ಪ್ರಚಲಿತ

‘ವಿರೋಧ ಪಕ್ಷಗಳಿಗೆ ಅಧಿಕಾರವೇ ಮುಖ್ಯ, ದೇಶವಲ್ಲ’

ಭ್ರಷ್ಟಾಚಾರ ಮತ್ತು ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಮತ್ತೆ ಗುಡುಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷದ ಭ್ರಷ್ಟಾಚಾರ ಬಯಲಾದ ಬಗ್ಗೆ ಮಾತನಾಡಿರುವ ಅವರು, ಟಿ ಎಂ ಸಿ ನಾಯಕರು ಜನರಿಂದ ಲಪಟಾಯಿಸಿದ ಮೂರು ಸಾವಿರ ಕೋಟಿ ರೂ. ಗಳನ್ನು ಇ.ಡಿ. ವಶಕ್ಕೆ ಪಡೆದುಕೊಂಡಿದೆ. ಈ ಹಣವನ್ನು ಮತ್ತೆ ಜನರ ಅನುಕೂಲಕ್ಕೆ ಬಳಕೆ ಮಾಡುವ ಉದ್ದೇಶ ನಮ್ಮದಾಗಿದೆ. ಅಗತ್ಯ ಬಿದ್ದಲ್ಲಿ ಇದಕ್ಕಾಗಿ ಕಾನೂನು ವ್ಯವಸ್ಥೆಯನ್ನು ಸಹ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಡ ಜನರು ಉದ್ಯೋಗ ಪಡೆಯುವ ಸಲುವಾಗಿ ಭ್ರಷ್ಟ ಅಧಿಕಾರಿಗಳಿಗೆ ಲಂಚ ನೀಡಿರುವುದಾಗಿದೆ. ಈ ಮೊತ್ತ ಸುಮಾರು ಮೂರು ಕೋಟಿಗಳಷ್ಟಾಗಿದ್ದು, ಅದನ್ನು ಇ.ಡಿ. ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅಧಿಕಾರಕ್ಕೆ ಮರಳಿದ ಕೂಡಲೇ ಈ ಹಣ ಮತ್ತೆ ಜನರಿಗೆ ತಲುಪಲು ಬೇಕಾದ ಎಲ್ಲ ವ್ಯವಸ್ಥೆ‌ಗಳನ್ನು ಮಾಡಲಾಗುತ್ತದೆ. ಇದು ನನ್ನ ದೃಢ ಸಂಕಲ್ಪ ಎಂದು ಅವರು ನುಡಿದಿದ್ದಾರೆ.

ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕರು ಅರವಿಂದ ಕೇಜ್ರಿವಾಲ್ ಅವರ ಆಪ್ ಪಕ್ಷವನ್ನು ದ್ವೇಷಿಸುತ್ತಿದ್ದರು. ಆದರೆ ಸದ್ಯ ಕೇಜ್ರಿವಾಲ್ ಅಕ್ರಮ ಸಹಕಾರಿ ಮದ್ಯ ನೀತಿ ರೂಪಿಸಿ ಜೈಲು ಸೇರಿದ್ದಾರೆ. ಈಗ ಕಾಂಗ್ರೆಸ್ ಪಕ್ಷದ ನಾಯಕರು ಆಪ್‌ನ ಕೇಜ್ರಿವಾಲ್‌ರನ್ನು ಬೆಂಬಲಿಸುವ ಮೂಲಕ ತಮ್ಮ ವರಸೆ ಬದಲಿಸಿದ್ದಾರೆ. ಇದು ವಿರೋಧ ಪಕ್ಷಗಳಿಗೆ ದೇಶ ಮುಖ್ಯವಲ್ಲ. ಕೇವಲ ಅಧಿಕಾರವಷ್ಟೇ ಮುಖ್ಯ ಎಂಬುದಕ್ಕೆ ನಿದರ್ಶನ ಎಂದು ಅವರು ಹೇಳಿದ್ದಾರೆ.

ಪರಸ್ಪರ ರಕ್ಷಣೆಗಾಗಿ ಎಲ್ಲಾ ಭ್ರಷ್ಟ‌ ನಾಯಕರೂ ಒಗ್ಗಟ್ಟಾಗಿದ್ದಾರೆ. ಇನ್ನೊಂದು ಕಡೆಯಲ್ಲಿ ಬಿಜೆಪಿ ನೇತೃತ್ವದ ಮಿತ್ರ ಪಕ್ಷಗಳು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ, ಯುವ ಜನರಿಗೆ ಉತ್ತಮ ಭವಿಷ್ಯ ರೂಪಿಸಲು ಪೂರಕ ಸಮಾಜ ನಿರ್ಮಾಣ ಮಾಡುವಲ್ಲಿ ಕೆಲಸ ಮಾಡುತ್ತಿದೆ. ಇದು ವಾಸ್ತವ ಎಂದು ಅವರು ವಿವರಿಸಿದ್ದಾರೆ.

ಜೊತೆಗೆ ವಿರೋಧಿಗಳಿಂದ ಟೀಕೆಗೆ ತುತ್ತಾದರೆ ಒತ್ತಡಕ್ಕೆ ಒಳಗಾಗದಿರಿ ಎಂದು ಅವರು ಇದೇ ಸಂದರ್ಭದಲ್ಲಿ ಬಿಜೆಪಿಯ ಲೋಕ ಸಭಾ ಚುನಾವಣಾ ಅಭ್ಯರ್ಥಿಗಳಿಗೆ ತಿಳಿಸಿದ್ದಾರೆ.

Tags

Related Articles

Close