುಖ್ಯವೋ, ದೇಶದ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಚಟುವಟಿಕೆಗಳಿಗೆ ಬಳಸಿಕೊಳ್ಳುವುದೂ ಅಷ್ಟೇ ಅಪಾಯಕಾರಿ.

ಹಾಗಾಗಿ ಕೆಲ ಎನ್.ಜಿ.ಒ ಗಳು ತಮಗೆ ಹರಿದು ಬರುತ್ತಿರುವ ಹಣಕಾಸಿನ ನೆರವನ್ನು ದುರುಪಯೋಗಪಡಿಸಿಕೊಂಡು ದೇಶದ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅಂತಹ ಎನ್.ಜಿ.ಒ ಗಳ ಮೇಲೆ ಕಳೆದ ಕೆಲ ವರ್ಷಗಳಿಂದ ಕೇಂದ್ರ ತನಿಖಾ ಸಂಸ್ಥೆಗಳು ನಿಗಾ ಇರಿಸಿವೆಯಲ್ಲದೇ ಸುಪ್ರೀಂ ಕೋರ್ಟ್ ಕೂಡಾ ಈ ಹಿಂದೆ ಎನ್.ಜಿ.ಒ ಗಳಿಗೆ ಹರಿದು ಬರುವ ದೇಣಿಗೆಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿತ್ತು.

Image result for modi

ಈಗಾಗಲೇ ಭಾರತದಲ್ಲಿ ಸುಮಾರು 30 ಲಕ್ಷ ಎನ್.ಜಿ.ಒ ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಕೇವಲ ಶೇ.10 ರಷ್ಟು ಎನ್.ಜಿ.ಒ ಗಳು ಮಾತ್ರ ತಮ್ಮ ಹಣಕಾಸಿನ ವ್ಯವಹಾರದ ಬ್ಯಾಲೆನ್ಸ್ ಶೀಟ್ ಗಳನ್ನು ಸಲ್ಲಿಸುತ್ತಿವೆಯಂತೆ. ಬಹುತೇಕ ಎನ್.ಜಿ.ಒ ಗಳು ಯಾವುದೇ ಲೆಕ್ಕ ನೀಡದೆ ಪ್ರತಿ ವರ್ಷ ಸುಮಾರು 900 ಕೋಟಿ ರೂಪಾಯಿಗಳಷ್ಟು ಸರ್ಕಾರಿ ಅನುದಾನ ಖರ್ಚು ಮಾಡುತ್ತಿವೆ. ಅಷ್ಟೇ ಅಲ್ಲದೆ ವಿದೇಶಿ ದೇಣಿಗೆಗಳಿಂದ ಸಾವಿರಾರು ಕೋಟಿ ಬಂದು ಈ ಎನ್.ಜಿ.ಒ ಗಳಿಗೆ ತಲುಪುತ್ತಿದೆ.

ಹಾಗಾಗಿ ಇದೀಗ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸರ್ಕಾರೇತರ ಸಂಸ್ಥೆ(ಎನ್.ಜಿ.ಒ)ಗಳಿಗೆ ಹೇಗೆ ಆರ್ಥಿಕ ನೆರವು ಹರಿದು ಬರುತ್ತಿದೆ ಎಂಬುದನ್ನು ತಿಳಿಯಲು ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಒಟ್ಟಿನಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಸರ್ಕಾರೇತರ ಸಂಸ್ಥೆಗಳ ಆರ್ಭಟಕ್ಕೆ ಇನ್ನಾದರೂ ತೆರೆ ಬೀಳಲಿದೆಯೆ ಎನ್ನುವುದನ್ನು ಕಾದುನೋಡಬೇಕಾಗಿದೆ!!

ಮೂಲ:
https://www.firstpost.com/india/exclusive-narendra-modi-asks-security-officials-police-to-check-funding-of-ngos-involved-in-anti-national-activities-4505317.html
– ಅಲೋಖಾ

Tags

Related Articles

Close