ಪ್ರಚಲಿತ

‘ಪಿಒಕೆ’ ಭಾರತದ‌ ಜೊತೆ ವಿಲೀನ?

ನಮ್ಮ ದೇಶದ ಐತಿಹಾಸಿಕ ಶತ್ರು ರಾಷ್ಟ್ರ ಪಾಕಿಸ್ತಾನ. ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಕೆಲವು ನಾಯಕರ ಕಾರಣಕ್ಕೆ ಅಖಂಡ ಭಾರತ ಕಂಡ ತಂಡವಾದ ಕಥೆ ಈಗ ಇತಿಹಾಸ. ಅಖಂಡ ಭಾರತದ ತುಂಡು ಪಾಕಿಸ್ತಾನ ಅಂದಿನಿಂದ ಇಂದಿನ ವರೆಗೆ ಭಾರತಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಕಾಟ ಕೊಡುತ್ತಲೇ ಬಂದಿದೆ.

ಪಾಕಿಸ್ತಾನ ಭಾರತದ ಮುಕುಟಮಣಿ ಜಮ್ಮು ಕಾಶ್ಮೀರದ ಮೇಲೆ ತನ್ನ ವಕ್ರ ದೃಷ್ಟಿ ಬೀರಿ, ಅದನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ನಡೆಸಿದ ಕಸರತ್ತು ಅಷ್ಟಿಷ್ಟಲ್ಲ. ಆದರೆ ಶಕ್ತಿಶಾಲಿ ಭಾರತದೆದುರು ‌ಕುತಂತ್ರಿ ಪಾಕಿಸ್ತಾನದ ಆಟ ನಡೆಯಬೇಕಲ್ಲ. ಆದರೆ ಇಂದಿಗೂ ಪಾಕ್ ಕಾಶ್ಮೀರವನ್ನು ನುಂಗಲು ಸರ್ಕಸ್ ಮಾಡುತ್ತಲೇ ಇದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ ರಕ್ಷಣಾ ಸಚಿವ ರಾಜ ನಾಥ ಸಿಂಗ್ ಅವರು ಮಾತನಾಡಿದ್ದಾರೆ.

ಪಿಒಕೆ (ಪಾಕ್ ಆಕ್ಯುಪೈಡ್ ಕಾಶ್ಮೀರ್) ಯನ್ನು ಶೀಘ್ರವೇ ಭಾರತ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರವೇ ಭಾರತದ ಜೊತೆಗೆ ವಿಲೀನವಾಗುವ‌ ಭರವಸೆಯನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಷೆಹಬಾಜ್ ಶರೀಫ್ ಅವರು, ಕಾಶ್ಮೀರಕ್ಕೆ ಸಂಬಂಧಿಸಿದ ಹಾಗೆ ಹೇಳಿಕೆ ನೀಡಿದ್ದು, ಇದಕ್ಕೆ ರಾಜ ನಾಥ್ ಸಿಂಗ್ ಪ್ರತಿಕ್ರಿಯೆ ನೀಡಿರುವುದಾಗಿದೆ. ಪಾಕ್ ಆಕ್ಯುಪೈಡ್ ಕಾಶ್ಮೀರದ ಜನತೆ ತಾವೂ ಸಹ ಭಾರತದ ಜೊತೆಗೆ ಸೇರಬೇಕೆಂದು ಆಶಯ ಹೊತ್ತಿದ್ದು, ಅವರ ಕನಸುಗಳನ್ನು ಈಡೇರಿಸುವ ಭರವಸೆಯನ್ನು ಈಡೇರಿಸುವುದಾಗಿ ತಿಳಿಸಿದ್ದಾರೆ. ಪಿಒಕೆ ಜನರು ಭಾರತದ ಜೊತೆಗೆ ಸೇರುವುದಾಗಿ ಅವರು ನುಡಿದಿದ್ದಾರೆ.

ಪಾಕ್ ಎಂದಿಗೂ ಕಾಶ್ಮೀರವನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಈ ಬಗ್ಗೆ ಚಿಂತಿಸಬೇಕು. ಪಿಒಕೆಯನ್ನು ನಾವು ಯುದ್ಧ ಮಾಡಿ ವಶಪಡಿಸಿಕೊಳ್ಳುವ ಅಗತ್ಯ ಇಲ್ಲ. ಅಲ್ಲಿನ ಜನರೇ ಭಾರತದ ಜೊತೆ ವಿಲೀನವಾಗುವುದನ್ನು ಬಯಸುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಬದಲಾಗುತ್ತಿದೆ. ಜನರೇ ವಿಲೀನ ಮಾಡುವಂತೆ ಒತ್ತಾಯಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ನಾವು ಈ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆ ಇಲ್ಲ. ಯಾವುದೇ ದೇಶದ ಮೇಲೆ ನಾವು ಆಕ್ರಮಣ ನಡೆಸುವುದಿಲ್ಲ. ಜಗತ್ತಿನ ಯಾವುದೇ ರಾಷ್ಟ್ರದ ಮೇಲೆ ದಾಳಿ ಮಾಡುವ ಗುಣ ಭಾರತ ಹೊಂದಿಲ್ಲ. ಆದರೆ ಪಾಕ್ ಆಕ್ಯುಪೈಡ್ ಕಾಶ್ಮೀರ್ ಭಾರತದ್ದಾಗಿದ್ದು, ಇದು ನಮ್ಮೊಂದಿಗೆ ‌ವಿಲೀನವಾಗುತ್ತದೆ ಎಂದು ಸಿಂಗ್ ಭರವಸೆ ನೀಡಿದ್ದಾರೆ.

Tags

Related Articles

Close