ಪ್ರಚಲಿತ

ಪುತ್ತೂರಿನಲ್ಲಿ ಚುನಾವಣಾ ಕಾವು :ಕಮಲ ಅರಳಿಸಲು ರಣರಂಗಕ್ಕಿಳಿದ ಸಂಘಪರಿವಾರ!

ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತ, ರಾಜ್ಯದಲ್ಲಿಯೂ ಬಿಜೆಪಿ ಆಡಳಿತ. ಈ ಎರಡೂ ಸರ್ಕಾರಗಳ ಅಭಿವೃದ್ಧಿಯ ಆಶಯದಲ್ಲಿ ಕರ್ನಾಟಕದಲ್ಲಿಯೂ ಅದೆಷ್ಟೋ ಜನಸ್ನೇಹಿ ಅಭಿವೃದ್ಧಿಯ ನಾಗಾಲೋಟವೇ ಆಗಿರುವುದು ನಮ್ಮೆಲ್ಲರಿಗೂ ತಿಳಿದ ವಿಷಯ.

ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯ ಸಂಪೂರ್ಣ ಅವಗಣನೆಗೆ ಒಳಗಾಗಿತ್ತು. ಆದರೆ ಆ ಬಳಿಕ ಬಂದ ಬಿಜೆಪಿ ಸರ್ಕಾರ ಜನಾಭಿವೃದ್ಧಿಯ ಜೊತೆಗೆ, ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕನಸಿನ ಜೊತೆಗೆ ಆಡಳಿತ ನಡೆಸಿತ್ತು. ಇದೀಗ ಮತ್ತೆ ವಿಧಾನಸಭಾ ಚುನಾವಣೆ ಬಂದಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿಯ ಕಮಲ ಅರಳುವಂತಾಗಬೇಕಾದರೆ ಬಿಜೆಪಿ ಜಯಗಳಿಸಬೇಕು. ಆ ಕೆಲಸವನ್ನು ಮಾಡಬೇಕಾದವರು ನಾವೇ‌.

ಇಡೀ ರಾಜ್ಯಕ್ಕೆ ಸಂಬಂಧಿಸಿದ ಹಾಗೆ ಈ ಬಾರಿಯ ಟೈಟ್ ಫೈಟ್ ಚುನಾವಣಾ ಕ್ಷೇತ್ರ ಎಂದೇ ಬಿಂಬಿತವಾಗಿರುವುದು ಪುತ್ತೂರು ವಿಧಾನಸಭಾ ಕ್ಷೇತ್ರ. ಇಲ್ಲಿ ಕಾಂಗ್ರೆಸ್ ಪಕ್ಷ ಸಂಘದ ಹಿನ್ನೆಲೆಯುಳ್ಳ, ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಮಾಡಿದ ಅಶೋಕ್ ರೈ ಗೆ ಟಿಕೇಟು ನೀಡಿದೆ. ಇನ್ನು ಪಕ್ಷಾಂತರ ಅಭ್ಯರ್ಥಿ‌ಯಾಗಿ ಅರುಣ್ ಕುಮಾರ್ ಪುತ್ತಿಲ ಕಣದಲ್ಲಿದ್ದಾರೆ. ಬಿಜೆಪಿ ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯೋರ್ವರಿಗೆ ಅವಕಾಶ ನೀಡಿದ್ದು, ಆಶಾ ತಿಮ್ಮಪ್ಪ ಅವರನ್ನು ಕಣಕ್ಕಿಳಿಸಿದೆ.

ಆಶಾ ತಿಮ್ಮಪ್ಪ ಅವರು ರಾಜಕೀಯಕ್ಕೆ ಹೊಸ ಮುಖವೂ ಅಲ್ಲ. ಇವರ ಮೂಲ ರಾಜಕೀಯ ಹೇರು ಸಹ ಬಿಜೆಪಿಯದ್ದೇ. ಇವರು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದವರೂ ಹೌದು. ಈ ಸಂದರ್ಭದಲ್ಲಿ ಅವರು ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸಲು ಗ್ರಾಮ ಸ್ನೇಹಿ ಕಾರ್ಯಕ್ರಮವನ್ನು ಜಾರಿಗೆ ತಂದವರು. ಸುಳ್ಯ ಮಹಿಳಾ ಮೋರ್ಛಾ ಅಧ್ಯಕ್ಷೆಯಾಗಿ, ಮಹಿಳಾ ಮೋರ್ಛಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಮಹಿಳಾ ಮೋರ್ಛಾ ಜಿಲ್ಲಾ ಅಧ್ಯಕ್ಷೆಯಾಗಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.‌ ಬಿಜೆಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗೂ ಇವರು ಕಾರ್ಯನಿರ್ವಹಿಸಿದ್ದಾರೆ. ವಿಶೇಷ ಎಂದರೇ ಇವರು ಕುಂತೂರು ಗ್ರಾಮದಿಂದ ಬಿಜೆಪಿಯಿಂದ ಎಂಎಲ್ ಎ ಚುನಾವಣೆ ಸ್ಪರ್ಧಿಸುತ್ತಿರುವ ಎರಡನೇ ಅಭ್ಯರ್ಥಿ. ಈ ಹಿಂದೆ ಶಕುಂತಳಾ ಟಿ ಶೆಟ್ಟಿ ಬಿಜೆಪಿಯಿಂದ ಬಂಟ್ವಾಳ ಹಾಗೂ ಪುತ್ತೂರಿನಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಒಟ್ಟಿನಲ್ಲಿ ಒಬ್ಬ ನಿಷ್ಠಾವಂತ ಪಕ್ಷದ ಕಾರ್ಯಕರ್ತೆ ಹಾಗೂ ಸಮಾನ್ಯ ಕುಟುಂಬದ ಮಹಿಳೆಗೆ ಇಂದು ಟಿಕೆಟ್ ನೀಡಿರುವುದು ಶ್ಲಾಘನೀಯ.

ಇನ್ನು ಇವರೋರ್ವ ದೇಶ ಭಕ್ತೆಯೂ ಹೌದು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮೇಲೆ ಗೌರವಾದರಗಳನ್ನು ಹೊಂದಿರುವ, ಹಿಂದುತ್ವ – ಹಿಂದು ತತ್ತ್ವದ ಚಿಂತನೆಗಳನ್ನು ಹೊಂದಿರುವ ಮಹಿಳೆಯೂ ಹೌದು. ಇವರು ತಮ್ಮ ಪುತ್ರನನ್ನು ಸಂಘದ ಪ್ರಚಾರಕರಾಗಿಯೂ ಕಳುಹಿಸುವ ಮೂಲಕ ದೇಶ ಸೇವೆಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ.

ಆದರೆ ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಗ್ಗೆ ಅಪಪ್ರಚಾರ ಮಾಡಿ, ಅವರನ್ನು ಸೋಲಿಸಬೇಕು ಎನ್ನುವಂತೆಯೂ ಕೆಲವು ಪಿ ಪ್ರಚಾರ ಕಾರ್ಯಗಳು ಸರಾಗವಾಗಿ ನಡೆಯುತ್ತಲೇ ಇದೆ. ಅವರನ್ನು ಒಂದು ಜಾತಿಗೆ ಸೀಮಿತ ಮಾಡಿ ಬಿಂಬಿಸುವ ಕೆಲಸವೂ ಆಗುತ್ತಿದೆ. ಬಿಜೆಪಿಯಲ್ಲಿದ್ದ ಹಲವು ಟಿಕೆಟ್ ಆಕಾಂಕ್ಷಿಗಳು ಮತ್ತು ಅವರ ಅಭಿಮಾನಿ ಕಾರ್ಯಕರ್ತರು ತಮಗೆ ಟಿಕೆಟ್ ದೊರೆಯದಿದ್ದರೂ ಬಂಡಾಯವೇಳದೆ, ಪಕ್ಷದ ಆಯ್ಕೆಯ ಅಭ್ಯರ್ಥಿ ಆಶಾ ಅವರನ್ನು ಗೆಲ್ಲಿಸುವ ಪಣ ತೊಟ್ಟಿರುವುದು ಶ್ಲಾಘನೀಯ. ಇದು ಬಿಜೆಪಿಯ ಒಗ್ಗಟ್ಟಿಗೆ ಸಾಕ್ಷಿಯೂ ಹೌದು.

ಒಟ್ಟಿನಲ್ಲಿ ಪುತ್ತೂರಿನ, ಹಿಂದುತ್ವದ ಸರ್ವತೋಮುಖ ಅಭಿವೃದ್ಧಿಯ ಆಶಯವಿರುವ ಆಶಾ ತಿಮ್ಮಪ್ಪ ಅವರಿಗೆ ಗೆಲುವು ದೊರೆಯುವುದೇ?, ಕಳೆದೈದು ವರ್ಷದ ಬಿಜೆಪಿಯ ಅಭಿವೃದ್ಧಿ ಪರ್ವಕ್ಕೆ ಈ ಬಾರಿಯೂ ಜನತೆ ಜೈ ಎನ್ನುತ್ತಾರೆಯೇ? ಎನ್ನುವುದನ್ನು ಕಾದು ನೋಡಬೇಕಿದೆ.

Tags

Related Articles

Close