ಪ್ರಚಲಿತ

ಒಂದೆ ದೇಶ ಒಂದೆ ತೆರಿಗೆ ಕಾನೂನಿಗೆ ಒಂದು ವರ್ಷ!! ಜಿ.ಎಸ್.ಟಿಯನ್ನು ಟೀಕಿಸುವ ಮುನ್ನ ಅದರಿಂದಾದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಒಮ್ಮೆ ಮಾಡೋಣ

0 Shares

ದೇಶದಲ್ಲಿ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬಂದು ಒಂದು ವರ್ಷಗಳು ಸಂದವು. ಜಿ.ಎಸ್.ಟಿ ಇಂದ ದೇಶಕ್ಕೆ ಮತ್ತು ಜನರಿಗೆ ಏನೆಲ್ಲ ಲಾಭಗಳಾಯ್ತು ನೋಡೋಣ:

EOUS ಮತ್ತು SEZs ರಫ್ತು ಪ್ರಚಾರ ಮಂಡಳಿಯ ಪ್ರಕಾರ, ಜುಲೈ 2017 ರಲ್ಲಿ ಜಿ.ಎಸ್.ಟಿ ಜಾರಿಯಾದ ಮೊದಲ 10 ತಿಂಗಳಲ್ಲಿ ಸರಕುಗಳು ಮತ್ತು ಸೇವೆಗಳ ತೆರಿಗೆ ಕಾನೂನಿನಲ್ಲಿ ಕೇಂದ್ರ ಸರಕಾರ 376 ಬದಲಾವಣೆಗಳನ್ನು ಮಾಡಿತು. ಜನರಿಂದ ಬಂದ ಪ್ರತಿಯೊಂದು ಪ್ರತಿಕ್ರಿಯೆಗಳನ್ನು ಗಣನೆಗೆ ತೆಗೆದುಕೊಂಡು ಮೋದಿ ಸರಕಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಹೋಯಿತು.

ಸರಕು ಸಾಗಾಟಕ್ಕಾಗಿ ಇ-ವೇ ಮಸೂದೆಯನ್ನು ಜಾರಿಗೊಳಿಸಿದ ಮೊದಲ 24 ದಿನಗಳಲ್ಲಿ 2 ಕೋಟಿಗೂ ಹೆಚ್ಚು ಇ-ವೇ ಬಿಲ್ ಗಳ ಉತ್ಪತ್ತಿಯಾಗಿ ಭಾರೀ ಪ್ರಮಾಣದ ಜನ ಬೆಂಬಲ ದೊರೆಯಿತು.

ಕೇಂದ್ರದ ಮೇಲೆ ರಾಜ್ಯಗಳ ನಂಬಿಕೆಯನ್ನು ಹೆಚ್ಚಿಸಲು ರಾಜ್ಯಗಳಿಗೆ ಕೊಡುವ ತೆರಿಗೆ ಪಾಲನ್ನು 32 ಪ್ರತಿಶತದಿಂದ ಶೇ 42 ಕ್ಕೆ ಏರಿಸಲಾಯಿತು. ಇದರಿಂದ ಪ್ರತಿ ರಾಜ್ಯದ ಆರ್ಥಿಕ ಸ್ವಾಯತ್ತತೆ ಹೆಚ್ಚಿತು.

ಈ ವರ್ಷ ಎಪ್ರಿಲ್ ವರೆಗೆ ದೇಶದ ಒಟ್ಟು ಜಿಎಸ್ಟಿ ಆದಾಯವು 1 ಲಕ್ಷ ಕೋಟಿ ರೂ.ಗಳನ್ನು ದಾಟಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಕಳೆದ ವರ್ಷ ಆದಾಯ ಕೇವಲ 90,000 ಕೋಟಿ ರುಪಾಯಿಯಷ್ಟೆ ಇತ್ತು. ಕೇಂದ್ರ ಜಿ.ಎಸ್.ಟಿ ರೂ. 18,652 ಕೋಟಿ, ರಾಜ್ಯ ಜಿ.ಎಸ್.ಟಿ ರೂ 25,704 ಕೋಟಿ ಮತ್ತು ಇಂಟೆಗ್ರೇಟೆಡ್ ಜಿ.ಎಸ್.ಟಿ ರೂ 50,548 ಕೋಟಿ, ಇದರಲ್ಲಿ 21,246 ಕೋಟಿ ರೂಪಾಯಿಗಳನ್ನು ಆಮದಿನಿಂದ ಗಳಿಸಲಾಗಿದೆ.

ಎಕನಾಮಿಕ್ ಸರ್ವೆ 2017-18 ಪ್ರಕಾರ, ಪರೋಕ್ಷ ತೆರಿಗೆದಾರರ ಸಂಖ್ಯೆಯಲ್ಲಿ 50 ಪ್ರತಿಶತ ಏರಿಕೆ ಕಂಡುಬಂದಿದೆ. ಜಿ.ಎಸ್.ಟಿಗೆಸ್ ಸ್ವಯಂ ದಾಖಲಾತಿಗಳಲ್ಲಿಯೂ ದೊಡ್ಡ ಮಟ್ಟದ ಹೆಚ್ಚಳ ಕಂಡುಬಂದಿದೆ.

ಜಿಎಸ್.ಟಿ ಅಡಿಯಲ್ಲಿ, ಸಣ್ಣ ವ್ಯಾಪಾರಿಗಳ ಮತ್ತು ತಯಾರಕರ ವಾರ್ಷಿಕ ವಹಿವಾಟಿಗೆ 20 ಲಕ್ಷ ರೂವರೆಗೆ ಜಿಎಸ್.ಟಿ ವಿನಾಯಿತಿ ನೀಡಲಾಗಿದೆ. 250 ಕೋಟಿ ರೂಗಳ ವಾರ್ಷಿಕ ಆದಾಯವಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳ ಕಾರ್ಪೊರೇಟ್ ತೆರಿಗೆಯನ್ನು 30% ನಿಂದ 25% ಗೆ ಕಡಿತಗೊಳಿಸಲಾಗಿದೆ.

ಜಿ.ಎಸ್.ಟಿಯಿಂದಾಗಿ ವಿಮಾನ ಟಿಕೆಟ್ ದರಗಳು ಅತ್ಯಂತ ಅಗ್ಗವಾಗಿವೆ. ಆರೋಗ್ಯ ಮತ್ತು ಶಿಕ್ಷಣದ ಮೇಲೆ ತೆರಿಗೆ ಇಲ್ಲ. ಆಹಾರದ ಧಾನ್ಯಗಳ ಬೆಲೆ ವಿಶೇಷವಾಗಿ ಗೋಧಿ ಮತ್ತು ಅಕ್ಕಿಯನ್ನು ಜಿ.ಎಸ್.ಟಿ ಯಿಂದ ವಿನಾಯಿತಿಗೊಳಿಸಿದ್ದರಿಂದ ಅಗ್ಗದ ದರದಲ್ಲಿ ದೊರಕುತ್ತಿವೆ. ಕಲ್ಲಿದ್ದಲಿನ ಮೇಲಿನ ತೆರಿಗೆಯನ್ನು ಶೇಕಡ 11.69 ರಿಂದ 5 ಕ್ಕೆ ಇಳಿಸಿದ್ದರಿಂದ ವಿದ್ಯುತ್ ಉತ್ಪಾದನೆ ಅಗ್ಗವಾಗಿದೆ. ಸಕ್ಕರೆ, ಚಹಾ, ಕಾಫಿ ಮತ್ತು ತಿನ್ನಬಹುದಾದಂತಹ ವಸ್ತುಗಳ ಮೇಲೆ 5% ನಷ್ಟು ತೆರಿಗೆ ದರದಲ್ಲಿರುವುದರಿಂದ ಇವೆಲ್ಲವುಗಳ ಬೆಲೆಗಳಲ್ಲಿ ಇಳಿಕೆ ಕಂಡುಬಂದಿದೆ. ದಿನನಿತ್ಯದ ಮನೆ ಬಳಕೆಯ ಬಹುತೇಕ ಎಲ್ಲಾ ವಸ್ತುಗಳು ಇಂದು ಕಡಿಮೆ ದರದಲ್ಲಿ ಲಭ್ಯವಾಗುತ್ತಿವೆ.

ಸ್ಥಳೀಯ ರೈಲುಗಳು ಮತ್ತು ಮೆಟ್ರೊ ಸೇರಿದಂತೆ AC- ಅಲ್ಲದ ರೈಲು ಪ್ರಯಾಣಗಳು ಜಿ.ಎಸ್.ಟಿಯಿಂದ ವಿನಾಯಿತಿ ಪಡೆದಿದೆ, ಮತ್ತು AC ರೈಲು ಪ್ರಯಾಣಕ್ಕೆ 5% ತೆರಿಗೆ ವಿಧಿಸಲಾಗಿದೆ

ಪಂಚತಾರಾ ಹೊಟೇಲ್ ಗಳನ್ನು ಹೊರತು ಪಡಿಸಿ ಎಲ್ಲಾ ರೆಸ್ಟೊರೆಂಟ್ ಗಳಲ್ಲಿ ಜಿ.ಎಸ್.ಟಿಯನ್ನು 18% ನಿಂದ 5% ಇಳಿಸಲಾಗಿದೆ. ಪ್ಯಾಕೇಜ್ ಮಾಡಲಾದ ಸಿಮೆಂಟ್ ಬೆಲೆಗಳು ಶೇಕಡಾ 28 ರಿಂದ ಶೇ 18 ಕ್ಕೆ ಇಳಿದಿದೆ. 500 ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳ ಜಿ.ಎಸ್.ಟಿ 14.41% ರಿಂದ 5% ಗೆ ಇಳಿಸಲಾಗಿದೆ.

ಆಸ್ಟ್ರೇಲಿಯಾ, ಮಲೇಷಿಯಾ ಮತ್ತು ಸಿಂಗಾಪುರಗಳಂತ ದೇಶಗಳಲ್ಲಿ ಜಿ.ಎಸ್.ಟಿ ಕಾರ್ಯರೂಪಕ್ಕೆ ಬಂದ ನಂತರ ಹಣದುಬ್ಬರದಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡು ಬಂದಿತ್ತು. ಆದರೆ ಭಾರತದಲ್ಲಿ ಜಿ.ಎಸ್.ಟಿ ಕಾರ್ಯರೂಪಕ್ಕೆ ಬಂದ ಒಂದು ವರ್ಷದ ನಂತರವೂ ಹಣದುಬ್ಬರ ದಾಖಲಾಗಿಲ್ಲ!! ಇದೊಂದು ಅದ್ಭುತವೆ ಸರಿ. ಮೋದಿ ಸರಕಾರ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ಈ ಸಾಕ್ಷ್ಯಗಳೆ ಸಾಕು.

ದೇಶದಲ್ಲಿ ಭ್ರಷ್ಟಾಚಾರವನ್ನು ತಗ್ಗಿಸಿ ಮತ್ತು ಅಮಿತ ಆರ್ಥಿಕ ಏಕೀಕರಣವನ್ನು ಉಂಟುಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಜಿ.ಎಸ್.ಟಿ. 1.25 ಶತಕೋಟಿಗಿಂತ ಹೆಚ್ಚು ಜನರನ್ನು ಒಂದೇ ಮಾರುಕಟ್ಟೆಯಡಿ ತರುವ ಮೂಲಕ ಮೋದಿ ಸರಕಾರ 2 ಲಕ್ಷಕೋಟಿ ಡಾಲರ್ ಆರ್ಥಿಕತೆಯನ್ನು ಏಕೀಕರಿಸಿದೆ! ದಿಟ್ಟ ನಿರ್ಧಾರ ತೆಗೆದುಕೊಂಡು ಜಿ.ಎಸ್.ಟಿ ಅನ್ನು ಕಾರ್ಯರೂಪಕ್ಕೆ ತರುವ ಮೂಲಕ, ಭಾರತವನ್ನು ಪ್ರಪಂಚದಲ್ಲೇ ಅಭೂತಪೂರ್ವ ಚಟುವಟಿಕೆಯ ತಾಣವಾಗಿಸಿದೆ ಮೋದಿ ಅವರ ಸಮರ್ಥ ನಾಯಕತ್ವ. ಮುಂದಿನ ದಿನಗಳಲ್ಲಿ ಜಿ.ಎಸ್.ಟಿಯಿಂದ ದೇಶ ಮತ್ತು ನಾಗರಿಕರಿಗೆ ಇನ್ನೂ ಹೆಚ್ಚಿನ ಲಾಭಗಳಾಗಲಿವೆ ಕಂಡಿತ.

-ಶಾರ್ವರಿ

0 Shares
Tags

Related Articles

Close