ಪ್ರಚಲಿತ

ಮೋದಿ ನೆನೆಪಿಗಾಗಿ ಮೊಮ್ಮಗನ ಹೆಸರನ್ನೇ ಬದಲಿಸಿದ ಮುಸ್ಲಿಂ ರಾಷ್ಟ್ರದ ದೊರೆ!! ವಿಶ್ವನಾಯಕನಾಗುತ್ತಿದ್ದಾರೆ ನಮೋ….

ಪ್ರಧಾನಿ ನರೇಂದ್ರ ಮೋದಿ ಅಂದರೇನೇ ಹಾಗೇ… ಇಡೀ ಭಾರತವನ್ನಲ್ಲದೆ ಇಡೀ ಜಗತ್ತನ್ನೆ ಬದಲಾಯಿಸಿದ್ದಾರೆ!! ಪ್ರಧಾನಿ ನರೇಂದ್ರ ಮೋದಿಯೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅವರೋರ್ವ ವಿಶ್ವನಾಯಕ, ವಿಶ್ವವನ್ನೇ ಭಾರತದತ್ತ ಮುಖ ಮಾಡಿ ನೋಡುವಂತೆ ಮಾಡಿದ ಅಭಿನವ ಸ್ವಾಮಿ ವಿವೇಕಾನಂದ ನಮ್ಮ ಪ್ರಧಾನಿ ನರೇಂದ್ರ ಮೋದಿ. ಭಾರತದ ಪ್ರತೀ ಮನೆಯಲ್ಲೂ ಮೋದೀಜೀಯ ಜಪ ಮಾಡುತ್ತಾರೆ!! ಯಾಕೆಂದರೆ ಮೋದಿ ಯೋಜನೆಗಳು ಮನೆ ಮನೆ ಮುಟ್ಟುತ್ತಿದೆ, ಪ್ರತಿ ಮನೆಯ ಬಾಗಿಲನ್ನೂ ತಟ್ಟುತ್ತಿದೆ!! ಅದಲ್ಲದೆ ಕೇವಲ ಭಾರತೀಯರಲ್ಲದೆ ಇಡೀ ವಿಶ್ವವೇ ಭಾರತದತ್ತ ಮುಖ ಮಾಡಲು ಕಾರಣ ಈ ಮೋದೀಜೀ!! ಮೋದೀಜೀ ಎಂದರೆ ಭಾರತೀಯರ ಮನಸ್ಸಿನಲ್ಲಿ ಅಲ್ಲದೆ ವಿಶ್ವದ ನಾಯಕರ ಮನ ಗೆದ್ದಿದ್ದಾರೆ!!

Image result for modi

ಇಂಡೋನೇಷ್ಯಾದ ಅಧ್ಯಕ್ಷನ ಮೊಮ್ಮಗನಿಗೆ ಮೋದೀಜಿಯ ಹೆಸರು ನಾಮಕರಣ!!

ಇಂಡೋನೇಷ್ಯಾ ಮತ್ತು ಭಾರತದ ಬಾಂಧವ್ಯ ಬೆಳೆಯುವುದ್ದಕ್ಕೋಸ್ಕರ ಇಂಡೋನೇಷ್ಯಾದ ಪ್ರವಾಸದಲ್ಲಿರುವ ಮೋದೀಜಿಗೆ ಮತ್ತೊಂದು ಆಶ್ಚರ್ಯಕರ ವಿಷಯ ತಿಳಿದು ಬಂದಿದೆ!! ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ಜೊಕೊವಿ ವಿಡೊಡೊ ಅವರ ಮೊಮ್ಮಗನಿಗೆ ಪ್ರಧಾನಿ ನರೇಂದ್ರ ಮೋದಿಯವರ ಗೌರವಾರ್ಥ ಜಾನ್ ಶ್ರೀನರೇಂದ್ರ ಎಂದು ಹೆಸರಿಡಲಾಗಿದೆ ಎಂಬ ಕುತೂಹಲಕಾರಿ ಮಾಹಿತಿ ಬಹಿರಂಗಗೊಂಡಿದೆ!! ಈ ವಿಷಯವನ್ನು ಸ್ವತಃ ಜೊಕೊವಿಯವರೇ ಇಂಡೋನೇಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹೇಳಿಕೊಂಡಿದ್ದಾರೆ!! 2016 ರ ಮಾರ್ಜ್‍ನಲ್ಲಿ ಜೊಕೊವಿಯವರ ಮಗ ಗಿರ್ಬನ್ ರಕಬುಮಿಂಗ್ ಅವರಿಗೆ ಜನಿಸಿದ ಗಂಡು ಮಗುವಿಗೆ ಶ್ರೀ ನರೇಂದ್ರ ಎಂದು ನಾಮಕರಣ ಮಾಡಲಾಗಿದೆ!! ಪ್ರಧಾನಿ ನರೇಂದ್ರ ಮೋದಿಜಿ ಎಂದರೆ ಇಡೀ ವಿಶ್ವವೇ ಇವರ ಮಾತಿಗೆ ತಲೆದೂಗುತ್ತದೆ!! ಅವರು ಮಾಡುವ ಒಂದೊಂದು ಕೆಲಸಕ್ಕೂ ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಡುತ್ತದೆ!! ಶತ್ರು ರಾಷ್ಟ್ರಗಳೇ ಮಿತ್ರರಾಗುತ್ತಿದ್ದಾರೆ!! ಅವರ ಹೆಸರನ್ನೇ ಇಂಡೋನೇಷಿಯಾದ ಅಧ್ಯಕ್ಷರ ಮೊಮ್ಮನಿಗೆ ಇಡಬೇಕಾದರೆ ಮೋದೀಜೀಯ ಹೆಸರು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ ನಿಜವಾಗಿಯೂ ಇಂತಹ ಪ್ರಧಾನಿಯನ್ನು ಪಡೆದಿರುವ ನಾವು ಗ್ರೇಟ್! ಇಲ್ಲಿಯವರೆ ಭಾರತದ ಯಾವ ಪ್ರಧಾನಿಯ ಹೆಸರನ್ನೂ ಯಾರೂ ಇಟ್ಟಿಲ್ಲ!! ಆದರೆ ಪ್ರಧಾನಿ ನರೇಂದ್ರ ಮೋದೀಜಿಯ ಹೆಸರನ್ನು ಮಾತ್ರ ಇಟ್ಟಿರುವಂತಹದ್ದು!! ಇದೇ ಮೋದೀಜೀಯ ಪವರ್!!

ಅದಲ್ಲದೆ ಇಂಡೋನೇಷ್ಯಾದ ವಿಶ್ವದ ಅತೀ ದೊಡ್ಡ ಮುಸ್ಲಿಮ್ ಜನಸಂಖ್ಯೆ ಹೊಂದಿದ ದೇಶವಾಗಿದೆ. ಸುಮಾರು 800 ವರ್ಷಗಳ ಹಿಂದೆ ಮುಸ್ಮಿಮ್ ರಾಜರುಗಳು ಇಂಡೋನೇಷಿಯಾದ ರಾಜ ಮಜಪಾಹಿತ್ ಅವರನ್ನು ಸೋಲಿಸಿ ಇಂಡೊನೇಷಿಯಾವನ್ನು ಇಸ್ಲಾಮ್ ಧರ್ಮಕ್ಕೆ ಪರಿವರ್ತಿಸಿದ್ದರು!!.. ಇಸ್ಲಾಮ್ ಧರ್ಮವಾಗಿ ಪರವರ್ತನೆಗೊಂಡಿತಾದರೂ ಹಿಂದೂಗಳ ಸಂಸ್ಕøತಿ, ಆಚಾರ-ವಿಚಾರ ಮಾತ್ರ ಬದಲಾಗಿಲ್ಲ!! ನಾವು ಹಿಂದೂಗಳಾಗಿ ಭಾರತೀಯ ಸಂಸ್ಕøತಿ ಆಚಾರ ವಿಚಾರವನ್ನು ಮರೆತಿದ್ದೇವೆ ಆದರೆ ಇಂಡೋನೇಷಿಯಾ ಇನ್ನೂ ಹಿಂದೂ ಧರ್ಮದ ಹಾದಿಯಲ್ಲೇ ನಡೆಯುತ್ತಿದೆ!! 23 ಕೋಟಿ ಮುಸ್ಲಿಂ ಜನಸಂಖ್ಯೆ ಹೊಂದಿರುವ ಇಂಡೋನೇಷ್ಯಾ ಜಗತ್ತಿನ ದೊಡ್ಡ ಮುಸ್ಲಿಂ ರಾಷ್ಟ್ರವಾಗಿದೆ!!

ಇಂಡೋನೇಷ್ಯಾ ಮೊದಲು ಹಿಂದೂ ರಾಷ್ಟ್ರವಾಗಿತ್ತು!! 12ನೇ ಶತಮಾನದ ನಂತರ ಮುಸ್ಲಿಂ ರಾಷ್ಟ್ರವಾಯಿತು!! ಆದರೂ ಕೂಡಾ ಇಂಡೋನೇಷ್ಯಾದ ಜನ ಹಿಂದೂ ಸಂಸ್ಕøತಿಯನ್ನು ಇಂದಿಗೂ ಪಾಲನೆ ಮಾಡುತ್ತಾರೆ!! ಹಿಂದೂ ದೇವರುಗಳ ಆರಾಧನೆಯನ್ನು ಸಾಮಾನ್ಯವಾಗಿ ಕಾಣಬಹುದು!! ಅದಲ್ಲದೆ ಇಂಡೋನೇಷ್ಯಾದ ಮೊದಲ ಪ್ರಧಾನಮಂತ್ರಿ ಸುಕರ್ಣೋ ಆಗಿದ್ದು ಮಹಾಭಾರತದ ಕರ್ಣನ ಹೆಸರಾಗಿದೆ ಕೂಡಾ ಆಗಿದೆ!! ಇಂಡೋನೇಷ್ಯಾದ ನೋಟಿನ ಮೇಲೆ ಗಣಪತಿಯ ಚಿತ್ರವಿದ್ದು ಇಲ್ಲಿ ಗಣಪತಿಯನ್ನು ವಿದ್ಯೆ ನೀಡುವ ದೇವರು ಎಂದು ಪೂಜಿಸುತ್ತಾರೆ!! ಇಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಣೆ ಮಾಡಿದ ಹಜರ ದೇವಂತರ ಹುಟ್ಟಿದ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸುತ್ತಾರೆ!! ಹಜರ ದೇವಂತರ ಚಿತ್ರದ ಜೊತೆಗೆ ಗಣಪತಿಯ ಚಿತ್ರವನ್ನು ಕೂಡಾ ನೋಟಿನ ಮೇಲೆ ಕಾಣಬಹುದಾಗಿದ್ದು ಹಿಂದೂ ಸಂಸ್ಕøತಿಯತ್ತ ಇಂಡೋನೇಷಿಯಾ ಕೂಡಾ ಮುಖ ಮಾಡುತ್ತಿದೆ!!

ಇದೀಗ ಮೊದೀಜಿಯನ್ನು ಮುಸ್ಲಿಂ ರಾಷ್ಟ್ರವಾದ ಇಂಡೋನೇಷ್ಯಾದ ಅಧ್ಯಕ್ಷನ ಮೊಮ್ಮಗನ ಹೆಸರನ್ನೇ ಬದಲಿಸಿದ್ದಾರೆ ಎಂದರೆ ನಿಜವಾಗಿಯೂ ಇಂತಹ ಪ್ರಧಾನಿಯನ್ನು ಪಡೆದ ನಾವೇ ಧನ್ಯ!!! ಜೈ ಮೋದೀಜೀ!!

  • ಪವಿತ್ರ
Tags

Related Articles

Close