ಪ್ರಚಲಿತ

ಮೋದಿಯ ಹುಬ್ಬಳ್ಳಿ ಭೇಟಿ ಸಂಪೂರ್ಣ ಉತ್ತರದ ಚಿತ್ರಣವನ್ನೇ ಬದಲಾಯಿಸಿತು

ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿ – ಧಾರವಾಡದಲ್ಲಿ ನಡೆಯುವ ೨೯ನೇ ರಾಷ್ಟೀಯ ಯುವಜನೋತ್ಸವಕ್ಕೆ ನಿನ್ನೆ ಚಾಲನೆ ನೀಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತದ ಎಲ್ಲಾ ಕ್ಷೇತ್ರಗಳ ಯುವಜನರು ಗಮನ ಸೆಳೆಯುತ್ತಿದ್ದಾರೆ. ಯುವ ಪ್ರತಿಭೆಗಳು ಅಸಾಧಾರಣವಾದ ಸಾಧನೆಯನ್ನು ಮೆರೆಯುತ್ತಿದೆ. ಭಾರತೀಯ ಯುವ ಸಮುದಾಯದ ಅಸಾಧಾರಣ ಪ್ರತಿಭೆಯನ್ನು ಜಗತ್ತು ಬೆರಗುಗಣ್ಣುಗಳಿಂದ ನೋಡುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಅವರನ್ನು ನೋಡಲು ಭಾಗವಹಿಸಿದ ಜನರ ಸಂಖ್ಯೆ ಲಕ್ಷ ಲಕ್ಷ. ಜನರ ಈ ಮೋದಿ ಪ್ರೇಮ ವಿರೋಧಿಗಳಲ್ಲಿ ಉರಿ ಹತ್ತಿಸಿದ್ದಂತೂ ಸತ್ಯ. ಬಿಗಿ ಭದ್ರತೆಯ ನಡುವೆಯೂ ಪ್ರಧಾನಿ ಮೋದಿ ಅವರು ಜನರ ಅಪರಿಮಿತ ಸ್ನೇಹಕ್ಕೆ ಕೈ ಬೀಸಿ ಧನ್ಯವಾದ ಸಮರ್ಪಿಸಿದ್ದು, ಮಾದರಿ ನಾಯಕನೊಬ್ಬ ಹೀಗಿರಬೇಕು ಎನ್ನುವುದಕ್ಕೆ ಪ್ರತ್ಯಕ್ಷ ಉದಾಹರಣೆ.

ಭಾರತ ಪ್ರಪಂಚದೆದುರು ಮಿಂಚಬೇಕು. ಈ ದೇಶದ ಯುವಕರ ಸದೃಢ ಭವಿಷ್ಯಕ್ಕಾಗಿ ಸರ್ಕಾರ ಯಾವ ರೀತಿಯ ವೇದಿಕೆಯನ್ನು ಸಿದ್ಧಗೊಳಿಸಬೇಕು, ಅವರ ಪ್ರತಿಭೆಗಳನ್ನು ಜಗದೆದುರು ತೆರೆದಿಡಲು ಇರುವ ಮಾರ್ಗ ಯಾವುದು, ಅದಕ್ಕಾಗಿ ಸರ್ಕಾರ ಏನು ಮಾಡಬಹುದು? ಎಂಬುದನ್ನು ಆಲೋಚಿಸಿ, ಯುವ ಜನರ ಪ್ರತಿಭಾ ಪ್ರದರ್ಶನಕ್ಕೆಂದೇ ಆತ್ಮನಿರ್ಭರ ಭಾರತದ ಕಲ್ಪನೆಯನ್ನು ಯೋಜಿಸಿದವರು ಮೋದೀಜಿ. ಇದು ಹಲವಾರು ಯುವ ಮನಗಳಿಗೆ ಸ್ವ ಉದ್ಯೋಗದ ಕಲ್ಪನೆಯನ್ನು ತುಂಬಿದವರು ಪ್ರಧಾನಿ ಮೋದಿ. ವಿರೋಧಿಗಳ ವಿರೋಧದ ನಡುವೆಯೂ, ಕೊರೋನಾ ಸಂಕಷ್ಟದ ಸಮಯದಲ್ಲಿಯೂ ಈ ದೇಶವನ್ನು ಆರ್ಥಿಕ ಸಂಕಷ್ಟದಿಂದ ಮೇಲೆತ್ತಲು ಅಗತ್ಯ ಮಾರ್ಗಗಳನ್ನು ಕಂಡುಕೊಂಡ ವ್ಯಕ್ತಿ ಶಕ್ತಿ ಮೋದಿ. ಪ್ರಧಾನಿ ಮೋದಿ ಅವರ ಈ ಶ್ರಮದ ಕಾರಣದಿಂದಲೇ ಜಗತ್ತು ಭಾರತವನ್ನು ಗೌರವಿಸುವಂತಾಗಿದೆ.

ಅಂದು ಸ್ವಾಮಿ ವಿವೇಕಾನಂದರು ಪ್ರಪಂಚ ವೇ ಭಾರತ ದತ್ತ ತಿರುಗಿ ನೋಡುವಂತೆ, ಭಾರತದ ಬಗ್ಗೆ ತಿಳಿದುಕೊಳ್ಳುವಂತೆ ಮಾಡಿದ್ದರೆ, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತೇ ಭಾರತವನ್ನು ತಿರುಗಿ ನೋಡುವಂತೆ, ಭಾರತದ ಪ್ರತಿಭೆಗಳನ್ನು ಜಗತ್ತು ಗೌರವಿಸುವಂತೆ ಮಾಡಿದ್ದಾರೆ. ಅಂದು ಯುವ ಮರಗಳನ್ನು ಬಡಿದೆಬ್ಬಿಸುವ ಕೆಲಸವನ್ನು ಆ ನರೇಂದ್ರ ಮಾಡಿದ್ದರೆ, ಇಂದು ಯುವಜನರಿಗೆ ಬದುಕಿನ ಭರವಸೆಯನ್ನು ಕಲ್ಪಿಸುವ ಕೆಲಸ ಈ ನರೇಂದ್ರನಿಂದಾಗುತ್ತಿದೆ. ಅಂದು ದೇಶಕ್ಕಾಗಿ ಯಾವ ಜನರಲ್ಲಿ ತನ್ನ ಮಾತಿನ ಮೂಲಕ ದೇಶಾಭಿಮಾನದ ಕಿಚ್ಚು ಹಚ್ಚಿದ್ದರೆ, ಇಂದು ಈ ನರೇಂದ್ರ ಯುವ ಜನರಲ್ಲಿ ದೇಶ ಪ್ರೇಮದ ಬೆಳಕನ್ನು ಹಬ್ಬುತ್ತಿದ್ದಾರೆ.

ಭಾರತ್ ಜೋಡಿ ಹೆಸರಿನಲ್ಲಿ ಭಾರತೀಯರನ್ನು ಒಡೆಯುವ, ಉಗ್ರರಿಗೆ ಬೆಂಬಲ ನೀಡುವ, ಸರ್ಕಾರಿ ಹಣದಲ್ಲಿ ಪಕ್ಷದ ಕೆಲಸ ಮಾಡುವ, ಅಧಿಕಾರದ ಮದದಲ್ಲಿ ಮೆರೆಯುವ ಭ್ರಷ್ಟರು ಪ್ರಧಾನಿ ಮೋದಿ ಅವರ ಬದುಕನ್ನು ನೋಡಿ ಕಲಿಯಬೇಕಾದ ವಿಷಯ ಬಹಳಷ್ಟಿದೆ.

ಸ್ವಾಮಿ ವಿವೇಕಾನಂದರಂತಹ, ಪ್ರಧಾನಿ ನರೇಂದ್ರ ಮೋದಿ ಅವರಂತಹ ಧೀಮಂತ ವ್ಯಕ್ತಿಗಳನ್ನು ಪಡೆದ ಭಾರತ ನಿಜಕ್ಕೂ ಪುಣ್ಯಭೂಮಿ. ದೇಶಭಕ್ತ ಭಾರತೀಯರೆಲ್ಲರೂ ಪುಣ್ಯವಂತರೇ ಸರಿ.

Tags

Related Articles

Close