ಪ್ರಚಲಿತ

ಪಾಲಿಟಿಕ್ಸ್‌ಗೆ ಗುಡ್ ಬೈ ಹೇಳಲು ಸಜ್ಜಾದ ರಮ್ಯಾ.! ಟ್ವಿಟ್ಟರ್‌ಗಷ್ಟೇ ಸೀಮಿತರಾದ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕಿ.!

ಕಾಂಗ್ರೆಸ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದ ಕನ್ನಡ ಚಿತ್ರರಂಗದ ನಟಿ ರಮ್ಯಾ ಅವರು ಪದೇ ಪದೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಸಂಘಪರಿವಾರದ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡುತ್ತಲೇ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ತನ್ನ ಹೆಸರು ಪ್ರಚಲಿತದಲ್ಲಿರುವಂತೆ ಮಾಡಲು ಪ್ರಯತ್ನಿಸುತ್ತಿದ್ದ ರಮ್ಯಾ ಚುನಾವಣೆಯಲ್ಲಿ ಮತ ಹಾಕಲೂ ಬಾರದೆ, ಕೇವಲ ದೆಹಲಿಯಲ್ಲಿ ಕೂತು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಪ್ರಚಾರ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಕೇವಲ ಟ್ವಿಟ್ಟರ್, ಫೇಸ್‌ಬುಕ್‌ ಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ರಮ್ಯಾಳನ್ನು ರಾಜ್ಯ ಕಾಂಗ್ರೆಸ್ ನಾಯಕರೇ ರಾಜ್ಯ ರಾಜಕಾರಣದಿಂದ ದೂರ ಇಡುತ್ತಿದ್ದಾರಾ ಎಂಬ ಸಂಶಯವೂ ಈ ಹಿಂದೆ ವ್ಯಕ್ತವಾಗಿತ್ತು. ಆದರೆ ರಮ್ಯಾ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಾಂಗ್ರೆಸ್ ಹೈಕಮಾಂಡ್ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ದೆಹಲಿ ರಾಜಕಾರಣಕ್ಕೆ ಹತ್ತಿರವಾಗುತ್ತಿದ್ದಾರಾ ಎಂಬ ಮಾತೂ ಕೇಳಿ ಬಂದಿತ್ತು. ಆದರೆ ಇದೀಗ ರಮ್ಯಾ ರಾಜಕೀಯದಿಂದಲೇ ದೂರವಾಗುವ ಮುನ್ಸೂಚನೆ ನೀಡಿದ್ದಾರೆ.!

ಕಳೆದ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ದಿನನಿತ್ಯ ಒಂದಲ್ಲಾ ಒಂದು ವಿಚಾರಕ್ಕೆ ಸುದ್ಧಿಯಾಗುತ್ತಿದ್ದ ರಮ್ಯಾ , ಚುನಾವಣೆಯ ಸಂದರ್ಭದಲ್ಲಿ ಪತ್ತೆಯೇ ಇರಲಿಲ್ಲ. ತಮ್ಮ ಪಕ್ಷದ ಪರವಾಗಿ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿಕೊಂಡೇ ಇದ್ದ ರಮ್ಯಾ , ತಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರತಿನಿಧಿಸಿದ್ದ ಮಂಡ್ಯದ ಕ್ಷೇತ್ರದಲ್ಲೂ ಪ್ರಚಾರಕ್ಕೆ ಬಾರದೆ ಬೇಜವಾಬ್ದಾರಿಯಿಂದ ವರ್ತಿಸಿದ್ದರು. ಇದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಕೋಪಗೊಳ್ಳುವಂತೆ ಮಾಡಿತ್ತು. ಆದ್ದರಿಂದಲೇ ಸಂಪೂರ್ಣವಾಗಿ ರಾಜ್ಯ ರಾಜಕಾರಣದಿಂದ ದೂರ ಉಳಿದ ರಮ್ಯಾ, ಇದೀಗ ಇಡೀಯ ರಾಜಕೀಯಕ್ಕೆ ಗುಡ್ ಬೈ ಹೇಳುತ್ತಾರಾ ಎಂಬ ಅನುಮಾನ ವ್ಯಕ್ತವಾಗಿದೆ.!

Image result for RAMYA congress

ಟ್ವಿಟ್ಟರ್‌ನಲ್ಲಿ ಮಾತ್ರ ಕಾಣಸಿಗುತ್ತಾರೆ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ..!

ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಯಾಗಿ ಆಯ್ಕೆಯಾದ ನಟಿ ರಮ್ಯಾ, ಪದೇ ಪದೇ ಬಿಜೆಪಿ ಮತ್ತು ಸಂಘಪರಿವಾರದ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡುತ್ತಾ , ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾ ಪ್ರಚಾರ ಮಾಡುತ್ತಿದ್ದು, ಚುನಾವಣೆಯಲ್ಲಿ ಮತ ಹಾಕುವುದಕ್ಕೂ ರಾಜ್ಯಕ್ಕೆ ಬಂದಿರಲಿಲ್ಲ. ಅಂದಿನಿಂದಲೇ ರಮ್ಯಾ ಕಾಂಗ್ರೆಸ್‌ನಲ್ಲೂ ಮೂಲೆಗುಂಪಾಗಿದ್ದರು. ಕೇವಲ ಟ್ವಿಟ್ಟರ್ ನಲ್ಲಿ ಮಾತ್ರ ತನ್ನನ್ನು ತಾನು ತೊಡಗಿಸಿಕೊಂಡು ದೆಹಲಿಯಲ್ಲೇ ಕೂತು ರಾಜಕಾರಣ ಮಾಡುತ್ತಿದ್ದ ರಮ್ಯಾ, ಕಾಂಗ್ರೆಸ್‌ಗೆ ಬೇಡವಾಗಿದ್ದಾರಾ ಎಂಬ ಮಾತು ಕೇಳಿ ಬರುತ್ತಿತ್ತು.

ಕಾಂಗ್ರೆಸ್‌ನಲ್ಲಿ ರಾಜ್ಯ ನಾಯಕರನ್ನೇ ಮೀರಿಸುವ ಮಟ್ಟಕ್ಕೆ ಬೆಳೆಯಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡೇ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ತೊಡಗಿಸಿಕೊಂಡಿದ್ದ ರಮ್ಯಾ, ರಾಜ್ಯ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ನೇರ ಸಂಪರ್ಕ ಇಟ್ಟುಕೊಂಡಿದ್ದ ರಮ್ಯಾಳನ್ನು ನೇರವಾಗಿ ಎದುರುಹಾಕಿಕೊಳ್ಳುವ ಧೈರ್ಯ ರಾಜ್ಯ ಕಾಂಗ್ರೆಸ್ ನಾಯಕರಿಗಿರಲಿಲ್ಲ.

ಆದರೆ ಇದೀಗ ರಮ್ಯಾ ದೆಹಲಿಯಲ್ಲಿದ್ದರೂ ಕೂಡ ,ಕಾಂಗ್ರೆಸ್ ಪಕ್ಷದ ವಿಚಾರವಾಗಿ ಯಾವುದೇ ಕೆಲಸ ಮಾಡುತ್ತಿಲ್ಲವಾದ್ದರಿಂದ ರಮ್ಯಾ ರಾಜಕೀಯಕ್ಕೆ ಗುಡ್ ಬೈ ಹೇಳುತ್ತಾರಾ ಎಂಬ ಸಂಶಯ ಹೆಚ್ಚಾಗಿದೆ. ರಮ್ಯಾ ಚಿತ್ರರಂಗದಿಂದ ಈಗಾಗಲೇ ಹೊರ ಬಂದು ರಾಜಕೀಯಕ್ಕೆ ಸೇರಿಕೊಂಡಿದ್ದರು, ಆದರೆ ಇದೀಗ ರಾಜಕೀಯದಿಂದಲೂ ದೂರ ಸರಿದರೆ, ಮುಂದಿನ ನಡೆ ಏನೆಂಬುದನ್ನು ನೋಡಬೇಕಾಗಿದೆ..!

–ಅರ್ಜುನ್

Tags

Related Articles

Close