ಪ್ರಚಲಿತ

ಪತನವಾಯಿತು ಪಾಕಿಸ್ತಾನ: ಅಂತ್ಯ ಕಾಲದಲ್ಲಿ ಮೋದಿಯವರನ್ನು ಹಾಡಿ ಹೊಗಳಿದ ಪಾಕ್!

ಭಾರತ ಮತ್ತು ಪಾಕಿಸ್ತಾನದ ನಡುವಿನ ಶತ್ರುತ್ವ ಇಂದು ನಿನ್ನೆಯದಲ್ಲ. ಉಗ್ರರನ್ನು ಪೋಷಿಸುವ ಪಾಕಿಸ್ತಾನ ಮತ್ತು ಉಗ್ರರ ಗಮನಕ್ಕೆ ಪಣ ತೊಟ್ಟ ಭಾರತ ದೇಶಗಳ ಸಂಬಂಧದ ಬಗ್ಗೆ ಇಡೀ ಪ್ರಪಂಚಕ್ಕೆಯೇ ತಿಳಿದಿದೆ. ಸದಾ ಭಾರತದ ಮೇಲೆ ಕೆಂಡ ಕಾರುವ ಪಾಕಿಸ್ತಾನದ ಮಾಧ್ಯಮಗಳು ಭಾರತವನ್ನು ಹೊಗಳಿ ಮಾತನಾಡಿದ್ದು, ವಿನಾಶ ಕಾಲದಲ್ಲಾದರೂ ಪಾಕಿಸ್ತಾನದ ಕೆಲ ಮಾಧ್ಯಮಗಳಿಗಾದರೂ ಒಳ್ಳೆ ಬುದ್ದಿ ಬಂತಲ್ಲಾ ಎಂದು ಅಚ್ಚರಿ ಪಡುವಂತಾಗಿದೆ.

ದ್ವೇಷ ರಾಜಕಾರಣ, ವಿದೇಶಾಂಗ ನೀತಿ ಮೈಗೂಡಿಸಿಕೊಂಡಿರುವ ಪಾಕ್‌ನ ಮಾಧ್ಯಮಗಳು ಭಾರತವನ್ನು, ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದೆ. ಭಾರತದ ಬೆಳವಣಿಗೆಯನ್ನು ಸಹಿಸಿಕೊಳ್ಳುವುದಕ್ಕೂ ಅಸಾಧ್ಯವಾಗಿದ್ದ ರಾಷ್ಟ್ರ ಭಾರತದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿರುವುದು ಅಚ್ಚರಿಯಾದರೂ ಸತ್ಯ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ದೇಶ ಜಾಗತಿಕ ಮಟ್ಟದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ ದಿನದಿಂದ ದಿನಕ್ಕೆ ಎತ್ತರಕ್ಕೇರುತ್ತಿದೆ. ಇದಕ್ಕೆ ಕಾರಣ ಪ್ರಧಾನಿ ಮೋದಿ ಅವರಂತಹ ದಿಟ್ಟ ನಾಯಕತ್ವ, ಅವರ ಕಾರ್ಯವೈಖರಿ ಎಂದು ಪಾಕ್ ಮಾಧ್ಯಮಗಳು ಹೇಳಿವೆ. ದಿನೇ ದಿನೇ ಆರ್ಥಿಕವಾಗಿ ಹಿನ್ನಡೆ ಸಾಧಿಸುತ್ತಿರುವ ಪಾಕ್‌ಗೆ ಭಾರತದ ಶ್ರೇಷ್ಟತೆ ಅರಿವಾಗುತ್ತಿದೆ ಎನ್ನುವುದು ನಿಸ್ಸಂಶಯ.

ಪಾಕ್‌ನ ಪ್ರಮುಖ ದಿನ ಪತ್ರಿಕೆ ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್’ ಜಾಗತಿಕ ಜಾಲದಲ್ಲಿ ಭಾರತದ ಧ್ವನಿ ಹಿಂದಿಗಿಂತ ಗಟ್ಟಿಯಾಗಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತದ ಜಾಲ ವಿಶ್ವ ಮಟ್ಟದಲ್ಲಿ ವಿಸ್ತರಣೆಯಾಗುತ್ತಿದೆ ಎಂದು ಇದು ತಿಳಿಸಿದೆ. ಮೋದಿ ಅವರ ವಿದೇಶಾಂಗ ನೀತಿ ಜಾಣ್ಮೆಯಿಂದ ಕೂಡಿದ್ದು, ಇದು ಜಾಗತಿಕ ಮಟ್ಟದಲ್ಲಿ ಸ್ನೇಹಿತ ರಾಷ್ಟ್ರಗಳ ಸಂಖ್ಯೆ ಹೆಚ್ಚುವುದಕ್ಕೆ ಕಾರಣವಾಗಿದೆ. ಭಾರತದ ಜಿಡಿಪಿ ಮಟ್ಟ ಸಹ ಏರಿಕೆಯಾಗಿದೆ. ಮೋದಿ ಅವರ ನಾಯಕತ್ವದಲ್ಲಿ ಭಾರತ ಐತಿಹಾಸಿಕ ಪ್ರಗತಿ ಸಾಧಿಸುತ್ತಿದೆ ಎಂದು ಪಾಕ್ ಮಾಧ್ಯಮ ಹೇಳಿದೆ.

ಒಟ್ಟಿನಲ್ಲಿ ಭಾರತದಲ್ಲಿರಲು ಬದಲಾಗುತ್ತದೆ ಎನ್ನುವವರಿಗೆ, ಪಾಕಿಸ್ತಾನವನ್ನು ಬೆಂಬಲಿಸುವವರಿಗೆ, ಉಗ್ರರನ್ನು ಸಹೋದರರು ಎನ್ನುವವರಿಗೆ ಪಾಕಿಸ್ತಾನದ ಮಾಧ್ಯಮಗಳ ಈ ವಿಶ್ಲೇಷಣೆ ‘ಉರಿವಲ್ಲಿಗೆ ಉಪ್ಪಿಟ್ಟಂತಾಗಿದೆ’ ಎನ್ನುವುದರಲ್ಲಿ ಎರಡು ಮಾಡಿಲ್ಲ.

Tags

Related Articles

Close