ಪ್ರಚಲಿತ

ಮೋದಿ ನೆನಪಿಗಾಗಿ ಸಿಂಗಾಪುರದಲ್ಲಿ ಅರಳಲಿದೆ ಮೋದಿ ಹೂ!! ವಿಶ್ವ ನಾಯಕರಾಗುತ್ತಿದ್ದಾರೆ ನಮೋ…

ಪ್ರಧಾನಿ ನರೇಂದ್ರ ಮೋದಿ ಅಂದರೇನೇ ಹಾಗೇ… ಇಡೀ ಭಾರತವನ್ನಲ್ಲದೆ ಇಡೀ ಜಗತ್ತನ್ನೆ ಬದಲಾಯಿಸಿದ್ದಾರೆ!! ಪ್ರಧಾನಿ ನರೇಂದ್ರ ಮೋದಿಯೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅವರೋರ್ವ ವಿಶ್ವನಾಯಕ, ವಿಶ್ವವನ್ನೇ ಭಾರತದತ್ತ ಮುಖ ಮಾಡಿ ನೋಡುವಂತೆ ಮಾಡಿದ ಅಭಿನವ ಸ್ವಾಮಿ ವಿವೇಕಾನಂದ ನಮ್ಮ ಪ್ರಧಾನಿ ನರೇಂದ್ರ ಮೋದಿ. ಭಾರತದ ಪ್ರತೀ ಮನೆಯಲ್ಲೂ ಮೋದೀಜೀಯ ಜಪ ಮಾಡುತ್ತಾರೆ!! ಯಾಕೆಂದರೆ ಮೋದಿ ಯೋಜನೆಗಳು ಮನೆ ಮನೆ ಮುಟ್ಟುತ್ತಿದೆ, ಪ್ರತಿ ಮನೆಯ ಬಾಗಿಲನ್ನೂ ತಟ್ಟುತ್ತಿದೆ!! ಅದಲ್ಲದೆ ಕೇವಲ ಭಾರತೀಯರಲ್ಲದೆ ಇಡೀ ವಿಶ್ವವೇ ಭಾರತದತ್ತ ಮುಖ ಮಾಡಲು ಕಾರಣ ಈ ಮೋದೀಜೀ!! ಮೋದೀಜೀ ಎಂದರೆ ಭಾರತೀಯರ ಮನಸ್ಸಿನಲ್ಲಿ ಅಲ್ಲದೆ ವಿಶ್ವದ ನಾಯಕರ ಮನ ಗೆದ್ದಿದ್ದಾರೆ!!

ಹೂವಿಗೂ ಮೋದಿ ಹೆಸರಿಟ್ಟ ಸಿಂಗಾಪುರ!!

ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೂ ಎಲ್ಲೆಡೆ ರಾರಾಜಿಸುತ್ತಿದೆ. ಪ್ರಧಾನಿ ಮೋದಿ ಗೌರವಾರ್ಥವಾಗಿ ಅವರ ಹೆಸರನ್ನು ವಿಶ್ವದ ಹಲವು ದೇಶಗಳ ವಿಶೇಷ ಸಸ್ಯ, ಹಣ್ಣು, ಹೂವುಗಳ ಪ್ರಭೇದಕ್ಕೆ ಇಡುವ ಸಂಪ್ರದಾಯ ಸಿಂಗಾಪುರದಲ್ಲೂ ಮುಂದುವರಿದಿದೆ. ಇಂತಹ ವಿಶ್ವನಾಯಕ ನರೇಂದ್ರ ಮೋದಿ ಅವರಿಗೆ ಸಿಂಗಾಪುರದಲ್ಲಿ ಮತ್ತೊಂದು ಗೌರವ ಲಭಿಸಿದ್ದು, ಇನ್ನು ಮುಂದೆ ಸಿಂಗಾಪುರದಲ್ಲಿ ನರೇಂದ್ರ ಮೋದಿ ಹೆಸರಿನಲ್ಲಿ ಪುಷ್ಪ ಅರಳಿದೆ. ನರೇಂದ್ರ ಮೋದಿ ಅವರು ಸಿಂಗಾಪುರದ ರಾಷ್ಟ್ರೀಯ ಆರ್ಕಿಡ್ ಉದ್ಯಾನವನಕ್ಕೆ ಭೇಟಿ ನೀಡಿದ್ದು, ಇದರ ಸವಿನೆನಪಿಗಾಗಿ ಆರ್ಕಿಡ್ ಹೂವೊಂದಕ್ಕೆ ನರೇಂದ್ರ ಮೋದಿ ಅಂತ ಹೆಸರಿಟ್ಟಿದ್ದು, ಇನ್ನು ಮೇಲೆ ಈ ಹೂ ನರೇಂದ್ರ ಮೋದಿ ಅಂತಲೇ ಕರೆಸಿಕೊಳ್ಳಲಿದೆ.

ಸಿಂಗಾಪುರದ ರಾಷ್ಟ್ರೀಯ ಆರ್ಕಿಡ್ ಉದ್ಯಾನವನಕ್ಕೆ ನರೇಂದ್ರ ಮೋದಿ ಅವರು ಭೇಟಿ ಮಾಡಿದ ಸಂದರ್ಭದಲ್ಲಿ ಪುಷ್ಪವೊಂದಕ್ಕೆ ಡೆಂಡ್ರೊಬಿಯಮ್ ನರೇಂದ್ರ ಮೋದಿ ಎಂದು ಹೆಸರಿಡಲಾಗಿದೆ ಎಂಬುದಾಗಿ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

 

“ನ್ಯಾಶನಲ್ ಆರ್ಕಿಡ್ ಗಾರ್ಡನ್ ಆಫ್ ಸಿಂಗಾಪುರ್’ನಲ್ಲಿರುವ ಆರ್ಕಿಡ್ ಹೂಗಳ ಪ್ರಭೇದವೊಂದಕ್ಕೆ “ಡೆಂಡೋಬ್ರಿಯನ್ ನರೇಂದ್ರ ಮೋದಿ’ ಎಂದು ಹೆಸರಿಡಲಾಗಿದೆ. ಈ ಪುಷ್ಪೋದ್ಯಾನಕ್ಕೆ ಮೋದಿ ನೀಡಿರುವ ಭೇಟಿಸ್ಮರಣಾರ್ಥವಾಗಿ ಈ ನಾಮಕರಣ ಮಾಡಲಾಗಿದೆ. ಸಾಮಾನ್ಯವಾಗಿ ಉಷ್ಣವಲಯದಲ್ಲಿ ಈ ಪ್ರಭೇದದ ಆರ್ಕಿಡ್ ಸಸ್ಯಗಳು 38 ಸೆಂ.ಮೀ. ಎತ್ತರದವರೆಗೆ ಬೆಳೆಯುತ್ತವಲ್ಲದೆ, ಗೊಂಚಲಿನ ಆಕಾರದಲ್ಲಿ ಹೂ ಬಿಡುತ್ತವೆ. ಒಂದೊಂದು ಗೊಂಚಲಿನಲ್ಲೂ 14ರಿಂದ 20 ಸುಂದರ ಹೂಗಳಿದ್ದು, ನೋಡಲು ಆಕರ್ಷಕವಾಗಿರುವುದು ಈ ಜಾತಿಯ ಹೂಗಳ ವಿಶೇಷ. ಈ ಹಿಂದೆ ಮಾವಿನ ಹಣ್ಣಿಗೆ, ಪಟಾಕಿಗಳಿಗೆ, ಸೇವಂತಿ ಹೂವಿನ ಪ್ರಬೇಧಕ್ಕೆ ಮೋದಿ ಹೆಸರಿಟ್ಟಿದ್ದು ಗಮನ ಸೆಳೆದಿತ್ತು. ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ಜೊಕೊವಿ ವಿಡೊಡೊ ಅವರ ಮೊಮ್ಮಗನಿಗೆ ಪ್ರಧಾನಿ ನರೇಂದ್ರ ಮೋದಿಯವರ ಗೌರವಾರ್ಥ ಜಾನ್ ಶ್ರೀನರೇಂದ್ರ ಎಂದು ಹೆಸರಿಟ್ಟಿದ್ದಾರೆ!! ಈ ವಿಷಯವನ್ನು ಸ್ವತಃ ಜೊಕೊವಿಯವರೇ ಇಂಡೋನೇಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹೇಳಿಕೊಂಡಿದ್ದಾರೆ!! 2016 ರ ಮಾರ್ಜ್‍ನಲ್ಲಿ ಜೊಕೊವಿಯವರ ಮಗ ಗಿರ್ಬನ್ ರಕಬುಮಿಂಗ್ ಅವರಿಗೆ ಜನಿಸಿದ ಗಂಡು ಮಗುವಿಗೆ ಶ್ರೀ ನರೇಂದ್ರ ಎಂದು ಕೂಡಾ ನಾಮಕರಣ ಮಾಡಲಾಗಿದೆ!! ಅದಲ್ಲದೆ ಇನ್ನೂ ಹಲವೆಡೆ ಮೋದಿ ಹೆಸರು ರಾರಾಜಿಸುತ್ತಿದೆ!!

Image result for ಮೋದಿ

ಇಸ್ರೇಲಿ ಹೂವು: ಕಳೆದ ವರ್ಷ ಇಸ್ರೇಲ್‍ಗೆ ಮೋದಿ ಭೇಟಿ ನೀಡಿದ್ದಾಗ ಅಲ್ಲಿನ ಕ್ರಿಸಾಂಥೇಮಮ್ ಎಂಬ ಹೂವಿಗೆ “ಮೋದಿ’ ಎಂದು ಹೆಸರಿಡಲಾಯಿತು.

ಶಿಶುವಿಗೆ ಮೋದಿ ಹೆಸರು: 2014ರ ಮೇ 26ರಂದು ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದಾಗ ಮೈಸೂರಿನ ಚೆಲುವಾಂಬಾ ಆಸ್ಪತ್ರೆಯಲ್ಲಿ ಜನಿಸಿದ್ದ ಗಂಡು ಮಗುವಿಗೆ ನರೇಂದ್ರ ಕೃಷ್ಣ ಮೋದಿ ಎಂದು ಹೆಸರಿಡಲಾಗಿತ್ತು.

ಮೋದಿ ಮ್ಯಾಂಗೋ: ಮಾವಿನ ಹಣ್ಣುಬೆಳೆಯುವ ಹಾಜಿಖಲೀ ಮುಲ್ಲಾ ಖಾನ್, 2015ರಲ್ಲಿ ಹೊಸ ತಳಿಗೆ ಮೋದಿ ಮ್ಯಾಂಗೋ ಹೆಸರಿಟ್ಟಿದ್ದರು.

ಮೋದಿ ಇಡ್ಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪ “ಮೋದಿ ಇಡ್ಲಿ’ ಸಾಕಷ್ಟು ಫೇಮಸ್. ಅಂಗಡಿ ಹೆಸರು ಮೋದಿ ಇಡ್ಲಿ ಸೆಂಟರ್.

ಮೋದಿ ಟೀ ಸ್ಟಾಲ್: 2013ರಲ್ಲಿ ಮೋದಿ ಪ್ರಧಾನಿಯಾದಾಗ ಝಾರ್ಖಂಡ್‍ನ ವಿನಯ್ ಶರ್ಮಾ ಎಂಬಾತ, ರಾಂಚಿಯ? ಸ್ಟೇಷನ್ ರಸ್ತೆಯಲ್ಲಿನ ತನ್ನ ನೂತನ ಚಹಾ ಕ್ಯಾಂಟೀನ್‍ಗೆ ಮೋದಿ ಟೀ ಸ್ಟಾಲ್ ಎಂದು ಹೆಸರಿಟ್ಟಿದ್ದ.

ಆಂಡ್ರಾಯ್ಡ ಮಾದರಿ: 2013ರಲ್ಲಿ ಮೋದಿ ಹೆಸರಿನಲ್ಲಿ “ಸ್ಮಾರ್ಟ್ ನಮೋ’ ಎಂಬ ಸ್ಮಾರ್ಟ್ ಫೆÇೀನ್ ಬಿಡುಗಡೆಯಾಗಿತ್ತು. ಅದು ನೆಕ್ಸ್ಟ್ ಜನರೇಶನ್ ಆಂಡ್ರಾಯ್ಡ ಮೊಬೈಲ್ ಒಡಿಸ್ಸಿ ಎಂದು ಕಂಪೆನಿ ಹೇಳಿಕೊಂಡಿತ್ತು!!

Image result for ಮೋದಿ

ಪ್ರಧಾನಿ ನರೇಂದ್ರ ಮೋದಿಜಿ ಎಂದರೆ ಇಡೀ ವಿಶ್ವವೇ ಇವರ ಮಾತಿಗೆ ತಲೆದೂಗುತ್ತದೆ!! ಅವರು ಮಾಡುವ ಒಂದೊಂದು ಕೆಲಸಕ್ಕೂ ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಡುತ್ತದೆ!! ಶತ್ರು ರಾಷ್ಟ್ರಗಳೇ ಮಿತ್ರರಾಗುತ್ತಿದ್ದಾರೆ!! ಅವರ ಹೆಸರನ್ನೇ ಇಂಡೋನೇಷಿಯಾದ ಅಧ್ಯಕ್ಷರ ಮೊಮ್ಮನಿಗೆ ಇಡಬೇಕಾದರೆ ಮೋದೀಜೀಯ ಹೆಸರು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ ನಿಜವಾಗಿಯೂ ಇಂತಹ ಪ್ರಧಾನಿಯನ್ನು ಪಡೆದಿರುವ ನಾವು ಗ್ರೇಟ್! ಇಲ್ಲಿಯವರೆ ಭಾರತದ ಯಾವ ಪ್ರಧಾನಿಯ ಹೆಸರನ್ನೂ ಯಾರೂ ಇಟ್ಟಿಲ್ಲ!! ಆದರೆ ಪ್ರಧಾನಿ ನರೇಂದ್ರ ಮೋದೀಜಿಯ ಹೆಸರನ್ನು ಮಾತ್ರ ಇಟ್ಟಿರುವಂತಹದ್ದು!! ಇದೇ ಮೋದೀಜೀಯ ಪವರ್!!ನಮ್ಮ ನೆಚ್ಚಿನ ಮೋದೀಯ ಹೆಸರು ಇಡೀ ರಾಷ್ಟ್ರವೇ ಪಸರಿಸಲಿ ಎಂಬುವುದು ನಮ್ಮೆಲ್ಲರ ಆಶಯ!!

source: udayavani

  • ಪವಿತ್ರ
Tags

Related Articles

Close