ಪ್ರಚಲಿತ

ಮಹಮ್ಮದ್ ಹ್ಯಾರಿಸ್ ನ ವಿರುದ್ಧ ತಿರುಗಿ ಬಿದ್ದ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್!! ಮಹಮ್ಮದ್ ನ ಬಗೆಗೆ ಹೇಳಿದ್ದೇನು ಗೊತ್ತಾ ರಾಜ್?!

ಮೊನ್ನೆಯಷ್ಟೇ ಎರಡು ತಲೆ ಹಾವಿನ ಬಗ್ಗೆ ಹೇಳಿದ್ದೆ ಅಲ್ಲವೇ ನಿಮಗೆ?! ನೆನಪಿದೆಯಾ?! ಭಯೋತ್ಪಾದಕ ಸಂಘಟನೆಯೊಂದಕ್ಕೆ, ಜೀವ ಇರುವವರೆಗೂ ಸಹ ಸಹಾಯ ಮಾಡುತ್ತೇನೆ, ತನ್ಮೂಲಕ ಇಸ್ಲಾಮೀಕರಣಕ್ಕೆ ಪರೋಕ್ಷವಾಗಿ ಬೆಂಬಲಿಸುತ್ತೇನೆ ಎಂದು ಹರಕೆ ಹೊತ್ತಿದ್ದ ಎರಡು ತಲೆ ಹಾವು ಅಲಿಯಾಸ್ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್ ಈಗ ಉಸಿರು ನೆತ್ತಿಗೆ ಸಿಕ್ಕಿ ಹಾಕಿಕೊಂಡ ಪರಿಣಾಮ, ಮಾಧ್ಯಮದೆದುರು ಕೆಮ್ಮುತ್ತಾ ಕುಳಿತಿದೆ!!

ಆಶ್ಚರ್ಯವಾಯಿತಾ?! ಹೌದು ಸ್ವಾಮಿ! ಇದ್ದಕ್ಕಿದ್ದಂತೆ, ನಮ್ಮ ಎರಡು ತಲೆ ಹಾವು ಪಶ್ಚಾತ್ತಾಪಿಸಿ ಗೊಳೋ ಎಂದು ಅಳಲು ಪ್ರಾರಂಭಿಸಿದೆ! ನಾನು ಅವತ್ತೇ ಹೇಳಿದ್ದೆ! ಈ ಪ್ರಕಾಶ್ ರೈ ಯವರಿಗೂ, ನಮ್ಮ ರಾಜ್ಯ ರಾಜಕೀಯ ಬೆಳವಣಿಗೆಗೂ ಬಹಳಷ್ಟು ಸಂಬಂಧವಿದೆ ಎಂದು ಹೇಳಿದ್ದೆ! ಅದೀಗ ಸತ್ಯವೇ ಆಗುತ್ತಿದೆ! ಯಾಕೆಂದರೆ, ಈ ಹಿಂದೆ ಗೌರೀ ಲಂಕೇಶ್ ಸತ್ತಾಗ, ಇದೇ ಪ್ರಕಾಶ್ ರಾಜ್ ಎಲ್ಲಿದ್ದನೇನೋ ನೋಡಿ! ಇದ್ದಕ್ಕಿದ್ದಂತೆ ಎದ್ದು ಬಂದು ಕರ್ನಾಟಕದಲ್ಲೇನಾಗುತ್ತಿದೆ ಎಂದರು! ಅಷ್ಟೇ ನೋಡಿ, ಎಡಪಂಥೀಯರಿಗೆ ಸಿಕಾಪಟೆ ಶಕ್ತಿ ಬಂದು, ನಾನು ಪ್ರಕಾಶ ನಾನು ಗೌರಿ ನಾನು ನಾನಲ್ಲ ಎಂದೆಲ್ಲ ಬೊಬ್ಬಿರಿದಾಗಲೇ ಅರ್ಥವಾಗಿ ಹೋಗಿತ್ತು! ಈ ಪ್ರಕಾಶ್ ರಾಜ್ ಇದ್ದಕ್ಕಿದ್ದಂತೆ ಎದ್ದಿದ್ದು, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರದ ಕೃಪೆಯಿಂದ ಎಂದು! ಕೊನೆ ಕೊನೆಗೆ , ತೀರಾ ಎನ್ನುವಷ್ಟು ಪ್ರಚಾರ ಗಿಟ್ಟಿಸಿಕೊಂಡ ಈ ರಾಜ ಅಲಿಯಾಸ್ ಹಾವು ರಾಜ ಕೇರಳದಲ್ಲೆಲ್ಲ ತನ್ನ ಹಿಂದೂ ವಿರೋಧಿ ಚಳುವಳು ಪ್ರಾರಂಭಿಸಿ, ಕೊನೆ ಕೊನೆಗೆ ತೀರಾ ಸಕ್ರಿಯವೆನ್ನುವಷ್ಟು, ರಾಜಕೀಯದಲ್ಲಿ ಪುಂಗಿ ಊದತೊಡಗಿದ ಮೇಲೆ, ಕನ್ನಡಿಗರು ಸಮಯ ಕಾಯುತ್ತಲೇ ಇದ್ದರು!
ಅದರಲ್ಲಿಯೂ, ಸಹ ಮೋದಿಯನ್ನು ತೀರಾ ಎಂಬುವಷ್ಟು ದ್ವೇಷಿಸಿ, ದೇಶಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದ ಈ ಎರಡು ತಲೆ ಹಾವಿನ ವಿಚಾರವೇ ವಿಚಿತ್ರ ಬಿಡಿ!!

ಈ ಪ್ರಕಾಶ್ ರಾಜ್ ಎಂಬ ಹಾವಿನ ದ್ವೇಷ ಸಂಬಂಧಪಟ್ಟಿರುವುದು ಪ್ರಸ್ತುತ ಕರ್ನಾಟಕ ಕಾಂಗ್ರೆಸ್ ಸರಕಾರದ ರಾಜಕೀಯ ಬೆಳವಣಿಗೆಯ ಜೊತೆ! ಅದರ,
Contemporary political scenario ಎನ್ನುತ್ತಾರಲ್ಲ?! ಅಂತಹ ವಿಚಾರಗಳ ಜೊತೆ! ಮೊನ್ನೆಯಷ್ಟೇ, ಇಡೀ ಸಾರ್ವಜನಿಕ ವಲಯದಲ್ಲಿ , ಕಾಂಗ್ರೆಸ್ ಪಕ್ಷದ ಮರ್ಯಾದೆ ಬೀದಿ ಪಾಲಾಯಿತು! ಕಾಂಗ್ರೆಸ್ ನ ಎಮ್ ಎಲ್ ಎ ಮತ್ತು ಬೆಂಗಳೂರು ಜಿಲ್ಲಾ ಯುವ ಜನರಲ್ ಕಾರ್ಯದರ್ಶಿ ಯಾದ ಎನ್ ಎ ನಲಪಾಡ್ ನ ಮಗನಾದ ಮುಹಮ್ಮದ್ ಹ್ಯಾರಿಸ್ ನಲಪಾಡ್ ಕ್ಷುಲ್ಲಕ ಕಾರಣಕ್ಕೆ ಶ್ರೀ ಸಾಮಾನ್ಯನ ಮೇಲೆ ಕೈ ಎತ್ತಿ ಹಲ್ಲೆ ಮಾಡಿ ತನ್ನ ಮೃಗತ್ವವನ್ನು ಸಾಬೀತು ಪಡಿಸಿದ ರೀತಿಯಿದೆಯಲ್ಲವಾ?! ಅದು, ಇವತ್ತಿನ ರಾಜ್ಯ ಸರಕಾರದ ನ್ಯಾಯಾಂಗ ವ್ಯವಸ್ಥೆಗೆ ಹಿಡಿದ ಕನ್ನಡಿ!

ದುರಂತವೆಂದರೆ ಅದೇ!! ಕೇವಲ ಕ್ಷುಲ್ಲಕ ಕಾರಣಕ್ಕೆ ವಿದ್ಯುತ್ ಎಂಬುವವರಿಗೆ ಈ ಮುಹಮ್ಮದ್ ಎಂಬ ರಾಜಕುಮಾರನ ಆಜ್ಞೆಯಂತೆ ಜೊತೆಯಲ್ಲಿದ್ದವರು ಬಡಿದು, ಕಾಲು ಮುರಿದು ಸಾಕಾಗಲಿಲ್ಲ ಎಂಬಂತೆ, ಲಿಕ್ಕರ್ ಬಾಟಲಿಯನ್ನು ಆ ಯುವಕನ ತಲೆಯ ಮೇಲೆ ಬಡಿದರೂ ಪಾಪ! ರಾಜಕುಮಾರನಿಗೆ ತೃಪ್ತಿಯಾಗಲಿಲ್ಲವೇನೋ! ಆಸ್ಪತ್ರೆಗೆ ಸೇರಿದ ಮೇಲೂ ಹಲ್ಲೆಗಿಳಿದ ಹ್ಯಾರಿಸ್ ಮತ್ತು ಆತನ ತಂಡದವರು ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ, ಒಬ್ಬ ಎಮ್ ಎಲ್ ಎ ಮಗನಿಗೆ ಯಾವ ರೀತಿ ಪವರ್ರುಗಿರಿ ಬರುತ್ತದೆಂಬುದನ್ನು ತೋರಿಸಿಕೊಟ್ಟರಷ್ಟೇ! ಅದರಲ್ಲಿಯೂ, ಕಾಂಗ್ರೆಸ್ ಪಕ್ಷವೆಂದರೆ ಕೇಳಬೇಕೇ ಸ್ವಾಮಿ?!

ಇದಕ್ಕೂ ನಮ್ಮ ಎರಡು ತಲೆ ಹಾವಾದ ಪ್ರಕಾಶ್ ರಾಜ್ ಗೂ ಏನು ಸಂಬಂಧ ಎಂದು ಕೇಳುತ್ತೀರಾದರೆ ಬಹಳಷ್ಟಿದೆ!! ಛೇ! ಗೊತ್ತಿಲ್ಲವೆಂದರೆ, ನಿಮಗಿದು ಗೊತ್ತಾಗಲೇ ಬೇಕು! ದುರಾದೃಷ್ಟವೋ ಅದೃಷ್ಟವೋ, ಮಹಮ್ಮದ್ ಹ್ಯಾರಿಸ್ ಮತ್ತು ಪ್ರಕಾಶ್ ರಾಜ್ ಇಬ್ಬರೂ ಸಹ ಸಿಕಾಪಟೆ ದೋಸ್ತರಪ್ಪ!! ಸಾಮಾಜಿಕ ಜಾಲತಾಣದಲ್ಲಿ, ಹೋಗಲಿ! ಗೂಗಲ್ಲೂ ಇವರಿಬ್ಬರ ಅಮರ ಸ್ನೇಹದ ಬಗ್ಗೆ ಪುರಾವೆ ಒದಗಿಸುತ್ತದೆ! ಮಜಾ ಏನು ಗೊತ್ತಾ?! ಇದೇ ಪ್ರಕಾಶ್ ರಾಜ್, ಕಾರ್ಯಕ್ರಮವೊಂದರಲ್ಲಿ ಹ್ಯಾರಿಸ್ ಎಂತಹ ಸುಗುಣ ಸಂಪನ್ನ! ಎಂತಹ ಒಳ್ಳೆಯ ಹುಡುಗ! ಎಷ್ಟು ಉದಾರಿ! ಎಂದೆಲ್ಲ ಉದ್ಗಾರ ವಾಚಕದಿಂದ ಹೊಗಳಿ
ಹೊಗಳಿ ಅಟ್ಟಕ್ಕೇರಿಸಿದ್ದಕ್ಕೆ ಪ್ರತಿಯಾಗಿ, ನೆರೆದಿದ್ದವರಿಂದ ಸಿಳ್ಳೆ, ಕರತಾಡನ! ಆದರೆ, ಅಲ್ಲಿದ್ದವರಿಗ್ಯಾರಿಗೂ, ಅದರಲ್ಲೂ, ಪ್ರಕಾಶ್ ರಾಜ್ ಗೂ ಸಹ ಹೊಗಳಿದಾಗ ಕೈ ಮುಗಿದುಕೊಂಡು ನಿಂತ ಹ್ಯಾರಿಸ್ ಅದೇ ಕೈಗಳಿಂದ ಒಬ್ಬ ಶ್ರೀ ಸಾಮಾನ್ಯನ ತಲೆಗೆ ಲಿಕ್ಕರ್ ಬಾಟಲಿನಿಂದ ಹಲ್ಲೆ ಮಾಡುವಷ್ಟು ಉದಾರಿಯಾಗಿದ್ದ!! ವ್ಹಾ! ಗೂಂಡಾ ಮನಃಸ್ಥಿತಿಯವನನ್ನು ಉದಾರಿಯಾಗಿ ಕಂಡ ಪ್ರಕಾಶ್ ರಾಜ್ ಗೆ ಇವತ್ತು ನಾವೂ ಚಪ್ಪಾಳೆ ಹೊಡೆಯಬೇಕಿದೆ!

ಅಯ್ಯೋ! ಮಹಮ್ಮದ್ ಹ್ಯಾರಿಸ್ ಎಂಬಂತಹವನನ್ನು ಹೊಗಳಿ ಅಟ್ಟಕ್ಕೇರಿಸಿದ್ದ ಪ್ರಕಾಶ್ ರಾಜ್ ಗೆ ಈಗ ಮೈ ಪರಚಿಕೊಳ್ಳುವಂತಾಗಿದೆ! ಯಾಕಂತೀರಿ?! ಜಪ್ಪಯ್ಯ ಅಂದರೂ ಕೂಡ ಬಿಡದೇ, ಮಹಮ್ಮದ್ ಗೆ ಶಿಕ್ಷೆಯಾಗಲೇ ಬೇಕು ಎಂದು ಕೂತಿರುವ ವಿದ್ವತ್ ರ ತಂದೆ ಲೋಕನಾಥ್ ಗೆ ಸರಿಯಾಗಿ, ಇತ್ತ ಮಹಮ್ಮದ್ ಹ್ಯಾರಿಸ್ ನನ್ನು ಹೊಗಳಿ ಅಟ್ಟಕ್ಕೇರಿಸಿದ್ದ ಪ್ರಕಾಶ್ ರಾಜ್ ಮೇಲೂ ಕೂಡ ನಮ್ಮವರು ಎಗರಿ ಬಿದ್ದಿದ್ದಕ್ಕೆ ಪಾಪ! ಎರಡು ತಲೆ ಹಾವಿಗೆ ಉಸಿರು ಗಟ್ಟಿದೆ! ತಲೆಗೂ ಏರಿ, ಈಗ ಪಶ್ಚಾತ್ತಾಪಿಸುತ್ತ ಕ್ಷಮೆ ಕೇಳಿದೆ! ಛೇ! ಛೇ! ಏನು ವಿಷಾದ! ಏನು ಪಶ್ಚಾತ್ತಾಪ!

” ಒಂದು ಗ್ರಾಮ ತೆಗೆದುಕೊಳ್ಳಲು ಹಣ ಕೊಟ್ಟಿದ್ದರು! ಆ ಕ್ಷಣದಲ್ಲಿ, ಯುವಕರು ಈ ರೀತಿ ಸಹೃದಯಿಯಾಗಿರಬೇಕು! ಮಹಮ್ಮದ್ ನನ್ನು ಮಾದರಿಯಾಗಿಸಿ
ಇರಬೇಕು ಎಂದಿದ್ದೆ! ಆದರೆ, ಆತನ ಮನಸ್ಸಿನಲ್ಲಿ ಇಂತಹಾ ರಾಕ್ಷಸ ಇದ್ದಾನೆಂದು ತಿಳಿದಿರಲಿಲ್ಲ! ಆತನನ್ನು ಹೊಗಳಿ ತಪ್ಪು ಮಾಡಿದೆ! ಇವತ್ತು, ಕ್ಷಮೆಯಾಚಿಸುತ್ತಿದ್ದೇನೆ!” ಎಂದು ಮೈಸೂರಿನಲ್ಲಿ ಗೊಳೋ ಎನ್ನುತ್ತಿರುವ ಪ್ರಕಾಶ್ ರಾಜ್ ಈಗ ಅಕ್ಷರಶಃ ತಿರುಗಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ!!

ಆದರೆ, ತಿರುಗಿ ಬೀಳುವುದೇನು ಸ್ವಾಮಿ?! ಇವತ್ತು ನಾನು ತಪ್ಪು ಮಾಡಿದೆ ಎಂದು, ಮುಂದೊಂದು ದಿನ ಮತ್ತೆ ಜಿಹಾದಿಗಳ ಪಾದ ನೆಕ್ಕುವ ಈ ಎರಡು ತಲೆ ಹಾವಿಗೆ ನೈತಿಕತೆ ಇದೆಯಾ?! ಅದರಲ್ಲಿಯೂ, ಸಹ ಒಬ್ಬ ವ್ಯಕ್ತಿಯನ್ನು ಕೇವಲ ಆ ಕ್ಷಣಕ್ಕೆ ಸಹಾಯ ಮಾಡಿದನೆಂಬ ಕಾರಣಕ್ಕೆ , ಹೊಗಳಿ ನೆತ್ತಿಯ ಮೇಲಿರಿಸಿಕೊಂಡು ಈಗ ಇದ್ದಕ್ಕಿದ್ದ ಹಾಗೆ ತಿರುಗು ಬೀಳುವುದು ಪಾಪವಲ್ಲವೇ!! ಅದೂ ಮುಸಲ್ಮಾನನ ವಿರುದ್ಧ?! ಎಡಪಂಥೀಯಬ ಸಮಾಜ ಇದನ್ನು ಒಪ್ಪುವುದೇ?! ಛೇ!

ಹೌದು! ಅಷ್ಟಕ್ಕೂ, ಈ ಗ್ರಾಮ ತೆಗೆದುಕೊಳ್ಳಲು ಹಣ ಕೊಟ್ಟಿದ್ದರ ಬಗ್ಗ: ಹೇಳಿರುವ ಪ್ರಕಾಶ್ ರಾಜ್ , ಯಾವ ಗ್ರಾಮವನ್ನು ಯಾಕಾಗಿ ತೆಗೆದುಕೊಳ್ಳಲು ಹೊರಟಿದ್ದರು ಮತ್ತು, ಗ್ರಾಮವನ್ನೇ ಖರೀದಿ ಮಾಡುವಷ್ಟು ಏನಿತ್ತು ಅವಶ್ಯಕತೆ ಎಂಬುದನ್ನು ಬಹಿರಂಗಪಡಿಸುವಷ್ಟು ತಾಕತ್ತಿದೆಯಾ?! ಈ ಎರಡು ತಲೆ ಹಾವಿನ ವ್ಯವಹಾರವೇ ಅರ್ಥವಾಗದಷ್ಟು ನಿಗೂಢವಾಗಿರುವಾಗ, ಇನ್ನು ಮಾಧ್ಯಮದ ಮುಂದೆ ನಡೆಸುವ ಡ್ರಾಮಾವೊಂದು ಯಶಸ್ವೀಯಾಗಿ ಬಿಡುತ್ತದೆಯೇ!!

ಇದನ್ನು ಪ್ರಕಾಶ್ ರಾಜ್ ಅರ್ಥಮಾಡಿಕೊಳ್ಳಬೇಕಿದೆ!!

– ಪೃಥು ಅಗ್ನಿಹೋತ್ರಿ

Tags

Related Articles

Close