ಪ್ರಚಲಿತ

ಭಾರತ್ ಜೋಡೋ ಯಾತ್ರೆ ಕಂಡು ಕಾಂಗ್ರೆಸ್‌ಗೆ ರಾಜೀನಾಮೆ: ರಾಹುಲ್‌ಗೆ ಬಿಗ್ ಶಾಕ್!

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಬಹಳಷ್ಟು ಸುದ್ದಿ ಮಾಡುತ್ತಲೇ ಬಂದಿದೆ. ದೇಶಕ್ಕೆ, ರಾಷ್ಟ್ರಗೀತೆಗೆ ಅವಮಾನ ಮಾಡುವ ಮೂಲಕ ಸಾಕಷ್ಟು ಬಾರಿ ಜೋಡಿಸುವ ಹೆಸರಿನಲ್ಲಿ ತುಂಡರಿಸುವ ಕೆಲಸ ಮಾಡುತ್ತಿರುವ ಈ ಯಾತ್ರೆಯಿಂದ, ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವು ದೇಶಭಕ್ತರಿಗೂ ಇರಿಸಿ ಮುರಿಸಾಗುವಂತೆ ಮಾಡುತ್ತಿರಬಹುದು ಎನ್ನುವುದು ನಿರ್ವಿವಾದ.

ಇನ್ನೇನು ಕೆಲವೇ ದಿನಗಳಲ್ಲಿ ರಾಹುಲ್ ಗಾಂಧಿಯ ‘ಭಾರತ್ ಜೋಡೋ’ ನಾಟಕ ಅಂತ್ಯವಾಗಲಿದೆ. ಸದ್ಯ ಈ ಯಾತ್ರೆ ಜಮ್ಮು ಕಾಶ್ಮೀರದತ್ತ ಸಾಗುತ್ತಿದೆ. ಆದರೆ ಈ ಯಾತ್ರೆಗೂ ಮೊದಲೇ ಅಲ್ಲಿನ ರಾಜ್ಯ ವಕ್ತಾರೆ ದೀಪಿಕಾ ಪುಷ್ಕರ್‌ನಾಥ್ ಅವರು ರಾಜೀನಾಮೆ ನೀಡುವ ಮೂಲಕ ಪಪ್ಪು ಪಡೆಗೆ ಶಾಕ್ ನೀಡಿದ್ದಾರೆ. ರಾಹುಲ್ ಗಾಂಧಿ ಅವರ ನಡೆ ಯನ್ನು ಖಂಡಿಸಿ ದೀಪಿಕಾ ರಾಜೀನಾಮೆ ಸಲ್ಲಿಸಿರುವುದಾಗಿ ಮೂಲಗಳು ತಿಳಿಸಿವೆ.

ಈ ಬಗ್ಗೆ ದೀಪಿಕಾ ಅವರು ಟ್ವೀಟ್ ಮಾಡಿದ್ದು, ಕಥುವಾ ಅತ್ಯಾಚಾರ ಆರೋಪಿಯನ್ನು ಬೆಂಬಲಿಸಿದ್ದ ಜಮ್ಮು ಕಾಶ್ಮೀರದ ಮಾಜಿ ಸಚಿವ ಚೌಧರಿ ಲಾಲ್ ಸಿಂಗ್‌ನನ್ನು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಆಹ್ವಾನಿಸಿದ್ದು, ಪಪ್ಪುವಿನ ಈ ನಡೆಯನ್ನು ಖಂಡಿಸಿ ದೀಪಿಕಾ ರಾಜೀನಾಮೆ ಸಲ್ಲಿಸಿದ್ದಾರೆ. ಇಂತಹ ಸಮಯದಲ್ಲಿ ರಾಜೀನಾಮೆ ಹೊರತಾದ ಬೇರೆ ಆಯ್ಕೆ ಇಲ್ಲ ಎಂಬುದಾಗಿಯೂ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ದೀಪಿಕಾ ಅವರು ಜಮ್ಮು ಮೂಲದ ಮಾನವ ಹಕ್ಕುಗಳ ವಕೀಲ ರಾಗಿ ದೇ ದು, ಕಥುವಾ ಅತ್ಯಾಚಾರ ಪ್ರಕರಣವನ್ನು ಮುನ್ನಡೆಸಿದ್ದರು. ಈ ಘಟನೆ ನಡೆದಾಗ ಸಂತ್ರಸ್ತೆಯ ಕುಟುಂಬವನ್ನು ಪ್ರತಿನಿಧಿಸಿದ್ದರು. ಇದೀಗ ಕಥುವಾ ಅತ್ಯಾಚಾರ ಆರೋಪಿಯನ್ನು ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಸೇರಿಸಿಕೊಂಡಿದ್ದು, ಇದನ್ನು ವಿರೋಧಿಸಿರುವ ದೀಪಿಕಾ ರಾಜೀನಾಮೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಈ ಯಾತ್ರೆಗೆ ಕಾಂಗ್ರೆಸ್‌ನವರೇ ಅಪಸ್ವರ ಎತ್ತಿ ರು ವು ದು ಹಾಸ್ಯಾಸ್ಪದ. ಭಾರತವನ್ನು ಜೋಡಿಸುವ ನಾಟಕವಾಡಿಕೊಂಡು, ದೇಶಕ್ಕೆ ಮಾರಕವಾದ ಶಕ್ತಿಗಳನ್ನು ಒಗ್ಗೂಡಿಸಿ ದೇಶ ಒಡೆಯುವ ಕೆಲಸ ಮಾಡುತ್ತಿರುವ ರಾಹುಲ್ ಗಾಂಧಿಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಶಾಸ್ತಿ ಮಾಡಬೇಕಿದೆ.

Tags

Related Articles

Close