ಪ್ರಚಲಿತ

ಬೆದರಿಕೆ, ನಿಂದನೆ ಕಾಂಗ್ರೆಸ್ ಪಕ್ಷದ ಹಳೆಯ ಸಂಸ್ಕೃತಿ: ಪ್ರಧಾನಿ ಮೋದಿ

ಭ್ರಷ್ಟರೇ ತುಂಬಿ ತುಳುಕುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮೇಲಿಂದ ಮೇಲೆ ಹೊಡೆತ ಬೀಳುತ್ತಿದ್ದು, ಸಂಕಷ್ಟ ಅನುಭವಿಸುತ್ತಲೇ ಇದೆ. ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರನ್ನು, ಬಿಜೆಪಿಯನ್ನು ಅವಮಾನಿಸಲು ಕಾತರದಿಂದ ತಂತ್ರ ಹೂಡುವ ಕಾಂಗ್ರೆಸ್ ಆಗಾಗ್ಗೆ ಮುಗ್ಗರಿಸಿ ಜನರೆದುರು ಬೆತ್ತಲಾಗುವುದು ತೀರಾ ಸಾಮಾನ್ಯ ಎಂಬಂತಾಗಿದೆ.

ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಮತ್ತೆ ಗುಡುಗಿದ್ದು, ಬೇರೆಯವರನ್ನು ಬೆದರಿಸುವುದು, ನಿಂದಿಸುವುದು ಕಾಂಗ್ರೆಸ್ ಪಕ್ಷದ ಹಳೆಯ ಸಂಸ್ಕೃತಿ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ರಾಜಕೀಯ ವೃತ್ತಿಪರತೆಯನ್ನು ಬಳಸಿಕೊಂಡು ನ್ಯಾಯಾಂಗ ವ್ಯವಸ್ಥೆಯ ಸಮಗ್ರತೆಗೆ ಧಕ್ಕೆ ತರುವ ಕೆಲಸಗಳನ್ನು ಆಗಾಗ್ಗೆ ಮಾಡುತ್ತಿರುತ್ತದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿ ದೇಶದೆಲ್ಲೆಡೆಯಿಂದ ನೂರಾರು ವಕೀಲರು, ವಕೀಲರ ಸಂಘಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದು, ಈ ಬಗ್ಗೆ ಮಾತನಾಡಿದ ಪ್ರಧಾನಿಗಳು ಇಂತಹ ನೀಚತನ ಪ್ರದರ್ಶನ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆಯೇ ಕಾಂಗ್ರೆಸ್ ಪಕ್ಷ ಬದ್ಧ ನ್ಯಾಯಾಂಗಕ್ಕೆ ಕರೆ ನೀಡಿತ್ತು‌. ಆದರೆ ನಾಚಿಕೆ ಇಲ್ಲದ ಕಾಂಗ್ರೆಸ್ ಇಂದು ಬೇರೆಯವರಿಂದ ಬದ್ಧತೆ ಬಯಸುತ್ತಿದ್ದಾರೆ. ಕಾಂಗ್ರೆಸಿಗರಿಗೆ ರಾಷ್ಟ್ರದ ಕುರಿತಾಗಿ ಯಾವುದೇ ರೀತಿಯ ಬದ್ಧತೆ ಇಲ್ಲ ಎಂಬುದಾಗಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು 140 ಕೋಟಿ ಭಾರತೀಯರು ತಿರಸ್ಕರಿಸುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಅಚ್ಚರಿ ಇಲ್ಲ ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ ಅವರಿಗೆ, ಹರೀಶ್ ಸಾಳ್ವೆ ಮತ್ತು ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರನ್ನು ಒಳಗೊಂಡಂತೆ ಸುಮಾರು 600 ಕ್ಕೂ ಅಧಿಕ ಭಾರತದ ವಕೀಲರುಗಳು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ‘ಪಟ್ಟಬದ್ಧ ಹಿತಾಸಕ್ತಿ ಗುಂಪು’, ರಾಜಕಾರಣಿಗಳನ್ನು ಒಳಗೊಂಡ ಭ್ರಷ್ಟಾಚಾರ ಪ್ರಕರಣಗಳಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ತಮ್ಮ ಒತ್ತಡ ಹೇರುವ ಕೆಲಸವನ್ನು ಮಾಡಲಾಗುತ್ತಿದೆ. ಆ ಮೂಲಕ ವಿಶೇಷವಾಗಿ ನ್ಯಾಯಾಲಯಗಳ ಮಾನಹಾನಿ ಮಾಡುವ ಕೆಲಸವನ್ನು ಈ ಹಿತಾಸಕ್ತಿಗಳು ಮಾಡುತ್ತಿವೆ ಎಂಬ ಕಳವಳದಿಂದ ಈ ಪತ್ರ ಬರೆದಿರುವುದಾಗಿದೆ.

ಈ ಘಟನೆಯ ಬಳಿಕ ಪ್ರಧಾನಿ ಮೋದಿ ಅವರು ತಮ್ಮ ಹೇಳಿಕೆಯನ್ನು ನೀಡಿದ್ದು, ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವುದಾಗಿದೆ.

Tags

Related Articles

Close