ಪ್ರಚಲಿತ

ಪಾಕಿಸ್ತಾನದ ಪರಮ ಮಿತ್ರ ಚೀನಾಕ್ಕೆ ಹೊಡೆತದ ಮೇಲೆ ಹೊಡೆತ ನೀಡುತ್ತಿದೆ ಮೋದಿ ಸರಕಾರ!! ಮಂಗೋಲಿಯಾದ ಪ್ರಥಮ ತೈಲ ಸಂಸ್ಕರಣಾಗಾರ ನಿರ್ಮಿಸಲು 1 ಬಿಲಿಯನ್ ಡಾಲರ್ ಸಾಲ ನೀಡಿದ ಭಾರತ!!

ನಿಚ್ಚಳವಾಗಿ ಬೀಜಿಂಗ್ ನ ಡ್ರಾಗನ್ ಅನ್ನು ಅಸಮಾಧಾನಕ್ಕೀಡು ಮಾಡುವ ಮಹತ್ವದ ನಿರ್ಧಾರವನ್ನು ಭಾರತ ಸರಕಾರ ತೆಗೆದುಕೊಂಡಿದೆ. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಅಸ್ಪೃಶ್ಯರಂತೆ ನೋಡುವಂತೆ ಮಾಡುವಲ್ಲಿ ಸಫಲರಾದ ಮೋದಿ ಇದೀಗ ಪಾಕಿಸ್ತಾನದ ಪರಮ ಮಿತ್ರ ಚೀನಾದ ನಡು ಮುರಿಯಲು ಸಜ್ಜಾಗಿದ್ದಾರೆ. ಚೀನಾದ ಪರಮ ಶತ್ರುಗಳನ್ನು ಈಗಾಗಲೇ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಭಾರತ, ಇದೀಗ ಮಂಗೋಲಿಯಾದಲ್ಲಿ ಪ್ರಪ್ರಥಮ ತೈಲ ಸಂಸ್ಕರಣಾಗಾರ ಸ್ಥಾಪಿಸಲು 1 ಬಿಲಿಯನ್ ಡಾಲರ್ ಸಾಲ ನೀಡಿ ಚೀನಾ ಡ್ರಾಗನ್ ಗೆ ಸಡ್ಡು ಹೊಡೆದಿದೆ.

ಮಂಗೋಲಿಯಾಗೆ ಮೂರು ದಿನ ಭೇಟಿ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್ ಉಪಸ್ಥಿತಿಯಲ್ಲಿ ತೈಲ ಶುದ್ದೀಕರಣ ಕೇಂದ್ರದ ಶಿಲಾನ್ಯಾಸ ಮಾಡಲಾಯಿತು. ಈ ಸಮಯದಲ್ಲಿ ಮಂಗೋಲಿಯಾದ ಪ್ರಧಾನಿ ಖುರೆಲ್ ಸುಖ್ ಕೂಡಾ ಉಪಸ್ಥಿತರಿದ್ದರು. 2015 ರಲ್ಲಿ ಪ್ರಧಾನಿ ಮೋದಿ ಮಂಗೋಲಿಯಾಕ್ಕೆ ಭೇಟಿ ನೀಡಿದ್ದಾಗ ಮಂಗೋಲಿಯಾದಲ್ಲಿ ತೈಲ ಸಂಸ್ಕರಣಾಗಾರ ನಿರ್ಮಿಸಲು ಆರ್ಥಿಕ ಸಹಾಯ ನೀಡುವುದಾಗಿ ಭರವಸೆ ನೀಡಿದ್ದರು. ಅದರ ಪ್ರಕಾರವೆ ಭಾರತ 1 ಬಿಲಿಯನ್ ಡಾಲರ್ ಸಾಲವನ್ನು ಮಂಗೋಲಿಯಾಕ್ಕೆ ನೀಡಲಿದೆ. ನೋಡಿ, ಒಂದು ಕಾಲವಿತ್ತು ಭಾರತ ವಿದೇಶೀ ಸಾಲದ ಜಾಲದಲ್ಲಿ ಮುಳುಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ಸಾಲವನ್ನೇ ಮಾಡಿಲ್ಲ, ಯೂಪಿಎ ಮಾಡಿದ ಸಾಲವನ್ನು ತೀರುಸುತ್ತಿದೆ ಮಾತ್ರವಲ್ಲ ಇತರ ದೇಶಗಳ ಅಭಿವೃದ್ದಿ ಕಾರ್ಯದಲ್ಲಿ ಆರ್ಥಿಕ ಸಹಾಯವನ್ನೂ ಮಾಡುತ್ತಿದೆ!!

ಮಂಗೋಲಿಯಾ-ಭಾರತ ಮಿತೃತ್ವದಿಂದ ಚೀನಾಕ್ಕೆ ಏಕೆ ಅಸಮಾಧಾನ?

ಚೀನಾದೊಂದಿಗಿನ ಮಂಗೋಲಿಯಾ ಸಂಬಂಧಗಳು ಕಳೆದ ಕೆಲವು ವರ್ಷಗಳಲ್ಲಿ ಪ್ರಕ್ಷುಬ್ಧತೆಯನ್ನು ಅನುಭವಿಸುತ್ತಿದೆ. 2015 ರಲ್ಲಿ ಮಂಗೋಲಿಯಾಕ್ಕೆ ದಲಾಯಿ ಲಾಮಾ ಅವರ ಭೇಟಿಯು ಈ ಎರಡೂ ದೇಶಗಳ ಸಂಬಂಧಗಳ ಕುಸಿತಕ್ಕೆ ಕಾರಣವಾಯಿತು. ದಲಾಯಿ ಲಾಮಾ ಭೇಟಿಯ ಪ್ರತೀಕಾರದಂತೆ ಚೀನಾವು ಮಂಗೋಲಿಯಾದಿಂದ ಆಮದು ಮಾಡಿಕೊಳ್ಳುವ ಉತ್ಪಾದನೆಗಳಿಗೆ ಹೆಚ್ಚು ಶುಲ್ಕವನ್ನು ವಿಧಿಸಿತು ಮತ್ತು ಹೆಚ್ಚುವರಿ ಸಾರಿಗೆ ವೆಚ್ಚಗಳನ್ನು ಮಂಗೋಲಿಯಾ ಮೇಲೆ ಹೇರಿತು. ಚೀನಾವು ಮಂಗೋಲಿಯದ ಅತಿ ದೊಡ್ಡ ವ್ಯಾಪಾರಿ ಪಾಲುದಾರ, ಮತ್ತು ಅದರ ರಫ್ತುಗಳಲ್ಲಿ ಶೇ .90 ರಷ್ಟು ನೆರೆ ದೇಶಕ್ಕೆ ಹೋಗುತ್ತದೆ.

ಚೀನಾದ ನಡೆಯಿಂದ ಮಂಗೋಲಿಯಾದ ಅಧ್ಯಕ್ಷ ಕುಪಿತರಾದರು ಮತ್ತು ಚೀನಾದ ಕಪಿ ಮುಷ್ಟಿಯಿಂದ ತಮ್ಮನ್ನು ಬಿಡಿಸಿ ಸ್ವಾವಲಂಬಿಯಾಗುವ ದೃಢ ಸಂಕಲ್ಪ ಮಾಡಿದರು. 2017 ರಲ್ಲಿ ಮಂಗೋಲಿಯಾದ ರಾಷ್ಟ್ರಪತಿ ಖಾಲ್ತುಮಾ ಬಟುಲ್ಗಾ ಚೀನಾವನ್ನು ಬಹಿರಂಗವಾಗಿಯೇ ಟೀಕಿಸುತ್ತಿದ್ದರು ಮತ್ತು ಚೀನಾ-ರಷ್ಯಾವನ್ನು ಹೊರತು ಪಡಿಸಿ “ಮೂರನೆ ದೇಶದ” ಜೊತೆ ಮಿತೃತ್ವ ಏರ್ಪಡಿಸಲು ಚಿಂತನೆ ನಡೆಸುತ್ತಿದ್ದರು. ಮಂಗೋಲಿಯಾ ದೇಶದಲ್ಲಿ ಚೀನೀ ಪ್ರಭಾವವನ್ನು ಮಿತಿಗೊಳಿಸಲು ಅಲ್ಲಿನ ಅಧ್ಯಕ್ಷ ಭಾರತಕ್ಕೆ ಹತ್ತಿರವಾಗುವ ಪ್ರಯತ್ನದಲ್ಲಿದ್ದಾಗಲೇ ಮೋದಿ ಸರಕಾರ ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಿತು. ಶತ್ರುವಿನ ಶತ್ರು ಮಿತ್ರ ಎನ್ನುವ ಚಾಣಕ್ಯ ನೀತಿಯನ್ನು ನಿಜಾರ್ಥದಲ್ಲಿ ಅನುಸರಿಸುತ್ತಿದೆ ಮೋದಿ ಸರಕಾರ. ಮಂಗೋಲಿಯಾ ಭಾರತದ ತೆಕ್ಕೆಗೆ ಬಿದ್ದರೆ, ಸಾಮರಿಕ ಮತ್ತು ವ್ಯಾಪಾರಿಕ ದೃಷ್ಟಿಯಲ್ಲಿ ಚೀನಾ ಮುಗ್ಗರಿಸಿ ಬೀಳುತ್ತಿದೆ.

ಮಂಗೋಲಿಯಾ ಮತ್ತು ಭಾರತಗಳು ದಿನದಿಂದ ದಿನಕ್ಕೆ ಹತ್ತಿರವಾಗುತ್ತಿವೆ. ಡೋಕ್ಲಾಮ್ ನಲ್ಲಿ ಭಾರತ-ಚೀನಾ ಮುಖಾಮುಖಿಯ ನಡುವೆಯೂ ಹೊಸದಾಗಿ ಆಯ್ಕೆಯಾದ ಮಂಗೋಲಿಯಾದ ಅಧ್ಯಕ್ಷರನ್ನು ಭಾರತಕ್ಕೆ ಮೋದಿ ಸರ್ಕಾರ ಆಹ್ವಾನಿಸಿದೆ ಮತ್ತು 2018 ರಲ್ಲಿ ಅವರು ಭಾರತಕ್ಕೆ ಭೇಟಿ ನೀಡುತ್ತಾರೆ ಎನ್ನಲಾಗಿದೆ. ಚೀನಾದ ಶತ್ರು ದೇಶಗಳೆಲ್ಲವನ್ನೂ ತನ್ನ ಮಿತ್ರನನ್ನಾಗಿಸುತ್ತಿರುವ ಮೋದಿ ಸರಕಾರ ಡ್ರಾಗನ್ ಗಾಯದ ಮೇಲೆ ಬರೆ ಎಳೆಯುತ್ತಿದೆ. ದಕ್ಷಿಣ ಏಷಿಯಾದಲ್ಲಿ ಅತಿ ದೊಡ್ಡ ಆರ್ಥಿಕ ಶಕ್ತಿ ಆಗಿ ಹೊರಹೊಮ್ಮುತ್ತಿರುವ ಭಾರತದ ಸೆರಗು ಹಿಡಿದು ನಡೆಯಲು ಎಲ್ಲಾ ದೇಶಗಳು ಸಿದ್ದವಾಗಿವೆ. ಪಾಕಿಸ್ತಾನದಂತೆ ಚೀನಾವನ್ನೂ ಜಗತ್ತು ಅಸೃಶ್ಯರಂತೆ ನೋಡುವ ಕಾಲ ದೂರವಿಲ್ಲ.

ಮೋದಿ ಸರಕಾರದ ಪ್ರಬಲ ವಿದೇಶಾಂಗ ನೀತಿಯಿಂದಾಗಿ ಚೀನಾ-ಪಾಕಿಸ್ತಾನ ಜೋಡಿ ವಿಶ್ವ ಮಂಚದಲ್ಲಿ ಅನಾಥರಂತೆ ಬಿದ್ದುಕೊಳ್ಳಲಿವೆ. ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುತ್ತಿರುವ ಮೋದಿ ಅವರ ಜಾಣ್ಮೆಯಿಂದಾಗಿ ಚೀನಾ-ಪಾಕಿಸ್ತಾನ ಇಬ್ಬರೂ ಮಣ್ಣು ಮುಕ್ಕಲಿದ್ದಾರೆ ಎನ್ನುವುದು ಉತ್ರೇಕ್ಷೆಯಲ್ಲ.

-ಶಾರ್ವರಿ

Tags

Related Articles

Close