ಪ್ರಚಲಿತ

ಮೋದಿ ಸರಕಾರದಲ್ಲಿ ಸೈನಿಕರಿಗೆ ಬಂತು ಅಛ್ಛೆ ದಿನ್! ಭಾರತೀಯ ಸೇನೆಯ ಎರಡು ದಶಕಗಳ ಬೇಡಿಕೆಗೆ ಹಸಿರು ಬಾವುಟ ತೋರಿದ ಮೋದಿ! ಲಡಾಖ್ ನಲ್ಲಿ ಏಷ್ಯಾದ ಅತಿ ಉದ್ದನೆಯ ಭೂಗತ ರಸ್ತೆಗೆ ಮೇ 19 ರಂದು ಶಿಲಾನ್ಯಾಸ!!

ದಿನ ಬೆಳಗಾದರೆ ವಿರೋಧಿಗಳು “ಅಛ್ಛೆ ದಿನ್ ಬಂತಾ?” “ಹದಿನೈದು ಲಕ್ಷ ಖಾತೆಗೆ ಬಿತ್ತಾ?” ಎಂದು ಕಾಗೆಗಳ ಹಾಗೆ ಕೂಗು ಹಾಕುತ್ತಾರೆ. “ಮೋದಿ ಫೋಬಿಯಾ” ಎಂಬ ರೋಗದಿಂದ ಬಳಲಿ ಮಾನಸಿಕ ರೋಗಿಗಳಂತಾಡುವ ವಿರೋಧಿಗಳಿಗೆ ಅಛ್ಛೆ ದಿನ್ ತೋರಿಸಿದರೂ ಕಾಣುವುದಿಲ್ಲ. ಇಡಿಯ ವಿಶ್ವವೆ ಇವತ್ತು ಮೋದಿ ಅವರ ನಾಯಕತ್ವವನ್ನು ಕೊಂಡಾಡುತ್ತಿದ್ದರೂ ನಮಗೂ ಅದಕ್ಕೂ ಲಗಾವಿಲ್ಲ! ನಮ್ಮದೇನಿದ್ದರೂ ಮೋದಿಯನ್ನು ವಿರೋಧಿಸುವುದೆ ನಿತ್ಯ ಕಾಯಕ. ಮೋದಿ ಸರಕಾರ ಬಂದ ಮೇಲಂತೂ ಭಾರತೀಯ ಸೇನೆಗೆ ಅಛ್ಛೆ ದಿನ್ ಬಂದಿರುವುದಂತೂ ಸುಳ್ಳಲ್ಲ. ಭಾರತೀಯ ಸೇನೆಗೆ ಅಛ್ಛೆ ದಿನ್ ಬಂದರೆ ಅದು ದೇಶ ಪ್ರೇಮಿಗಳಿಗೂ ಬಂದಂತೆ. ಸೇನೆ ಸುಖವಾಗಿದ್ದರೆ ದೇಶ ಸುರಕ್ಷಿತವಾಗಿರುತ್ತದೆ. ಸೈನಿಕ ಆರಾಮಾಗಿದ್ದರೆ ದೇಶ ಪ್ರೇಮಿಗಳಿಗೆ ಅದುವೆ ಅಛ್ಚೆ ದಿನ್. ನಮ್ಮ ಖಾತೆಗೆ ಹದಿನೈದು ಲಕ್ಷ ಬರದಿದ್ದರೂ ಚಿಂತೆಯಿಲ್ಲ ನಮ್ಮ ಸೈನಿಕರಿಗೆ ಬೇಕಾದ್ದು ಕೊಟ್ಟರೆ ಸಾಕು ಮೋದಿಜಿ.

ಅಧಿಕಾರಕ್ಕೆ ಬಂದ ಮರು ಘಳಿಗೆಯಿಂದಲೆ ಮೋದಿ ಭಾರತೀಯ ಸೈನಿಕರ ಮನೋಬಲ ಹೆಚ್ಚಿಸುವಂತ ಕಾರ್ಯ ಕೈಗೊಳ್ಳುತ್ತಲೆ ಬಂದಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ದೀಪಾವಳಿಯನ್ನು ಭಾರತೀಯ ಸೇನೆಯ ಸೈನಿಕರೊಂದಿಗೆ ಆಚರಿಸುತ್ತಲೆ ಬಂದಿದ್ದಾರೆ ಮೋದಿ. “ಸೈನಿಕರೆ ನನ್ನ ಪರಿವಾರ” ಎನ್ನುವ ಮೋದಿ ಭಾರತೀಯ ಸೇನೆಯ ದಶಕಗಳಿಂದ ಧೂಳು ಹಿಡಿದಿರುವ ಮನವಿಗಳನ್ನು ಪುರಸ್ಕರಿಸಿ ಭಾರತೀಯ ಸೇನೆಗೆ ಸರ್ವ ಸಹಾಯವನ್ನೂ ನೀಡುತ್ತಿದ್ದಾರೆ. ಅದರಂತೆ ರಕ್ಷಣಾ ದೃಷ್ಟಿಯಿಂದ ಅತಿ ಮಹತ್ವದ ಸ್ಥಳವಾದ ಲಡಾಖಿನ ಝೋಜಿ ಲಾ ಪಾಸ್ ನಲ್ಲಿ ಏಷ್ಯಾದಲ್ಲಿಯೆ ಅತಿ ಉದ್ದನೆಯ ಸುರಂಗ ನಿರ್ಮಾಣಕ್ಕೆ ಹಸಿರು ಬಾವುಟ ತೋರಿದ್ದಾರೆ.

ಭಾರತೀಯ ಸೇನೆಯ ಎರಡು ದಶಕಗಳ ಬೇಡಿಕೆ ಎನ್ನು ಏಳೇ ವರ್ಷಗಳಲ್ಲಿ ಪೂರ್ಣವಾಗಲಿದೆ! 1997 ರಲ್ಲಿ ಝೊಜಿ ಲಾ ಪಾಸ್ ಮೂಲಕ ಸುರಂಗದ ಸಮೀಕ್ಷೆಯನ್ನು ಮೊದಲ ಬಾರಿಗೆ ಭಾರತೀಯ ಸೈನ್ಯ ನಡೆಸಿತ್ತು. 1999 ರಲ್ಲಿ ಕಾರ್ಗಿಲ್ ಯುದ್ಧದ ನಂತರ ಯೋಜನೆ ಪ್ರಾರಂಭವಾಯಿತು. ಆದರೆ “ಸ್ಕಾಮ್ ಗ್ರೆಸ್ಸ್” ಸರಕಾರದ ಹತ್ತು ವರ್ಷದ “ಘೋಟಾಲಾ” ಆಡಳಿತದಲ್ಲಿ ಭಾರತೀಯ ಸೇನೆಯ ಈ ಯೋಜನೆ ಹಳ್ಳ ಹಿಡಿಯಿತು. ಯೋಜನೆಗೆ ಮರುಜೀವ ತುಂಬಿದ ಮೋದಿ ಇದೆ ಮೇ 19ಕ್ಕೆ ಸುರಂಗ ಮಾರ್ಗದ ಅಡಿಪಾಯ ಹಾಕಲಿದ್ದಾರೆ. 1426 ಕಿ.ಮೀ. ವ್ಯಾಪ್ತಿಯಲ್ಲಿ ಹಮ್ಮಿರುವ 6,809 ಕೋಟಿ ರೂಪಾಯಿಗಳ ಈ ಯೋಜನೆಯು 2026 ರಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಸ್ತುತ, ಭಾರಿ ಹಿಮಪಾತದಿಂದಾಗಿ ನವೆಂಬರಿನಿಂದ ಮಾರ್ಚಿನವರೆಗೆ ಲಡಾಖ್ ಭಾರತದ ಉಳಿದ ಭಾಗಗಳಿಂದ ಕಡಿದು ಹೋಗುತ್ತದೆ. ಲಡಾಖ್, ಚೀನಾ ಸರಹದ್ದಿಗೆ ಅಂಟಿಕೊಂಡಿರುವುದರಿಂದ ರಕ್ಷಣಾ ಉದ್ದೇಶದಿಂದ ಅತ್ಯಂತ ಪ್ರಾಮುಖ್ಯತೆ ಹೊಂದಿದೆ. ಈ ಮಾರ್ಗದಲ್ಲಿ ಭೂಗತ ರಸ್ತೆ ನಿರ್ಮಾಣ ಮಾಡುವುದರಿಂದ ವರ್ಷದ ಎಲ್ಲಾ ಕಾಲಗಳಲ್ಲಿಯೂ ಲಡಾಖನ್ನು ಭಾರತಕ್ಕೆ ಸಂಪರ್ಕಿಸಲು ಸಾಧ್ಯವಾಗುತ್ತದೆ. ಝೋಜಿ ಲಾ ಪಾಸ್ ಶ್ರೀನಗರ-ಕಾರ್ಗಿಲ್-ಲೆಹ್ ಹೆದ್ದಾರಿಯಲ್ಲಿ 11,578 ಅಡಿ ಎತ್ತರದಲ್ಲಿದೆ ಮತ್ತು ಶೀತ ಕಾಲದಲ್ಲಿ ಇಲ್ಲಿಯ ಉಷ್ಣಾಂಶ -45 ಡಿಗ್ರಿವರೆಗೂ ತಲುಪುತ್ತದೆ. ಇಂಥ ವಿಷಮ ಪರಿಸ್ಥಿತಿಯಲ್ಲೂ ನಮ್ಮ ಸೈನಿಕರು ದೇಶ ರಕ್ಷಣೆ ಮಾಡುತ್ತಾರಲ್ಲ, ಅವರಿಗೆ ದೀರ್ಘ ದಂಡ ನಮಸ್ಕಾರ. ಶ್ರೀನಗರ-ಲೇಹ್ ಹೆದ್ದಾರಿಯ ಝಿ-ಮೊಹ್ರಿನಲ್ಲಿ 6.5 ಕಿ.ಮೀ.ಉದ್ದದ್ದ ಮತ್ತೊಂದು ಪ್ರಮುಖ ಸುರಂಗ ಮುಂದಿನ ವರ್ಷ ಪೂರ್ಣಗೊಳ್ಳಲಿದೆ.

ಝೋಜಿ ಲಾ ಸುರಂಗ ಮಾರ್ಗ ಪೂರ್ಣಗೊಂಡ ನಂತರ ಪ್ರಯಾಣದ ಸಮಯವು 15 ನಿಮಿಷಗಳವರೆಗೆ ಕಡಿಮೆಯಾಗುತ್ತದೆ. ಪ್ರಸ್ತುತ ಝೊಜಿ ಲಾ ತಲುಪಲು ಮೂರು ಗಂಟೆಗಳ ಕಾಲಾವಕಾಶ ಬೇಕು. ತುರ್ತು ಸಂಧರ್ಭದಲ್ಲಿ ಕಾರ್ಗಿಲ್ ಗೆ ರಕ್ಷಣಾ ಸಾಮಾಗ್ರಿಗಳನ್ನು ಸಾಗಿಸಲು ಈ ಸುರಂಗ ಅತಿ ಅವಶ್ಯಕವಾಗಿದೆ. ಈಗಿರುವ ಮಾರ್ಗದ 400 ಮೀಟರ್ ಕೆಳಗಡೆಯೆ ಇನ್ನೊಂದು ಸುರಂಗ ಮಾರ್ಗ ನಿರ್ಮಿಸುವ ಈ ಯೋಜನೆ, ಇಂಜಿನಿಯರಿಂಗ್ ಜಗತ್ತಿನ ಅದ್ಭುತಗಳಲ್ಲಿ ಒಂದು ಎನ್ನಲಾಗುತ್ತಿದೆ. ಈ ಸುರಂಗದ ಎತ್ತರವು ದೆಹಲಿಯ ವಿಷ್ಣು ಸ್ಥಂಭ( ಕುತುಬ್ ಮಿನಾರ್)ಕ್ಕಿಂತ ಐದು ಪಟ್ಟು ಹೆಚ್ಚಾಗಿದೆ ಎಂದರೆ ನಿಜವಾಗಿಯೂ ಇದೊಂದು ಅದ್ಭುತವೆ ಸರಿ! ಸುರಂಗಮಾರ್ಗದ ಎರಡೂ ದಿಕ್ಕಿನಲ್ಲಿ 80 ಕಿ.ಮೀ. ವೇಗದಲ್ಲಿ ವಾಹನಗಳನ್ನು ಓಡಿಸಬಹುದು. ಅತ್ಯಾಧುನಿಕ ಸಂವಹನ ವ್ಯವಸ್ಥೆ ಸೇರಿದಂತೆ ಅವಶ್ಯಕವಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಈ ಸುರಂಗ ಹೊಂದಿರುತ್ತದೆ.

ದೇಶದಲ್ಲಿ ದಶಕಗಳಿಂದ ನೇತಾಡಿಸಲ್ಪಟ್ಟಿರುವ ಇಂತಹ ಹಲವಾರು ಯೋಜನೆಗಳಿವೆ. ಕಾಂಗ್ರೆಸ್ ನ ರಾಜ ಪರಿವಾರ 48 ವರ್ಷಗಳು ಆಡಳಿತ ನಡೆಸಿದರೂ ಇನ್ನೂ ಯಾಕೆ ಭಾರತದ ಹಲವಾರು ಯೋಜನೆಗಳು ಕಾರ್ಯಗತವಾಗಿಲ್ಲ? ಇದಕ್ಕೆ ಉತ್ತರ ಕೊಡುವರೆ ಬಾಲ ಬಡುಕರು? ಇಂತಹ ಅಭಿವೃದ್ದಿ ವಿರೋಧಿ, ಭಾರತೀಯ ಸೇನೆಯನ್ನು ಬಹಿರಂಗವಾಗಿ ಟೀಕಿಸುವ ದೇಶದ್ರೋಹಿ ಪಕ್ಷಕ್ಕೆ ಮತ ನೀಡಿ ಮತ್ತೊಮ್ಮೆ ದೇಶದ ಸುರಕ್ಷತೆಯ ಜೊತೆ ಆಟ ಆಡಲು ಬಿಡುತ್ತೀರಾ? ಅಥವಾ ಕಾಂಗ್ರೆಸ್ ಮುಕ್ತ ಭಾರತವಾಗಿಸಿ ಮತ್ತೊಮ್ಮೆ ಪ್ರಧಾನ ಸೇವಕನ್ನು ಗದ್ದುಗೆಯ ಮೇಲೆ ಕೂರಿಸುತ್ತೀರಾ? 2019 ಮತ್ತೊಮ್ಮೆ ಮೋದಿ ಸರಕಾರ……..

-ಶಾರ್ವರಿ

Tags

Related Articles

Close